ಮಂಗಳೂರು: ವಿವಾದದ ಕೇಂದ್ರ ಬಿಂದುವಾಗಿದ್ದ ಸುರತ್ಕಲ್ ಟೋಲ್ ರದ್ದುಗೊಳಿಸಿ ಈಗಾಗಲೇ ಹೆದ್ದಾರಿ ಸಚಿವಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆ ಟೋಲ್ ವಿರೋಧಿ ಹೋರಾಟ ಸಮಿತಿ ಬಿಜೆಪಿ ಜನಪ್ರತಿನಿಧಿಗಳಿಗೆ 9ಪ್ರಶ್ನೆಯನ್ನು ಕೇಳಿದೆ.
ಆದರೆ ಟೋಲ್ ಶುಲ್ಕ ಸಂಗ್ರಹವನ್ನು ರದ್ದು ಪಡಿಸಿಲ್ಲ. ಸುರತ್ಕಲ್ ನಲ್ಲಿ ಸಂಗ್ರಹಿಸುತ್ತಿದ್ದ ಶುಲ್ಕವನ್ನು ಹೆಜಮಾಡಿ ಟೋಲ್ ಗೇಟ್‌ಗೆ ಶಿಫ್ಟ್ ಮಾಡಲಾಗಿದೆ.
ಸುರತ್ಕಲ್ ಟೋಲ್ ಗೇಟ್ ಸುಂಕವನ್ನು ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಸಂಗ್ರಹಿಸುವ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಕ್ರಮವನ್ನು ಅನುಮೋದಿಸಿರುವ ತುಳುನಾಡಿನ ಬಿಜೆಪಿ ಶಾಸಕರು ಮತ್ತು ಸಂಸದರಿಗೆ ಸುರತ್ಕಲ್ ಟೋಲ್ ವಿರೋಧಿ ಹೋರಾಟ ಸಮಿತಿಯು 9 ಪ್ರಶ್ನೆಗಳನ್ನು ಕೇಳಿದೆ.
ಈ ಪ್ರಶ್ನೆಗಳಿಗೆ ಉತ್ತರಿಸಿ, ಇಲ್ಲವೆ ರಾಜಿನಾಮೆ ಕೊಡಿ ಎಂದು ಸಮಿತಿ ಒತ್ತಾಯಿಸಿದೆ. ಸುರತ್ಕಲ್ ಟೋಲ್ ನ್ನು ಹೆಜಮಾಡಿ ಟೋಲ್ ಜತೆ ವಿಲೀನಗೊಳಿಸಿ ಸುರತ್ಕಲ್ ನಲ್ಲಿ ಸಂಗ್ರಹಿಸಲಾಗುತ್ತಿದ್ದ ಟೋಲ್ ಗೇಟ್ ಸುಂಕವನ್ನು ಹೆಜಮಾಡಿ ಟೋಲ್ ನಲ್ಲಿ ಸಂಗ್ರಹಿಸುವ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಕ್ರಮ ನಿಯಮ ಬಾಹಿರ ಎಂದು ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಅವರು ಅರೋಪಿಸಿದ್ದಾರೆ.
ಟೋಲ್ ಗೇಟ್ ರದ್ದು ಪಡಿಸಿದ ಬಳಿಕ ಮತ್ಯಾವ ಟೋಲ್ ಕಲೆಕ್ಷನ್ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಆದ್ದರಿಂದ ಇದನ್ನು ಅನುಮೋದಿಸಿರುವ ತುಳುನಾಡಿನ ಬಿಜೆಪಿ ಶಾಸಕರು ಮತ್ತು ಸಂಸದರಿಗೆ 9 ಪ್ರಶ್ನೆಗಳನ್ನು ಕೇಳುತ್ತಿದ್ದೇವೆ ಎಂದು ವಿವರಿಸಿದ್ದಾರೆ.