ಸುರತ್ಕಲ್ : ನೂತನ ರೈತ ಕೇಂದ್ರ ಉದ್ಘಾಟನೆ ಹಾಗೂ ರೈತರಿಗೆ ಸವಲತ್ತು ವಿತರಣೆ
Suratkal: Inauguration of new Farmer’s Center by MLA Dr. Bharath Shetty
ಮಂಗಳೂರು : ಸುರತ್ಕಲ್ ನಲ್ಲಿ ನೂತನ ರೈತ ಕೇಂದ್ರವನ್ನು ಶಾಸಕ ಡಾ.ಭರತ್ ಶೆಟ್ಟಿ ವೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೊರೊನಾ ಹಾವಳಿಯಿಂದ ನಗರಕ್ಕೆ ಸಣ್ಣ ಪುಟ್ಟ ಕೆಲಸ ಹುಡುಕಿಕೊಂಡು ಹೋದ ಯುವ ಸಮೂಹ ಇದೀಗ ಊರಿಗೆ ಮರಳಿ ಮತ್ತೆ ಕೃಷಿ ಚಟುವಟಿಕೆಯತ್ತಾ ಮುಖಮಾಡಿದೆ.
ಕೃಷಿಯನ್ನು ಉತ್ತೇಜಿಸಲು,ಯುವಕರಿಗೆ ಪ್ರೋತ್ಸಾಹ ನೀಡಲು ಸುಸಂದರ್ಭ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಆದಾಯ ದುಪ್ಪಟ್ಟು ಮಾಡಲು ಕೃಷಿ ಕಾಯಿದೆಗೆ ತಿದ್ದು ಪಡಿ ತಂದಿದ್ದಾರೆ.
ಭವಿಷ್ಯದಲ್ಲಿ ಮತ್ತೆ ಕೃಷಿಕರು ಸಂಕಷ್ಟದ ಸುಳಿಗೆ ಸಿಲುಕಬಾರದು ಎಂಬ ಉದ್ದೇಶ .ರೈತರು ಇದನ್ನು ಅರ್ಥಮಾಡಿಕೊಳ್ಳ ಬೇಕಿದೆ ಎಂದರು.
ಕಸ್ತೂರಿ ಪಂಜ ಮಾತನಾಡಿ ರೈತ ಕೇಂದ್ರಗಳನ್ನು ಗ್ರಾಮೀಣ ಭಾಗದಲ್ಲೂ ನಿರ್ಮಿಸಿ ರೈತರಿಗೆ ಅನುಕೂಲಮಾಡಿ ಕೊಡಬೇಕೆಂದರು. ಕಾರ್ಯಕ್ರಮದಲ್ಲಿ ಎಪಿಎಂಸಿ ಉಪಾಧ್ಯಕ್ಷರಾದ ರಜನಿ ದುಗ್ಗಣ್ಣ, ತಾಲೂಕು ಪಂಚಾಯತ್ ಸದಸ್ಯರಾದ ಶಶಿಕಲಾ ಶೆಟ್ಟಿ, ಪ್ರತಿಭಾ ಶೆಟ್ಟಿ,ಕಾರ್ಪೊರೇಟರ್ಗಳಾದ ನಯನ ಆರ್.ಕೋಟ್ಯಾನ್,ವರುಣ್ ಚೌಟ, ಸುರತ್ಕಲ್ ವ್ಯವಸಾಯ ಬ್ಯಾಂಕಿನ ಅಧ್ಯಕ್ಷ ಅಶೋಕ್ ಶೆಟ್ಟಿ,
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ,ಸಹಾಯಕ ಕೃಷಿ ನಿರ್ದೇಶಕಿ ವೀಣಾ,ಉಪಕೃಷಿ ನಿರ್ದೇಶಕ ಬಾನು ಪ್ರಕಾಶ್,ಸಹಾಯಕ ಕೃಷಿ ಅಧಿಕಾರಿ ಬಶೀರ್ ಅಹ್ಮದ್, ಮತ್ತಿತರರು ಉಪಸ್ಥಿತರಿದ್ದರು.