ಮಂಗಳೂರು: ನಗರ ಹೊರವಲಯದ ಸುರತ್ಕಲ್‌ನಲ್ಲಿರುವ ವಿವಾದಿತ ಎನ್ ಐಟಿಕೆ ಟೋಲ್ ಸ್ಥಳಾಂತರಕ್ಕೆ ಗಡುವು ವಿಧಿಸಿ ಪ್ರತಿಭಟನೆ
‘ನಡೆಸಲು ತೀರ್ಮಾನ ಮಾಡಿರುವ ಮಧ್ಯೆಯೇ ಟೋಲ್ ಗುತ್ತಿಗೆ ನೀಡಲು ಎನ್.ಎಚ್.ಎ.ಐ ಬಿಡ್ ಕರೆದಿದ್ದು, ಬಿಡ್ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು ಜೂನ್ 24ರಂದು ತೆರೆಯಲ್ಪಡಲಿದೆ ಎಂದು ಮೂಲಗಳು ತಿಳಿಸಿವೆ.
ಈಗ ಇರುವ ಬಿಡ್‌ದಾರರು 6 ತಿಂಗಳುಗಳಿಂದ ಗುತ್ತಿಗೆ ಹೊಂದಿದ್ದು, ದಿನಕ್ಕೆ 12.90 ಲಕ್ಷ ರೂ ಪಾವತಿಸಿ, ಈಗ ಮಳೆಗಾಲವಾದ ಕಾರಣ ನಷ್ಟದ ಸಾಧ್ಯತೆ ಹೆಚ್ಚಾಗಿದೆ ಇದರಿಂದ ಬಿಡ್‌ದಾರರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಒಂದು ವೇಳೆ ಹೆಚ್ಚಿನ ದರಕ್ಕೆ ಬಿಡ್ ಸಲ್ಲಿಕೆಯಾಗದಿದ್ದಲ್ಲಿ ಈಗಿನ ಬಿಡ್ ದಾರರು ಜುಲೈ 24 ರವರೆಗೆ ಮುಂದುವರೆಸಬೇಕಾಗಿದೆ.
ದೇಶದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಬಿಡ್ ದಾರರು ಇದ್ದು ರಾಜ್ಯದಲ್ಲಿ ಬೆರಳೆಣಿಕೆ ಮಂದಿ ಮಾತ್ರ ಇದ್ದಾರೆ ಎಂದು ಹೇಳಲಾಗಿದೆ.