Connect with us

    health

    ಸೈಬರ್ ವಂಚನೆಯ ನಷ್ಟಕ್ಕೆ ಬ್ಯಾಂಕುಗಳೇ ಹೊಣೆ ಎಂದ ಸುಪ್ರೀಂ ಕೋರ್ಟ್

    Published

    on

    ಮಂಗಳೂರು/ನವದೆಹಲಿ : ಸೈಬರ್ ವಂಚನೆ ಪ್ರಕರಣದಲ್ಲಿ ಗ್ರಾಹಕನಿಗೆ ನಷ್ಟ ಸಂಭವಿಸಿದ್ರೆ ಅದಕ್ಕೆ ಬ್ಯಾಂಕುಗಳೇ ಹೊಣೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

    ಬ್ಯಾಂಕುಗಳಲ್ಲಿ ಗ್ರಾಹಕನ ಖಾತೆಯಲ್ಲಿ ಯಾವುದೇ ಅನಧಿಕೃತ ವಹಿವಾಟು ನಡೆದು ನಷ್ಟ ಸಂಭವಿಸಿದರೆ ಅದಕ್ಕೆ ಬ್ಯಾಂಕುಗಳೇ ನೇರವಾಗಿ ಹೊಣೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

    ಅಸ್ಸಾಂನ ಸೈಬರ್ ವಂಚನೆಗೆ ಒಳಗಾದ ಪಲ್ಲಭ್ ಭೌಮಿಕ್ ಅವರಿಗೆ 94,000 ರೂ. ಗಳನ್ನು ಮರುಪಾವತಿಸುವಂತೆ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಹೊರಡಿಸಿದೆ.

    ಈ ಪ್ರಕರಣವು ಬ್ಯಾಂಕುಗಳು ತಮ್ಮ ಗ್ರಾಹಕರ ಹಣವನ್ನು ವಂಚನೆಯ ಚಟುವಟಿಕೆಗಳಿಂದ ರಕ್ಷಿಸುವಲ್ಲಿ ಹಣಕಾಸು ಸಂಸ್ಥೆಗಳ ಜವಾಬ್ದಾರಿಗಳನ್ನು ತೀವ್ರವಾಗಿ ಎತ್ತಿ ತೋರಿಸಿದೆ.

    ಪ್ರಕರಣದ ಹಿನ್ನೆಲೆ

    ಪಲ್ಲಭ್ ಭೌಮಿಕ್ ಎನ್ನುವವರು ಆನ್ ಲೈನ್ ನಲ್ಲಿ ವಸ್ತುವೊಂದನ್ನು ಖರೀದಿಸಿದ್ದರು. 4,000 ರೂ. ಮೌಲ್ಯದ ಲೂಯಿಸ್ ಫಿಲಿಪ್ ಬ್ಲೇಜರ್ ಅನ್ನು ಹಿಂದಿರುಗಿಸಲು ಪ್ರಯತ್ನಿಸಿದಾಗ ಸೈಬರ್ ವಂಚನೆ ಸಂಭವಿಸಿದೆ. ಗ್ರಾಹಕ ಸೇವಾ ಪ್ರತಿನಿಧಿಯಾಗಿ ನಟಿಸಿ, ವಂಚಕರು ಪಲ್ಲಭ್ ಅವರನ್ನು ದುರುದ್ದೇಶಪೂರಿತ ಅಪ್ಲಿಕೇಶನ್ ಅನ್ನು ಸ್ಥಾಪಿಸುವಂತೆ ಹೇಳಿ ವಂಚನೆ ಮಾಡಿದ್ದರು.

    ಇದನ್ನೂ ಓದಿ: ಓಂ ಶಕ್ತಿ ದರ್ಶನ ಪಡೆದು ವಾಪಾಸಾಗುತ್ತಿದ್ದಾಗ ದುರಂ*ತ; ಐವರು ಸಾ*ವು

    ಇದು ಅವರ ಎಸ್ ಬಿಐ ಉಳಿತಾಯ ಖಾತೆಯಿಂದ 94,204 ರೂ. ಗಳನ್ನು ಕಳವು ಮಾಡಲು ಕಾರಣವಾಯಿತು. ಕದ್ದ ಹಣವನ್ನು ಯುಪಿಐ ವಹಿವಾಟುಗಳ ಮೂಲಕ ಬಹು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಯಿತು.

    ಈ ಸಮಸ್ಯೆಯ ಮೂಲ ಯಾವುದೆಂದರೆ ಲೂಯಿಸ್ ಫಿಲಿಪ್ ಅವರ ವೆಬ್ ಸೈಟ್ ನಲ್ಲಿ 2021 ರಲ್ಲಿ ನಡೆದ ಡೇಟಾ ಉಲ್ಲಂಘನೆಯಾಗಿದ್ದು, ಇದರಿಂದ ಗ್ರಾಹಕರ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿದೆ. ಈ ಡೇಟಾವನ್ನು ದುರುಪಯೋಗಪಡಿಸಿಕೊಂಡು, ವಂಚಕನು ವಂಚನೆ ನಡೆಸಿದ್ದಾನೆ.

    ಕಾನೂನು ಹೋರಾಟ ನಡೆಸಿದ ಪಲ್ಲಭ್
    ಈ ವಿಷಯವನ್ನು ನಿಯಮದಂತೆ 24 ಗಂಟೆಯೊಳಗೆ ಪಲ್ಲಭ್ ಬ್ಯಾಂಕ್ ಗಮನಕ್ಕೆ ತಂದಿದ್ದರು. ಆದರೆ ನ್ಯೂ ಒಟಿಪಿ, ಎಂಪಿನ್ ಸೇರಿದಂತೆ ರಹಸ್ಯ ಮಾಹಿತಿಯನ್ನು ವಂಚಕರಿಗೆ ನೀಡಿದ್ದೀರಿ. ಹೀಗಾಗಿ ಇದರಲ್ಲಿ ಬ್ಯಾಂಕ್ ನ ತಪ್ಪಿಲ್ಲ. ಹಣ ಮರಳಿಸಲಾಗಲ್ಲ ಎಂದು ಬ್ಯಾಂಕ್ ಹೇಳಿತ್ತು. ಈ ಬಗ್ಗೆ ಪಲ್ಲಭ್ ಹೈಕೋರ್ಟ್ ಮೊರೆ ಹೋಗಿದ್ದರು. ಗುವಾಹಟಿ ಹೈಕೋರ್ಟ್ ಪಲ್ಲಭ್ ಪರ ತೀರ್ಪು ನೀಡಿತ್ತು. ಇದನ್ನು ಎಸ್ ಬಿಐ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿತ್ತು.

    ಈ ಕುರಿತು ಇದೀಗ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ‘ಮೂರನೇ ವ್ಯಕ್ತಿಯಿಂದಾದ ವಂಚನೆ ಪ್ರಕರಣಕ್ಕೆ ಗ್ರಾಹಕ ಹೊಣೆಯಾಗುವುದಿಲ್ಲ ಎಂದು ಆರ್ ಬಿಐ ನಿಯಮಗಳೇ ಹೇಳಿವೆ. ಸೈಬರ್ ವಂಚನೆಯಂಥ ಪ್ರಕರಣದಲ್ಲಿ ಗ್ರಾಹಕರ ಹಿತ ಕಾಪಾಡುವುದು ಬ್ಯಾಂಕ್ ಗಳ ಹೊಣೆಗಾರಿಕೆ. ಈ ಪ್ರಕರಣದಲ್ಲಿ ತಾಂತ್ರಿಕ ಸಂಪನ್ಮೂಲ ಲಭ್ಯವಿದ್ದರೂ ವಂಚನೆ ತಡೆಯುವಲ್ಲಿ ಎಸ್ ಬಿಐ ವಿಫಲವಾಗಿದೆ’. ಈ ಹಿನ್ನೆಲೆ ಗ್ರಾಹಕನಿಗೆ ಹಣ ಮರಳಿಸುವಂತೆ ಎಸ್ ಬಿಐಗೆ ನ್ಯಾಯಪೀಠ ಸೂಚಿಸಿದೆ.

    health

    ನಿಮ್ಮ ಮಕ್ಕಳಲ್ಲಿ ಇಂತಹ ಗುಣಲಕ್ಷಣ ಇದೆಯಾ..? ಹಾಗಿದ್ರೆ ವೈದ್ಯರನ್ನು ಸಂಪರ್ಕಿಸಿ..!

    Published

    on

    ಮಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಅದೊಂದು ಕಾಯಿಲೆ ಮಕ್ಕಳನ್ನು ವೇಗವಾಗಿ ಆವರಿಸಿಕೊಳ್ಳುತ್ತಿದೆ. ಪ್ರಪಂಚದ ಪ್ರತಿ ಮೂರನೇ ಮಗು ಈ ಕಾಯಿಲೆಗೆ ತುತ್ತಾಗುತ್ತಿದೆ ಎಂದು ಬ್ರಿಟೀಷ್ ಜರ್ನಲ್ ಆಫ್‌ ಐಸೈನ್ಸ್‌ ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳದೇ ಇದ್ದಲ್ಲಿ 2050ರ ವೇಳೆ ಸುಮಾರು 40% ಮಕ್ಕಳು ಈ ಸಮಸ್ಯೆಗೆ ತುತ್ತಾಗಲಿದ್ದಾರೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.


    ಮಕ್ಕಳು ತುಂಬಾ ಸೂಕ್ಷ್ಮವಾಗಿರುವ ಕಾರಣ ಅವರು ಸುಲಭವಾಗಿ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಕಣ್ಣಿನ ಸಂಬಂಧಿತ ಈ ಕಾಯಿಲೆ ಮಕ್ಕಳಲ್ಲಿ ವ್ಯಾಪಕವಾಗಿ ಕಾಣಿಸುತ್ತಿದ್ದು, ಸಮೀಪ ದೃಷ್ಟಿ ದೋಷಕ್ಕೆ ಒಳಗಾಗುತ್ತಿದ್ದಾರೆ. ಸಮೀಪ ದೃಷ್ಟಿ ದೋಷಕ್ಕೆ ಒಳಗಾದ ಮಕ್ಕಳಿಗೆ ದೂರದ ವಸ್ತುಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲವಾದ್ರೂ ಹತ್ತಿರದ ವಸ್ತುಗಳನ್ನು ಸ್ಪಷ್ಟವಾಗಿ ಗುರುತಿಸಬಲ್ಲರು. ಹೀಗಾಗಿ ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಕನ್ನಡಕದ ಅವಶ್ಯತೆ ಹೆಚ್ಚಾಗುತ್ತಿದೆ. ಈ ಮಕ್ಕಳಿಗೆ ಶಾಲೆ ಬೋರ್ಡ್‌, ರಸ್ತೆಯ ಸೈನ್ ಬೋರ್ಡ್‌ ಹಾಗೂ ಟಿವಿ ವೀಕ್ಷಣೆಗೆ ಕನ್ನಡಕ ಬೇಕೇ ಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

    ಈ ಕಾಯಿಲೆಯ ಲಕ್ಷಣ ನಿಮ್ಮ ಮಕ್ಕಳಲ್ಲಿದ್ದರೆ ವೈದ್ಯರನ್ನು ಸಂಪರ್ಕಿಸಿ :
    ಮಕ್ಕಳು ದೂರದ ವಸ್ತುಗಳನ್ನು ನೋಡಲು ಕಷ್ಟ ಪಡುವುದು, ಕಣ್ಣುಗಳು ಆಯಾಸಗೊಳ್ಳುವುದು, ಒತ್ತಡದ ಅನುಭವ ಆಗುವುದು, ವಿಷಯದಲ್ಲಿ ಗಮನ ಹರಿಸಲಾಗದೇ ಇರುವುದು, ನಿರಂತರ ತಲೆ ನೋವು ಮುಂತಾದ ಲಕ್ಷಣಗಳು ಈ ಕಾಯಿಲೆಯಲ್ಲಿ ಕಾಣಿಸಿಕೊಳ್ಳುತ್ತದೆ. ಹತ್ತು ವರ್ಷದ ಮಕ್ಕಳಲ್ಲಿ ಈ ರೀತಿಯ ಗುಣಲಕ್ಷಣ ಕಾಣಿಸುವುದು ಒಳ್ಳೆಯ ಲಕ್ಷಣ ಅಲ್ಲ. ಮಕ್ಕಳು ಮೊಬೈಲ್ ಪರದೆಗಳನ್ನು ನಿರಂತರ ನೋಡುತ್ತಿದ್ದರೆ ಅದನ್ನು ನಿಲ್ಲಿಸುವ ಪ್ರಯತ್ನ ಮಾಡುವುದು ಪೋಷಕರ ಜವಾಬ್ದಾರಿ. ಮೊಬೈಲ್‌ನಲ್ಲಿ ಕಾರ್ಟೂನ್‌ ನೋಡುವುದು ಕೂಡಾ ಮಕ್ಕಳ ಕಣ್ಣುಗಳ ಮೇಲೆ ನೆಗೆಟಿವ್ ಇಂಪ್ಯಾಕ್ಟ್‌ ಮಾಡುತ್ತದೆ.

    ಇದನ್ನೂ ಓದಿ: ಮಕ್ಕಳು ಓದಲ್ಲ ಅಂತ ಬೈಬೇಡಿ; ಜಸ್ಟ್ ಹೀಗೆ ಮಾಡಿ ಸಾಕು !!

    ಸಮೀಪದೃಷ್ಟಿಯ ದೊಡ್ಡ ಕಾರಣಗಳು ಇವು :
    1. ನ್ಯಾಷನಲ್ ಐ ಇನ್ಸ್ಟಿಟ್ಯೂಟ್ ಪ್ರಕಾರ, ಸಮೀಪದೃಷ್ಟಿ ಸಾಮಾನ್ಯವಾಗಿ 6 ​​ರಿಂದ 14 ವರ್ಷ ವಯಸ್ಸಿನ ನಡುವೆ ಪ್ರಾರಂಭವಾಗುತ್ತದೆ ಮತ್ತು ಅದರ ರೋಗಲಕ್ಷಣಗಳು 20 ನೇ ವಯಸ್ಸಿನಲ್ಲಿ ಉಲ್ಬಣಗೊಳ್ಳಬಹುದು. ಇದಕ್ಕೆ ಪ್ರಮುಖ ಕಾರಣ ಮೊಬೈಲ್ ವೀಕ್ಷಣೆ
    2. ಮಧುಮೇಹ ಕಾಯಿಲೆ ಇದ್ದಲ್ಲಿಯೂ ಇದು ಸಮೀಪ ದೃಷ್ಟಿ ದೋಷಕ್ಕೆ ಕಾರಣವಾಗಬಹುದು. ದೊಡ್ಡವರಲ್ಲಿ ಬಹುತೇಕ ಈ ಕಾಯಿಲೆಗೆ ಮಧುಮೇಹ ಕಾರಣವಾಗುತ್ತದೆ.
    3. ದೃಷ್ಟಿ ಒತ್ತಡ, ಸ್ಮಾರ್ಟ್‌ ಫೋನ್‌ ಅಥವಾ ಲ್ಯಾಪ್ಟಾಪ್ ಪರದೆಯ ಮೇಲೆ ನಿರಂತರ ಸಮಯವನ್ನು ಕಳೆಯುವುದರಿಂದ ಸಮೀಪದೃಷ್ಟಿ ಉಂಟಾಗುತ್ತದೆ.
    4. ಕುಟುಂಬದ ಇತಿಹಾಸ ಅಂದರೆ ಆನುವಂಶಿಕ ಸ್ಥಿತಿ ಕೂಡ ಸಮೀಪದೃಷ್ಟಿಗೆ ಕಾರಣವಾಗಬಹುದು.

    ಸಮೀಪದೃಷ್ಟಿಯಿಂದ ಮಕ್ಕಳ ಕಣ್ಣುಗಳನ್ನು ಹೇಗೆ ರಕ್ಷಿಸುವುದು :
    1. ಹೊರಾಂಗಣ ಚಟುವಟಿಕೆಗಳನ್ನು ಹೆಚ್ಚಿಸಿ. 2. ಮಕ್ಕಳನ್ನು ಹಸಿರು ಸ್ಥಳಗಳಿಗೆ ಕರೆದೊಯ್ಯಿರಿ. 3. ಮೊಬೈಲ್‌ ನೋಡುವ ಸಮಯವನ್ನು ಕಡಿಮೆ ಮಾಡಿ. 4. ಅಧ್ಯಯನದ ನಡುವೆ ವಿರಾಮಗಳನ್ನು ತೆಗೆದುಕೊಳ್ಳಲು ಹೇಳಿ. 5. ಸ್ಕ್ರೀನ್ ಅಥವಾ ಪುಸ್ತಕವನ್ನು ತುಂಬಾ ಹತ್ತಿರದಿಂದ ನೋಡಲು ಬಿಡಬೇಡಿ. 6. ಪರದೆಯ ಮುಂದೆ ಆಂಟಿಗ್ಲೇರ್ ಅಥವಾ ನೀಲಿ ಬಣ್ಣದ ಕನ್ನಡಕವನ್ನು ಧರಿಸಿ. 7. ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿರುವ ವಸ್ತುಗಳನ್ನು ಸೇವಿಸಿ.

    ಗಮನಿಸಿ :ಈ ಸುದ್ದಿಯಲ್ಲಿ ನೀಡಲಾದ ಮಾಹಿತಿಯು ಮಾಧ್ಯಮ ವರದಿಗಳನ್ನು ಆಧರಿಸಿದೆ. ಯಾವುದೇ ಸಲಹೆಯನ್ನು ಕಾರ್ಯಗತಗೊಳಿಸುವ ಮೊದಲು, ನೀವು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಬೇಕು.

    Continue Reading

    health

    ಚಿಕನ್ ಲೆಗ್ ಪೀಸ್ ಪ್ರಿಯರು ಇದನ್ನು ಓದಲೇ ಬೇಕು !

    Published

    on

    ಮಂಗಳೂರು: ಚಿಕನ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಅದರಲ್ಲೂ ನಾನ್-ವೆಜ್ ಪ್ರೇಮಿಗಳಲ್ಲಿ ಚಿಕನ್ ಬಹುಶಃ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ಆದರೆ ಇತ್ತಿಚೇಗೆ ಚಿಕನ್ ಫ್ರೆಶ್ ಆಗಿರಲು ಇಂಜೆಕ್ಷನ್ ನೀಡುತ್ತಾರೆ ಎಂಬ ಆರೋಪವಿದೆ.


    ಚಿಕನ್ ಸಾಮಾನ್ಯವಾಗಿ ಆರೋಗ್ಯಕರ ಆಹಾರವಾಗಿದ್ದು ಇದು ಪ್ರೋಟೀನ್ ಶಕ್ತಿಯಿಂದ ತುಂಬಿದೆ. ದೇಹಕ್ಕೆ ಹಲವಾರು ಪೋಷಕಾಂಶಗಳನ್ನು ನೀಡುತ್ತದೆ. ಆದರೆ ಚಿಕನ್ ಲೆಗ್ ಪೀಸ್ ಮಾತ್ರ ಮುಟ್ಟಲೇಬಾರದು.ಚಿಕನ್ ಸ್ಕಿನ್ ತಿನ್ನುವುದು ಅಷ್ಟೋಂದು ಒಳ್ಳೆಯದಲ್ಲ ಏಕೆಂದರೆ ಅದರಲ್ಲಿ ಹೆಚ್ಚು ಕೊಬ್ಬು ಇರುತ್ತದೆ. ಹೀಗಾಗಿ ಕೋಳಿ ಚರ್ಮದಿಂದ ದೂರ ಇರಬೇಕು ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ.

    ಇದನ್ನೂ ಓದಿ: ಆರ್‌ಸಿಬಿಗೆ ರಾಜ್ಯ ಸರ್ಕಾರದಿಂದ ಎಚ್ಚರಿಕೆ !
    ಇನ್ನೂ ನೀವು ಇಷ್ಟಪಟ್ಟು ತಿನ್ನುವ ಲೆಗ್ ಪೀಸ್ ಇದು ಮನುಷ್ಯನ ದೇಹಕ್ಕೆ ತೊಂಬಾ ಹಾನಿಕಾರಕ ಎಂದು ಪರಿಗಣಿಸಲ್ಪಟ್ಟಿದೆ. ಬಾಯಿಲರ್ ಕೋಳಿಯ ತೊಡೆ ಭಾಗಕ್ಕೆ ಇಂಜೆಕ್ಷನ್ ನೀಡಲಾಗುತ್ತದೆ. ಇದರ ಉದ್ದೇಶ ಕೋಳಿ ತೂಕ ಹೆಚ್ಚಾಗಬೇಕು. ಇದರಿಂದ ಜನರು ಬೇಗ ಖರೀದಿ ಮಾಡುತ್ತಾರೆ ಎಂಬ ದುರಾಸೆ. ಪ್ರತಿಷ್ಠಿತ ಹೋಟೆಲ್ ಅಥವಾ ಬಿದಿ ಬದಿಯ ಫಾಸ್ಟ್ ಫುಡ್ ಗಳಲ್ಲಿ ಜನರು ಹೆಚ್ಚಾಗಿ ಕೇಳುವುದೇ ಲೆಗ್ ಪೀಸ್ ಅಥವಾ ಥೈ ಪೀಸ್.

    ಆದರೆ ಜನರು ಧೈರ್ಯವಾಗಿ ನಾಟಿ ಕೋಳಿ ತಿನ್ನಬಹುದು. ಏಕೆಂದರೆ ಇದರಲ್ಲಿ ಯಾವುದೇ ಕೆಮಿಕಲ್ಸ್ ಅಥವಾ ಇಂಜೆಕ್ಷನ್ ಬಳಸುವುದಿಲ್ಲ. ಅಲ್ಲದೆ ನಾಟಿ ಕೋಳಿ ಹೆಚ್ಚು ದಪ್ಪವಾದರೆ, ಅದನ್ನು ಜನರು ಖರೀದಿಸುವುದಿಲ್ಲ. ಒಮೆಗಾ 3 ಮತ್ತು ಒಮೆಗಾ 6 ಕೊರತೆ ಇರುವವರು ವಾರಕೊಮ್ಮೆ ಚಿಕನ್ ಸ್ಕಿನ್ ತಿನ್ನಬಹುದು. ದಿನ ನಿತ್ಯ ಕೋಳಿ ಸೇವಿಸುವವರು ಚಿಕನ್ ಬ್ರೆಸ್ಟ್ ತಿನ್ನಬೇಕು.

    ಕೋಳಿ ದಿನ ತಿನ್ನುವುದಕ್ಕಿಂತ ಅಪರೂಪಕ್ಕೆ ತಿನ್ನುವುದು ಒಳ್ಳೆಯದು.

    Continue Reading

    Baindooru

    3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ

    Published

    on

    ವಿಜಯಪುರ: ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. 3ಕ್ಕೆ 3 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದು, ಕೈ ನಾಯಕರ ಆತ್ಮವಿಶ್ವಾಸ ಹೆಚ್ಚಾಗಿದೆ. ಮೂರು ಉಪಚುನಾವಣೆ ಗೆದ್ದ ಕಾಂಗ್ರೆಸ್‌ ನಾಯಕರು ವಿಜಯೋತ್ಸವದಲ್ಲಿ ಬ್ಯುಸಿಯಾಗಿದ್ದಾರೆ.

    ಕಾಂಗ್ರೆಸ್ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದರೆ ಬಿಜೆಪಿ ನಾಯಕರಿಗೆ ಬಹಳ ದೊಡ್ಡ ನಿರಾಸೆಯಾಗಿದೆ. ಬಿಜೆಪಿ ನಾಯಕರು ನಿರೀಕ್ಷೆ ಮಾಡದ ತೀರ್ಪನ್ನು ಮೂರು ವಿಧಾನಸಭಾ ಕ್ಷೇತ್ರದ ಮತದಾರರು ನೀಡಿದ್ದು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಸೋಲು ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ಬೇಸರಕ್ಕೆ ಕಾರಣವಾಗಿದೆ.

    ಬೈಎಲೆಕ್ಷನ್ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ಮನೆಯಲ್ಲಿನ ಟಿವಿ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲ್ಹಾರ ಪಟ್ಟಣದ ವೀರಭದ್ರಪ್ಪ ಬಾಗಿ ಎಂಬುವವರು ಇಂದು ಬೆಳಗ್ಗೆಯಿಂದ ಉಪಚುನಾವಣಾ ಫಲಿತಾಂಶವನ್ನು ಟಿವಿಯಲ್ಲಿ ನೋಡುತ್ತಾ ಇದ್ದರು. 3ಕ್ಕೆ 3 ಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತಿದ್ದಂತೆ ಟಿವಿ ಒಡೆದು ರಾಜ್ಯ ಬಿಜೆಪಿ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಿಜೆಪಿ ನಾಯಕರ ಒಗ್ಗಟ್ಟಿನ ಕೊರತೆಯಿಂದ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲಾಗಿದೆ. ಬಿಜೆಪಿ ವರಿಷ್ಠರು ಮೊದಲು ಬಿಜೆಪಿ ನಾಯಕರು, ಮುಖಂಡರ ಸಭೆ ಕರೆಯಬೇಕು. ಬಿಜೆಪಿ ನಾಯಕರ ನಡುವಿನ ಒಡಕಿನಿಂದ ಕಾರ್ಯಕರ್ತರು ಹಾಳಾಗುವ ಪರಿಸ್ಥಿತಿ ಬಂದಿದೆ ಎಂದು ವೀರಭದ್ರಪ್ಪ ಬಾಗಿ ಆಗ್ರಹಿಸಿದ್ದಾರೆ.

    Continue Reading

    LATEST NEWS

    Trending