Connect with us

    ಕರ್ನಾಟಕ-ಕೇರಳ ಗಡಿ ಓಪನ್ ನಿರ್ಧಾರಕ್ಕೆ ಒಲ್ಲೆ ಎಂದ ಸುಪ್ರೀಂಕೋರ್ಟ್

    Published

    on

    ಕರ್ನಾಟಕ-ಕೇರಳ ಗಡಿ ಓಪನ್ ನಿರ್ಧಾರಕ್ಕೆ ಒಲ್ಲೆ ಎಂದ ಸುಪ್ರೀಂಕೋರ್ಟ್

    ಮಂಗಳೂರು: ಕರ್ನಾಟಕ-ಕೇರಳ ಗಡಿ ಬಂದ್‌ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ನಿರಾಕರಿಸಿದ್ದು, ಗಡಿ ಗಲಾಟೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

    ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದಂತೆ ಕರ್ನಾಟಕ ರಾಜ್ಯ ಸರಕಾರ ಕೇರಳ ಸಂಪರ್ಕಿಸುವ ಎಲ್ಲಾ ಗಡಿಗಳನ್ನು ಬಂದ್ ಮಾಡಿತ್ತು.

    ಈ ಹಿನ್ನಲೆ ಕೇರಳದ ರೋಗಿಗಳಿಗೆ ಕರ್ನಾಟಕದ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕ ವಿಧಿಸಿರುವ ಗಡಿ ದಿಗ್ಬಂಧನವನ್ನು ತೆಗೆದು ಹಾಕುವಂತೆ ಕೇರಳ ಹೈಕೋರ್ಟ್ ಅಸೋಸಿಯೇಷನ್ ಕೇರಳ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

    ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್, ಗಡಿ ತೆರೆಯುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಮಧ್ಯಂತರ ಆದೇಶ ಪ್ರಕಟಿಸಿತ್ತು.

    ಈ ಹಿನ್ನಲೆ ಕೇರಳ ಹೈಕೋರ್ಟ್ ನ ಆದೇಶವನ್ನು ಕರ್ನಾಟಕ ರಾಜ್ಯ ಸರಕಾರ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿತ್ತು.

    ಈ ಅರ್ಜಿಯನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ್ ರಾವ್ ಮತ್ತು ದೀಪಕ್ ಗುಪ್ತಾ ಅವರನ್ನ ಒಳಗೊಂಡ ನ್ಯಾಯಪೀಠವು ಎರಡು ರಾಜ್ಯಗಳ ವಿವಾದವನ್ನು ಸೌಹಾರ್ದಯುತ ಪರಿಹಾರಕ್ಕೆ ಬೆಂಬಲ ನೀಡಿತು.

    ಅಲ್ಲದೆ ಕೇರಳ ಗಡಿಯನ್ನು ಮಣ್ಣು ಹಾಕಿ, ಕಲ್ಲು ಮಣ್ಣಿನ ಚೀಲ ಇಟ್ಟು ಮುಚ್ಚಿರುವ ಕಾರಣ ಕರ್ನಾಟಕದ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

    ಮಂಗಳವಾರದವೆರೆಗೆ (ಎಪ್ರಿಲ್ 14) ಮುಚ್ಚಿರುವ ಕೇರಳ ಗಡಿಯನ್ನು ತೆರೆಯದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

    ಅಲ್ಲದೆ ಕರ್ನಾಟಕ ಮತ್ತು ಕೇರಳದ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ.

    ಹೀಗೆ ಸಭೆ ನಡೆಸಿ, ಕೇರಳದಿಂದ ಕರ್ನಾಟಕಕ್ಕೆ ವೈದ್ಯಕೀಯ ಚಿಕಿತ್ಸೆಗಾಗಿ ತೆರಳುವ ಜನರ ಸಂಚಾರವನ್ನು ಹೇಗೆ ಸುಗಮಗೊಳಿಸಬಹುದು ಎಂಬುದನ್ನು ನಿರ್ಧರಿಸಿ ಎಂದು ಸೂಚನೆ ನೀಡಿದೆ.

    ಮುಂದಿನ ವಿಚಾರಣೆಯನ್ನು ಏಪ್ರಿಲ್‌ 7ಕ್ಕೆ ಮುಂದೂಡಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಮಾಜಿ ಕ್ರಿಕೆಟಿಗ ಸೆಹ್ವಾಗ್-ಆರತಿ ದಾಂಪತ್ಯದಲ್ಲಿ ಬಿರುಕು ?

    Published

    on

    ಮಂಗಳೂರು/ಮುಂಬೈ : ಇತ್ತೀಚೆಗೆ ಕ್ರಿಕೆಟರ್ ಚಹಾಲ್-ಧನಶ್ರೀ ವಿಚ್ಛೇದನ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

    ಆದರೆ ಇದೀಗ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹಾಗೂ ಅವರ ಪತ್ನಿ ಆರತಿ ಆಹ್ಲಾವತ್ ವಿಚ್ಛೇದನ ಪಡೆಯಲಿದ್ದು, ಇವರಿಬ್ಬರ 20 ವರ್ಷಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದು ವರದಿಯಾಗಿದೆ.

    ಸೆಹ್ವಾಗ್ ಮತ್ತು ಆರತಿ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರರನ್ನು ಅನ್‌ಫಾಲೋ ಮಾಡಿರುವುದು ವಿಚ್ಛೇದನ ವರದಿಗೆ ಹೆಚ್ಚಿನ ಬಲ ತುಂಬಿದೆ. ಜತೆಗೆ ಇವರಿಬ್ಬರು ಹಲವು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಮುಂದಿನ ದಿನಗಳಲ್ಲಿ ವಿಚ್ಛೇದನದ ಬಗ್ಗೆ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ನಾನು ಮತ್ತು ನನ್ನ ಕುಟುಂಬ ಸದಸ್ಯರು…ವಿಚ್ಛೇದನ ವದಂತಿ ಕುರಿತು ಕೊನೆಗೂ ಮೌನ ಮುರಿದ ಧನಶ್ರೀ ವರ್ಮಾ !

    ಅಲ್ಲದೆ, ಇತ್ತೀಚೆಗೆ ಸೆಹ್ವಾಗ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್‌ಗಳಲ್ಲಿ ಪತ್ನಿ ಆರತಿ ಎಲ್ಲಿಯೂ ಕಂಡುಬಂದಿಲ್ಲ. ಜತೆಗೆ ಕಳೆದ ವರ್ಷ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಸೆಹ್ವಾಗ್, ಇಬ್ಬರು ಪುತ್ರರು ಮತ್ತು ತಾಯಿಯೊಂದಿಗಿನ ಫೋಟೋಗಳನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ವಿಚ್ಛೇದನ ವರದಿಗೆ ಮತ್ತಷ್ಟು ಪುಷ್ಟಿ ನೀಡಿತ್ತು.

    ಸೆಹ್ವಾಗ್ ಮತ್ತು ಆರತಿ 2004ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಆರ್ಯುವೀರ್, ವೇದಾಂತ್ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ.

    Continue Reading

    DAKSHINA KANNADA

    ಬಂಟ್ವಾಳ : 108 ಆಂಬ್ಯುಲೆನ್ಸ್ ವಾಹನಕ್ಕೆ ಇನ್ನೋವಾ ಕಾರ್‌ ಡಿಕ್ಕಿ – ವಾಹನಗಳು ಜಖಂ

    Published

    on

    ಬಂಟ್ವಾಳ: ರಸ್ತೆ ಬದಿಯಲ್ಲಿ ಖಾಲಿ ಜಾಗದಲ್ಲಿ ನಿಲ್ಲಿಸಿ ಟಯರ್ ಚೆಕ್ ಮಾಡುತ್ತಿದ್ದ ವೇಳೆ 108 ಆಂಬ್ಯುಲೆನ್ಸ್ ವಾಹನಕ್ಕೆ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದು ಎರಡು ವಾಹನಗಳು ಜಖಂಗೊಂಡಿದ್ದು ಅದೃಷ್ಟವಶಾತ್ ಯಾರಿಗೂ ಗಾಯವಿಲ್ಲದೆ ಪಾರಾಗಿರುವ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳದ ತುಂಬೆ ಸಮೀಪದ ಕಡೆಗೋಳಿಯಲ್ಲಿ ನಡೆದಿದೆ.

    ವಿಟ್ಲದಿಂದ ಮಂಗಳೂರಿಗೆ ರೋಗಿಯನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ ವಾಪಸು ವಿಟ್ಲಕ್ಕೆ ಬರುತ್ತಿದ್ದ 108 ಅಂಬ್ಯುಲೆನ್ಸ್ ವಾಹನಕ್ಕೆ ಇನ್ನೋವಾ ಕಾರು ಡಿಕ್ಕಿಯಾಗಿದೆ. ಕಡೆಗೋಳಿ ಎಂಬಲ್ಲಿ ಆಂಬ್ಯುಲೆನ್ಸ್ ವಾಹನದ ಚಕ್ರದಲ್ಲಿ ಶಬ್ದ ಬಂದಿದೆ ಎಂದು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಚಾಲಕ ಕರುಣಾಕರ ಅವರು ಪರಿಶೀಲನೆ ಮಾಡುತ್ತಿದ್ದ ವೇಳೆ ಇನ್ನೋವ ಕಾರು ಚಾಲಕ ಶ್ರವಣ್ ಅಂಬ್ಯುಲೆನ್ಸ್ ವಾಹನದ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ.

    ಘಟನೆಯಲ್ಲಿ ಯಾವುದೇ ಗಾಯವಾಗದಿದ್ದರೂ ಎರಡು ವಾಹನಗಳಿಗೆ ಹಾನಿಯಾಗಿದೆ. ಪಾಣೆಮಂಗಳೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    ಸಚಿವ ಉತ್ತಮ್ ಕುಮಾರ್ ರೆಡ್ಡಿ ಬೆಂಗಾವಲು ಪಡೆಯ 8 ಕಾರುಗಳ ಸರಣಿ ಅಪಘಾತ

    Published

    on

    ಮಂಗಳೂರು/ಹೈದರಾಬಾದ್ : ತೆಲಂಗಾಣದ ನೀರಾವರಿ ಮತ್ತು ನಾಗರಿಕ ಪೂರೈಕೆ ಸಚಿವ ಉತ್ತಮ್ ಕುಮಾರ್ ರೆಡ್ಡಿ ಬೆಂಗಾವಲು ಪಡೆಯ 8 ಕಾರುಗಳು ಡಿಕ್ಕಿ ಹೊಡೆದಿವೆ.

    ಸಚಿವರು ಹುಜೂರ್ ನಗರದಿಂದ, ಸೂರ್ಯಪೇಟೆ ಜಿಲ್ಲೆಯ ಜಾನ್‌ಪಹಾಡ್ ದರ್ಗಾಕ್ಕೆ ಹೋಗುತ್ತಿದ್ದ ವೇಳೆ, ಗರೀಡೆಪಲ್ಲಿ ಪಿಎಸ್‌ನಲ್ಲಿ ಈ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ.

    ಇದನ್ನೂ ಓದಿ: ನಿಶ್ಚಿತಾರ್ಥಗೊಂಡ ಯುವತಿಯ ಆ ಒಂದು ಪ್ರಶ್ನೆಗೆ ಆತ್ಮಹ*ತ್ಯೆ ಮಾಡಿಕೊಂಡ ಯುವಕ ?

    ಅಷ್ಟಕ್ಕೂ ಆಗಿದ್ದೇನು?
    ಸಚಿವರ ಆಗಮನದ ಮಾಹಿತಿ ತಿಳಿದ ಕಾರ್ಯಕರ್ತರು ರಸ್ತೆಯಲ್ಲಿ ನಿಂತು ಕಾಯುತ್ತಿದ್ದರು. ಈ ವೇಳೆ ಸಚಿವ ಉತ್ತಮ್ ಕುಮಾರ್ ರೆಡ್ಡಿ ಕಾರು ನಿಲ್ಲಿಸುವಂತೆ ಹೇಳಿದ್ದಾರೆ. ಇದರಿಂದ ಏಕಾಏಕಿ ಚಾಲಕ ಬ್ರೇಕ್ ಹಾಕಿದ್ದಾನೆ. ಇದರಿಂದ ಹಿಂದೆ ಬರುತ್ತಿದ್ದ ಬೆಂಗಾವಲು ಪಡೆಯ 8 ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಅದೃಷ್ಟವಶಾತ್ ಈ ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

    Continue Reading

    LATEST NEWS

    Trending