Connect with us

    LATEST NEWS

    ಹೈಕೋರ್ಟ್‌ ನ್ಯಾಯಾಧೀಶರ ಹೇಳಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಎಂಟ್ರಿ..!

    Published

    on

    ಮಂಗಳೂರು/ ನವದೆಹಲಿ : ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ವಿವಾದಾತ್ಮಕ ಹೇಳಿಕೆಯ ವಿಚಾರವನ್ನು ಸುಪ್ರೀಂಕೋರ್ಟ್‌ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ನ್ಯಾಯಾಧೀಶರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಈ ವಿಚಾರ ಕೈಗೆತ್ತಿಕೊಂಡಿದೆ.

    ಇತ್ತೀಚೆಗೆ ವಿಚಾರಣೆಯ ವೇಳೆ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ಬೆಂಗಳೂರಿನಲ್ಲಿ ಮುಸ್ಲಿಂ ಪ್ರಾಬಲ್ಯ ಇರುವ ಪ್ರದೇಶವನ್ನು “ಪಾಕಿಸ್ತಾನ” ಎಂದು ಕರೆದು ಇದೇ ಸತ್ಯ ಎಂದು ಹೇಳಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ನ್ಯಾಯಮೂರ್ತಿಯ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

    ಭೂ ಮಾಲೀಕ ಹಾಗೂ ಹಿಡುವಳಿದಾರರ ಜಮೀನು ವಿವಾದದ ಕುರಿತಾದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಶ್ರೀಶಾನಂದ ಅವರು ಈ ಹೇಳಿಕೆಯನ್ನು ನೀಡಿದ್ದರು. ಇಷ್ಟೇ ಅಲ್ಲದೆ, ಮಹಿಳಾ ವಕೀಲರ ವಿರುದ್ಧ ಸ್ತ್ರೀ ದ್ವೇಷದ ಹೇಳಿಕೆ ಕೂಡ ನೀಡಿದ್ದರು.

    ಸುಪ್ರೀಂ ಕೋರ್ಟ್‌ ಈ ವಿಚಾರವಾಗಿ ಹೇಳಿದ್ದೇನು ?

    ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಸುಪ್ರೀಂ ಕೋರ್ಟ್‌ ಪೀಠವು, ನ್ಯಾಯಾಂಗದ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದೆ. ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿನ ಈ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಸ್ಥಾಪಿಸುವ ಅಗತ್ಯವನ್ನು ಒತ್ತಿಹೇಳಿತು.

    ಸಾಮಾಜಿಕ ಮಾಧ್ಯಮಗಳು ನ್ಯಾಯಾಲಯದ ಕಲಾಪಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಅದನ್ನು ಹಂಚಿಕೊಳ್ಳುತ್ತಿದೆ. ಹೀಗಾಗಿ ನ್ಯಾಯಾಂಗದ ಹೇಳಿಕೆಗಳು ನ್ಯಾಯಾಲಯದ ಪ್ರಚಲಿತ ವಿಚಾರಗಳ ಜೊತೆ  ಹೊಂದಿಕೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು ತುರ್ತು ಎಂದು ಪೀಠವು ಹೇಳಿದೆ.

    ಇದನ್ನೂ ಓದಿ : ಗಂಭೀರ ಆರೋಪದ ಸುಳಿಯಲ್ಲಿ ಸಿಕ್ಕ ಬಿಜೆಪಿ ಶಾಸಕ ಮುನಿರತ್ನ ಮತ್ತೆ ಅರೆಸ್ಟ್‌

    “ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಮಾಡಿದ ಕಾಮೆಂಟ್‌ಗಳ ಮಾಧ್ಯಮ ವರದಿಗಳ ಬಗ್ಗೆ ಗಮನ ಸೆಳೆಯಲಾಗಿದೆ. ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಂದ ಸೂಚನೆಗಳನ್ನು ಪಡೆದ ನಂತರ ವರದಿಯನ್ನು ಸಲ್ಲಿಸುವಂತೆ ನಾವು ಕರ್ನಾಟಕ ಹೈಕೋರ್ಟ್‌ಗೆ ವಿನಂತಿಸುತ್ತೇವೆ” ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದ್ದಾರೆ.

    LATEST NEWS

    ಸಕಲ ಗೌರವಗಳೊಂದಿಗೆ ಹುತಾತ್ಮ ಯೋಧ ಅನೂಪ್ ಅಂತ್ಯಕ್ರಿಯೆ

    Published

    on

    ಕುಂದಾಪುರ : ಪೂಂಚ್‌ನಲ್ಲಿ ನಡೆದ ಅಪಘಾ*ತದಲ್ಲಿ ಹುತಾ*ತ್ಮರಾದ ಕುಂದಾಪುರದ ಬೀಜಾಡಿಯ ಯೋಧ ಅನೂಪ್ ಪೂಜಾರಿ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

     

    ಯೋಧ ಅನೂಪ್ ಪೂಜಾರಿ ಅವರ ಅಂತ್ಯ ಸಂಸ್ಕಾರ ಬೀಜಾಡಿಯ ಕಡಲ ತೀರದಲ್ಲಿ ಸರ್ಕಾರಿ ಗೌರವದೊಂದಿಗೆ ನಡೆಸಲಾಯಿತು.  ಮೂರು ಸುತ್ತು ಕುಶಾಲ ತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಲಾಯಿತು.

    ಇದನ್ನೂ ಓದಿ : ಮಗನ ಆ ಒಂದು ನಿರ್ಧಾರದಿಂದ ಸಾ*ವಿಗೆ ಶರಣಾದ ಹೆತ್ತವರು!

    ಮೆರವಣಿಗೆಯ ಮೂಲಕ ಪಾರ್ಥೀವ ಶರೀರವನ್ನು ಬೀಜಾಡಿಯ ಅನೂಪ್ ನಿವಾಸಕ್ಕೆ ತರಲಾಯಿತು. ಅಲ್ಲಿ ಅಂತಿಮ ವಿಧಿ ವಿಧಾನ ನಡೆದು ಬೀಜಾಡಿ ಪಡುಶಾಲೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಯಿತು. ನೂರಾರು ಮಂದಿ ಆಗಮಿಸಿ ಹುತಾತ್ಮ ಯೋಧನ ಅಂತಿಮ ದರ್ಶನ ಪಡೆದರು.  ಬಳಿಕ ಅಂತ್ಯಕ್ರಿಯೆ ನಡೆಯಿತು.

    ಚಿತೆಗೆ ಸಹೋದರ ಶಿವರಾಂ ಅಗ್ನಿಸ್ಪರ್ಶ ಮಾಡಿದ್ದು, ಸಾವಿರಾರು ಜನರು ಯೋಧನ ಅಂತಿಮ ವಿದಾಯಕ್ಕೆ ಸಾಕ್ಷಿಯಾಗಿದ್ದರು. 13 ವರ್ಷಗಳಿಗೂ ಅಧಿಕ ಕಾಲ ದೇಶ ಸೇವೆ ಮಾಡಿದ್ದ ಯೋಧ ಅಕಾಲಿಕವಾಗಿ ಅಗಲಿದ್ದು, ಇಡೀ ಜಿಲ್ಲೆಯೆ ಶೋಕ ಸಾಗರದಲ್ಲಿ ಮುಳುಗಿದೆ.

    Continue Reading

    LATEST NEWS

    ಕರಾವಳಿ ಉತ್ಸವದ ಪ್ರಯುಕ್ತ ಡಿಸೆಂಬರ್ 28 ಮತ್ತು 29 ರಂದು ಬೀಚ್ ಉತ್ಸವ

    Published

    on

    ಮಂಗಳೂರು: ಕರಾವಳಿ ಉತ್ಸವದ ಹಿನ್ನಲೆಯಲ್ಲಿ ಡಿಸೆಂಬರ್ 28 ಮತ್ತು 29 ರಂದು ತಣ್ಣೀರು ಬಾವಿ ಬೀಚ್‌ನಲ್ಲಿ ಬೀಚ್ ಉತ್ಸವ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ಜನರಿಗೆ ಬರಪೂರ ಮನರಂಜನೆ ನೀಡಲಿರುವ ಈ ಬೀಚ್ ಉತ್ಸವದಲ್ಲಿ ಖ್ಯಾತ ಹಿನ್ನೆಲೆ ಗಾಯಕರ ಸಮಾಗಮವಾಗಲಿದೆ.

    ಈ ಬೀಚ್ ಉತ್ಸವದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದು, ಕಾರ್ಯಕ್ರಮಗಳ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕರಾಗಿರುವ ಮಣಿಕಾಂತ್ ಕದ್ರಿ ಹಾಗೂ ತನ್ನದೇ ಶೈಲಿಯ ಸಂಗೀತದ ಮೂಲಕ ಜಗತ್ಪ್ರಸಿದ್ದಿ ಪಡೆದುಕೊಂಡಿರುವ ಗಾಯಕ ರಘು ದೀಕ್ಷೀತ್ ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ.

    ಇದರ ಜೊತೆಗೆ ಬೀಚ್ ಉತ್ಸವದಲ್ಲಿ ಡ್ಯಾನ್ಸ್ ಫೆಸ್ಟಿವಲ್ , ವಾಟರ್ ಸ್ಪೋರ್ಟ್ಸ್‌, ಸ್ಯಾಂಡ್ ಆರ್ಟ್‌ , ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವೀಕೆಂಡ್ ಎಂಜಾಯ್ ಮಾಡಲು ಇದೊಂದು ಸದಾವಕಾಶವಾಗಿದ್ದು, ಕರಾವಳಿ ಉತ್ಸವ ಸಂಭ್ರಮಕ್ಕೆ ಈ ಎರಡು ದಿನಗಳ ಬೀಚ್‌ನಲ್ಲಿ ಜನರಿಗೆ ಸಾಕಷ್ಟು ಮನರಂಜನೆ ಸಿಗಲಿದೆ. ವಾಹನ ನಿಲುಗಡೆಗೂ ಪೊಲೀಸ್ ಇಲಾಖೆಯಿಂದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸುಲ್ತಾನ್ ಬತ್ತೇರಿಯಿಂದ ಬೋಟ್ ಮೂಲಕ ತೆರಳುವವರಿಗೂ ಹೆಚ್ಚಿನ ವ್ಯವಸ್ಥೆಯನ್ನ ಮಾಡಲಾಗಿದೆ.

    ಮಂಗಳೂರಿನ ಖ್ಯಾತ ಬಿಲ್ಡರ್ ರೋಹನೊ ಕಾರ್ಪೋರೇಷನ್ ಈ ಬೀಚ್ ಫೆಸ್ಟಿವಲ್‌ಗೆ ಟೈಟಲ್ ಸ್ಪಾನ್ಸರ್ ಆಗಿ ಸಹಕರಿಸಿದ್ದು, ಬೀಚ್ ಫೆಸ್ಟಿವಲ್ ಸಮಿತಿಯ ಅದ್ಯಕ್ಷತೆಯನ್ನು ನಗರ ಪೊಲೀಸ್ ಆಯುಕ್ತರು ವಹಿಸಿಕೊಂಡಿದ್ದಾರೆ.

    Continue Reading

    LATEST NEWS

    ಮಗನ ಆ ಒಂದು ನಿರ್ಧಾರದಿಂದ ಸಾ*ವಿಗೆ ಶರಣಾದ ಹೆತ್ತವರು!

    Published

    on

    ಮಂಗಳೂರು/ನಂದ್ಯಾಲ್ : ತಮ್ಮ 24 ವರ್ಷದ ಮಗ ತೃತೀಯ ಲಿಂಗಿಯನ್ನು ಮದುವೆಯಾಗಲು ಮುಂದಾಗಿದ್ದನ್ನು ಕೇಳಿ ತಂದೆ – ತಾಯಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ನಡೆದಿದೆ. ಸುಬ್ಬಾ ರಾಯುಡು(45) ಮತ್ತು ಸರಸ್ವತಿ(38) ಮೃ*ತ ದಂಪತಿ.

    ಮಗ ಸುನೀಲ್ ಕುಮಾರ್ ಕಳೆದ ಮೂರು ವರ್ಷಗಳಿಂದ ಸ್ಥಳೀಯ ತೃತೀಯ ಲಿಂಗಿ ಸಮುದಾಯದೊಂದಿಗೆ ಒಡನಾಟ ಹೊಂದಿದ್ದನಂತೆ. ಈ ವಿಚಾರ ಗೊತ್ತಾದಾಗ ಸುಬ್ಬಾ ರಾಯುಡು, ಸರಸ್ವತಿ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಗನೊಂದಿಗೆ ಜಗಳವೂ ನಡೆದಿದೆ ಎಂದು ತಿಳಿದು ಬಂದಿದೆ.

    ತೃತೀಯಲಿಂಗಿಯೊಂದಿಗೆ ಮೂರು ವರ್ಷಗಳಿಂದ ಸುನೀಲ್ ಕುಮಾರ್ ಸಂಬಂಧ ಹೊಂದಿದ್ದ. ಅವರನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದ. ಈ ಬಗ್ಗೆ ಪೋಷಕರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಇದೇ ವಿಚಾರವಾಗಿ ಈ ಹಿಂದೆ ಸುನೀಲ್ ಆತ್ಮಹ*ತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿರುವ ಬಗ್ಗೆ ವರದಿಯಾಗಿದೆ.

    ಇದನ್ನೂ ಓದಿ : ಹೆಚ್ಚು ಮೊಬೈಲ್ ನೋಡ್ಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ವಿಷ ಸೇವಿಸಿ ಯುವತಿ ಆತ್ಮಹತ್ಯೆ

    ತೃತೀಯ ಲಿಂಗಿಗಳ 1.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದು, ಪೋಷಕರಿಗೆ ಆ ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ತೃತೀಯ ಲಿಂಗಿ ಸಮುದಾಯದ ಸದಸ್ಯರು ಪೋಷಕರನ್ನು ಸಾರ್ವಜನಿಕವಾಗಿ ನಿಂದಿಸಿದ್ದರು. ಇದರಿಂದ ನೊಂದ ದಂಪತಿ ಸಾ*ವಿನ ದಾರಿ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

    Continue Reading

    LATEST NEWS

    Trending