Connect with us

    DAKSHINA KANNADA

    ರಾಜ್ಯ, ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಬಜೆಟ್: ನಳಿನ್‍ ಕುಮಾರ್ ಕಟೀಲ್ ಸ್ವಾಗತ..!

    Published

    on

    ಬೆಂಗಳೂರು: ಭಾರತವು ಜಗದ್ವಂದ್ಯ ರಾಷ್ಟ್ರವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೇಂದ್ರದ ನೂತನ ಬಜೆಟ್‍ನಲ್ಲಿ ಪ್ರಕಟಿಸಲಾಗಿದೆ. ಇದು ಕರ್ನಾಟಕ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಹೊಂದಿದ ಬಜೆಟ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಮೂಲಸೌಕರ್ಯ ಕ್ಷೇತ್ರದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ.

    ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ಅನುದಾನ ನೀಡಿದ್ದು, ಮನೆಮನೆಗೆ ನಳ್ಳಿ ನೀರು (ಹರ್ ಘರ್ ಜಲ್) ಯೋಜನೆಯ ವೇಗವರ್ಧನೆಗೆ ಕಾರಣ ಆಗಲಿದೆ ಎಂದು ತಿಳಿಸಿದ್ದಾರೆ.

    ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

    ಕೋವಿಡ್ ನಂತರವೂ ಭಾರತವು ತನ್ನ ಆರ್ಥಿಕತೆಯ ವೇಗದಿಂದಾಗಿ ಜಗತ್ತಿನ ಗಮನ ಸೆಳೆದಿದೆ.

    ರೈಲ್ವೆ ಇಲಾಖೆಯಲ್ಲಿ ಹೆಚ್ಚಿನ ಹಣ ಹೂಡಿಕೆ, ಯುವ ಉದ್ಯಮಿಗಳು, ಕೃಷಿ ಸ್ಟಾರ್ಟಪ್‍ಗಳಿಗೆ ಉತ್ತೇಜನ, ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟಿದ್ದು, ಒಂದು ಜಿಲ್ಲೆ- ಒಂದು ಉತ್ಪನ್ನಕ್ಕೆ ಪ್ರೋತ್ಸಾಹ ಕೊಟ್ಟ ಆಯವ್ಯಯ ಪತ್ರ ಇದಾಗಿದೆ ಎಂದು ತಿಳಿಸಿದ್ದಾರೆ.

    ಮಧ್ಯಮ ವರ್ಗದವರಿಗೆ ನೀಡಿರುವ ತೆರಿಗೆ ವಿನಾಯಿತಿ ಬಗ್ಗೆ ಅವರು ಸಂತಸ ಸೂಚಿಸಿದ್ದಾರೆ.

    ದೇಶವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಕಾಲಘಟ್ಟದಲ್ಲಿದೆ. ದೇಶವನ್ನು ಸ್ವಾತಂತ್ರ್ಯೋತ್ಸವದ ಶತಮಾನೋತ್ಸವದತ್ತ ಸದೃಢವಾಗಿ ಒಯ್ಯುವ ನಿಟ್ಟಿನಲ್ಲಿ ಇದೊಂದು ನೀಲನಕ್ಷೆಯಂತಿದೆ ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ.

    DAKSHINA KANNADA

    ಕೋಟಿ ಗಾಯತ್ರಿ ಯಾಗ: ಸೆ. 29ರಂದು ಚಿತ್ರಾಪುರ ಮಠದಲ್ಲಿ ಸಂಕಲ್ಪ ದಿನ

    Published

    on

    ಮಂಗಳೂರು : ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ವತಿಯಿಂದ ಅಕ್ಟೋಬರ್ 26 ಮತ್ತು 27ರಂದು ನಡೆಯಲಿರುವ ಕೋಟಿ ಗಾಯತ್ರಿ ಯಾಗದ ಪೂರ್ವಭಾವಿಯಾಗಿ ಸೆ. 29ರ ಭಾನುವಾರ ಮುಂಜಾನೆ ಸಂಕಲ್ಪ ದಿನವನ್ನು ಮಂಗಳೂರಿನ ಚಿತ್ರಾಪುರ ಮಠದಲ್ಲಿ ನಡೆಲು ಉದ್ದೇಶಿಸಲಾಗಿದೆ ಎಂದು ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ಹೇಳಿದರು. ಚಿತ್ರಾಪುರ ಮಠದಲ್ಲಿ ನಡೆದ ಬ್ರಾಹ್ಮಣ ಸಮುದಾಯದ ಸಮಸ್ತರ ಸಭೆಯಲ್ಲಿ ಕೋಟಿ ಗಾಯತ್ರಿ ಯಾಗದ ಯಶಸ್ವಿಗಾಗಿ ನಾನಾ ಸಮಿತಿಗಳನ್ನು ರಚನೆಯ ಬಗ್ಗೆ ಚರ್ಚಿಸಿ ನಿರ್ಣಯಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.

    ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಬ್ರಾಹ್ಮಣ ಸಮುದಾಯವು ಈಗಾಗಲೇ ಗಾಯತ್ರಿ ಯಜ್ಞದ ಪೂರ್ವಭಾವಿಯಾಗಿ ಜಪದ ಸಂಕಲ್ಪ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹೊರಭಾಗದಲ್ಲಿರುವ ಜಿಲ್ಲೆಯ ಬ್ರಾಹ್ಮಣರು ಕೂಡಾ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಇನ್ನೂ ಹೆಚ್ಚಿನ ಮಂದಿ ಹೆಸರು ನೋಂದಾಯಿಸುವ ನಿಟ್ಟಿನಲ್ಲಿ ಪ್ರೇರೇಪಿಸುವ ಕೆಲಸವಾಗಬೇಕು ಎಂದರು. ಬ್ರಾಹ್ಮಣ ಸಮಾಜದ ಎಲ್ಲಾ ಬಾಂಧವರು ಒಂದೇ ಸೂರಿನಡಿ ಸೇರಿಸಿ, ಹೊರ ಜಗತ್ತಿಗೆ ಬ್ರಾಹ್ಮಣ ಎಂಬ ಸಂದೇಶ ಮುಟ್ಟಿಸುವಂತಾಗಬೇಕು. ಇದೊಂದು ವಿಶೇಷ ಕಾರ್ಯಕ್ರಮ ಈ ಕಾರ್ಯಕ್ರಮವು ಗಾಯತ್ರಿ ಸಂಗಮವಾಗಿದೆ. ’ಸಾಮರಸ್ಯದಿ ಜಗವ ಬೆಳಗುವ ಬ್ರಹ್ಮ ತೇಜದ ಬೆಳಕಲಿ’ ಶೀರ್ಷಿಕೆಯಡಿ ಜರಗಲಿದೆ. ಆದುದರಿಂದ ರಚನೆಯಾದ ಸಮಿತಿಯ ಸದಸ್ಯರು ಎಲ್ಲರೂ ಒಂದಾಗಿ ತಮ್ಮ ಮನೆ ಕಾರ್ಯಕ್ರಮ ಎಂಬ ರೀತಿಯಲ್ಲಿ ದುಡಿಯಬೇಕು. ಆ ಮೂಲಕ ಸಮಾಜಕ್ಕೆ ನಮ್ಮ ಒಗ್ಗಟ್ಟನ್ನು ತೋರಿಸಿಕೊಡಬೇಕು ಎಂದು ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಶ್ರೀ ಮಹೇಶ್ ಕಜೆ ಹೇಳಿದರು.

    ನಾನಾ ಸಮಿತಿಗಳ ಜವಾಬ್ದಾರಿ, ಹೋಮದ ರೂಪು ರೇಶೆ, ಹೋಮದ ಉದ್ದೇಶ, ಕಾರ್ಯಯೋಜನೆಯ ಕುರಿತು ಮಾಹಿತಿ ನೀಡಿದ ವಿದ್ವಾನ್ ಕಶೆಕೋಡಿ ಸೂರ್ಯನಾರಾಯಣ ಭಟ್ ಸಾಂದರ್ಭಿಕವಾಗಿ ಮಾತನಾಡಿದರು. ಅ. 26ರಂದು ಮಹಿಳೆಯರಿಗಾಗಿ ಮಾತೃ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲ ಮಾತೆಯರು ಈ ಸಂಗಮದಲ್ಲಿ ಭಾಗವಹಿಸಬೇಕು. ಮುಂದಿನ ದಿನಗಳಲ್ಲಿ ಈ ವೇದಿಕೆಯೇ ಇಡೀ ಸಮಾಜದ ಮುಖವಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಹಿಂದೆ ಗಾಯತ್ರಿ ಯಾಗ ಮಾಡಿ ಅನುಭವ ಇರುವ ವಿದ್ವಾನ್ ಬಂದಗದ್ದೆ ನಾಗರಾಜ್ ಮಾತನಾಡಿ, ಗಾಯತ್ರಿ ಮಂತ್ರ ಅನುಷ್ಠಾನ ಮಾಡುವುದರಿಂದ ಸಿಗುವ ಲಾಭ, ಮಾನಸಿಕ ವಿಕಸನದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.

    ವಿದ್ವಾನ್ ಕಟೀಲಿನ ಶ್ರೀಹರಿ ನಾರಾಯಣದಾಸ ಆಸ್ರಣ್ಣ ಮಾತನಾಡಿ, ಎಲ್ಲಾ ವಿಪ್ರ ಸಮಾಜ ಬಾಂಧವರು ಒಟ್ಟು ಸೇರಿ ಈ ಯಜ್ಞ ಕಾರ್ಯದಲ್ಲಿ ಭಾಗಿಗಳಾಗೋಣ, ಪ್ರತಿಯೊಬ್ಬ ಬ್ರಾಹ್ಮಣನು ಸಹ ಕುಟುಂಬ ಸಹಿತ ಪಾಲ್ಗೊಳ್ಳಬೇಕು ಹಾಗೂ ಸೆ.೨೯ರ ಸಂಕಲ್ಪ ಕಾರ್ಯದಲ್ಲಿ ಕನಿಷ್ಠ ೫೦೦ ಜನ ಬಾಂಧವರು ಸೇರಬೇಕು ಎಂದರು. ಬ್ರಾಹ್ಮಣ ಮಹಾಸಭಾ ಸುರತ್ಕಲ್‌ನ ಗೌರವಾಧ್ಯಕ್ಷ ಪಿ. ಪುರುಷೋತ್ತಮ ರಾವ್ ಇದು ನಮ್ಮೆಲ್ಲರ ಕಾರ್ಯಕ್ರಮ ಪ್ರತಿಯೊಬ್ಬರು ತಾನು ಮನ ಧನಗಳಿಂದ ಸಾಹಕರಿಸೋಣ ಎಂದರು.

    ವಿವಿಧ ಬ್ರಾಹ್ಮಣ ಸಮಾಜದ ಪ್ರಮುಖರಾದ ಕರ್ಗಿ ಶ್ರೀನಿವಾಸ ಅಚಾರ್, ಶ್ರೀನಿವಾಸ್ ಚಿತ್ರಾಪುರ, ಸುರೇಶ್ ರಾವ್ ಚಿತ್ರಾಪುರ, ಶ್ರೀಕರ ದಾಮ್ಲೆ, ಎಂ.ಟಿ. ಭಟ್, ಉದಯ ಕುಮಾರ್, ಉದಯ ಕುಮಾರ್ ಸುರತ್ಕಲ್, ಕಾತ್ಯಾಯಿನಿ ರಾವ್, ಶೋಭಾ ಚಿತ್ರಾಪುರ, ಸಾವಿತ್ರಿ ಹೆಚ್ ಭಟ್, ಹೊಸಬೆಟ್ಟು, ರಮಾ.ವಿ ರಾವ್, ಯಮುನಾ ಪಿ ರಾವ್, ಎಂ ಸದಾಶಿವ ಕುಳಾಯಿ, ಪ್ರಕಾಶ್ ಕೋಟೆಕಾರ್, ಜಯಪ್ರಕಾಶ್ ಹೆಬ್ಬಾರ್, ಜಯರಾಮ್ ಭಟ್, ಸುಬ್ರಹ್ಮಣ್ಯ ವಿ ಭಟ್, ಗೋಪಾಲಕೃಷ್ಣ ಮಯ್ಯ, ಜ್ಯೋತಿಷಿ ರಂಗ ಐತಾಳ್ ಕದ್ರಿ, ವಿದ್ವಾನ್ ಸತ್ಯಕೃಷ್ಣ ಭಟ್ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

    Continue Reading

    DAKSHINA KANNADA

    ಮಂಗಳೂರು: ದಕ್ಷಿಣ ಕನ್ನಡದಲ್ಲಿ ಮಂಗನ ಜ್ವರಕ್ಕೆ ವಿಶೇಷ ನಿಗಾ

    Published

    on

    ಮಂಗಳೂರು: ಮಂಗನ ಜ್ವರದ ಆತಂಕದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿ ನಿಪಾಹ್ ವೈರಸ್‌ನಿಂದಾಗಿ ಕೇರಳದಲ್ಲಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

    ಆಫ್ರಿಕನ್ ದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಂಗನ ಜ್ವರ ಸ್ಥಳೀಯವಾಗಿ ಆತಂಕವನ್ನು ಉಂಟುಮಾಡಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಿಂದ ನಗರಕ್ಕೆ ಆಗಮಿಸುವ ಪ್ರಯಾಣಿಕರು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ ಮತ್ತು ತುರ್ತು ಪರಿಸ್ಥಿತಿಗಳಿಗಾಗಿ ಮೀಸಲಾದ ಆಂಬ್ಯುಲೆನ್ಸ್ ಸಿದ್ಧವಾಗಿದೆ. ಮಂಗನ ಜ್ವರ ಪ್ರಕರಣಗಳ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಕೂಡ ಕಾಯ್ದಿರಿಸಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಮಾತನಾಡಿ, ‘ಸದ್ಯ ಜಿಲ್ಲೆಯಲ್ಲಿ ಕೋತಿ ಜ್ವರದ ಪ್ರಕರಣಗಳು ವರದಿಯಾಗಿಲ್ಲ, ರಾಜ್ಯ ಸರ್ಕಾರದಿಂದ ಯಾವುದೇ ನಿರ್ದಿಷ್ಟ ಸೂಚನೆ ಬಂದಿಲ್ಲ.ಆದರೆ, ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬಂದರುಗಳಿಗೆ ಆಗಮಿಸುವ ಪ್ರಯಾಣಿಕರು. ಮುನ್ನೆಚ್ಚರಿಕೆಯಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಆರು ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ, ಮುಂದಿನ ಕ್ರಮಗಳನ್ನು ಚರ್ಚಿಸಲು ನಾವು ಶೀಘ್ರದಲ್ಲೇ ವಿಶೇಷ ಸಭೆ ನಡೆಸುತ್ತೇವೆ ಎಂದರು.

    ‘ಇತ್ತೀಚೆಗೆ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ವೈರಲ್ ಸೋಂಕುಗಳು ಹೆಚ್ಚಾಗುತ್ತಿವೆ. ಜಿಲ್ಲೆಯ ವಿವಿಧೆಡೆ ಕೆಮ್ಮು, ನೆಗಡಿ, ಗಂಟಲು ನೋವಿನ ಲಕ್ಷಣಗಳಿರುವ ಜ್ವರ ಕಾಣಿಸಿಕೊಂಡಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುವ ರೋಗಿಗಳ ಸಂಖ್ಯೆ ಹೆಚ್ಚಿದೆ. ವಿಶೇಷವಾಗಿ ಮಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಕೆಲವು ಪ್ರದೇಶಗಳಲ್ಲಿ ರಾತ್ರಿ ವೇಳೆಯಲ್ಲಿ ತುಂತುರು ಮಳೆಯಾಗುತ್ತಿದ್ದು, ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

    Continue Reading

    DAKSHINA KANNADA

    ಆಂಧ್ರದಲ್ಲಿ ನಡೆದ ವಾಲಿಬಾಲ್ ಪಂದ್ಯಾಟ; ಚಿನ್ನದ ಪದಕ ಗೆದ್ದ ನಿತೀಶ್ ಕುಮಾರ್

    Published

    on

    ಮಂಗಳೂರು/ಹೆಬ್ರಿ : ಹೆಬ್ರಿ ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ನಿತೀಶ್ ಕುಮಾರ್ ಆಂಧ್ರಪ್ರದೇಶ ವಿಜಯವಾಡದಲ್ಲಿ ನಡೆದ ವಿದ್ಯಾಭಾರತಿ ಕ್ಷೇತ್ರ ಮಟ್ಟದ ವಾಲಿಬಾಲ್ ಪಂದ್ಯಕೂಟದಲ್ಲಿ ಭಾಗವಹಿಸಿ, ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

    ಮುಂದಿನ ತಿಂಗಳು ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ವಿದ್ಯಾಭಾರತಿ ನಡೆಸುವ ರಾಷ್ಟ್ರಮಟ್ಟದ ಪಂದ್ಯಕೂಟದ ವಾಲಿಬಾಲ್ ತಂಡಕ್ಕೆ ನಿತೀಶ್ ಕುಮಾರ್ ಆಯ್ಕೆಯಾಗಿದ್ದಾರೆ.

    ಇದನ್ನೂ ಓದಿ : ವೈಪರ್ ಕೈಕೊಟ್ಟು ಅವಘಡ; ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ತೂಫಾನ್

    ನಿತೀಶ್ ಕುಮಾರ್, ಪೆರುವಾಣಿ ಗ್ರಾಮದ ಸತ್ಯನಾರಾಯಣ ಮಣಿಯಣಿ ಮತ್ತು ಜ್ಯೋತಿ ಅವರ ಪುತ್ರನಾಗಿದ್ದು, ಅವರಿಗೆ ಅಮೃತ ಭಾರತಿ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ನಿಶಾನ್ ಶೆಟ್ಟಿ ತರಬೇತಿ ನೀಡಿದ್ದರು.

    Continue Reading

    LATEST NEWS

    Trending