Friday, March 31, 2023

ಮಂಗಳೂರಿಗೆ ಬಂದಿಳಿದ ರಜನಿಕಾಂತ್ : ಪಿಲಿಕುಳದಲ್ಲಿ ಜೈಲರ್ ಸಿನೆಮಾ ಶೂಟಿಂಗ್‌ನಲ್ಲಿ ಪಾಲ್ಗೊಂಡ ತಲೈವಾ..! 

ಮಂಗಳೂರು : ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಕರಾವಳಿ ನಗರಿ ಮಂಗಳೂರಿಗೆ ಆಗಮಿಸಿದ್ದಾರೆ. ಭಾನುವಾರ ತಡರಾತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಲೈವಾ ಖಾಸಗಿ ಕಾರಿನಲ್ಲಿ ತೆರಳಿದ್ದಾರೆ.

ಈ ವೇಳೆ ಅಲ್ಲಿ ನೆರೆದ ಅಸಂಖ್ಯಾತ ಅಭಿಮಾನಿಗಳು ಅವರಿಗಾಗಿ ಕಾಯುತ್ತಿದ್ದರು.

ಈ ವೇಳೆ ಅಭಿಮಾನಿಗಳತ್ತ ಕೈ ಬೀಸಿ ಕಾರಿನಲ್ಲಿ ರಜನಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಅವರು ಭಾಗವಹಿಸಿದ್ದಾರೆ.

ರಜನಿಕಾಂತ್ ನಟನೆಯ ಜೈಲರ್ ಸಿನಿಮಾದ ಶೂಟಿಂಗ್ ನಗರದಲ್ಲಿ ನಡೆಯುತ್ತಿದ್ದು, ಈ ಹಿಂದೊಮ್ಮೆ ಅವರು ಶೂಟಿಂಗ್‌ ಗಾಗಿ ಬಂದು ಮರಳಿ ಹೋಗಿದ್ದರು.

ಈ ವೇಳೆ ಮಂಗಳೂರಿನ ಹಲವು ದೇವಸ್ಥಾನಗಳಿಗೂ ಅವರು ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಎರಡು ದಿನಗಳ ಕಾಲ ನಗರದಲ್ಲಿ ಶೂಟಿಂಗ್ ನಡೆಯಲಿದೆ.

ರಜನಿಕಾಂತ್ ಜೊತೆಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್ ಕೂಡ ಭಾಗಿಯಾಗಲಿದ್ದು, ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್, ಈ ಸಿನಿಮಾದಲ್ಲಿ ತೆರೆಹಂಚಿಕೊಳ್ಳುತ್ತಿದ್ದಾರೆ.

ಶಿವರಾಜ್ ಕುಮಾರ್ ಕೂಡ ಮಂಗಳೂರಿಗೆ ಆಗಮಿಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ಚಿತ್ರತಂಡ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

LEAVE A REPLY

Please enter your comment!
Please enter your name here

Hot Topics