ಕೇರಳ: ನರ್ಸಿಂಗ್ ಕಲಿಯುವ ಕನಸು ಹೊಂದಿದ್ದ ಕೇರಳದ ಬಡ ವಿದ್ಯಾರ್ಥಿನಿಯೊಬ್ಬಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ನಟ ಅಲ್ಲು ಅರ್ಜುನ್ ಅವರು ಭರಿಸಿದ್ದು ಎಲ್ಲೆಡೆ ಇವರ ಬಗ್ಗೆ ವ್ಯಾಪಕವಾದ ಪ್ರಶಂಸೆ ವ್ಯಕ್ತವಾಗಿದೆ.
ದ್ವಿತೀಯ ಪಿಯುಸಿ ನಂತರ ಉನ್ನತ ಶಿಕ್ಷಣ ಪಡೆಯುವ ಕನಸು ಈ ಅಲಪ್ಪುಳದ ಹುಡುಗಿಗೆ ದೊಡ್ಡ ಸವಾಲಾಗಿತ್ತು. ವಿದ್ಯಾರ್ಥಿನಿ ತಂದೆ ಕಳೆದ ವರ್ಷ ಕೋವಿಡ್‌ನಿಂದ ಸಾವನ್ನಪ್ಪಿದ್ದರು.
ಇನ್ನು ಬಡ ಕುಟುಂಬ ಆದರಿಂದ ವಿದ್ಯಾರ್ಥಿನಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಲಿಲ್ಲ.
ಇನ್ನು ಆಕೆಯ ಕೆಲ ಸ್ನೇಹಿತರು ಜಿಲ್ಲಾಧಿಕಾರಿ ವಿಆರ್ ಕೃಷ್ಣತೇಜ ಅವರನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು. ಹೀಗಾಗಿ ಹುಡುಗಿ ತನ್ನ ತಾಯಿಯೊಂದಿಗೆ ವಾರದ ಹಿಂದೆ ಕಲೆಕ್ಟರ್ ಅವರನ್ನು ಭೇಟಿಯಾಗಿದ್ದಳು.
ಅವರು ಎಲ್ಲಾ ಬೆಂಬಲವನ್ನು ನೀಡಿದ್ದು ಒಂದು ವರ್ಷದ ಶೈಕ್ಷಣಿಕ ವೆಚ್ಚವನ್ನು ಪ್ರಾಯೋಜಿಸುವ ಮೂಲಕ ಆಕೆಯ ಅಧ್ಯಯನವನ್ನು ಮುಂದುವರಿಸಲು ಸಹಾಯ ಮಾಡುವಂತೆ ನಟ ಅಲ್ಲು ಅರ್ಜುನ್ ಅವರನ್ನು ಸಂಪರ್ಕಿಸಿದರು.
ಹೆಚ್ಚಿನ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯ ಇಂಗಿತಕ್ಕೆ ಅಲ್ಲು ಅರ್ಜುನ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಆಕೆಯ ನರ್ಸಿಂಗ್ ಕೋರ್ಸ್‌ನ ಸಂಪೂರ್ಣ ಅವಧಿಯ ವೆಚ್ಚವನ್ನು ಭರಿಸಲು ಒಪ್ಪಿಕೊಂಡರು.
ವಿದ್ಯಾರ್ಥಿನಿ ದ್ವಿತೀಯ ಪಿಯುಸಿಯಲ್ಲಿ ಶೇ.92 ಅಂಕ ಗಳಿಸಿದ್ದಳು. ಹಲವು ನರ್ಸಿಂಗ್ ಕಾಲೇಜುಗಳಲ್ಲಿ ಅರ್ಜಿ ಸಲ್ಲಿಸಿದ್ದರೂ ಮೆರಿಟ್ ಕೋಟಾ ಮೂಲಕ ಪ್ರವೇಶ ಪಡೆಯಲು ಸಾಧ್ಯವಾಗಿರಲಿಲ್ಲ.
ನಂತರ ಮ್ಯಾನೇಜ್ ಮೆಂಟ್ ಕೋಟಾದಲ್ಲಿ ಪ್ರವೇಶ ಪಡೆಯಲು ಯತ್ನಿಸಿದರು.
ಆದಾಗ್ಯೂ, ದೊಡ್ಡ ಶುಲ್ಕಗಳ ಪಾವತಿಸುವುದು ಕಷ್ಟವಾಯಿತು.
ಇದೀಗ ನಟ ಅಲ್ಲು ಅರ್ಜುನ್ ನೆರವಿನ ಹಸ್ತ ಚಾಚಿಸುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.