Monday, January 24, 2022

ಕೋಲ್ಕತ್ತಾ ಕಾಲೇಜಲ್ಲಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಿದ ಸನ್ನಿ ಲಿಯೋನ್..​!

ಕೋಲ್ಕತ್ತಾ ಕಾಲೇಜಲ್ಲಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಿದ ಸನ್ನಿ ಲಿಯೋನ್..​!

ಕೋಲ್ಕತ್ತಾ : ಕೋಲ್ಕತ್ತಾದ ಕಾಲೇಜೊಂದರ ಪ್ರವೇಶ ಪಟ್ಟಿಯಲ್ಲಿ ನಟಿ ಸನ್ನಿ ಲಿಯೋನ್​ ಹೆಸರು ಟಾಪ್​ನಲ್ಲಿ ಬಂದಿದೆ. ಇದನ್ನು ನೋಡಿದ ಎಲ್ಲರೂ ದಂಗಾಗಿದ್ದರು.

ಬ್ಯಾಚುಲರ್​ ಆಫ್​ ಆರ್ಟ್ಸ್​​​​ಗೆ ಪ್ರವೇಶ ಪಡೆಯಲು ಅರ್ಹರಾದ ಮೊದಲ ಪಟ್ಟಿಯನ್ನು ಕಾಲೇಜ್​ನ ವೆಬ್​ಸೈಟ್​ನಲ್ಲಿ ಬಿಡುಗಡೆ ಮಾಡಲಾಗಿತ್ತು.

ಈ ಪ್ರವೇಶ ಪಟ್ಟಿಯಲ್ಲಿ ನಟಿ ಸನ್ನಿ ಲಿಯೋನ್​ ಹೆಸರು ಮೊದಲಿತ್ತು. ಅಪ್ಲಿಕೇಷನ್​ ಐಡಿ ಹಾಗೂ ರೋಲ್​ ನಂಬರ್​ಗಳನ್ನೂ ಕೂಡ ನೀಡಲಾಗಿತ್ತು.

https://twitter.com/aagarwal198657/status/1299232524061814785?s=20

ಕೊರೋನಾ ವೈರಸ್​ ಇರುವುದರಿಂದ ಆನ್​ಲೈನ್​ ಮೂಲಕವೇ ಅರ್ಜಿಯನ್ನು ಸ್ವೀಕರಿಸಲಾಗುತ್ತಿದೆ. ಅನಾಮಧೇಯ ವ್ಯಕ್ತಿಗಳು ಸನ್ನಿ ಲಿಯೋನ್​ ಹೆಸರಿನಲ್ಲಿ ಅರ್ಜಿ ತುಂಬಿದ್ದಾರೆ. ಇದು ದುರುದ್ದೇಶ ಇಟ್ಟುಕೊಂಡು ಮಾಡಿರುವ ಕೃತ್ಯ.

ನಾವು ಇದನ್ನು ಸರಿ ಪಡಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದೇವೆ. ನಾವು ಈ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ ಎಂದು ಕಾಲೇಜಿನ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಸ್ವತ: ಸನ್ನಿ ಲಿಯೋನ್ ಟ್ವೀಟ್ ಕೂಡ ಮಾಡಿದ್ದಾರೆ. ಸ್ಕ್ರೀನ್‌ಶಾಟ್ ವೈರಲ್ ಆದ ನಂತರ ಮತ್ತು ನಟಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಸನ್ನಿ ಲಿಯೋನ್ ಮುಂದಿನ ಸೆಮಿಸ್ಟರ್‌ನಲ್ಲಿ ಕಾಲೇಜಿನಲ್ಲಿ ಸಿಗೋಣ !!!

ನೀವು ನನ್ನ ಕ್ಲಾಸ್ ನಲ್ಲಿ ಇರುತ್ತೀರಿ ಎಂದು ಭಾವಿಸುತ್ತೇನೆ.ಎಂದಿದ್ದಾರೆ.

Hot Topics

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡರು

ಬಂಟ್ವಾಳ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಇಂದು ಹಿರಿಯ ಮುಖಂಡರಾದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ಬಂಟ್ವಾಳದ ನಿವಾಸಕ್ಕೆ ಭೇಟಿ ಮಾಡಿ ಅವರ ಆರ್ಶೀವಾದ ಪಡೆದರು.ಈ ವೇಳೆ ರಾಜ್ಯ...

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದದಾದ ಕಾಲೇಜಿನಲ್ಲಿ ಜರಗಿತು‌. ಅಕಾಡಮಿಯ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಶಾಸಕ ಡಾ.ವೈ.ಭರತ್...

ಮಂಗಳೂರು: ಮಾಲೀಕನ ಎದುರೇ ಸ್ಕೂಟರ್‌ ಕದ್ದೊಯ್ದ ಕಳ್ಳ

ಮಂಗಳೂರು: ಮಾಲೀಕನ ಎದುರಿನಲ್ಲಿಯೇ ಕಳ್ಳನೊಬ್ಬ ಸ್ಕೂಟರ್‌ ಕಳವು ಮಾಡಿದ ಘಟನೆ ನಗರದಲ್ಲಿ ನಡೆದಿದೆ.ರಿನ್ಸ್‌ ಮೋನ್‌ ಕ್ಸೇವಿಯರ್‌ ಅವರು ಜ.7ರಂದು ಬೆಳಗ್ಗೆ 11.30ರ ವೇಳೆಗೆ ಪಾರ್ಸಲ್‌ ಬಸ್‌ಗೆ ನೀಡಲು ಜ್ಯೋತಿ ವೃತ್ತದ ಬಳಿ ಸ್ಕೂಟರ್‌...