Home ಪ್ರಮುಖ ಸುದ್ದಿ ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರ ವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್..

ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರ ವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್..

ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರ ವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್..

ಮಂಗಳೂರು:  ಮಹಾಮಾರಿ ಕೊರೊನಾ ವೈರಸ್ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇ 23ರ ಶನಿವಾರ ಸಂಜೆ 7 ಗಂಟೆಯಿಂದ ಮೇ 25ರ ಸೋಮವಾರ ಮುಂಜಾನೆ 7 ಗಂಟೆಯವರೆಗೆ,

ದ.ಕ. ಜಿಲ್ಲಾದ್ಯಂತ ಸಂಪೂರ್ಣ ಲಾಕ್‌ ಡೌನ್ ಆಗಿರುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ಈ ಅವಧಿಯಲ್ಲಿ ಅಗತ್ಯ ವಸ್ತುಗಳಾದ ಪತ್ರಿಕೆ, ತರಕಾರಿ, ಮೀನು, ಮಾಂಸ, ಹಾಲು, ಔಷಧ ಪೂರೈಕೆ ಹಾಗೂ ಖರೀದಿಗೆ ಯಾವುದೇ ನಿರ್ಬಂಧವಿರುವುದಿಲ್ಲ.

ಆದರೆ ಇತರ ಎಲ್ಲಾ ಅಂಗಡಿ ಮುಂಗಟ್ಟುಗಳ ಜೊತೆಗೆ ಹೊಟೇಲ್‌ ಗಳು ಕೂಡ ಮುಚ್ಚಿರುತ್ತದೆ.

ಅಲ್ಲದೆ ಎಲ್ಲಾ ಖಾಸಗಿ ಹಾಗೂ ಸಾರ್ವಜನಿಕ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಅನುಮತಿ ಪಡೆದ ಮದುವೆಗೆ ಅವಕಾಶ: 

ಈಗಾಗಲೆ ನಿಗದಿಯಾಗಿರುವ ಮತ್ತು ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆದಿರುವ ಮೇ 24ರ ಮದುವೆ ಕಾರ್ಯಕ್ರಮಗಳನ್ನು ಸರಕಾರ ನೀಡಿರುವ ಮಾರ್ಗಸೂಚಿಯಂತೆ ನಡೆಸಬಹುದಾಗಿದೆ.

ಮದುವೆಯ ಪ್ರಯುಕ್ತ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವ ಆವಶ್ಯಕತೆ ಇದ್ದರೆ ಖಾಸಗಿ ವಾಹನಗಳಿಗೆ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯಬೇಕು ಎಂದು ದ.ಕ.ಜಿಲ್ಲಾಧಿಕಾರಿ ಕಡ್ಡಾಯವಾಗಿ ಸೂಚಿಸಿದ್ದಾರೆ.

- Advertisment -

RECENT NEWS

ದೇವರಗುಡ್ಡದಲ್ಲಿ ಯುವಕನ ಹತ್ಯೆ ಪ್ರಕರಣ ಹದಿಹರೆಯದ ಐವರು ಆರೋಪಿಗಳ ಬಂಧನ

ದೇವರಗುಡ್ಡದಲ್ಲಿ ಯುವಕನ ಹತ್ಯೆ ಪ್ರಕರಣ ಹದಿಹರೆಯದ ಐವರು ಆರೋಪಿಗಳ ಬಂಧನ ಮಂಗಳೂರು :  ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಕಾರು ದೇವರ ಗುಡ್ಡೆ ಬಳಿ ನಡೆದ ಎಕ್ಕಾರು ನಿವಾಸಿ ಕೀರ್ತನ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ...

ಜೂನ್ 25ರಿಂದ ಎಸ್‌ ಎಸ್ ಎಲ್‌ ಸಿ ಪರೀಕ್ಷೆ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಜೂನ್ 25ರಿಂದ ಎಸ್‌ ಎಸ್ ಎಲ್‌ ಸಿ ಪರೀಕ್ಷೆ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳ :ಜೂನ್ 25ರಂದು ಆರಂಭಗೊಳ್ಳಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಿದ್ಧತಾ ಪೂರ್ವಬಾವಿ ಸಭೆಯು ಈ ದಿನ...

ಕುಂದಾಪುರದಲ್ಲೇ ಅತಿ ಹೆಚ್ಚು ಕೊರೊನಾ ಸೊಂಕು 

ಕುಂದಾಪುರದಲ್ಲೇ ಅತಿ ಹೆಚ್ಚು ಕೊರೊನಾ ಸೊಂಕು  ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಕುಂದಾಪುರದ ತಾಲೂಕು ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಹಾಗೂ ಕೋಟ ಸಮುದಾಯ ಆಸ್ಪತ್ರೆಯನ್ನು ತಾಲೂಕು...

ಮೊದಲ ಮಳೆಗೆ ಪ್ರಾರಂಭವಾದ ಕಡಲಕೊರೆತ

ಮೊದಲ ಮಳೆಗೆ ಪ್ರಾರಂಭವಾದ ಕಡಲಕೊರೆತ ಉಳ್ಳಾಲ: ಕಳೆದೆರಡು ದಿನಗಳಿಂದ ಮುಂಗಾರು ಮಳೆ ತೀವ್ರವಾಗಿ ಕರಾವಳಿ ತೀರದಲ್ಲಿ ಸುರಿಯತೊಡಗಿದ್ದು, ಕಡಲ ತೀರದಲ್ಲೂ ಕಡಲ ಅಬ್ಬರ ಜೋರಾಗಿದೆ. ಪ್ರತೀ ವರ್ಷ ಕಡಲಕೊರೆತ ತೀವ್ರವಾಗಿರುವ ಮಂಗಳೂರು ಕ್ಷೇತ್ರದ ಉಳ್ಳಾಲ...