Monday, July 4, 2022

ಸುನಂದಾ ಪುಷ್ಕರ್‌ ಸಾವು: ಆರೋಪ ಮುಕ್ತರಾದ ಕಾಂಗ್ರೆಸ್​ ನಾಯಕ ಶಶಿ ತರೂರ್

ದೆಹಲಿ: ದೆಹಲಿಯ ಪಂಚತಾರಾ ಹೋಟೆಲ್​​ನ ಕೋಣೆಯಲ್ಲಿ 2014ರ ಜನವರಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಸುನಂದಾ ಪುಷ್ಕರ್ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ ಶಶಿ ತರೂರ್ ಇದೀಗ ಆರೋಪ ಮುಕ್ತರಾಗಿದ್ದಾರೆ.


ಅವರನ್ನು ಆರೋಪ ಮುಕ್ತಗೊಳಿಸಿ ದೆಹಲಿ ಕೋರ್ಟ್​ ತೀರ್ಪು ನೀಡಿದೆ.

ಪತ್ನಿ ​​​ಸುನಂದಾ ಪುಷ್ಕರ್​ ಆತ್ಮಹತ್ಯೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್​ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದಡಿ ದೆಹಲಿ ಪೊಲೀಸರು ಅವರ ವಿರುದ್ಧ, ಸೆಕ್ಷನ್​ 498 ಎ, ಸೆಕ್ಷನ್​ 306 ಸೇರಿ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಮಾಜಿ ಕೇಂದ್ರ ಸಚಿವರೂ ಆಗಿರುವ ಶಶಿ ತರೂರ್​ ಜಾಮೀನು ಆಧಾರದ ಮೇಲೆ ಜೈಲಿನಿಂದ ಹೊರಗಿದ್ದರು.

ಈ ಸಂಬಂಧ ಕೋರ್ಟ್​​ನಲ್ಲಿ ವಿಚಾರಣೆ ನಡೆಯುತ್ತಿತ್ತು. ಇಂದು ತರೂರ್​ ದೋಷಮುಕ್ತರೆಂದು ಕೋರ್ಟ್ ತೀರ್ಪು ನೀಡಿದೆ.

ಬರೋಬ್ಬರಿ ಏಳೂವರೆ ವರ್ಷದ ಹಿಂಸೆ ಕೊನೆಗೊಂಡಿದೆ ಎಂದು ಹೇಳಿರುವ ಶಶಿ ತರೂರ್​, ಕೋರ್ಟ್​ಗೆ ಧನ್ಯವಾದ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

“ಮದರಸ ಬಗ್ಗೆ ಹೇಳಿಕೆಯನ್ನು ಉದುರುವಾಗ ನಾಲಗೆ ಹದ್ದು ಬಸ್ತಿನಲ್ಲಿ ಇಟ್ಟು ಮಾತನಾಡುವುದು ಒಳಿತು”

ಮಂಗಳೂರು: ಪ್ರವಾದಿ ನಿಂದನೆಗೈದ ನೂಪುರ್ ಶರ್ಮಾ ರನ್ನು ಬೆಂಬಲಿಸಿ ಹೇಳಿಕೆ ನೀಡಿದ ಕನ್ನಯ್ಯ ಲಾಲ್ ನನ್ನು ಇತ್ತೀಚೆಗೆ ರಾಜಸ್ತಾನದ ಉದಯಪುರದಲ್ಲಿ ಹತ್ಯೆ ಮಾಡಿದ ಆರೋಪಿಗಳು ಸ್ಥಳೀಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯರು ಆಗಿದ್ದು,ಅಂತಹ...

ವಿಟ್ಲ: ಬಕ್ರೀದ್ ಹಬ್ಬ ಹಿನ್ನೆಲೆ ಜಿಲ್ಲಾ ಗಡಿಪ್ರದೇಶದಲ್ಲಿ ಬಂದೋಬಸ್ತ್‌

ವಿಟ್ಲ: ಬಕ್ರೀದ್ ಹಬ್ಬದ ಪ್ರಯುಕ್ತ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೊಡಂಗೆ ಚೆಕ್ ಪೋಸ್ಟ್‌ನಲ್ಲಿ ದಿನದ 24 ಗಂಟೆಯು ಸಿಬ್ಬಂದಿಗಳು ಇರಲಿದ್ದು, ವಾಹನ ತಪಾಸಣೆ ನಡೆಯಲಿದೆ...

ಮುಂದಿನ 30-40 ವರ್ಷಗಳು ಬಿಜೆಪಿ ಯುಗ: ಅಮಿತ್‌ ಶಾ

ಹೈದರಾಬಾದ್‌: ಮುಂದಿನ 30-40 ವರ್ಷಗಳು ಬಿಜೆಪಿ ಯುಗವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೇಳಿದ್ದಾರೆ.ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅಮಿತ್‌ ಶಾ, ಬಿಜೆಪಿಯ ಅಭಿವೃದ್ಧಿ...