Sunday, May 22, 2022

ಸುಳ್ಯದಲ್ಲಿ ಕಸ ಸಮಸ್ಯೆ: ವಿಡಿಯೋ ಹಂಚಿಕೊಂಡ ಬಿಜೆಪಿ ನಾಯಕ, ಪಕ್ಷದ ಗ್ರೂಪ್‌ನಿಂದ ಕಿಕ್ ಔಟ್

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ‌ಸುಳ್ಯ ನಗರ ಪಂಚಾಯತ್‌ನ ಕಸ ವಿಲೇವಾರಿ ಸಮಸ್ಯೆ ಇದೀಗ ಇದೀಗ ರಾಜ್ಯ ಮಟ್ಟದಲ್ಲೂ ಸುದ್ದಿಯಾಗುತ್ತಿದೆ.


ಸುಳ್ಯದಲ್ಲಿ ಕಸ ವಿಲೇವಾರಿ ಸಮಸ್ಯೆ ನಗರಾಡಳಿತಕ್ಕೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದಂತಿದ್ದು,

ಈ ಸಮಸ್ಯೆಯ ಬಗ್ಗೆ ಸುಳ್ಯ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಳ್ಯ ಶಾಸಕ ಹಾಗೂ ಸಚಿವ ಎಸ್. ಅಂಗಾರ ಅವರ ನೇತೃತ್ವದಲ್ಲಿ ತುರ್ತು ಸಭೆ ಕರೆದು ನಗರದ ಕಸ ವಿಲೇವಾರಿ ಕೂಡಲೇ ಆಗಬೇಕು ಎಂದು ತಾಕೀತು ಮಾಡಲಾಗಿತ್ತು.

ಮಾತ್ರವಲ್ಲದೇ ಮಾನ್ಯ ಸುಳ್ಯ ನ್ಯಾಯಾಧೀಶರಾದ ಸೋಮಶೇಖರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ ಅವರೂ ಸ್ಥಳಕ್ಕೆ ಭೇಟಿ ನೀಡಿ ಕಸ ವಿಲೇವಾರಿ ಮಾಡುವಂತೆ ನಗರ ಪಂಚಾಯತಿಗೆ ಸೂಚನೆ ನೀಡಿದ್ದರು.

ಆದರೆ ಕಸ ಮಾತ್ರ ಲೋಡುಗಟ್ಟಲೆ ರಾಶಿ ಬಿದ್ದಿದೆ. ಇದೀಗ ಸುಳ್ಯದ ಕಸ ಸಮಸ್ಯೆ ರಾಜ್ಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಪ್ರಖ್ಯಾತ ನಟ, ಗಾಯಕ ಹಾಗೂ ನಿರ್ದೇಶಕ ಅನಿರುದ್ದ್ ಅವರು ಸುಳ್ಯದ ನಗರ ಪಂಚಾಯತ್ ಕಸವನ್ನು ತೆರವು ಮಾಡಲು ಮುತುವರ್ಜಿ ವಹಿಸುವಂತೆ ವಿನಂತಿಸಿದ್ದಾರೆ.


ಅನಿರುದ್ದಗೆ ಮಾಹಿತಿ ನೀಡಿದ ಬಿಜೆಪಿ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ವಾಟ್ಸಪ್ ಗುಂಪಿನಿಂದ ಹೊರಗೆ..!
ಅನಿರುದ್ದ್ ಗೆ ಸುಳ್ಯ ನಗರದ ಕಸ ಸಮಸ್ಯೆ ತಿಳಿಸಿ, ಆ ವಿಡಿಯೋ ಶೇರ್ ಮಾಡಿದ ಬಿಜೆಪಿಯ ಸುಳ್ಯ ಮಂಡಲ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಹಾಗೂ ಮಹಶಿರ್ ಮತ್ಸ್ಯ ರೈತ ಉತ್ಪಾದಕರ ಕಂಪನಿಯ ನಿರ್ದೇಶಕರಾದ ಸುಪ್ರೀತ್ ಮೋಂಟಡ್ಕ ಅವರನ್ನು ಬಿಜೆಪಿಯ ವಾಟ್ಸಪ್ ಗ್ರೂಪಿನಿಂದ ಸುಳ್ಯ ಬಿಜೆಪಿಯ ಕಾರ್ಯದರ್ಶಿ ಶುಭೋದ್ ಶೆಟ್ಟಿ ಅವರು ತೆರವುಗೊಳಿಸಿರುವುದು ಈಗ ಚರ್ಚೆಗೀಡು ಮಾಡಿದೆ.

LEAVE A REPLY

Please enter your comment!
Please enter your name here

Hot Topics

ಕಾಂಗ್ರೆಸ್ ನಾರಾಯಣ ಗುರು ಹೆಸರಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ: ಬಿಜೆಪಿ

ಮಂಗಳೂರು: ಕಾಂಗ್ರೆಸ್ ಮತ್ತು ಮಾಜಿ ಶಾಸಕ ಜೆ ಆರ್ ಲೋಬೋ ಅವರು ಗೊಂದಲ ಸೃಷ್ಟಿಸಿ ನಾರಾಯಣ ಗುರುಗಳ ಹೆಸರಿನಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ್...

ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ರಸ್ತೆ ಕುಸಿತ: ಸಂಕಷ್ಟದಲ್ಲಿ 10 ಸಾವಿರ ಯಾತ್ರಿಕರು

ಬಂದಾರ್: ಹಿಂದೂಗಳ ನಾಲ್ಕು ಪ್ರಮುಖ ಯಾತ್ರಾಸ್ಥಳಗಳಲ್ಲೊಂದಾದ ಉತ್ತರಾಖಂಡ್‌ನ ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ಹೆದ್ದಾರಿಯ ಭದ್ರತಾ ಗೋಡೆ ಕುಸಿದಿದ್ದು, ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ 10,000 ಜನರು ಹೆದ್ದಾರಿಯ ವಿವಿಧೆಡೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.ಮೂಲಗಳ...

ದೈವಸ್ಥಾನಕ್ಕೆ ಕನ್ನ ಹಾಕಿದ ಮಣಿಪಾಲದ ಭಾಸ್ಕರ..!

ಉಡುಪಿ: ಹಿರೇಬೆಟ್ಟು ದೈವಸ್ಥಾನ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಹಿರೇಬೆಟ್ಟು ಭಾಸ್ಕರ ಶೆಟ್ಟಿ (49) ಬಂಧಿತ ಆರೋಪಿ. 10 ದಿನಗಳ ಹಿಂದೆ ಬಾಳಕಟ್ಟು ಬೀಡುಮನೆ ದೈವಸ್ಥಾನಕ್ಕೆ ನುಗ್ಗಿದ ಆರೋಪಿ...