Monday, July 4, 2022

ಗಾಯಾಳು ಮಹಿಳೆಯನ್ನು ಹೊತ್ತು ತುಂಬಿ ಹರಿಯುವ ನದಿ ದಾಟಿಸಿದ ಸುಳ್ಯದ ವೀರರು..!

ಸುಳ್ಯ : ಅಪಾಯ ಲೆಕ್ಕಿಸದೆ ತುಂಬಿ ಹರಿಯುತ್ತಿರುವ ನದಿಯನ್ನು ದಾಟಿ ಮಹಿಳೆಯನ್ನು ಯುವಕರು ಆಸ್ಪತ್ರೆಗೆ ದಾಖಲಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಮರಸಂಕ ಎಂಬಲ್ಲಿ ನಡೆದಿದೆ.

ಜಾಲ್ಸೂರು ಗ್ರಾಮದ ಮಹಿಳೆಯೊಬ್ಬಳು ಮನೆಯಲ್ಲೇ ಬಿದ್ದು ಕಾಲು ಮುರಿದುಕೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯ ಬೇಕಾದ ಪರಿಸ್ಥಿತಿ ಎದುರಾಗಿದೆ.

ಹೀಗಾಗಿ ಹೊಳೆಗೆ ಸೇತುವೆಯಿಲ್ಲದ ಕಾರಣ ಅಪಾಯವನ್ನೂ ಲೆಕ್ಕಿಸದೇ ಯುವಕರು ಮಹಿಳೆಯನ್ನು ಹೊತ್ತು, ಸುಮಾರು ಅರ್ಧ ಕಿಲೋ ಮೀಟರ್​ ತುಂಬಿದ ನದಿ ದಾಟಿದ್ದಾರೆ.

ಮರಸಂಕ ಎಂಬಲ್ಲಿ ಸುಮಾರು 9 ಮನೆಗಳಿದ್ದು, ಸುಮಾರು 50 ಜನ ವಾಸಿಸುತ್ತಿದ್ದಾರೆ. ಆದರೆ ಈ ಪ್ರದೇಶದಲ್ಲಿ ಯಾವುದೇ ಸೇತುವೆ ವ್ಯವಸ್ಥೆ ಇಲ್ಲ. ಹಲವು ವರ್ಷಗಳಿಂದ ಅರ್ಧ ಕಿಲೋ ಮೀಟರ್​ ಹೊಳೆ ದಾಟಿ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಸೇತುವೆ ನಿರ್ಮಿಸಿ ಅಂತ ಹಲವು ವರ್ಷಗಳಿಂದ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಇನ್ನು ನಿನ್ನೆಯಿಂದ ನಿರಂತರ ಮಳೆಯಿಂದ ಮರಸಂಕದ ಬಳಿ ಇರುವ ಕಿರು ನದು ಉಕ್ಕಿ ಹರಿಯುತ್ತಿದೆ. ಈ ಪ್ರವಾಹ ಪರಿಸ್ಥಿತಿಯಲ್ಲೇ ಮಹಿಳೆಯನ್ನು ಮಹಿಳೆಯನ್ನ ಆಸ್ಪತ್ರೆ ‌ಸೇರಿಸಲು ಹೊಳೆ ದಾಟಿಸೋ ವಿಡಿಯೋ ವೈರಲ್ ಆಗಿದೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ‘ಬ್ಲಡ್ ಡೋನರ್ಸ್’ ಇದರ 350ನೇ ರಕ್ತದಾನ ಶಿಬಿರಕ್ಕೆ ಚಾಲನೆ

ಉಳ್ಳಾಲ: ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ವತಿಯಿಂದ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರ ಮಂಗಳೂರು, ಫಾದರ್ ಮುಲ್ಲರ್ ರಕ್ತನಿಧಿ ಕೇಂದ್ರ ಮಂಗಳೂರು, ಯೆನೆಪೋಯಾ ಮೆಡಿಕಲ್ ಕಾಲೇಜು ರಕ್ತನಿಧಿ ಕೇಂದ್ರ ದೇರಳಕಟ್ಟೆ ಇದರ...

ಕಾರ್ಕಳದಲ್ಲಿ ಅಕ್ರಮ ಗೋಸಾಗಾಟ: ಓರ್ವ ಪರಾರಿ-ಕಾರಿನಲ್ಲೇ ಅಸುನೀಗಿದ ದನ

ಕಾರ್ಕಳ: ಕಾರಿನಲ್ಲಿ ಎರಡು ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಕಳ್ಳರನ್ನು ಖಚಿತ ಮಾಹಿತಿ ಮೇರೆಗೆ ಸಿನಿಮಾ ಶೈಲಿಯಲ್ಲಿ ಪೊಲೀಸರು ಚೇಸ್ ಮಾಡಿದ ಘಟನೆ ಕಾರ್ಕಳದ ಹೆಬ್ರಿ ಕೆರೆಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ.ಉಡುಪಿಯ ಮಲ್ಪೆ...

ಮಂಗಳೂರು: ಹಾಲಿನ ಪುಡಿ ಪ್ಯಾಕೇಟ್‌ನಲ್ಲಿಟ್ಟು ಸಾಗಿಸುತ್ತಿದ್ದ ಅಕ್ರಮ ಚಿನ್ನ ವಶಕ್ಕೆ

ಮಂಗಳೂರು: ಹಾಲಿನ ಪುಡಿಯ ಪ್ಯಾಕೆಟ್ ನಲ್ಲಿಟ್ಟು ದುಬೈನಿಂದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜುಲೈ 1ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.ಕಾಸರಗೋಡಿನ ಪ್ರಯಾಣಿಕ ಪೇಸ್ಟ್ ರೂಪಕ್ಕೆ ಪರಿವರ್ತಿಸಿದ 31,31,440...