ಮಂಗಳೂರು ನಗರದಲ್ಲಿ ಅನಾಮಧೇಯ ಸೂಟ್ ಕೇಸ್ – ಸ್ಥಳಕ್ಕೆ ಬಾಂಬ್ ಸ್ಕ್ವಾಡ್..!
ಮಂಗಳೂರು : ಮಂಗಳೂರಿನಲ್ಲಿಂದು ಆತಂಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾರಣ ಮಂಗಳೂರು ನಗರದ ಜನ ನಿಬಿಬಿಡ ಮತ್ತು ಪ್ರಮುಖ ಸಂಚಾರವಿರುವ ಪ್ರದೇಶವಾದ ಫಳ್ನಿರಿನ ಮುಖ್ಯ ರಸ್ತೆಯಲ್ಲಿ ಅನಾಮಧೇಯ ಸೂಟ್ ಕೇಸ್ ದೊರೆತ್ತಿತ್ತು.
ಇದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕ ನಿರ್ಮಾಣವಾಗಿತ್ತು. ರಸ್ತೆಯ ಮಧ್ಯದಲ್ಲಿ ಅನಾಮಧೇಯ ಸೂಟ್ ನೋಡಿ ಪೋಲಿಸ್ ಪೋಲಿಸ್ ಸಹಾಯವಾಣಿ 112 ಗೆ ಕಾಲ್ ಮಾಡಿದ್ದು, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಶ್ವಾನ – ಬಾಂಬ್ ಸ್ಕ್ವಾಡ್ ಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಏಕಾ ಎಕಿ ಬಾಂಬ್ ಸುದ್ದಿಯಿಂದ ಜನ ಬೆಚ್ಚಿ ಬಿದ್ದು ಆತಂಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸ್ಥಳದಲ್ಲಿ ಸಂಚಾರವನ್ನು ಸ್ಥಗಿತಗೊಂಡಿತ್ತು.
ಬಳಿಕ ಕೂಲಂಕೂಶ ಪರಿಶೀಲನೆ ನಡೆಸಿದ ಬಾಂಬ್ ಸ್ಕ್ವಾಡ್ ಇದೊಂದು ಹುಸಿ ಬಾಂಬ್ ಎಂದು ಘೋಷಿಸಿತು.
ಮಂಗಳೂರಿನಲ್ಲಿ ನಡೆಯುತ್ತಿರುವ ಸಾಗರ ಕವಚದ ಭಾಗವಾಗಿ ಈ ಅಣಕು ಪ್ರಾತ್ಯಾಕ್ಷಿಕೆ ನಡೆದಿತ್ತು.