Wednesday, May 18, 2022

ಸೊಸೆಗೆ ಚಾಕು ಇರಿದು ಅತ್ತೆ ನೇಣು ಬಿಗಿದು ಆತ್ಮಹತ್ಯೆ

ಮೈಸೂರು: ಸೊಸೆಗೆ ಚಾಕು ಚುಚ್ಚಿದ ಅತ್ತೆ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಬೋಗಾದಿಯಲ್ಲಿ ನಡೆದಿದೆ.
ಬೋಗಾದಿ ಮಾದೇವಿ (62) ನೇಣಿಗೆ ಶರಣಾದ ವೃದ್ಧೆ, ಇವರು ನಿವೃತ್ತ ಶಿಕ್ಷಕಿ, ಎಂದು ತಿಳಿದು ಬಂದಿದೆ.


ಒಂದೇ ಮನೆಯಲ್ಲಿ ವಾಸವಿದ್ದ ಮಗ ಹಾಗೂ ಸೊಸೆ ವೇದಾವತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ಕೋಪದಲ್ಲಿ ಮಾದೇವಿ ಸೊಸೆಗೆ ಚಾಕುವಿನಿಂದ ಚುಚ್ಚಿದ್ದಾರೆ.

ಸೊಸೆ ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಸೇರಿದ್ದಾರೆ. ತಕ್ಷಣವೇ ಗಾಯಗೊಂಡ ವೇದಾವತಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೊಸೆ ಆಸ್ಪತ್ರೆಗೆ ಕರೆದೊಯ್ದ ಬಳಿಕ ಅತ್ತೆ ಮಾದೇವಿ ಪೊಲೀಸರಿಗೆ ಹೆದರಿ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳದಲ್ಲಿ ಬೈಕ್ ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ

ಬಂಟ್ವಾಳ: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸ್ ಠಾಣೆಯ ‌ಇನ್ಸ್‌ಪೆಕ್ಟರ್ ವಿವೇಕಾನಂದ ಅವರ ನೇತೃತ್ವದ ತಂಡ ಬಂಧಿಸಿದೆ.ಅಕ್ಬರ್, ಸಿದ್ದೀಕ್, ಸಮೀರ್ ಬಂಧಿತ ಆರೋಪಿಗಳು. ಇತ್ತೀಚೆಗೆ ಬಂಟ್ವಾಳ ನಗರ...

ಛೀ ಅಸಹ್ಯ: ಮಂಗಳೂರಿನಲ್ಲಿ ಗುದನಾಳದಲ್ಲಿಟ್ಟು ಸಾಗಿಸುತ್ತಿದ್ದ ಚಿನ್ನ ವಶಕ್ಕೆ

ಮಂಗಳೂರು: ಬೈಂದೂರಿನ ಪ್ರಯಾಣಿಕನೋರ್ವ ಬಹರೈನ್‌ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.ಪ್ರಯಾಣಿಕನೋರ್ವ 736 ಗ್ರಾಂ ಚಿನ್ನವನ್ನು ಗುದನಾಳದಲ್ಲಿಟ್ಟು ಸಾಗಿಸುತ್ತಿದ್ದ ವೇಳೆ ಅಧಿಕಾರಿಗಳು ಪತ್ತೆ...

MRPL ಉದ್ಯೋಗಿ ನಾಪತ್ತೆ: ಪ್ರಕರಣ ದಾಖಲು

ಸುರತ್ಕಲ್: ಎಂಆರ್‌ಪಿಎಲ್‌ನಲ್ಲಿ ಎಂಜಿನಿಯರ್ ಆಗಿದ್ದ ಸಕಲೇಶಪುರ ಮೂಲದ ಕಾಟಿಪಳ್ಳ ಶಾರದಾ ನಗರ ನಿವಾಸಿ ರಾಘವೇಂದ್ರ ಕೆ.ಆರ್ (52) ಎಂಬವರು ಮೇ 16ರಿಂದ ನಾಪತ್ತೆಯಾಗಿದ್ದಾರೆ.'ಫ್ಲೀಸ್ ತನ್ನನ್‌ನು ಹುಡುಕಬೇಡಿ' ಎಂದು ಚೀಟಿ ಬರೆದಿಟ್ಟು ಹೋಗಿದ್ದಾರೆ.ಹೋಗುವಾಗ ಬಟ್ಟೆ,...