ಮುಲ್ಕಿ: ಯುವಕನೊಬ್ಬ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡ ಘಟನೆ ಮೂಲ್ಕಿ ಲಿಂಗಪ್ಪಯ್ಯ ಕಾಡು ಬಳಿ ನಡೆದಿದೆ, ಅತ್ಮಹತ್ಯೆ ಮಾಡಿಕೊಂಡವನನ್ನು ಲಿಂಗಪ್ಪಯ್ಯ ಕಾಡು ನಿವಾಸಿ ಭರತ್ ಭಂಡಾರಿ (30) ಎಂದು ಗುರುತಿಸಲಾಗಿದೆ.
ಭರತ್ ಭಂಡಾರಿ ಮನೆಯ ಹತ್ತಿರದ ಕಾಡಿನಲ್ಲಿ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯುವಕ ಭರತ್ ಕೆ.ಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡಿನಲ್ಲಿ ಸೆಲೂನ್ ಶಾಪ್ ಇಟ್ಟುಕೊಂಡಿದ್ದು. ಜೀವನ ಸಾಗಿಸುತ್ತಿದ್ದ.
ಸದ್ಯ ಮೃತ ಭರತ್ ಪತ್ನಿ ಹಾಗೂ ಓರ್ವ ಎರಡು ವರ್ಷ ಪ್ರಾಯದ ಪುತ್ರಿಯನ್ನು ಅಗಲಿದ್ದಾನೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.
ಇಂಡಿಯಾ ಟೀಮ್‌ನ ಆಟಗಾರ ರಿಂಕು ಸಿಂಗ್ ಕಳೆದ ಕೆಲ ದಿನಗಳಿಂದ ಭಾರೀ ಸುದ್ಧಿಯಲ್ಲಿದ್ದಾರೆ.. ಒಂದೆಡೆ ಮದುವೆ, ಮತ್ತೊಂದೆಡೆ ಹೊಸ ಮನೆ ಖರೀದಿಸಿ ಗಮನ ಸೆಳೆದಿದ್ದಾರೆ. ಇದೀಗ ತಂದೆಗೆ ದುಬಾರಿ ಬೆಲೆಯ ಕವಾಸಕಿ ನಿಂಜಾ ಬೈಕ್ ಅನ್ನು ಗಿಫ್ಟ್ ನೀಡುವ ಮೂಲಕ ಮತ್ತೆ ಸುದ್ಧಿಯಲ್ಲಿದ್ದಾರೆ.
ರಿಂಕು ತನ್ನ ತಂದೆ ಖಂಚಂದ್ ಸಿಂಗ್ ಗೆ ಬರೋಬ್ಬರಿ 3.19 ಲಕ್ಷ ಮೌಲ್ಯದ ಕವಾಸಕಿ ನಿಂಜಾ ಬೈಕನ್ನು ಉಡುಗೊರೆಯಾಗಿ ನೀಡಿದ್ದಾರೆ. ಖಂಚಂದ್ ಸಿಂಗ್ ನಿಂಜಾ ಬೈಕ್ ಅನ್ನು ಓಡಿಸುತ್ತಿರುವ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಈ ಹಿಂದೆ ಸಿಲಿಂಡರ್ ವಿತರಕರಾಗಿ ರಿಂಕು ತಂದೆ ಕಾರ್ಯ ನಿರ್ವಹಿಸುತ್ತಿದ್ದರು. ಈ ಕೆಲಸದೊಂದಿಗೆ ಮಗನನ್ನು ಕ್ರಿಕೆಟಿಗನಾಗಿ ಬೆಳೆಸಿದ್ದರು. ಇದೀಗ ಸ್ಟಾರ್ ಆಟಗಾರನಾಗಿ ಬೆಳೆದಿರುವ ರಿಂಕು ಸಿಂಗ್ ತಂದೆಯ ಆಸೆಗಳೆಲ್ಲವನ್ನೂ ಪೂರೈಸುತ್ತಿದ್ದಾರೆ. ಇದಕ್ಕೂ ಮುನ್ನ ರಿಂಕು ಸಿಂಗ್ ಅಲಿಗಢದಲ್ಲಿ 3.5 ಕೋಟಿ ರೂ. ಬೆಲೆಯ ಮನೆ ಖರೀದಿ ಮಾಡಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಸಮಾಜವಾದಿ ಪಕ್ಷದ ಸಂಸದೆಯಾಗಿರುವ ಪ್ರಿಯಾ ಸರೋಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಒಟ್ಟಿನಲ್ಲಿ ಕಳೆದ ಕೆಲ ದಿನಗಳಿಂದ ರಿಂಕು ಒಂದಲ್ಲ ಒಂದು ವಿಷಯದಿಂದ ಸುದ್ದಿಯಲ್ಲಿದ್ದಾರೆ.
ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಿಂಕು ಸಿಂಗ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಬರೋಬ್ಬರಿ 13 ಕೋಟಿ ರೂ. ರಿಟೈನ್ ಮಾಡಿಕೊಂಡಿದೆ. ಅದರಂತೆ ಕೆಕೆಆರ್ ಆಟಗಾರ ಇದೀಗ ಕೋಟ್ಯಧಿಪತಿಯಾಗಿದ್ದಾರೆ. ಈ ಕೋಟಿ ಮೊತ್ತವನ್ನು ವಿವಿಧೆಡೆ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ. ಅದರ ಭಾಗವಾಗಿ ಇದೀಗ ತಮ್ಮ ಬಹುಕಾಲದ ಕನಸಾಗಿರುವ ಮನೆಯನ್ನು ಖರೀದಿಸಿದ್ದಾರೆ. ಇದರ ಜೊತೆಗೆ ತಂದೆಗೂ ಬೈಕ್ ಗಿಫ್ಟ್ ಮಾಡಿದ್ದಾರೆ.
ಮಂಗಳೂರು/ಪ್ರಯಾಗ್‌ರಾಜ್ : ಉತ್ತರ ಪ್ರದೇಶದ ಪಪ್ರಯಾಗ್‌ರಾಜ್‌ನಲ್ಲಿ ಬಹಳ ಅದ್ದೂರಿಯಾಗಿ ಮಹಾಕುಂಭ ಮೇಳ ನಡೆಯುತ್ತಿದೆ. ಮಹಾ ಕುಂಭದಂತೆ ಸಿಂಹಸ್ಥ ಕುಂಭವನ್ನು ಸಹ ಬಹಳ ಮುಖ್ಯವೆಂದು ಹಿಂದೂ ಧರ್ಮದಲ್ಲಿ ಪರಿಗಣಿಸಲಾಗಿದೆ. ‘ಯಾರು ಸಿಂಹಸ್ಥ ಕುಂಭದಲ್ಲಿ ಪವಿತ್ರ ಸ್ನಾನ ಮಾಡುತ್ತಾರೋ, ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ’ ಎನ್ನಲಾಗಿದೆ. ಆ ಸಿಂಹಸ್ಥ ಕುಂಭವನ್ನು ಎಲ್ಲಿ ಮತ್ತು ಯಾವಾಗ ಆಯೋಜಿಸಲಾಗುವುದು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಹಾ ಕುಂಭವನ್ನು ತೀರ್ಥಯಾತ್ರೆಯ ನಗರವಾದ ಪ್ರಯಾಗ್ರಾಜ್‌ನಲ್ಲಿ ಆಯೋಜಿಸಲಾಗಿದೆ, ಆದರೆ ಕುಂಭಮೇಳವನ್ನು ಹರಿದ್ವಾರ, ನಾಸಿಕ್, ಪ್ರಯಾಗರಾಜ್ ಮತ್ತು ಉಜ್ಜಯಿನಿ ಎಂಬ ನಾಲ್ಕು ಸ್ಥಳಗಳಲ್ಲಿ ಆಯೋಜಿಸಲಾಗುತ್ತದೆ. ಮಹಾಕುಂಭದ ಜೊತೆಗೆ ಮುಂದಿನ ಸಿಂಹಸ್ಥ ಕುಂಭದ ಬಗ್ಗೆ ಚರ್ಚೆ ಶುರುವಾಗಿದೆ.
2028 ರ ವೇಳೆಗೆ ಉಜ್ಜಯಿನಿಯಲ್ಲಿ ಸಿಂಹಸ್ಥ ಕುಂಭವನ್ನು ಆಯೋಜಿಸಲಾಗುವುದು. ಭಕ್ತರು ಇದಕ್ಕಾಗಿ ಕಾಯುತ್ತಿದ್ದಾರೆ. ವಾಸ್ತವವಾಗಿ, ಸಿಂಹಸ್ಥ ಕುಂಭವನ್ನು ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಮಾತ್ರ ಆಯೋಜಿಸಲಾಗುತ್ತದೆ. ಗುರುವು ಸಿಂಹ ಮತ್ತು ಸೂರ್ಯ ಮೇಷದಲ್ಲಿ ಸಂಕ್ರಮಿಸುವಾಗ, ಸಿಂಹಸ್ಥ ಕುಂಭವನ್ನು ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಆಚರಿಸಲಾಗುತ್ತದೆ. ಸಿಂಹಸ್ಥ ಮಹಾಕುಂಭಕ್ಕೆ ತನ್ನದೇ ಆದ ಮಹತ್ವವಿದೆ. ನಾಸಿಕ್ನಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಸಿಂಹಸ್ಥ ಕುಂಭ ಮೇಳ ನಡೆಯುತ್ತದೆ. ನಾಸಿಕ್ ಅಥವಾ ಉಜ್ಜಯಿನಿಯಲ್ಲಿ ಸಿಂಹಸ್ಥ ಕುಂಭ ನಡೆಯುವ ವೇಳೆ ಅಪಾರ ಸಂಖ್ಯೆಯ ಭಕ್ತರು ಪ್ರವಿತ್ರ ಸ್ನಾನಕ್ಕೆ ಬರುತ್ತಾರೆ. ಸಿಂಹಸ್ಥ ಕುಂಭದಲ್ಲಿ ಯಾರು ಭಾಗವಹಿಸುತ್ತಾರೋ ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ. ಇದರೊಂದಿಗೆ ಶಾಶ್ವತ ಫಲಗಳನ್ನು ಪಡೆಯುತ್ತಾರೆ.
ಫೆಬ್ರವರಿ 26ರವರೆಗೆ ಮಹಾಕುಂಭ ಮೇಳ :
ಪ್ರಸ್ತುತ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭವು ಫೆಬ್ರವರಿ 26 ರವರೆಗೆ ನಡೆಯಲಿದೆ. ಮಹಾಕುಂಭದಲ್ಲಿ ಮಕರ ಸಂಕ್ರಾಂತಿ ನಂತರ, ಈಗ ಮೌನಿ ಅಮವಾಸ್ಯೆಯ ಅಮೃತ ಸ್ನಾನವನ್ನು ಜನವರಿ 29 ರಂದು ಮಾಡಲಾಗುತ್ತದೆ. ನಂತರ ಫೆಬ್ರವರಿ 3 ರಂದು ವಸಂತ ಪಂಚಮಿಯ ಅಮೃತ ಸ್ನಾನವನ್ನು ಫೆಬ್ರವರಿ 12 ರಂದು ಮಾಡಲಾಗುತ್ತದೆ. ಕೊನೆಯ ಅಮೃತ ಸ್ನಾನವನ್ನು ಮಹಾಶಿವರಾತ್ರಿಯಂದು ಫೆಬ್ರವರಿ 26 ರಂದು ನಡೆಸಲಾಗುತ್ತದೆ. ಈ ಸ್ನಾನದೊಂದಿಗೆ ಮಹಾಕುಂಭವು ಕೊನೆಗೊಳ್ಳುತ್ತದೆ.
ಉಳ್ಳಾಲ : ಕೋಟೆಕಾರು ವ್ಯವಸಾಯ ಸಹಕಾರಿ ಸಂಘ ಕೆ.ಸಿ.ರೋಡ್ ತಲಪಾಡಿ ಶಾಖೆ ಕಚೇರಿಯಲ್ಲಿ ಶುಕ್ರವಾರ(ಜ.17) ನಡೆದ ಕೋಟ್ಯಂತರ ರೂ. ಮೌಲ್ಯದ ನಗ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಅಮ್ಮನಕೋವಿಲ್‌ನ ಮುರುಗಂಡಿ ತೇವರ್ (36), ಮುಂಬೈ ಗೋಪಿನಾಥ್ ಚೌಕ ನಿವಾಸಿ ಯೋಸುವಾ ರಾಜೇಂದ್ರನ್ (35) , ಮುಂಬೈ ಚೆಂಬೂರ್‌ನ ತಿಲಕ್‌ನಗರದ ಕಣ್ಣನ್ ಮಣಿ (36) ಬಂಧಿತ ಆರೋಪಿಗಳು ಎಂದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಸಹಕಾರಿ ಸಂಘದಿಂದ ದರೋಡೆ ಮಾಡಿ ಕೇರಳ ಮೂಲಕ ತಮಿಳುನಾಡಿಗೆ ಆರೋಪಿಗಳು ಪರಾರಿಯಾಗಿದ್ದರು. ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿ ದರೋಡೆಗೆ ಬಳಸಿದ ಕಾರು, ಮಾರಕಾಯುಧಗಳನ್ನು ವಶಪಡಿಸಿಕೊಂಡಿದ್ದಾರೆ.