” ಭೂತದ ಗಗ್ಗರ ಹಿಡಿದು ಅಭಿನಯಿಸುತ್ತಿದ್ದೆ.ಅದು ಭಾರವಿತ್ತು.ಯಾವುದೋ ಒಂದು ಹೊತ್ತಲ್ಲಿ ನನ್ನ ಕೈಮೀರಿದ ಅನುಭವವಾಯ್ತು. ಅದನ್ನು ಮಾತಲ್ಲಿ ವಿವರಿಸಲಾರೆ. ಕಟ್ ಹೇಳಿದ ಮರುಕ್ಷಣ ನನಗೆ ನಿಲ್ಲಲೂ ಆಗದೇ ಕುಸಿಯತೊಡಗಿದೆ.”
ಬೆಂಗಳೂರು : ತುಳುನಾಡ ಪವಾಡ ಪುರುಷ ಕೊರಗಜ್ಜ (Koragajja) ಜೀವನವನ್ನು ಆಧರಿಸಿ ‘ಕರಿ ಹೈದ ಕರಿ ಅಜ್ಜ’ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ‘ಕರಿ ಹೈದ ಕರಿ ಅಜ್ಜ’ (Kari Haida Kari Ajja) ಚಿತ್ರಕ್ಕೆ ಸುಧೀರ್ ಅತ್ತಾವರ್ ನಿರ್ದೇಶನ ಮಾಡುತ್ತಿದ್ದಾರೆ.
ನೃತ್ಯ ನಿರ್ದೇಶಕ, ಡ್ಯಾನ್ಸರ್, ನಟ ಸಂದೀಪ್ ಸೋಪರ್ಕರ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಕೊರಗಜ್ಜನ ಜೊತೆ ಬರುವ ಗುಳಿಗನ್ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಯಶಸ್ವಿಯಾಗಿ ಶೂಟಿಂಗ್ ಮುಕ್ತಾಯ ಆಗಿದ್ದರಿಂದ ಕೊರಗಜ್ಜ ದೈವದ ಕೋಲ ಸೇವೆ ನೀಡಲಾಗಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ ತಿಳಿಸಿದ್ದಾರೆ.
ಕರಿಹೈದ ಕರಿಯಜ್ಜ ಚಿತ್ರದಲ್ಲಿ ಅತಿಮಾನುಷ ಅನುಭವದ ಬಗ್ಗೆ ಮಾತನಾಡಿದ ಸಂದೀಪ್ ಸೋಪರ್ಕರ್.
‘ಕರಿಹೈದ ಕರಿ ಅಜ್ಜ ಸಿನಿಮಾದಲ್ಲಿ ನಾನು ಗುಳಿಗ ದೈವದ ಪಾತ್ರ ಮಾಡುತ್ತಿದ್ದೇನೆ. ಗುಳಿಗನ ನೃತ್ಯವೂ ಇದೆ.
ಈ ಪಾತ್ರ ಶೂಟಿಂಗ್ ವೇಳೆ ಅತಿಮಾನುಷ ಅನುಭವವಾಯ್ತು. ಭೂತದ ಗಗ್ಗರ ಹಿಡಿದು ಅಭಿನಯಿಸುತ್ತಿದ್ದೆ.”ಅದು ಭಾರವಿತ್ತು.
ಯಾವುದೋ ಒಂದು ಹೊತ್ತಲ್ಲಿ ನನ್ನ ಕೈಮೀರಿದ ಅನುಭವವಾಯ್ತು. ಅದನ್ನು ಮಾತಲ್ಲಿ ವಿವರಿಸಲಾರೆ. ಕಟ್ ಹೇಳಿದ ಮರುಕ್ಷಣ ನನಗೆ ನಿಲ್ಲಲೂ ಆಗದೇ ಕುಸಿಯತೊಡಗಿದೆ.’
ಇವು ಖ್ಯಾತ ಬಾಲಿವುಡ್ ಕೊರಿಯೋಗ್ರಾಫರ್, ಡಾನ್ಸರ್ ಸಂದೀಪ್ ಸೋಪರ್ಕರ್ ಮಾತುಗಳು.
‘ನನ್ನ ಬದುಕಿನಲ್ಲಿ ಇಂಥದ್ದೊಂದು ಅನುಭವ ಇದೇ ಮೊದಲು. ಬಂಡೆಯಿಂದ ಬಂಡೆಗೆ ಹಾರುವ, ಬಲು ಎತ್ತರದಿಂದ ಡ್ಯೂಪ್ ಬಳಸದೇ ಜಿಗಿದದ್ದೆಲ್ಲ ಮರೆಯಲಾಗದ ಅನುಭವ.
ಪ್ರಭಾವ ಬೀರಬಾರದು ಎಂಬ ಕಾರಣಕ್ಕೆ ಕಾಂತಾರ ಸಿನಿಮಾ ನೋಡಿಲ್ಲ’ ಎಂದಿದ್ದಾರೆ.