Home ಕರ್ನಾಟಕ ವಾರ್ತೆ ಕುಕ್ಕೆ ಕ್ಷೇತ್ರದ ಕಾರು ದುರ್ಬಳಕೆ: ಭಕ್ತರ ಅಸಮಾಧಾನ

ಕುಕ್ಕೆ ಕ್ಷೇತ್ರದ ಕಾರು ದುರ್ಬಳಕೆ: ಭಕ್ತರ ಅಸಮಾಧಾನ

ಕುಕ್ಕೆ ಕ್ಷೇತ್ರದ ಕಾರು ದುರ್ಬಳಕೆ: ಭಕ್ತರ ಅಸಮಾಧಾನ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹಣದಲ್ಲಿ ಬುಕ್ಕಿಂಗ್ ಆಗಿದ್ದ ಹೊಸ ಇನ್ನೋವಾ ಕಾರನ್ನು ಇಂದು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಸುಮಾರು 26 ಲಕ್ಷ ರೂಪಾಯಿಯ ಈ ಕಾರನ್ನು ಕ್ಷೇತ್ರದ ಉಪಯೋಗಕ್ಕೆ ಬಳಸುವ ಬದಲು ನೇರವಾಗಿ ಬೆಂಗಳೂರಿನ ಧಾರ್ಮಿಕ ಧತ್ತಿ ಇಲಾಖೆಯ ಆಯುಕ್ತರ ಕಛೇರಿಗೆ ಕಳುಹಿಸಲಾಗಿದೆ. ಮಂಗಳೂರಿನ ಟೊಯೋಟಾ ಶೋರೂಂ ನಿಂದ ನೇರವಾಗಿ ಕಾರನ್ನು ಬೆಂಗಳೂರಿಗೆ ಕೊಂಡೊಯ್ಯಲಾಗಿದೆ. ರಾಜ್ಯದ ಅತೀ ಶ್ರೀಮಂತ ದೇವಸ್ಥಾನವೆಂದು ಗುರುತಿಸಿಕೊಂಡಿರುವ ಈ ಕ್ಷೇತ್ರಕ್ಕೆ ಭೇಟಿ ನೀಡುವ ವಿವಿಐಪಿ ಗಳನ್ನು ಕ್ಷೇತ್ರಕ್ಕೆ ಕರೆ ತರುವುದು, ಬಿಡುವ ಕಾರ್ಯಕ್ಕಾಗಿ ದೇವಸ್ಥಾನದಲ್ಲಿ ಕಾರಿನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ಹಿಂದೆಯೂ ದೇವಸ್ಥಾನಕ್ಕೆ ಹೊಸ ಇನ್ನೊವಾ ಕಾರನ್ನು ಖರೀದಿಸಲಾಗಿತ್ತು. ಆ ಕಾರನ್ನು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಆಯುಕ್ತರ ಕಛೇರಿಗೆ ತರಿಸಿಕೊಳ್ಳಲಾಗಿತ್ತು. ಇದೀಗ ಮತ್ತೆ ಹೊಸದಾಗಿ ಖರೀದಿಸಿದ ಕಾರನ್ನೂ ಆಯುಕ್ತರ ಕಛೇರಿಗೆ ಸಾಗಿಸಲಾಗಿದೆ. ದೇವಸ್ಥಾನದ ಹಣವನ್ನು ದೇವಸ್ಥಾನಕ್ಕೆ ಬಳಸಬೇಕೆಂಬ ಒತ್ತಾಯಗಳು ಹೆಚ್ಚುತ್ತಿರುವ ನಡುವೆಯೇ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹಣವನ್ನು ಇತರೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎನ್ನುವ ಆರೋಪವೂ ಕೇಳಿ ಬರಲಾರಂಭಿಸಿದೆ. ಹೊಸ ಕಾರನ್ನು ಕ್ಷೇತ್ರದಲ್ಲೇ ಉಳಿಸಿಕೊಳ್ಳಬೇಕು ಎನ್ನುವ ಒತ್ತಾಯವೂ ಸ್ಥಳೀಯರಿಂದ ವ್ಯಕ್ತವಾಗಿದೆ.

- Advertisment -

RECENT NEWS

ಮಂಗಳೂರು- ಉಡುಪಿಗೆ ಕೊರೋನಾ ಭಯದಿಂದ ಕೊಂಚ ನೆಮ್ಮದಿ- ಕಾಸರಗೋಡಿಗೆ ಭಾರಿ ಭೀತಿ..!!

ಮಂಗಳೂರು- ಉಡುಪಿಗೆ ಕೊರೋನಾ ಭಯದಿಂದ ಕೊಂಚ ನೆಮ್ಮದಿ- ಕಾಸರಗೋಡಿಗೆ ಭಾರಿ ಭೀತಿ..!! ಮಂಗಳೂರು /ಉಡುಪಿ/ಕಾಸರಗೋಡು : ಇಂದು ಕೂಡ ಕರಾವಳಿಯ ಜನತೆಗೆ ನಮ್ಮದಿಯ ಉಸಿರು ಬಿಟ್ಟಿದ್ದಾರೆ. ಕೋರೊನದ ವಿರುದ್ದದ ಜಿಲ್ಲಾಡಳಿತಗಳು, ಸರ್ಕಾರ, ಜನಪ್ರತಿನಿಧಿಗಳು ನಡೆಸುತ್ತಿರುವ ಸಮರಕ್ಕೆ...

ಗಡಿ ದಾಟಲು ಬಲವಂತದ ಯತ್ನ : ತಡೆದ ಕರ್ನಾಟಕ ಪೊಲೀಸರ ಮೇಲೆ ಕಲ್ಲು ತೂರಾಟ..! 

ಗಡಿ ದಾಟಲು ಬಲವಂತದ ಯತ್ನ : ತಡೆದ ಕರ್ನಾಟಕ ಪೊಲೀಸರ ಮೇಲೆ ಕಲ್ಲು ತೂರಾಟ..!  ಸುಳ್ಯ: ಕೇರಳ ಗಡಿ ದಾಟಲು ಯತ್ನಿಸಿ ವಿಫಲನಾದ ಯುವಕ ಕರ್ನಾಟಕ ಪೊಲೀಸರು ಮತ್ತು ವಾಹನದ ಮೇಲೆ ಕಲ್ಲು ತೂರಿದ...

ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳು ಎರೆಸ್ಟ್..!

ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳು ಎರಸ್ಟ್..! ಬಂಟ್ವಾಳ : ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ. ಬಂಟ್ವಾಳ ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ ಹಾಗೂ...

ಮಂಗಳೂರು ರೈಲುಗಳಲ್ಲಿ ಕೂಡ ಭರದಿಂದ ಸಾಗಿದೆ ಕೊರೊನಾ ಐಸೋಲೇಷನ್ ವಾರ್ಡ್ ಕಾರ್ಯ

ಮಂಗಳೂರು ರೈಲುಗಳಲ್ಲಿ ಕೂಡ ಭರದಿಂದ ಸಾಗಿದೆ ಕೊರೊನಾ ಐಸೋಲೇಷನ್ ವಾರ್ಡ್ ಕಾರ್ಯ ಮಂಗಳೂರು: ಕೊರೋನ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರೈಲು ಬೋಗಿಗಳಲ್ಲಿ ಐಸೋಲೇಶನ್ ವಾರ್ಡ್ ತೆರೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮಂಡಳಿ ಕೊಂಕಣ...