Connect with us

KADABA

ಸುಬ್ರಹ್ಮಣ್ಯದಲ್ಲಿ ವ್ಯಾಪಾರ ನಡೆಸುತ್ತಿದ್ದ ಯುವಕನಿಗೆ ಹಲ್ಲೆ ನಡೆಸಿ ಲಂಚ ಬೇಡಿಕೆ ಪ್ರಕರಣ-ಪೊಲೀಸ್ ಸಿಬ್ಬಂದಿ ಕಡಬ ಠಾಣೆಗೆ ವರ್ಗಾವಣೆಗೆ ಹಿಂಜಾವೇ ನಕಾರ

Published

on

ಸುಬ್ರಹ್ಮಣ್ಯ: ‍ಷಷ್ಠಿ ಜಾತ್ರೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಯುವಕನಿಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಲಂಚ ನೀಡುವಂತೆ ಪೀಡಿಸಿ ಥಳಿಸಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.


ಆಂತರಿಕ ತನಿಖೆ ನಡೆಸಿದ ಪೊಲೀಸ್ ಇಲಾಖೆ ಪೊಲೀಸ್ ಅಧಿಕಾರಿ ಚಿತ್ರದುರ್ಗದ ಭೀಮಣ್ಣ ಗೌಡ ಎಂಬುವವರನ್ನು ಕಡಬ ಠಾಣೆಗೆ ವರ್ಗಾಯಿಸಲು ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ. ಆದರೆ ಅಧಿಕೃತ ಆದೇಶ ಇನ್ನೂ ಲಭ್ಯವಾಗಿಲ್ಲ.

ಆದರೆ ಈ ಬಗ್ಗೆ ಮಾತನಾಡಿದ ಕಡಬ ಹಿಂದೂ ಜಾಗರಣ ವೇದಿಕೆ ಸಂಚಾಲಕ ಜಿನಿತ್ ಮರ್ದಾಳ ಹೇಳಿಕೆ ನೀಡಿ, ದೂರುದಾರ ಯುವಕ ಕಡಬದ ವ್ಯಕ್ತಿಯಾಗಿರುವುದರಿಂದ ಕಡಬ ಠಾಣೆಗೆ ವರ್ಗಾಯಿಸುವುದು ಸಮಂಜಸವಲ್ಲ. ನಾವು ಅಮಾನತಿಗೆ ಆಗ್ರಹಿಸಿದ್ದೆವು.

ಆದರೆ ಪೊಲೀಸ್ ಇಲಾಖೆ ಕಡಬ ಠಾಣೆಗೆ ವರ್ಗಾಯಿಸಿದೆ ಎಂಬ ಮಾಹಿತಿ ಸಿಕ್ಕಿದೆ. ಕಡಬ ಠಾಣೆಗೆ ವರ್ಗಾಯಿಸಿದಲ್ಲಿ ಸಿಬ್ಬಂದಿ ಹಾಜರಾದ ದಿನವೇ ಕಡಬ ಠಾಣೆ ಎದುರು ಪ್ರತಿಭಟನೆ ಮಾಡುವುದಾಗಿ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.

ಜಾತ್ರೆಯಲ್ಲಿ ಹಣ ನೀಡಿಲ್ಲ ಅನ್ನುವ ಕಾರಣಕ್ಕೆ ವ್ಯಾಪಾರಿ ಯುವಕ ಕಟ್ರುಪಾಡಿ ಗ್ರಾಮದ ಭೀಮಗುಂಡಿ ನಿವಾಸಿ ಶಶಿಕಿರಣ್ ಅವರಿಗೆ ಭೀಮಣ್ಣ ಠಾಣೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ್ದರು ಎನ್ನುವ ದೂರು ದಾಖಲಾಗಿತ್ತು.

Click to comment

Leave a Reply

Your email address will not be published. Required fields are marked *

DAKSHINA KANNADA

ಕಡಬ: ಬಿಳಿನೆಲೆ ಕಾಡಿನಲ್ಲಿ ಅಸ್ಥಿಪಂಜರ ಪತ್ತೆ ..!

Published

on

ಕಡಬ: ಬಿಳಿನೆಲೆ ಗ್ರಾಮದ ಹಳೆ ನರ್ಸರಿ ಬಳಿಯಿರುವ ಕಾಡಿನಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಬಗ್ಗೆ ಎ.19ರಂದು ವರದಿಯಾಗಿದೆ. ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ರಕ್ಷಿತಾರಣ್ಯದ ಪಕ್ಕದಲ್ಲಿ ಅಸ್ಥಿಪಂಜರ ದೊರಕಿದೆ.

ಅಸ್ಥಿಪಂಜರ

ಬಿಳಿನೆಲೆಯ ಚಂದ್ರಶೇಖರ್ ಎಂವರು ಕಾಡಿಗೆ ಸೌದೆ ತರಲು ಹೋಗಿದ್ದಾಗ ಕೊಳೆತ ವಾಸನೆ ಬಂದಿದೆ. ಈ ಬಗ್ಗೆ ಹುಡುಕಾಡಿದಾಗ ಮೃತ ವ್ಯಕ್ತಿಯ ಅಸ್ಥಿಪಂಜರ ಕಂಡುಬಂದಿದೆ. ದೂರದದಲ್ಲಿದ್ದ ಮರದ ಕೊಂಬೆಯಲ್ಲಿ ಬಟ್ಟೆಯೊಂದು ನೇತಾಡುವುದು ಕಂಡು ಬಂದಿದೆ.

Read More..;ಸೈಕಲ್ ರಿಪೇರಿ ವಿಚಾರಕ್ಕೆ ಜೀ*ವಾಂತ್ಯಗೊಳಿಸಿದ ಬಾಲಕ..!

ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿ ಆರ್‌:12/2024 ಕಲಂ:174(3),(iv) CrPC ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

ಬೀದಿ ನಾಯಿಯನ್ನು ರಕ್ಷಿಸಲು ಹೋಗಿ ಉರುಳಿ ಬಿದ್ದ ಆಟೋ..!! ಚಾಲಕ ಗಂಭೀರ

Published

on

ಕಡಬ: ನಾಯಿ ಒಂದು ಸಡನ್ ಆಗಿ ರಸ್ತೆಗೆ ಅಡ್ಡ ಬಂದ ಕಾರಣ ಅದೇ ರಸ್ತೆಯಲ್ಲಿ ಬರುತ್ತಿದ್ದ ಅಟೋ, ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ. ಅಟೋ ಉರುಳಿ ಬಿದ್ದ ಕಾರಣ ಅಟೋ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಅಲಂಕಾರು ಗ್ರಾಮದ ಸುರುಳಿ ಎಂಬಲ್ಲಿ ಈ ಅಪಘಾತ ನಡೆದಿದ್ದು, ಅಟೋ ಚಾಲಕ ಸುಬ್ರಹ್ಮಣ್ಯ ನಾಯ್ಕ ಎಂಬವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುಬ್ರಹ್ಮಣ್ಯ ನಾಯ್ಕ ಅವರು ಅಟೋ ಚಲಾಯಿಸಿಕೊಂಡು ಆಲಂಗಾರು ಕಡೆ ಬರುತ್ತಿದ್ದಾಗ ಇಕ್ಕಟ್ಟಾದ ರಸ್ತೆಯಲ್ಲಿ ನಾಯಿ ಒಂದು ಧಿಡೀರ್ ಆಗಿ ರಸ್ತೆಗೆ ಎಂಟ್ರಿ ಕೊಟ್ಟಿದೆ. ಈ ವೇಳೆ ನಾಯಿಯನ್ನು ರಕ್ಷಿಸಲು ತಕ್ಷಣ ಅಟೋದ ಬ್ರೇಕ್‌ ಹಿಡಿದಾಗ ಅಟೋ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಅಟೋದಲ್ಲಿ ಯಾವುದೇ ಪ್ರಯಾಣಿಕರು ಇಲ್ಲದ ಕಾರಣ ದೊಡ್ಡ ಅನಾಹುತ ನಡೆದಿಲ್ಲ. ಚಾಲಕ ಸುಬ್ರಹ್ಮಣ್ಯ ನಾಯ್ಕ ಅವರು ಕಾಲು ಮುರಿತಕ್ಕೆ ಒಳಗಾಗಿದ್ದಲ್ಲದೆ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಪುತ್ತೂರು ಆಸ್ಪತ್ರೆಗೆ ರವಾನಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading

DAKSHINA KANNADA

ಕಡಬ ತಾಲೂಕು ಪಂಚಾಯತ್ ಕಚೇರಿಗೆ ಲೋಕಾಯುಕ್ತ ದಾಳಿ!

Published

on

ಕಡಬ : ಕೊಡಗು ಜಿಲ್ಲೆಯ ಲೋಕಾಯುಕ್ತ ಪೊಲೀಸರು ಕಡಬದಲ್ಲಿ ದಾಳಿ ನಡೆಸಿ ಆಶ್ಚರ್ಯ ಮೂಡಿಸಿದ್ದಾರೆ. ಕಡಬ ತಾಲೂಕು ಪಂಚಾಯತ್ ಇಒ ಬಿ.ವಿ ಜಯಣ್ಣ ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಕಡಬ ತಾಲೂಕು ಪಂಚಾಯತ್ ಇಒ ಆಗಿ ಜಯಣ್ಣ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದರು.

ಇದಕ್ಕೂ ಮೊದಲು ಸೋಮವಾರ ಪೇಟೆ ತಾಲೂಕ ಪಂಚಾಯತ್ ನಲ್ಲಿ ಅವರು ಇಒ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿರುವಾಗಲೇ ಇವರ ವಿರುದ್ಧ ಅಕ್ರಮ ಆಸ್ತಿಗಳಿಕೆಯ ದೂರು ದಾಖಲಾಗಿದ್ದು, ಆ ವಿಚಾರದ ತನಿಖೆಗೆ ಇಂದು ಕಡಬದಲ್ಲಿ ವಿಚಾರಣೆ ನಡೆಸಿದ್ದಾರೆ.
ಸೋಮವಾರಪೇಟೆಯ ಮನೆ, ಕಡಬದ ಕಚೇರಿ ಹಾಗೂ ಕಡಬದಲ್ಲೇ ಇರುವ ಜಯಣ್ಣ ಅವರ ಬಾಡಿಗೆ ಮನೆ ಮೇಲೆ ಏಕ ಕಾಲಕ್ಕೆ ದಾಳಿ ಮಾಡಲಾಗಿದೆ.

ಕೊಡಗು ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್, ಇನ್ಸ್ ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಇನ್ಸ್ ಪೆಕ್ಟರ್ ಶಶಿಕುಮಾರ್ ಹಾಗೂ ಸಿಬ್ಬಂದಿ ಜಯಣ್ಣ ಅವರ ವಿಚಾರಣೆ ನಡೆಸುತ್ತಿದ್ದಾರೆ.

Continue Reading

LATEST NEWS

Trending