Thursday, August 11, 2022

ಮೈಸೂರು ವಿವಿ ಪ್ರಾಧ್ಯಾಪಕರ ಕಾಮಕಾಂಡ; ವಿದ್ಯಾರ್ಥಿನಿಯ ಜತೆಗಿದ್ದಾಗ ಪತ್ನಿ ಕೈಗೇ ಸಿಕ್ಕಿಹಾಕಿಕೊಂಡ ಪ್ರೊಫೆಸರ್​

ಮೈಸೂರು: ಮೈಸೂರು ವಿಶ್ವವಿದ್ಯಾಲಯ ಕಾಮಕಾಂಡದ ಕಳಂಕಕ್ಕೆ ಒಳಗಾಗಿದ್ದು, ಸಂಶೋಧನಾ ವಿದ್ಯಾರ್ಥಿನಿಯನ್ನು ಮನೆಗೇ ಕರೆಸಿಕೊಂಡಿದ್ದ ಪ್ರೊಫೆಸರ್, ಪತ್ನಿಯ ಕೈಗೆ ರೆಡ್​ ಹ್ಯಾಂಡೆಡ್​ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ರಾಮಚಂದ್ರ ಅವರೇ ಆರೋಪಿ. ಇವರು ತಮ್ಮಿಂದ ಮಾರ್ಗದರ್ಶನ ಪಡೆಯುತ್ತಿದ್ದ ಪಿಎಚ್​ಡಿ ವಿದ್ಯಾರ್ಥಿನಿಯನ್ನೇ ಮನೆಗೆ ಕರೆಸಿಕೊಂಡಿದ್ದಾರೆ.

ಮನೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಯತ್ನವಾಗಿದ್ದು, ವಿದ್ಯಾರ್ಥಿನಿ ತಪ್ಪಿಸಿಕೊಳ್ಳುವ ಸಲುವಾಗಿ ಕೂಗಾಟ-ಚೀರಾಟ ನಡೆಸಿದ್ದಳು.

ಅದೇ ಸಂದರ್ಭದಲ್ಲಿ ಪ್ರಾಧ್ಯಾಪಕರ ಪತ್ನಿ ಲೋಲಾಕ್ಷಿ ಮನೆಗೆ ಬಂದಿದ್ದು, ರಾಮಚಂದ್ರ ರೆಡ್ ಹ್ಯಾಂಡೆಡ್​ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ.

ಈ ಬಗ್ಗೆ ಸಂತ್ರಸ್ತೆ ಜಯಲಕ್ಷ್ಮೀಪುರಂ ಠಾಣೆಗೆ ದೂರು ನೀಡಿದ್ದಾಳೆ. ಸಂತ್ರಸ್ತೆ ಹಾಗೂ ಪತಿಯನ್ನು ಲೋಲಾಕ್ಷಿ ಠಾಣೆಗೆ ಕರೆದುಕೊಂಡು ಬಂದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಯ ಪತ್ನಿ ಲೋಲಾಕ್ಷಿ ಕೂಡ ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ರಕ್ಷಾಬಂಧನ

ಮಂಗಳೂರು: ನಗರದ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ಇಂದು ರಕ್ಷಾಬಂಧನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ವಿಶ್ವಸ್ಥರಾದ ಸುಧಾಕರ ರಾವ್ ಪೇಜಾವರರವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು...

ಹಂತಕರನ್ನು ಬಂಧಿಸಿದ ಪೊಲೀಸರಿಗೆ ಧನ್ಯವಾದ ತಿಳಿಸಿದ ಪ್ರವೀಣ್ ಕುಟುಂಬ

ಪುತ್ತೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿನ್ನೆಲೆ ಪ್ರವೀಣ್ ನೆಟ್ಟಾರು ಕುಟುಂಬಸ್ಥರು ಪೋಲೀಸ್ ಇಲಾಖೆಗೆ ಧನ್ಯವಾದ ಹೇಳಿದ್ದಾರೆ.ಈ ಬಗ್ಗೆ...

ಮಂತ್ರಾಲಯದಲ್ಲಿ ರಾಯರಿಗೆ ಪೂಜೆ ಸಲ್ಲಿಸಿದ ಮಾಜಿ CM ಬಿ.ಎಸ್ ವೈ & ಕುಟುಂಬ

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಅಂಗವಾಗಿ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪನವರೊಂದಿಗೆ ಸಂಸದರಾದ ಬಿ. ವೈ ರಾಘವೇಂದ್ರ ಅವರು ಹಾಗೂ ಸಹೋದರ ಬಿ. ವೈ ವಿಜಯೇಂದ್ರ ಅವರು...