Connect with us

LATEST NEWS

ಉತ್ತರ ಪ್ರದೇಶ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ವೈರ್ ತಗುಲಿ ವಿದ್ಯಾರ್ಥಿನಿ ಸಾವು

Published

on

ಉತ್ತರಕನ್ನಡ : ಮೂತ್ರ ವಿಸರ್ಜನೆ ಮಾಡಲು ತೆರಳಿದ್ದ ವೇಳೆ, ತುಂಡಾದಂತಹ ಸರ್ವಿಸ್ ವಿದ್ಯುತ್ ವೈರ್ ತಗುಲಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ನಡೆದಿದೆ.

ಮೃತ ಬಾಲಕಿಯನ್ನು 2ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಬಸವರಾಜ ಗೌಳಿ(8) ಗುರುತಿಸಲಾಗಿದೆ. ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿ ಎಂದಿನಂತೆ ವಿಶ್ರಾಂತಿ ಸಮಯದಲ್ಲಿ ಮೂತ್ರ ವಿಸರ್ಜನೆಗೆ ಶಾಲೆಯ ಶೌಚಾಲಯದೊಳಗೆ ಹೋಗಿದ್ದಾಳೆ. ಈ ವೇಳೆ ಹೊರಗಡೆ ಶೌಚಾಲಯದ ಬಳಿಯೇ ಬೋರ್‌ವೆಲ್‌ಗೆ ಹಾಕಿದ್ದ ಅನಧಿಕೃತ ವಿದ್ಯುತ್ ಸಂಪರ್ಕ ಮಾಡಲಾಗಿದ್ದ ವೈರ್ ಶೌಚಾಲಯದೊಳಗೆ ಬಿದ್ದಿದೆ. ಅದನ್ನು ಗಮನಿಸದ ಮಗು ಹಾಗೆ ಒಳ ಹೋಗಿದ್ದಾಳೆ. ಈ ವೇಳೆ ವಿದ್ಯುತ್ ತಂತಿ ಸ್ಪರ್ಶದಿಂದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಹೆಸ್ಕಾಂ ಹಾಗೂ ಮುಖ್ಯ ಶಿಕ್ಷಕರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದ್ದು, ಗ್ರಾಮಸ್ಥರು ಹಾಗೂ ಕುಟುಂಬಸ್ಥರು ತೀವ್ರ ಆಕ್ರೋಶಗೊಂಡಿದ್ದಾರೆ. ಸದ್ಯ ವಿದ್ಯಾರ್ಥಿನಿ ಸಾನ್ವಿ ಮೃತದೇಹವನ್ನು ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇನ್ನು ಈ ವಿಷಯ ತಿಳಿದು ಕಾಂಗ್ರೆಸ್ ಶಾಸಕ ​ಆರ್.ವಿ.ದೇಶಪಾಂಡೆ ಆಸ್ಪತ್ರಗೆ ಭೇಟಿ ನೀಡಿ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದರು.

BANTWAL

ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Published

on

ವಿಟ್ಲ: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಯೋರ್ವಳು ಮೃ*ತಪಟ್ಟ ಘಟನೆ ನ.28ರ ಗುರುವಾರ ನಡೆದಿದೆ.

ವಿಟ್ಲ ಕುಂಡಡ್ಕ ಪಾದೆ ನಿವಾಸಿ ದಿ.ನಾರಾಯಣ ಮೂಲ್ಯ ಅವರ ಪುತ್ರಿ ರಕ್ಷಿತಾ (20) ಮೃ*ತಪಟ್ಟ ಯುವತಿ ಎನ್ನಲಾಗಿದೆ.

ಮೃ*ತರು ತಾಯಿ, ಅಕ್ಕ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Continue Reading

LATEST NEWS

ಕಾರ್ಕಳ: ದುರ್ಗಾ ಫಾಲ್ಸ್‌ಗೆ ಈಜುಲು ಹೋದ ಕಾಲೇಜು ವಿದ್ಯಾರ್ಥಿ ನೀರುಪಾಲು

Published

on

ಕಾರ್ಕಳ: ದುರ್ಗಾ ಫಾಲ್ಸ್‌ಗೆ ಈಜುಲು ಹೋದ ವಿದ್ಯಾರ್ಥಿಯೋರ್ವ ನೀರು ಪಾಲಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

ಮೃ*ತ ವಿದ್ಯಾರ್ಥಿಯನ್ನು ಜಾಯಲ್ ಡಯಾಸ್ (19) ಎಂದು ಗುರುತಿಸಲಾಗಿದೆ. ಈತ ಉಡುಪಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ. ಪದವಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

7 ಮಂದಿ ವಿದ್ಯಾರ್ಥಿಗಳ ತಂಡ ದುರ್ಗಾ ಫಾಲ್ಸ್‌ ಗೆ ಬಂದಿದ್ದು, ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಜಾಯಲ್ ಡಯಾಸ್ ಆಯ ತಪ್ಪಿ ನೀರು ಪಾಲಾಗಿದ್ದಾನೆ ಎಂದು ತಿಳಿದುಬಂದಿದೆ. ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

LATEST NEWS

ಜಾರ್ಖಂಡ್ ನ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹೇಮಂತ್ ಸೊರೆನ್

Published

on

ಮಂಗಳೂರು/ರಾಂಚಿ: ಜಾರ್ಖಂಡ್ ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಪ್ರಮಾಣವಚನ ಸ್ವೀಕರಿಸಿದರು. 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಗೆ ಏರಿದ್ದಾರೆ. ಈ ವೇಳೆ ಇಂಡಿಯಾ ಬಣದ ಹಲವು ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ರಾಂಚಿಯ ಮೊರಾಬಾದಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಆದಿವಾಸಿ ನಾಯಕ 49 ವರ್ಷದ ಹೇಮಂತ್ ಸೊರೇನ್ ಅವರಿಗೆ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಖುರ್ತಾ, ಪೈಜಾಮಾ ಧರಿಸಿ ತಮ್ಮ ತಂದೆ, ಜೆಎಂಎಂ ಅಧ್ಯಕ್ಷ ಶಿಬು ಸೊರೇನ್ ಅವರನ್ನು ಭೇಟಿಯಾದರು.

ಇದನ್ನೂ ಓದಿ: Watch video: ಜೈಲಿನಿಂದ ಬಿಡುಗಡೆಯಾದ ಸಂಭ್ರಮದಲ್ಲಿ ಜೈಲಾಧಿಕಾರಿಗಳ ಎದುರೇ ಯುವಕನ ಭರ್ಜರಿ ಡ್ಯಾನ್ಸ್ !
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಎಪಿ ನಾಯಕ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಜರಿದ್ದರು.

ಇತ್ತೀಚೆಗೆ ಮುಕ್ತಾಯಗೊಂಡ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ 81 ಕ್ಷೇತ್ರಗಳ ಪೈಕಿ ಜೆಎಂಎಂ ನೇತೃತ್ವದ ಮೈತ್ರಿಕೂಟವು 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಎನ್ ಡಿಎ 24 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

Continue Reading

LATEST NEWS

Trending

Exit mobile version