Connect with us

LATEST NEWS

ಕಾರ್ಕಳದಲ್ಲಿ ಬೈಕ್ -ಪಿಕ್ ಅಪ್ ಡಿಕ್ಕಿಯಲ್ಲಿ ಜೀವಕಳಕೊಂಡ ಕಾಲೇಜು ವಿದ್ಯಾರ್ಥಿ..! 

Published

on

ಕಾರ್ಕಳ : ಬೈಕ್ ಮತ್ತು ಪಿಕ್ ಅಪ್ ಢಿಕ್ಕಿ ಯಾಗಿ ಕಾಲೇಜು ವಿದ್ಯಾರ್ಥಿ ಯೊಬ್ಬ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮುರತ್ತಂಗಡಿ ಬಳಿ ನಡೆದಿದೆ .

ಮೆನನ್ (20 )ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ.

ಕಾರ್ಕಳ ದಿಂದ ಬೆಳ್ವಾಯಿ ಕಡೆಗೆ ಸಾಗುತಿದ್ದ ಪಿಕ್ ಅಪ್ ಗೆ ಎದುರಿನಿಂದ ಬರುತಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಪರಿಣಾಮ ನೆಲಕ್ಕೆಸೆಯಲ್ಪಟ್ಟಿದ್ದು ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

ರೆಂಜಾಳದ ಮೆನನ್ ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಸಿಎ ವ್ಯಾಸಂಗ ಮಾಡುತಿದ್ದರು ಎನ್ನಲಾಗಿದೆ
ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

KADABA

ಆತ್ಮಹತ್ಯೆಗೆ ಯತ್ನಿಸಿದ ಕಳ್ಳ ಈಗ ಪೊಲೀಸರ ಅತಿಥಿ

Published

on

ಕಡಬ : ಪಕ್ಕದ ಮನೆಯಿಂದ ಹಣ ಮತ್ತು ಚಿನ್ನ ಕದ್ದು, ಆ ಹಣದಿಂದ ಸಾಲ ತೀರಿಸಿದ ಬಳಿಕ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಕಳ್ಳನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಅಂದ ಹಾಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಕಡಬ ತಾಲೂಕಿನ ಮರ್ದಾಳದ 102 ನೆಕ್ಕಿಲಾಡಿ ಗ್ರಾಮದ ಬಜಕೆರೆ ಎಂಬಲ್ಲಿ ಕಳೆದ ರವಿವಾರ ಅಟೋ ಚಾಲಕ ಕುರಿಯಕೋಸ್ ಯಾನೆ ಜೇಮ್ಸ್ ಅವರು ಪತ್ನಿ ಮತ್ತು ಮಗನೊಂದಿಗೆ ಮನೆಗೆ ಬೀಗ ಹಾಕಿ ಚರ್ಚ್ ಪ್ರಾರ್ಥನೆಗಾಗಿ ತೆರಳಿದ್ದ ವೇಳೆ ಅವರ ಮನೆಯ ಬಾಗಿಲು ಮುರಿದು ನಗದು ಮತ್ತು ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು.

ಪ್ರಕರಣದ ಬೆನ್ನತ್ತಿದ ಕಡಬ ಪೊಲೀಸರು ಮಹತ್ವದ ಸುಳಿವುಗಳ ಆಧಾರದಲ್ಲಿಕಳ್ಳತನ ಆಗಿರುವ ಮನೆಯಿಂದ ಕೂಗಳತೆ ದೂರದಲ್ಲಿರುವ ಮನೆಯ ಯುವಕ ಬಜಕರೆಯ ಸಿನು ಕುರಿಯನ್ ಎಂಬಾತನನ್ನು ಬುಧವಾರ ರಾತ್ರಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಬೈಕ್ ನಲ್ಲಿ ಬಂದು ಕೊಟ್ಟಿಗೆಯಿಂದ ಪಿಕ್ಕಾಸು ತಂದು ಬಾಗಿಲು ಮುರಿದು ಕಳ್ಳತನ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಸಾಲದ ಸುಳಿಯಲ್ಲಿ ಸಿಲುಕಿದ ಕಾರಣ ಕಳ್ಳತನ ಮಾಡಿರುವುದಾಗಿ ಆತ ತಿಳಿಸಿದ್ದನು. ಕಡಬದ ಟೆಕ್ಸ್ ಟೈಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆತನ ಬಳಿಯಿಂದ ಸದ್ಯ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಳ್ಳತನ ಮಾಡಿರುವ ಹಣದಲ್ಲಿ ಸಾಲವನ್ನು ತೀರಿಸಿ ಉಳಿದ ಹಣವನ್ನು ಸಿನು ಕುರಿಯನ್ ತನ್ನ ಬಳಿಯೇ ಇಟ್ಟುಕೊಂಡಿದ್ದ.

ಇದನ್ನೂ ಓದಿ: 14 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಕಳ್ಳ

ಇದೀಗ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಳ್ಳತನ ಮಾಡಿದ ಬಳಿಕ ಪೊಲೀಸರಿಗೆ ಸಿಕ್ಕಿಬೀಳುವ ಹಿನ್ನೆಲೆಯಲ್ಲಿ ಸಿನು ಕುರಿಯನ್ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಆತ ರೈಲು ಹಳಿಯತ್ತ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

ಆದರೆ ಈ ವಿಚಾರವನ್ನು ಪೊಲೀಸರು ಇದನ್ನು ಖಚಿತ ಪಡಿಸಿಲ್ಲ. ಒಂದು ವೇಳೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಈ ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

Continue Reading

KADABA

ನಿಯಂತ್ರಣ ತಪ್ಪಿ ಮೋರಿಗೆ ಗುದ್ದಿದ ಬೈಕ್: ಸವಾರ ಸಾವು

Published

on

ಕಡಬ : ಅತಿ ವೇಗದಿಂದ ಚಾಲನೆ ಮಾಡಿದ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಮೋರಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಕಲ್ಲುಗುಡ್ಡೆ ವಿಶ್ವನಾಥ ಎಂಬವರ ಏಕೈಕ ಪುತ್ರ ಆಶೀಶ್‌(16) ಎಂಬಾತ ಸಾವನ್ನಪ್ಪಿದ್ದಾನೆ.

 

ಕಡಬದ ಪೇರಡ್ಕ ಬಳಿ ಈ ದುರಂತ ನಡೆದಿದ್ದು, ಗಂಭೀರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಆಶೀಶ್‌ ಪೇರಡ್ಕ ಸಾಂತೋಮ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದ.

ಈತ ಶಾಲೆಗೆ ಬರುವಾಗಲೂ ಬೈಕ್ ಹಿಡಿದುಕೊಂಡೇ ಬರುತ್ತಿದ್ದು, ಅದರಂತೆ ಇಂದು ಕೂಡಾ ಶಾಲೆಗೆ ಬರುವಾಗ ಕುಕ್ಕೆ ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಬಂದಾಗ ನಿಯಂತ್ರಣ ತಪ್ಪಿದ ಬೈಕ್‌ ಮೋರಿಗೆ ಬಡಿದು ದುರಂತ ಸಂಭವಿಸಿದೆ.

ಇದನ್ನೂ ಓದಿ: ರಾಷ್ಟ್ರಿಯ ಹೆದ್ದಾರಿ 66ರ ಕಿನ್ನಿಮುಲ್ಕಿಯಲ್ಲಿ ಟ್ಯಾಂಕರ್ ವಾಹನ ಪಲ್ಟಿ

ಕಡಬದಲ್ಲಿ ಮಿತಿಮೀರಿದ ವಿದ್ಯಾರ್ಥಿಗಳ ಅತಿ ವೇಗದ ಬೈಕ್ ಸವಾರಿಯಿಂದ ನಿರಂತರ ದುರಂತಗಳಾಗುತ್ತಿವೆ. ವಿದ್ಯಾರ್ಥಿಗಳ ವಾಹನ ತಪಾಸಣೆ ಮಾಡದಿರುವ ಪೊಲೀಸರ ವಿರುದ್ಧ ಇಲ್ಲಿನ ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Continue Reading

LATEST NEWS

ರಾಷ್ಟ್ರಿಯ ಹೆದ್ದಾರಿ 66ರ ಕಿನ್ನಿಮುಲ್ಕಿಯಲ್ಲಿ ಟ್ಯಾಂಕರ್ ವಾಹನ ಪಲ್ಟಿ

Published

on

ಉಡುಪಿ : ಗುಜರಾತ್ ನಿಂದ ಮಂಗಳೂರು ಕಡೆ ಹೋಗುತ್ತಿದ್ದ ಟ್ಯಾಂಕರ್ವೊಂದು ಉಡುಪಿ ಕಿನ್ನಿ ಮುಲ್ಕಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಲ್ಟಿಯಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ಯಾಂಕರ್‌ನಿಂದ ಚಾಲಕ ಪ್ರಾಣಾಪಾಯದಿಂದ ಪಾರು ಆಗಿದ್ದಾನೆ. ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಎಕ ಆಗಮಿಸಿ ವಾಹನ ತೆರವು ಕಾರ್ಯಾಚರಣೆ ನಡೆಸಿದರು.

ಇದನ್ನೂ ಓದಿ: ತಣ್ಣೀರುಬಾವಿ ಬೀಚ್‌: ನಾಳೆ, ನಾಡಿದ್ದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

ವಾಹನ ಪಲ್ಟಿಯಾದ ಪರಿಣಾಮ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಯಿತು.

Continue Reading

LATEST NEWS

Trending

Exit mobile version