ಬೆಳ್ತಂಗಡಿ: ಚಲಿಸುತ್ತಿದ್ದ ಆಟೋ ರಿಕ್ಷಾಕ್ಕೆ ನಾಯಿಯೊಂದು ಅಡ್ಡಬಂದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಮೂವರು ಗಾಯಗೊಂಡ ಘಟನೆ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ನೇರಳಕಟ್ಟೆ ಎಂಬಲ್ಲಿ ಜೂ.19ರಂದು ನಡೆದಿದೆ.
ಗಾಯಗೊಂಡವರನ್ನು ಧೀರಜ್, ಕಿರಣ್ ಹಾಗೂ ರಿಕ್ಷಾ ಚಾಲಕ ಪ್ರದೀಪ್ ಎಂದು ಗುರುತಿಸಲಾಗಿದೆ.
ಘಟನೆ ವಿವರ
ಜೂ.19ರಂದು ರಾತ್ರಿ ಬಂಟ್ವಾಳದ ಪಿಲಾತಬೆಟ್ಟು ಗ್ರಾಮದ ನೈನಾಡು ಎಂಬಲ್ಲಿ ತನ್ನ ಸ್ನೇಹಿತನ ಮನೆಯಲ್ಲಿ ಕಾರ್ಯಕ್ರಮಕ್ಕೆಂದು ಸ್ನೇಹಿತರಾದ ಧೀರಜ್, ಕಿರಣ್ ಎಂಬವರೊಂದಿಗೆ ಪ್ರದೀಪ್ ರವರ ರಿಕ್ಷಾದಲ್ಲಿ ಹೋಗಿ ಮರಳಿ ಹಿಂತಿರುಗುತ್ತಿದ್ದಾಗ ನೇರಳಕಟ್ಟೆ ಎಂಬಲ್ಲಿಗೆ ತಲುಪುತ್ತಿದ್ದಂತೆ ನಾಯಿಯೊಂದು
ಅಡ್ಡ ಬಂದಾಗ ಅಟೋ ರಿಕ್ಷಾದ ಚಾಲಕನು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಅಟೋ ರಿಕ್ಷಾವು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಈ ವೇಳೆ ಅಲ್ಲಿದ್ದ ಸ್ಥಳೀಯರು ರಿಕ್ಷಾ ಮೇಲಕ್ಕೆತ್ತಿ ಗಾಯಗೊಂಡವರನ್ನು ಉಪಚರಿಸಿದ್ದಾರೆ.
ಗಾಯಗೊಂಡವರನ್ನು ವಾಮದಪದವು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.