Thursday, December 1, 2022

ಉಡುಪಿಯಲ್ಲಿ ಮುಗಿಯದ ಬೀದಿನಾಯಿಗಳ ಹಾವಳಿ-ಬಾಲಕನ ಮೇಲೆರಗಿ ಕಚ್ಚಿದ ಶ್ವಾನ..!

ಉಡುಪಿ: ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೀನು ಮಾರುಕಟ್ಟೆ ಮತ್ತು ಮಾಂಸ ಅಂಗಡಿಯ ಸಮೀಪ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಶನಿವಾರ ನಾಯಿಯೊಂದು ಐದು ವರ್ಷದ ಬಾಲಕನ ಮೇಲೆರಗಿ ಗಾಯಗೊಳಿಸಿದೆ.


ಹೊರ ಜಿಲ್ಲೆಯ ಕೂಲಿ ಕಾರ್ಮಿಕರಾದ ಕಾಶಿನಾಥ್ ದಂಪತಿಯ ಐದು ವರ್ಷ ಪ್ರಾಯದ ಗಂಡು ಮಗು ತಾಯಿ ಜತೆ ಅಂಗನವಾಡಿಗೆ ತೆರಳುತ್ತಿದ್ದಾಗ ಬೀದಿ ನಾಯಿ ಬಾಲಕನ ಕೈಗೆ ಕಚ್ಚಿದೆ.

ತಾಯಿ ನಾಯಿಯಿಂದ ಮಗುವನ್ನು ಬಿಡಿಸಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಕೂಡಲೇ ಸ್ಥಳೀಯ ಸಮಾಜ ಸೇವಕ ರಾಮ ಅವರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.


ಈ ಹಿಂದೆ ಶಾಲಾ ಮಕ್ಕಳಿಗೆ ನಾಯಿ ಕಚ್ಚಿದ ಪ್ರಕರಣ ನಡೆದಿದ್ದರೂ ಸ್ಥಳೀಯ ಗ್ರಾಮ ಪಂಚಾಯತ್ ಯಾವುದೇ ಕ್ರಮ ಕೈಗೊಂಡಿಲ್ಲ.

ಪಂಚಾಯತ್‌ ಅಧ್ಯಕ್ಷರು ಮತ್ತು ಸದಸ್ಯರು ದಿನ ನಿತ್ಯ ಈ ಭಾಗದಲ್ಲಿ ಓಡಾಡುತ್ತಾರೆ; ಬೀದಿ ನಾಯಿಗಳಿಂದ ಆಗುವ ಸಮಸ್ಯೆಗಳ ಬಗ್ಗೆ ಅರಿವಿದ್ದರೂ ಅವರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದಾಗಿ ಸ್ಥಳೀಯ ಜನರು ಆರೋಪಿಸುತ್ತಾರೆ.


ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕೆಂಬುದು ಅವರ ಆಗ್ರಹ.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ: ಅಡಿಕೆ ಮರ ಕಡಿಯುತ್ತಿದ್ದಾಗ ತಲೆಗೆ ಬಿದ್ದು ವೃದ್ಧ ಸಾವು

ಬೆಳ್ತಂಗಡಿ: ಹಳೆ ಅಡಕೆ ಮರ ಕಡಿಯುತ್ತಿರುವಾಗ ಆಕಸ್ಮಿಕವಾಗಿ ವೃದ್ಧನ ತಲೆ ಮೇಲೆ ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಇಂದಬೆಟ್ಟುವಿನಲ್ಲಿ ನಡೆದಿದೆ.ಮುಂಡಾಜೆ ಗ್ರಾಮದ ಮಂಜು ಶ್ರೀ ನಗರದ ಕುಂಟಾಲಪಲ್ಕೆ ನಿವಾಸಿ ಅಣ್ಣು ನಾಲ್ಕೆ(66) ಮೃತ...

ಲವ್ ಜಿಹಾದ್ ವಿರುದ್ಧ ಎಚ್ಚರಿಕೆ ನೀಡಿದ ಹಿಂದೂ ಮುಖಂಡ..! ಪುನೀತ್ ಅತ್ತಾವರ ಪೋಸ್ಟರ್ ವೈರಲ್..

ಮಂಗಳೂರು: ಲವ್ ಜಿಹಾದ್ ವಿರುದ್ದ ರಕ್ತಪಾತದ ಎಚ್ಚರಿಕೆ ನೀಡಿದ ಹಿಂದೂ ಮುಖಂಡನ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಂಚಲನ ಸೃಷ್ಟಿಸಿದೆ.ಮಂಗಳೂರು ಭಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಈ ಪೋಸ್ಟರನ್ನು ತನ್ನ...