ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ವಕೀಲನಿಂದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿ ರಾಜೇಶ್ ಭಟ್ ಅನ್ನು ಇನ್ನೂ ಬಂಧಿಸಿಲ್ಲ.
ಜೊತೆಗೆ ಜಿಲ್ಲಾ ಕೋರ್ಟ್ ಮತ್ತು ಹೈ ಕೋರ್ಟ್‌ನಲ್ಲಿ ಆರೋಪಿಗೆ ಬೇಲ್ ಸಿಗದಂತೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಶ್ ಭಟ್‌ಗೆ ಸಹಕರಿಸಿದ ಆರೋಪದಲ್ಲಿ ಪವಿತ್ರ ಆಚಾರ್ ಮತ್ತು ಅನಂತ್ ಭಟ್ ಇಬ್ಬರು ಆರೋಪಿಗಳ ಬಂಧನ ಆಗಿದೆ. ಜೊತೆಗೆ ಆರೋಪಿಗೆ ಜಿಲ್ಲಾ ಮತ್ತು ಹೈಕೋರ್ಟ್‌ನಲ್ಲಿ ಯಾಕೆ ಜಾಮೀನು ಸಿಗಬಾರದೆಂದು ವಾದ ಮಂಡನೆ ಮಾಡಿದ್ದೇವೆ.
ಇದರ ಜೊತೆ ಆತನ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ವಜಾಗೊಂಡಿದೆ. ವಕೀಲ ರಾಜೇಶ್ ಬ್ಯಾಂಕ್ ಖಾತೆಗಳನ್ನು ಈಗಾಗಲೇ ತಡೆ ಹಿಡಿಯಲಾಗಿದೆ.
ಜೊತೆಗೆ ಆತನ ಜಾಮೀನು ಶೀಘ್ರವಾಗಿ ಆರೋಪಿ ಬಂಧನ ಮಾಡಲಾಗುತ್ತೆ ಎಂದು ಶಶಿಕುಮಾರ್ ಎನ್ ಮಾಹಿತಿ ನೀಡಿದರು.