Connect with us

LATEST NEWS

ಈಕೆ ಹೆಣ್ಣೋ ಹೆಮ್ಮಾರಿಯೋ-ಮಾತು ಕೇಳದಕ್ಕೆ ಮಗುವಿನ ಕೈ ಸುಟ್ಟ ನೀಚ ಮಲತಾಯಿ

Published

on

ಕಲಬುರಗಿ: ಪುಟ್ಟ ಮಗು ತನ್ನ ಮಾತು ಕೇಳುತ್ತಿಲ್ಲ ಎಂದು ಮಲತಾಯಿಯೊಬ್ಬಳು ಕಾದ ಕಬ್ಬಿಣದಿಂದ ಮಗುವಿನ ಕೈ ಸುಟ್ಟ ಅಮಾನವೀಯ ಘಟನೆ ಚಿತ್ತಾಪೂರ ತಾಲೂಕಿನ ನಾಲವಾರ ಸ್ಟೇಷನ್ ಏರಿಯಾದಲ್ಲಿ ನಡೆದಿದೆ.

ನಾಲವಾರ ತಾಂಡಾ ನಿವಾಸಿ ಮರೆಮ್ಮ ನಾಲ್ಕು ವರ್ಷದ ಮಗುವಿನ ಮೇಲೆ ವಿಕೃತಿ ಮೆರೆದ ದುರುಳ ಮಲತಾಯಿ.


ತಾನು ಹೇಳಿದ ಮಾತು ಕೇಳುತ್ತಿಲ್ಲ ಹಾಗೆಯೇ ಹೊರಗಡೆ ಹೋಗುತ್ತೆ ಎಂಬ ಕಾರಣಕ್ಕೆ ಕಾದ ಕೊಳವೆಯಿಂದ ಕೈಗೆ ಸುಟ್ಟು, ಮಂಚಕ್ಕೆ ಕಟ್ಟಿ ಹಾಕಿ ಹೀನ ಕೃತ್ಯ ಎಸಗಿದ್ದಾಳೆ.

ಈಕೆಯ ಗಂಡ ತಿಪ್ಪಣ್ಣ ಮೊದಲ ಪತ್ನಿ ಸಾವಿನ ನಂತರ ಇವಳನ್ನು ವಿವಾಹವಾಗಿದ್ದ. ಕೆಲ ದಿನಗಳ ಬಳಿಕ ಹೆಂಡತಿ ಹಾಗೂ ಮಗುವನ್ನ ಬಿಟ್ಟು ಪುಣೆಗೆ ಹೋಗಿದ್ದಾರೆ. ಈ ವೇಳೆ ಮಲತಾಯಿ ಅಮಾನವೀಯ ಕೃತ್ಯವನ್ನು ಎಸಗಿದ್ದಾಳೆ.

ಎರಡು ದಿನಗಳಿಂದ ಮಗು ಆಚೆ ಬಾರದಿದ್ದಕ್ಕೆ ಸ್ಥಳೀಯರು ಗಮನಿಸಿ ಮನೆಯಲ್ಲಿದ್ದ ಮಗುವನ್ನು ರಕ್ಷಿಸಿದ್ದಾರೆ.

ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿ ಮಲತಾಯಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯರು ಪ್ರಶ್ನೆ ಮಾಡಿದಕ್ಕೆ ನಾನು ಸುಡುವುದು ಹೀಗೆ, ನನ್ನನ್ನು ಕೇಳಲು ನೀವು ಯಾರು..? ಎಂದು ಉದ್ಧಟತನದಿಂದ ಮಾತನಾಡಿದ್ದಾಳೆ.

ಸದ್ಯ ಸ್ಥಳೀಯರು ವಾಡಿ ಪೊಲೀಸರಿಗೆ ಮಾಹಿತಿ ನೀಡಿ ಮಗುವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

LATEST NEWS

ಬಾಹ್ಯಾಕಾಶ ಇತಿಹಾಸದಲ್ಲಿ ಸಾಧನೆ ಮೆರೆದ ಭಾರತ; ಸ್ಪೇಡೆಕ್ಸ್ ಕಾರ್ಯಾಚರಣೆ ಯಶಸ್ವಿ

Published

on

ಮಂಗಳೂರು/ಬೆಂಗಳೂರು : ಬಾಹ್ಯಾಕಾಶ ಇತಿಹಾಸದಲ್ಲಿ ಭಾರತ ಮತ್ತೊಂದು ಸಾಧನೆ ಮೆರೆದಿದೆ. ಇಸ್ರೋ ಸ್ಪೇಡೆಕ್ಸ್ ಕಾರ್ಯಾಚರಣೆ ಯಶಸ್ವಿಯಾಗಿದೆ. ಅಂತರಿಕ್ಷದಲ್ಲಿ ಎರಡು ನೌಕೆಗಳನ್ನು ಜೋಡಿಸುವ ಮೂಲಕ ಇಸ್ರೋ ಯಶಸ್ವಿಯಾಗಿದ್ದು,  ಬಾಹ್ಯಾಕಾಶದಲ್ಲಿ ಯಶಸ್ವಿ ಡಾಕಿಂಗ್ ಮಾಡುವ ಸಾಮರ್ಥ್ಯ ಗಳಿಸಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹಿರಿಮೆ ಭಾರತಕ್ಕೆ ದಕ್ಕಿದೆ.

ಈ ಬಗ್ಗೆ ಇಸ್ರೋ ಟ್ವೀಟ್ ಮಾಡಿದ್ದು, ಬಾಹ್ಯಾಕಾಶ ನೌಕೆ ಡಾಕಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೊಂದು ಐತಿಹಾಸಿಕ ಕ್ಷಣ ಎಂದಿದೆ. ಡಿಸೆಂಬರ್ 30 ರಂದು ಪಿಎಸ್‌ಎಲ್‌ವಿ  – ಸಿ 60 ರಾಕೆಟ್‌ನಲ್ಲಿ ಉಡಾವಣೆಯಾದ ಎರಡು ಉಪಗ್ರಹಗಳಾದ SDX01 ಮತ್ತು SDXO2 ಡಾಕಿಂಗ್‌ನಲ್ಲಿ ಒಳಗೊಂಡಿತ್ತು. ಬಹು ಪ್ರಯತ್ನಗಳ ಬಳಿಕ ಉಪಗ್ರಹಗಳನ್ನು ಯಶಸ್ವಿಯಾಗಿ ಡಾಕಿಂಗ್ ಮಾಡಲಾಯಿತು.

ಇದನ್ನೂ ಓದಿ : ಮಂಗಳೂರು : ಬ್ಯಾಡ್ಮಿಂಟನ್ ಕೋರ್ಟ್‌ನಲ್ಲೇ ಕು*ಸಿದುಬಿದ್ದು ವಿದ್ಯಾರ್ಥಿ ಸಾ*ವು

ಮೋದಿ ಮೆಚ್ಚುಗೆ :

ಪ್ರಧಾನಿ ನರೇಂದ್ರ ಮೋದಿ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಸ್ರೋ ತಂಡವನ್ನು ಅಭಿನಂದಿಸಿರುವ ಅವರು, ಅಂತರಿಕ್ಷ ಡಾಕಿಂಗ್ ಪ್ರಯೋಗ ಯೋಜನೆ ಭವಿಷ್ಯದಲ್ಲಿ ಅಂತರಿಕ್ಷ ಕಾರ್ಯಾಚರಣೆಗಳಿಗೆ ಮಹತ್ವದ ಮೈಲಿಗಲ್ಲು ಎಂದಿದ್ದಾರೆ.

Continue Reading

LATEST NEWS

ಹಸುವಿನ ಬಾಲಕ್ಕೆ ಮ*ಚ್ಚಿನಿಂದ ಹ*ಲ್ಲೆ; ದುರುಳರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯ

Published

on

ಮಂಗಳೂರು/ಮೈಸೂರು : ಮಲಗಿದ್ದ ಮೂರು ಹಸುಗಳ ಕೆ*ಚ್ಚಲು ಕೊ*ಯ್ದ ಅ*ಮಾನವೀಯ ಘಟನೆ ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕನಗರದಲ್ಲಿ ಜನವರಿ 12 ರಂದು ನಡೆದಿದ್ದು, ಇದೀಗ ಆ ಘಟನೆ ಮಾಸುವ ಮುನ್ನವೇ ಮೈಸೂರಿನ ನಂಜನಗೂಡಿನಲ್ಲಿ ಹಸುವಿನ ಬಾ*ಲಕ್ಕೆ ಮ*ಚ್ಚಿನಿಂದ ಹಲ್ಲೆ ನಡೆಸಿರುವ ಮತ್ತೊಂದು ವಿ*ಕೃತಿ ಬೆಳಕಿಗೆ ಬಂದಿದೆ.

 

ಹಸುವಿನ ಕ*ಳ್ಳತನಕ್ಕೆ ಬಂದಿದ್ದ ಖದೀಮರು ಮ*ಚ್ಚಿಂದ ಹಸುವಿನ ಮೇಲೆ ಹ*ಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಹಸು ತಪ್ಪಿಸಿಕೊಳ್ಳಲು ಯತ್ನಿಸುವಾಗ ಮ*ಚ್ಚಿನಿಂದ ಹ*ಲ್ಲೆ ನಡೆಸಿದ್ದಾರೆ.

ಈ ಅ*ಮಾನವೀಯ ಕೃ*ತ್ಯ ನಂಜುಂಡೇಶ್ವರನ ಸನ್ನಿಧಿಯಲ್ಲಿ ನೂರಾರು ಹಸುಗಳ ಪೈಕಿ ನಡೆದಿದೆ. ದೇವಸ್ಥಾನಕ್ಕೆ ದಾನವಾಗಿ ಕೊಡಲಾಗುತ್ತಿದ್ದ ಹಸುಗಳ ಕಳ್ಳತನಕ್ಕೆ ಈ ಹಿಂದೆ ಪ್ರಯತ್ನ ನಡೆದಿತ್ತು. ನಿನ್ನೆ ರಾತ್ರಿ ದೇವಾಲಯದ ಆವರಣದಲ್ಲಿದ್ದ ಹಸುವಿನ ಬಾಲಕ್ಕೆ ಮ*ಚ್ಚಿನಿಂದ ಹ*ಲ್ಲೆ ನಡೆಸಲಾಗಿದೆ. ಈಗಾಗಲೇ ಪಶು ವೈದ್ಯರು ಸ್ಥಳಕ್ಕೆ ಆಗಮಿಸಿ ಗಾ*ಯಗೊಂಡ ಹಸುವಿಗೆ ಚಿಕಿತ್ಸೆ ನೀಡಿದ್ದಾರೆ.

ನಂಜುಂಡೇಶ್ವರ ದೇವಸ್ಥಾನದಲ್ಲಿ ಈ ಕೃತ್ಯ ನಡೆದಿರುವುದು ಎಲ್ಲರಲ್ಲೂ ಆತಂಕ ತಂದಿದೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಕಠಿಣ ಶಿಕ್ಷೆ ವಿಧಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ. ನಂಜನಗೂಡು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸುತ್ತುಮುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

LATEST NEWS

ತಿರುಪತಿಯಲ್ಲಿ ಮತ್ತೊಂದು ದುರಂ*ತ; ಜಾರಿ ಬಿದ್ದು ಬಾಲಕ ಸಾ*ವು

Published

on

ಮಂಗಳೂರು/ಅಮರಾವತಿ : ತಿರುಪತಿಯಲ್ಲಿ  ನಡೆದ ಕಾಲ್ತುಳಿತ ದು*ರಂತ ಇನ್ನೂ ಮಾಸಿಲ್ಲ. ಇದೀಗ ಮತ್ತೊಂದು  ದುರ್ಘ*ಟನೆ ಸಂಭವಿಸಿದೆ. ಮೂರು ವರ್ಷದ  ಬಾಲಕನೊಬ್ಬ ಮೆಟ್ಟಿಲಿನಿಂದ ಜಾರಿ ಬಿದ್ದು ಮೃ*ತಪಟ್ಟಿರುವ ಘಟನೆ ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯ ಅತಿಥಿಗೃಹದಲ್ಲಿ ಸಂಭವಿಸಿದೆ.

ಪೋಷಕರೊಂದಿಗೆ ವೆಂಕಟೇಶ್ವರ ಸ್ವಾಮಿ ದರ್ಶನಕ್ಕಾಗಿ ಬಂದಿದ್ದ ಬಾಲಕ ಪದ್ಮನಾಭ ನಿಲಯದ ಮೊದಲ ಮಹಡಿಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಈ ದುರಂ*ತ ನಡೆದಿದೆ ಎಂದು ವರದಿಯಾಗಿದೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ಕುಟುಂಬ ಬಂದಿತ್ತು. ಬಾಲಕ ತನ್ನ ಸಹೋದರನೊಂದಿಗೆ ಆಡುತ್ತಿದ್ದ. ಈ ವೇಳೆ ಜಾರಿ ಮೆಟ್ಟಿಲಿನಿಂದ ಕೆಳಗೆ ಬಿ*ದ್ದಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಕಾಲ್ತುಳಿತ ಪ್ರಕರಣ:

ಜ.9ರ ಬೆಳಗ್ಗೆ 5 ಗಂಟೆಯಿಂದ ಶ್ರೀನಿವಾಸಂ, ಸತ್ಯನಾರಾಯಣಪುರಂ ಮತ್ತು ಬೈರಾಗಿಪಟ್ಟೆಡ ಸೇರಿದಂತೆ 9 ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 94 ಕೌಂಟರ್‌ಗಳ ಮೂಲಕ ವೈಕುಂಠ ದ್ವಾರ ದರ್ಶನ ಟಿಕೆಟ್ ನೀಡಲು ಟಿಟಿಡಿ ನಿರ್ಧರಿಸಿತ್ತು. ಆದರೆ, ಟೋಕನ್‌ಗಳಿಗಾಗಿ ಜ.8ರ ಸಂಜೆಯೇ ಭಾರಿ ಜನರು ಜಮಾಯಿಸಿದ್ದರು.

ಈ ನಡುವೆ ಟಿಕೆಟ್ ಕೌಂಟರ್ ಸಿಬ್ಬಂದಿಯೊಬ್ಬರು ಅಸ್ವ*ಸ್ಥಗೊಂಡ ಕಾರಣ ಅವರನ್ನು ಹೊರಕ್ಕೆ ಕರೆದೊಯ್ಯಲು ಗೇಟ್ ತೆರೆದಾಗ ಹೊರಗಿದ್ದವರೆಲ್ಲರೂ ಗುಂಪು ಗುಂಪಾಗಿ ಒಳನುಗ್ಗುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಕೆಲವರು ಕೆಳಗೆ ಬಿ*ದ್ದಿದ್ದು ಕಾಲ್ತು*ಳಿತದಿಂದ 6 ಮಂದಿ ಮೃ*ತಪಟ್ಟು, ಹಲವರು ಗಾ*ಯಗೊಂಡಿದ್ದರು.

ಇದನ್ನೂ ಓದಿ : ಒಂದೇ ಬಾರಿಗೆ 45 ಮಂದಿ ರೌಡಿ ಶೀಟರ್‌ಗಳು ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡಿ ಆದೇಶ

ಲಡ್ಡು ಕೌಂಟರ್‌ನಲ್ಲಿ ಬೆಂ*ಕಿ :

ಕಾ*ಲ್ತುಳಿತ ಪ್ರಕರಣ ಬೆನ್ನಲ್ಲೇ  ಮತ್ತೊಂದು ಅವಘ*ಡ ಸಂಭವಿಸಿತ್ತು. ಜ.13 ರಂದು ಲಡ್ಡು ಕೌಂಟರ್ ಸಂಖ್ಯೆ 47 ರಲ್ಲಿ ಬೆಂ*ಕಿ ಕಾಣಿಸಿಕೊಂಡಿತ್ತು. ಕೌಂಟರ್‌ನಲ್ಲಿದ್ದ ಕಂಪ್ಯೂಟರ್ ಯುಪಿಎಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅವಘ*ಡ ನಡೆದಿತ್ತು. ಬೆಂ*ಕಿ ಹರಡುತ್ತಿದ್ದಂತೆಯೇ ಭಕ್ತರು ಭಯಭೀತರಾಗಿ ಸ್ಥಳದಿಂದ ಹೊರಗೋಡಿದ್ದರು. ಟಿಟಿಡಿ ಸಿಬ್ಬಂದಿ ಬೆಂ*ಕಿ ನಂದಿಸಿದ್ದರು.

Continue Reading

LATEST NEWS

Trending

Exit mobile version