Connect with us

    LATEST NEWS

    ಪುತ್ತೂರು ತಾಲೂಕು ಕಚೇರಿಯ ಚುನಾವಣಾ ಶಾಖೆಯ ಸಿಬ್ಬಂದಿ ನಿ*ಧನ

    Published

    on

    ಪುತ್ತೂರು: ಪುತ್ತೂರಿನ ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಕನಕರಾಜ್ ಸೆ.25ರಂದು ರಾತ್ರಿ ಹೃದಯಾಘಾ*ತದಿಂದ ನಿ*ಧನರಾದರು.

    ರಾತ್ರಿ 11 ಗಂಟೆ ವೇಳೆಗೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಕೂಡಲೇ ಆಸ್ಪತ್ರೆಗೆ ಕರೆತರಲಾಗಿದ್ದರೂ ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃ*ತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ನಿವಾಸಿಯಾಗಿರುವ ಕನಕರಾಜ್ ಈ ಹಿಂದೆ ಬೆಟ್ಟಂಪಾಡಿಯಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಪ್ರಥಮ ದರ್ಜೆ ಸಹಾಯಕರಾಗಿ ಭಡ್ತಿ ಪಡೆದು ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃ*ತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅ*ಗ*ಲಿದ್ದಾರೆ.

    BIG BOSS

    ಕನ್ನಡ ಮರೆತ ಸ್ಪರ್ಧಿಗಳು.. ಮೌನಕ್ಕೆ ಶರಣಾದ್ರ ಬಿಗ್‌ಬಾಸ್ ?

    Published

    on

    ‘ಬಿಗ್ ಬಾಸ್’ನಲ್ಲಿ ಹಲವು ಮೂಲ ನಿಯಮಗಳು ಇವೆ. ಅದನ್ನು ಮೀರಿ ಯಾರು ನಡೆದುಕೊಳ್ಳುವಂತಿಲ್ಲ. ನಿದ್ದೆ ಮಾಡಿದರೆ ಅದು ನಿಯಮ ಬ್ರೇಕ್ ಮಾಡಿದಂತೆಯೇ. ಆಗ ಬಿಗ್ ಬಾಸ್ ಎಚ್ಚರಿಸುತ್ತಾರೆ. ಅದೇ ರೀತಿ ಮತ್ತೊಂದು ನಿಯಮ ಇದೆ. ಆದರೆ, ಈ ನಿಯಮವನ್ನು ಯಾರೂ ಅಷ್ಟು ಗಂಭೀರವಾಗಿ ಸ್ವೀಕರಿಸಿದಂತಿಲ್ಲ. ಬಿಗ್ ಬಾಸ್ ಕೂಡ ಈ ಬಗ್ಗೆ ಎಚ್ಚರಿಕೆ ನೀಡುತ್ತಿಲ್ಲವೇಕೆ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ.

    ಬಿಗ್ ಬಾಸ್ ಮನೆಯಲ್ಲಿ ಕನ್ನಡವನ್ನು ಬೆಳೆಸುವ ಕೆಲಸ ಆಗುತ್ತಿದೆ ಎಂದು ವಾಹಿನಿಯವರು ಹೇಳಿಕೊಂಡಿದ್ದಾರೆ. ಈ ಕಾರಣದಿಂದ ಇಂಗ್ಲಿಷ್ ಬಳಕೆ ಮಾಡದೆ ಕೇವಲ ಕನ್ನಡ ಬಳಕೆ ಮಾಡಬೇಕು ಎನ್ನುವ ನಿಯಮ ಇದೆ. ಈ ಮೊದಲಿನ ಸೀಸನ್​ಗಳಲ್ಲಿ ಇಂಗ್ಲಿಷ್ ಮಾತನಾಡಿದಾಗ ಬಿಗ್ ಬಾಸ್ ಎಚ್ಚರಿಕೆ ನೀಡುತ್ತಿದ್ದರು. ಆದರೆ, ಈಗ ಎಲ್ಲವೂ ಬದಲಾಗಿದೆ. ಎಷ್ಟೇ ಇಂಗ್ಲಿಷ್ ಬಳಕೆ ಆದರೂ ಬಿಗ್ ಬಾಸ್ ಮಾತನಾಡುತ್ತಿಲ್ಲ, ಎಚ್ಚರಿಕೆಯನ್ನೂ ನೀಡುತ್ತಿಲ್ಲ. ಬಿಗ್ ಬಾಸ್ ಕಡೆಯಿಂದ ಮೌನವೇಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

    ಲಾಯರ್ ಜಗದೀಶ್ ಅವರು ಹೆಚ್ಚೆಚ್ಚು ಇಂಗ್ಲಿಷ್ ಬಳಕೆ ಮಾಡುತ್ತಿದ್ದಾರೆ. ಅವರು 10 ಸಾಲುಗಳನ್ನು ಹೇಳಿದರೆ ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನದ್ದು ಇಂಗ್ಲಿಷ್ ಇರುತ್ತದೆ. ಇದು ವೀಕ್ಷಕರಿಗೆ ಸಾಕಷ್ಟು ಕಿರಿಕಿರಿ ಎನಿಸುತ್ತಿದೆ. ಅವರಿಗೆ ಕನ್ನಡ ಮಾತನಾಡೋಕೆ ಬರುತ್ತದೆ. ಹೀಗಿರುವಾಗ ಕನ್ನಡದಲ್ಲಿ ಮಾತನಾಡಲು ಸಮಸ್ಯೆ ಏನು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

    ಕೇವಲ ಜಗದೀಶ್ ಮಾತ್ರವಲ್ಲ ಐಶ್ವರ್ಯಾ ಸೇರಿ ಮೊದಲಾದವರು ಇಂಗ್ಲಿಷ್ ಪದ ಬಳಕೆ ಮಾಡುತ್ತಿದ್ದಾರೆ. ಮೋಕ್ಷಿತಾ, ಚೈತ್ರಾ ಕುಂದಾಪುರ ಸೇರಿದಂತೆ ಕೆಲವೇ ಕೆಲವರು ಸಂಪೂರ್ಣವಾಗಿ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಹೇಳುವ ಜಗದೀಶ್ ಅವರೇ ಇಂಗ್ಲಿಷ್​ನಲ್ಲಿ ಮಾತನಾಡೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

    Continue Reading

    International news

    WATCH VIDEO : ಕಾಳಿಗೆ ಮೋದಿ ನೀಡಿದ್ದ ಕಿರೀಟಕ್ಕೆ ಕನ್ನ ಹಾಕಿದ ಕಳ್ಳ; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಖದೀಮನ ಕೈಚಳಕ

    Published

    on

    ಮಂಗಳೂರು/ ಬಾಂಗ್ಲಾ : ಬಾಂಗ್ಲಾದೇಶದ ಜೇಶೋರೇಶ್ವರಿ ದೇವಸ್ಥಾನದಿಂದ ಕಾಳಿ ಮಾತೆಯ ಕಿರೀಟವನ್ನು ಕಳವು ಮಾಡಲಾಗಿದೆ. ಬೆಳ್ಳಿ ಮತ್ತು ಚಿನ್ನದ ಲೇಪಿತ ಕಿರೀಟವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ದೇವಾಲಯಕ್ಕೆ ಉಡುಗೊರೆಯಾಗಿ ನೀಡಿದ್ದರು. ಇದೀಗ ಈ ಕಿರೀಟಕ್ಕೆ ಕಳ್ಳನ್ನೊಬ್ಬ ಕನ್ನ ಹಾಕಿದ್ದಾರೆ. ಕದಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ನರೇಂದ್ರ ಮೋದಿ ಅವರು 2021ರಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ ಜೇಶೋರೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಈ ಕಿರೀಟವನ್ನು ಕಾಳಿಗೆ ಉಡುಗೊರೆಯಾಗಿ ನೀಡಿದ್ದರು.

    ಆದರೀಗ ಕಾಳಿ ದೇವಿಗೆ ನೀಡಿದ್ದ ಈ ಉಡುಗೊರೆ ಕಿರೀಟವನ್ನು ಕಳವು ಮಾಡಲಾಗಿದೆ. ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಕಿರೀಟವನ್ನು ಪತ್ತೆ ಮಾಡಲು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.

    ಇದನ್ನೂ ಓದಿ : Bigg Boss: ಕ್ರೇನ್ ಮೂಲಕ ನುಗ್ಗಿದ ಮುಸುಕುಧಾರಿಗಳು.. ಬಿಗ್​​ಬಾಸ್​ ಮನೆಯ ವಸ್ತುಗಳೆಲ್ಲ ಪೀಸ್​ ಪೀಸ್…
    ದೇವಾಲಯದ ಅರ್ಚಕ ಹಾಗೂ ದೇವಸ್ಥಾನ ಶುಚಿಗೊಳಿಸುವ ಸಿಬ್ಬಂದಿ ಕಾಳಿ ದೇವಿಯ ತಲೆಯಿಂದ ಕಿರೀಟ ಕಾಣೆಯಾಗಿದೆ ಎಂದು ದೂರು ನೀಡಿದ್ದಾರೆ. ಬಾಂಗ್ಲಾದೇಶ ಪೊಲೀಸರು ಕಳ್ಳತನವಾಗಿದೆ ಎಂದು ಖಚಿತಪಡಿಸಿದ್ದು ತನಿಖೆಯನ್ನು ಆರಂಭಿಸಿದ್ದು, ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

    Continue Reading

    LATEST NEWS

    ಐಷಾರಾಮಿ ಕಾರು ಡಿ*ಕ್ಕಿ; ಡೆಲಿವರಿ ಏಜೆಂಟ್ ಸಾ*ವು

    Published

    on

    ಮಂಗಳೂರು/ಪುಣೆ : ಐಷಾರಾಮಿ ಕಾರೊಂದು ಡಿ*ಕ್ಕಿ ಹೊಡೆದು ಡೆಲಿವರಿ ಏಜೆಂಟ್ ಸ್ಥಳದಲ್ಲೇ ಸಾ*ವನ್ನಪ್ಪಿರುವ ಘಟನೆ ಪುಣೆಯ ಮುಂಡ್ವಾ ಪ್ರದೇಶದಲ್ಲಿ ನಡೆದಿದೆ.


    ಬೈಕ್ ಸವಾರ ರೌಫ್ ಶೇಖ್ ಮೃ*ತ ವ್ಯಕ್ತಿ. ಆರೋಪಿಯಾದ ಆಯುಷ್ ತಯಾಲ್ (34)ನನ್ನು ಪೊಲೀಸರು ಬಂಧಿಸಿದ್ದಾರೆ.
    ಕಾರು ಚಾಲಕ ಪರಾರಿಯಾಗಲು ಯತ್ನಿಸಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿಯು ಮೊದಲು ದ್ವಿಚಕ್ರ ವಾಹನಕ್ಕೆ ಡಿ*ಕ್ಕಿಯಾಗಿ ಮೂವರು ಗಾ*ಯಗೊಂಡಿದ್ದಾರೆ ಬಳಿಕ ಬೈಕ್​ಗೆ ಹಿಂದಿನಿಂದ ಡಿ*ಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
    ಅಪ*ರಾಧದ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯಗಳನ್ನಾಧರಿಸಿ ಕಾರನ್ನು ಗುರುತಿಸಿ ಬಂಧಿಸಲಾಗಿದೆ. ಮುಂಡ್ವಾ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 105, 281, 125 (ಎ), 132, 119,1 77, 184 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೃ*ತನ ಕುಟುಂಬಸ್ಥರು ಆಕ್ರೋಶಿಸಿದ್ದಾರೆ.

    Continue Reading

    LATEST NEWS

    Trending