Sunday, May 22, 2022

ಅಲೋಷಿಯಸ್‌ ಸಂಧ್ಯಾ ಕಾಲೇಜು ಮುಚ್ಚುಗಡೆಗೆ ಡಿವೈಎಫ್ಐ ವಿರೋಧ

ಮಂಗಳೂರು: ನಗರದ ಸಂತ ಅಲೋಶಿಯಸ್ ಸಂಧ್ಯಾ ಕಾಲೇಜು ಮುಚ್ಚುವ ತೀರ್ಮಾನಕ್ಕೆ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ವಿರೋಧ ವ್ಯಕ್ತಪಡಿಸಿದೆ. ಸಂಸ್ಥೆ ಈ ರೀತಿಯ ತೀರ್ಮಾನದಿಂದ ಹಿಂದೆ ಸರಿಯಬೇಕೆಂದು ಒತ್ತಾಯ ಮಾಡಿದೆ.


ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಂತ ಅಲೋಶಿಯಸ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯು ಯಾವುದೇ ಕಾರಣಕ್ಕೂ ‌ಸಂಧ್ಯಾ ಕಾಲೇಜನ್ನು ಮುಚ್ಚುವ ತೀರ್ಮಾಣವನ್ನು ಕೈಗೊಳ್ಳಬಾರದು. ಆ ಮೂಲಕ ಜಿಲ್ಲೆಯ ಬಡವರ, ಕೂಲಿ ಕಾರ್ಮಿಕರ, ಆರ್ಥಿಕವಾಗಿ ಹಿಂದುಳಿದವರ ಮನೆಯ ಮಕ್ಕಳು ಉನ್ನತ ವಿದ್ಯಾಬ್ಯಾಸದಿಂದ ವಂಚಿತರನ್ನಾಗಿಸುವ ಉದ್ದೇಶದಿಂದ ಹಿಂದೆ ಸರಿದು ಸಂಧ್ಯಾ ಕಾಲೇಜನ್ನು ಉಳಿಸಬೇಕೆಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಕಾಂಗ್ರೆಸ್‌ನಲ್ಲಿ ಯೌವನ ನಿರ್ಧಾರವಾಗುವುದು 50 ರ ನಂತರವೇ: ಬಿಜೆಪಿ ಪ್ರಶ್ನೆ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಯೌವನ ನಿರ್ಧಾರವಾಗುವುದು 50 ರ ನಂತರವೇ? ಕಾಂಗ್ರೆಸ್‌ ಪಕ್ಷದಲ್ಲಿರುವ ಯುವ ನಾಯಕರು ಯಾರು? ಎಂದು ಕಾಂಗ್ರೆಸ್‌ ಅನ್ನು ಬಿಜೆಪಿ ಟ್ವೀಟ್‌ನಲ್ಲಿ ಕುಟುಕಿದೆ.ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ...

ಮರಕ್ಕೆ ಡಿಕ್ಕಿ ಹೊಡೆದ ಟೆಂಪೋ ಟ್ರಾಕ್ಸ್: 3 ಮಕ್ಕಳು ಸೇರಿ 7 ಮಂದಿ ದುರಂತ ಅಂತ್ಯ

ಧಾರವಾಡ: ಟೆಂಪೋ ಟ್ರಾಕ್ಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 7 ಜನ ಮೃತಪಟ್ಟಿದ್ದಾರೆ. 13 ಜನರಿಗೆ ಗಾಯಗಳಾಗಿವೆ. ಅನನ್ಯ, ಹರೀಶ, ಶಿಲ್ಪಾ , ನೀಲವ್ಚ, ಮಧುಶ್ರೀ, ಮಹೇಶ್ವರಯ್ಯ, ಶಂಭುಲಿಂಗಯ್ಯ, ಸಾವನ್ನಪ್ಪಿದ ದುರ್ದೈವಿಗಳು.ಬಾಡ ಗ್ರಾಮದ ಬಳಿ...

ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ರಸ್ತೆ ಕುಸಿತ: ಸಂಕಷ್ಟದಲ್ಲಿ 10 ಸಾವಿರ ಯಾತ್ರಿಕರು

ಬಂದಾರ್: ಹಿಂದೂಗಳ ನಾಲ್ಕು ಪ್ರಮುಖ ಯಾತ್ರಾಸ್ಥಳಗಳಲ್ಲೊಂದಾದ ಉತ್ತರಾಖಂಡ್‌ನ ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ಹೆದ್ದಾರಿಯ ಭದ್ರತಾ ಗೋಡೆ ಕುಸಿದಿದ್ದು, ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ 10,000 ಜನರು ಹೆದ್ದಾರಿಯ ವಿವಿಧೆಡೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.ಮೂಲಗಳ...