Thursday, August 11, 2022

ಮೈಕ್‌ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಏ.13ರ ಗಡುವು ನೀಡಿದ ಶ್ರೀರಾಮಸೇನೆ

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್‌ನಿಂದ ಆರಂಭವಾದ ವಿವಾದ ಅಜಾನ್‌ ವರೆಗೂ ಬಂದು ನಿಂತಿದೆ. ಇದೀಗ ಏ.13ರ ಮೊದಲು ಮಸೀದಿಗಳಲ್ಲಿರುವ ಮೈಕ್‌ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.


ಏಪ್ರಿಲ್ 13ರವರೆಗೆ ಡೆಡ್​ಲೈನ್ ನೀಡಿದ್ದೇವೆ. ಈ ಬಗ್ಗೆ ಕೂಡಲೇ ಸರ್ಕಾರ ಕ್ರಮಕೈಗೊಳ್ಳದೆ ಹೋದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಜೊತೆಗೆ ಏಪ್ರಿಲ್ 14 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಅಂತ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಮಸೀದಿಗಳ ಮೇಲೆ ಮೈಕಾಸುರರ ಹಾವಳಿ ಬಹಳ ಜೋರಾಗಿದೆ. ಮಸೀದಿಗಳಲ್ಲಿ ನ್ಯಾಯಾಲಯದ ಆದೇಶ ಪಾಲನೆಯಾಗುತ್ತಿಲ್ಲ.

ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಮೈಕ್ ಹಚ್ಚದಂತೆ ಆದೇಶ ಆದರೂ ಕೂಡ ಕೋರ್ಟ್ ಆದೇಶ ಪಾಲನೆಯಾಗುತ್ತಿಲ್ಲ. ಸರ್ಕಾರ ಕೂಡ ಈ ನಿಯಮವನ್ನು ಜಾರಿಗೆ ತರುತ್ತಿಲ್ಲ ಎಂದರು.

LEAVE A REPLY

Please enter your comment!
Please enter your name here

Hot Topics

ಕಾಶ್ಮೀರದಲ್ಲಿ ಆತ್ಮಾಹುತಿ ಬಾಂಬ್ ದಾಳಿ: 3 ಯೋಧರು ಹುತಾತ್ಮ -ಇಬ್ಬರು ಉಗ್ರರು ಉಡೀಸ್

ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದು, ಮೂವರು ಯೋಧರು ಹುತಾತ್ಮರಾಗಿದ್ದಾರೆ. ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.ಘಟನೆಯಲ್ಲಿ ಇನ್ನಿಬ್ಬರು ಯೋಧರು ಗಾಯಗೊಂಡಿದ್ದು, ಅದರಲ್ಲಿ ಓರ್ವ ಸ್ಥಿತಿ...

ಕಾಲು ಜಾರಿ ಹೊಳೆಗೆ ಬಿದ್ದ ಸನ್ನಿಧಿಯ ಅಂತ್ಯಕ್ರಿಯೆ: ಮುಗಿಲು ಮುಟ್ಟಿದ ಕುಟುಂಬಸ್ಥರು-ಸ್ನೇಹಿತರ ಆಕ್ರಂದನ

ಬೈಂದೂರು: ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಬಾಲಕಿ ಸನ್ನಿಧಿ ಮೃತದೇಹ ಎರಡು ದಿನಗಳ ಬಳಿಕ ಪತ್ತೆಯಾಗಿದ್ದು, ಈಕೆ ಅಂತ್ಯ ಕ್ರಿಯೆಯನ್ನು ಮನೆ ಸಮೀಪದಲ್ಲೇ ನಿನ್ನೆ ನೆರವೇರಿಸಲಾಗಿದೆ. ಸರ್ಕಾರಿ‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ...

ಮಂತ್ರಾಲಯದಲ್ಲಿ ರಾಯರಿಗೆ ಪೂಜೆ ಸಲ್ಲಿಸಿದ ಮಾಜಿ CM ಬಿ.ಎಸ್ ವೈ & ಕುಟುಂಬ

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಅಂಗವಾಗಿ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪನವರೊಂದಿಗೆ ಸಂಸದರಾದ ಬಿ. ವೈ ರಾಘವೇಂದ್ರ ಅವರು ಹಾಗೂ ಸಹೋದರ ಬಿ. ವೈ ವಿಜಯೇಂದ್ರ ಅವರು...