ಮಂಗಳೂರು: ಶ್ರೀಲಂಕಾದಿಂದ ಶಂಕಿತ ಉಗ್ರರು ಒಳನುಸುಳಿರುವ ಶಂಕೆಯಾಗಿದ್ದು, ಕೇರಳ ಹಾಗೂ ಕರ್ನಾಟಕದ ಕರಾವಳಿಯಲ್ಲಿ ಹೈ ಅಲರ್ಟ್ನ್ನ ಘೋಷಿಸಲಾಗಿದೆ.
ಶ್ರೀಲಂಕಾದಿಂದ 2 ಯಾಂತ್ರೀಕೃತ ಬೋಟ್ನಲ್ಲಿ ಕೇರಳ ಮತ್ತು ಕರಾವಳಿಗೆ ಶಂಕಿತ ಉಗ್ರರು ಬಂದಿಳಿದಿರುವ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ.
ಶಂಕಿತರು ಕೇರಳದ ಅಲಪ್ಲುಳ ಬಂದರಿಗೆ ತಲುಪಿರುವ ಮಾಹಿತಿಯನ್ನ ಗುಪ್ತಚರ ಇಲಾಖೆಗೆ ರವಾನಿಸಿದೆ.
ಪಾಕಿಸ್ತಾನಕ್ಕೆ ತೆರಳಲು ಕರಾವಳಿ ಭಾಗಕ್ಕೆ, 12 ಮಂದಿ ಶ್ರೀಲಂಕಾದ ಶಂಕಿತ ಉಗ್ರರು ಬಂದಿರೋ ಶಂಕೆಯಿದೆ ಎನ್ನಲಾಗಿದೆ.
ಕೇರಳ ಅಥವಾ ರಾಜ್ಯದ ಕರಾವಳಿ ಭಾಗದಿಂದ ಬೋಟ್ ಮೂಲಕ ಪಾಕಿಸ್ತಾನಕ್ಕೆ ಶಂಕಿತ ಉಗ್ರರು ತೆರಳಲಿರೋ ಶಂಕೆಯಿದೆ.
ಹೀಗಾಗಿ, ಕರಾವಳಿ ಭಾಗದಲ್ಲಿ ಕೋಸ್ಟ್ ಗಾರ್ಡ್ ಹಾಗು ಕರಾವಳಿ ಕಾವಲು ಪಡೆಗೆ ಅಲರ್ಟ್ ಆಗಿ ಇರಲು ಸೂಚನೆ ನೀಡಿದ್ದು, ಸಮುದ್ರದಲ್ಲಿ ಗಸ್ತು ತಿರುಗಲು ಹೇಳಿದ್ದಾರೆ.
ಅನುಮಾನಾಸ್ಪದ ವ್ಯಕ್ಯಿಗಳು ಅಥವಾ ಬೋಟ್ ಕಂಡುಬಂದರೆ ಪೊಲೀಸರಿಗೆ ತಕ್ಷಣವೇ ಮಾಹಿತಿ ತಿಳಿಸುವಂತೆ ಸ್ಥಳೀಯ ಮೀನುಗಾರರಿಗೆ ಸೂಚನೆ ನೀಡಲಾಗಿದೆ.