Connect with us

    BELTHANGADY

    ಕರ್ನಾಟಕ ಸರ್ಕಾರದ ‘ಕ್ರೀಡಾ ರತ್ನ’ ಪ್ರಶಸ್ತಿಗೆ ಆಯ್ಕೆಯಾದ ಬೆಳ್ತಂಗಡಿಯ ಮರೋಡಿ ಗ್ರಾಮದ ಶ್ರೀಧರ್ ಕುಲಾಲ್

    Published

    on

    ಬೆಳ್ತಂಗಡಿ: ಕರ್ನಾಟಕ ಸರಕಾರ ಪ್ರಸ್ತುತ ಪಡಿಸುವ 2022ನೇ ಸಾಲಿನ ಕ್ರೀಡಾ ರತ್ನ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಶ್ರೀಧರ್ ಕುಲಾಲ್ ಆಯ್ಕೆಯಾಗಿದ್ದಾರೆ.


    ಕಂಬಳ ಕ್ಷೇತ್ರದಲ್ಲಿ ಆಗಣ್ಯ ಸಾಧನೆಯನ್ನು ಮಾಡಿ ಯಶಸ್ವಿ ಕ್ರೀಡಾಪಟುವಾಗಿ ಹೊರ ಹೊಮ್ಮಿದ ಇವರನ್ನು ಸರ್ಕಾರ ಗುರುತಿಸಿ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ.

    BELTHANGADY

    ರಾಯಚೂರಿನಲ್ಲಿ ಶಾಸಕ ಹರೀಶ್ ಪೂಂಜಗೆ ಸ್ವಾಗತ ಕೋರಿರುವ ಫ್ಲೆಕ್ಸ್‌ಗಳಲ್ಲಿ ಕಾಂಗ್ರೆಸ್ ಸಚಿವ, ಶಾಸಕರ ಫೋಟೋಗಳು!

    Published

    on

    ರಾಯಚೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಸ್ವಾಗತ ಕೋರಿರುವ ಫ್ಲೆಕ್ಸ್‌ಗಳಲ್ಲಿ ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ಶಾಸಕರ ಫೋಟೋಗಳು ರಾರಾಜಿಸಿವೆ.

    ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ತೆರಳಿರುವ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜ ಅವರಿಗೆ ಸ್ವಾಗತ ಕೋರಿ ಮಾನ್ವಿಯಲ್ಲಿ ಹಲವು ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ.

    ಬಿಜೆಪಿ ಶಾಸಕ ಹರೀಶ್ ಪೂಂಜ ಅವರಿಗೆ ಸ್ವಾಗತ ಕೋರಿರುವ ಫ್ಲೆಕ್ಸ್‌ಗಳಲ್ಲಿ ಸಚಿವ ಎನ್‌.ಎಸ್.ಬೋಸರಾಜು ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಂಪಯ್ಯ ಸಾಹುಕಾರ್, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಮತ್ತು ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಸೇರಿ ಅನೇಕ ಕಾಂಗ್ರೆಸ್ ನಾಯಕರ ಫೋಟೋಗಳನ್ನು ಹಾಕಲಾಗಿದೆ.

    ಮಾನ್ವಿ ಪಟ್ಟಣ ಹಾಗೂ ರಾಯಚೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮಗಳ ಮುಖ್ಯ ಅತಿಥಿಯಾಗಿ ಬಿಜೆಪಿ ಶಾಸಕ ಹರೀಶ್ ಪೂಂಜ ರಾಯಚೂರು ಜಿಲ್ಲೆಗೆ ಭೇಟಿ ನೀಡಿದ್ದಾರೆ.

    Continue Reading

    BELTHANGADY

    ಓವರ್‌ಟೆಕ್‌ ಭರದಲ್ಲಿ ಎರಡು ಕಾರು, ಲಾರಿ ಮಧ್ಯೆ ಅಪಘಾ*ತ; ಓರ್ವ ಸ್ಥಳದಲ್ಲೇ ಮೃ*ತ್ಯು

    Published

    on

    ಸಕಲೇಶಪುರ: ಎರಡು ಕಾರುಗಳು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟ್‌ ವ್ಯಾಪ್ತಿಯ ಕೆಂಪುಹೊಳೆ ಬಳಿ ಸಂಭವಿಸಿದೆ.

    ಹಾಸನ ತಾಲೂಕಿನ ಕಟ್ಟಾಯ ಸಮೀಪದ ನಾಯಕರಹಳ್ಳಿ ಚಂದ್ರೇಗೌಡ(50 ವ) ಮೃತಪಟ್ಟವರು. ಕಾರಿನಲ್ಲಿದ್ದ ಶೈಲಾ ಹಾಗೂ ಕಿರಣ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಓವರ್‌ಟೇಕ್‌ ಭರದಲ್ಲಿ ಕಾರುಗಳ ಮಧ್ಯೆ ಭೀ*ಕರ ಅಫಘಾ*ತ; 6 ಮಂದಿ ದುರ್ಮರ*ಣ

    ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರುಗಳು ಒಂದನ್ನೊಂದು ಓವರ್‌ಟೆಕ್‌ ಮಾಡುವ ಭರದಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸರಕು ತುಂಬಿದ ಲಾರಿಗೆ ಕೆಂಪುಹೊಳೆ ತಿರುವಿನಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿ ಪ್ರಪಾತಕ್ಕೆ ಬೀಳುವುದು ಕೂದಲೆಳೆಯಲ್ಲಿ ತಪ್ಪಿಹೋಗಿದೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣಾ ಪೊಲೀಶರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಅಪಘಾತದಿಂದ ಗಾಯಗೊಂಡವರನ್ನು ಸಕಲೇಶಪುರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕತ್ಸೆಗಾಗಿ ಹಾಸನಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

    Continue Reading

    BELTHANGADY

    ವೀರೇಂದ್ರ ಹೆಗ್ಗಡೆಯವರಿಗೆ ಮೇಣದ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ ಭಕ್ತ..!

    Published

    on

    ಬೆಳ್ತಂಗಡಿ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಗೆ ಬೆಂಗಳೂರಿನ ಭಕ್ತರೋರ್ವರು ಮೇಣದ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಪುಟ್ಟಪರ್ತಿಗೆ ವೀರೇಂದ್ರ ಹೆಗ್ಗಡೆಯವರ ಕುಟುಂಬ ಪ್ರವಾಸಕ್ಕೆ ಹೋದಾಗ ಈ ಪ್ರತಿಮೆಯನ್ನು ನೀಡಲಾಗಿದೆ. ಪ್ರತಿಮೆ ಕಂಡ ತಕ್ಷಣ ಹೆಗ್ಗಡೆ ಕುಟುಂಬ ಖುಷಿಯಾಗಿದೆ.

    ಬೆಂಗಳೂರಿನ ಭಕ್ತರೊರ್ವರು ವೀರೇಂದ್ರ ಹೆಗ್ಗಡೆಯವರಿಗೆ ಸುಳಿವೇ ಸಿಗದಂತೆ ಆಶ್ಚರ್ಯಕರವಾಗಿ ಉಡುಗೊರೆಯನ್ನು ನೀಡಿದ್ದಾರೆ. ಶ್ವೇತ ವಸ್ತ್ರಧಾರಿಯಾಗಿ ನಿಂತಿರುವ ಹೆಗ್ಗಡೆಯವರ ಮೇಣದ ಪ್ರತಿಮೆಯನ್ನು ರಚಿಸಲಾಗಿದೆ.

    ಈ ಮೇಣದ ಪ್ರತಿಮೆಯನ್ನು ಬೆಂಗಳೂರು ಮೂಲದ ಕಲಾವಿದರು ರಚಿಸಿದ್ದರು. ಅಕ್ಟೋಬರ್ ತಿಂಗಳಲ್ಲಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧ್ಯುಂತ್ಸವ ನಡೆಯಲಿದ್ದು, ಈ ವೇಳೆ ಧರ್ಮಸ್ಥಳ ಕ್ಕೆ ಈ ಪ್ರತಿಮೆಯನ್ನು ತರಲಾಗುತ್ತದೆ ಎಂದು ತಿಳಿದು ಬಂದಿದೆ.

    Continue Reading

    LATEST NEWS

    Trending