Connect with us

    BANTWAL

    ಅಶಕ್ತರ- ನೊಂದವರ ಬಾಳಿಗೆ ಬೆಳಕಾಗಿ ಮಾದರಿಯಾದ ‘ಶ್ರೀದೇವಿ ಟೈಗರ್ಸ್ ಕಲ್ಲೇಗ’

    Published

    on

    ಪುತ್ತೂರು : ಮೋಜಿಗಾಗಿ ವೇಷಗಳನ್ನು ಹಾಕಿ ಹಣ ಸಂಗ್ರಹಣೆ ಮಾಡುವರು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಒಂದು ಒಳ್ಳೇಯ ಸದುದ್ದೇಶವನ್ನು ಇಟ್ಟುಕೊಂಡು ಮಾಡುವವರು ಈ ಸಮಾಜದಲ್ಲಿದ್ದಾರೆ. ಇದರಲ್ಲಿ ಶ್ರೀದೇವಿ ಟೈಗರ್ಸ್ ಕಲ್ಲೇಗ ತಂಡವು ಒಂದಾಗಿದೆ.

    ದಕ್ಷಿಣ ಕನ್ನಡ ಪುಣಚ ಗ್ರಾಮದ ತೋರಣಕಟ್ಟೆ ಚಂದ್ರಾವತಿ ಟಿ ತೀರ ಬಡತನದಲ್ಲಿರುವ ಇವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ ಒಬ್ಬ ಮಗನನ್ನು ಹೊಂದಿರುವ ಚಂದ್ರಾವತಿ ಅವರ ಮಗ ಹೋಟೆಲ್ನಲ್ಲಿ ಕಾರ್ಮಿಕ ವೃತ್ತಿ ಮಾಡಿ ಜೀವನ ಸಾಗಿಸುತ್ತಿದ್ದಾರೆ ಇವರ ಚಿಕತ್ಸೆಗೆ ಶ್ರೀ ದೇವಿ ಟೈಗರ್ಸ್ ಕಲ್ಲೇಗ ತಂಡವು ನೆರವಾಗಿದೆ.

    ನೆಲ್ಲಿಗುಡ್ಡೆ ನವನಗರ ವಿಟ್ಲ ಕಸಬ ಗ್ರಾಮದ ಒಂದು ಮನೆಗೆ ಭೇಟಿ ನೀಡಿದ ಶ್ರೀದೇವಿ ಟೈಗರ್ಸ್ ಕಲ್ಲೇಗ ತಂಡ ಅವರ ಸಮಸ್ಯೆಯನ್ನು ತಿಳಿದು ಅವರ ಮಗಳ ಶಿಕ್ಷಣಕ್ಕೆ ನೆರವಾಗಿದೆ.

    ಪುತ್ತೂರಿನ ಸೇಡ್ಯಾಪು ಬನ್ನೂರು ಗ್ರಾಮದ 13 ವರ್ಷದ ಕೃತಿ ಇವರು ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ಬಳಲುತ್ತಿದ್ದು ಸೊಂಟದ ಕೆಳಗೆ ಬಲ ಕಳೆದುಕೊಂಡಿದ್ದು ಈಕೆಗೂ ತಂಡ ಆರ್ಥಿಕ ಸಹಕಾರ ನೀಡಿದೆ.

    ಹವ್ಯಾಸಿ ಕಲಾವಿದರಾದ ಯೋಗೀಶ್ ಕರ್ಮಲ ಇವರ ಪುತ್ರ 2 ವರ್ಷ ವಯಸ್ಸಿನ ಗೌರವ್ ಲ್ ಸಿ ಹೆಚ್ ಎಂಬ ಅಪರೂಪದ ಚರ್ಮ ರೋಗಕ್ಕೆ ತುತ್ತಾಗಿದ್ದಾರೆ ಈ ಪುಟ್ಟ ಕಂದಮ್ಮನ ನೆರವಿಗೂ ಶ್ರೀದೇವಿ ಟೈಗರ್ಸ್ ಕಲ್ಲೇಗ ತಂಡ ಧಾವಿಸಿದೆ.

    ಪ್ರತಿದಿನ 250 ಕ್ಕೂ ಅಧಿಕ ಶ್ವಾನಗಳ ಹಸಿವು ನೀಗಿಸುತ್ತಿರುವ ಹಾಗೆಯೇ 40 ಶ್ವಾನಗಳನ್ನು ಮನೆಯಲ್ಲೇ ಸಾಕುತ್ತಿರುವ ಮಂಗಳೂರುಇ ಬಳ್ಳಾಲ್‌ ಭಾಗ್‌ನ ರಜನಿ ಶೆಟ್ಟಿಯ ಧರ್ಮ ದಾರಿಗೂ ಶ್ರೀದೇವಿ ಟೈಗರ್ಸ್ ಕಲ್ಲೇಗ ಕೈ ಜೋಡಿಸಿದೆ.

    2022 ರಲ್ಲಿ ಪ್ರಥಮ ವರ್ಷದ ಹುಲಿವೇಷ ಪ್ರಾರಂಭಿಸಿರುವ ಈ ಯುವಕರ ತಂಡ ಒಂದು ಒಳ್ಳೆ ಉದ್ದೇಶದ ಚಿಂತನೆ ಅಳವಡಿಸಿಕೊಂಡು ಇತರರಿಗೆ ದಾರಿದೀಪವಾಗಿದೆ. ಸಮಾಜದಲ್ಲಿ ಅಸಹಾಯಕರಿಗೆ ನೆರವು ನೀಡುವುದು ಹಾಗೆ ಕಡುಬಡವರ ಕಲಿವ ಮಕ್ಕಳಿಗೆ ನೆರವಾಗುವುದು ಈ ತಂಡದ ಮೂಲ ಉದ್ದೇಶವಾಗಿದೆ. ಈ ಬಾರಿ 35 ಹುಲಿಗಳ ತಂಡವನ್ನು ಬೀದಿಗಿಳಿಸಿ ಆ ಮೂಲಕ ಸಂಗ್ರಹವಾದ ಮೊತ್ತವನ್ನು ಸಂಕಷ್ಟದಲ್ಲಿದದ್ದವರಿಗೆ ಹಂಚಿ ಮಾನವೀಯತೆ ಮೆರೆದಿದ್ದಾರೆ.

     

    BANTWAL

    ಕಲ್ಲಡ್ಕದಲ್ಲಿ ಸರ್ವೀಸ್ ರಸ್ತೆಗೆ ಡಾಮರು

    Published

    on

    ಬಂಟ್ವಾಳ: ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ಟೀಕೆಗೆ ಗುರಿಯಾಗಿದ್ದ ಕಲ್ಲಡ್ಕದಲ್ಲಿ ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.

    ಮಳೆ ದೂರವಾದ ಹಿನ್ನೆಲೆಯಲ್ಲಿ ಕಲ್ಲಡ್ಕದ ಪೂರ್ಲಿಪ್ಪಾಡಿ ಭಾಗದಿಂದ ಒಂದು ಬದಿಯಲ್ಲಿ ಡಾಮರು ಹಾಕಲಾಗುತ್ತಿದೆ.

    ಕಳೆದ 2-3 ವರ್ಷಗಳಿಂದ ಹೆದ್ದಾರಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ಈ ಬಾರಿಯ ಮಳೆಗಾಲದಲ್ಲಿ ಕಲ್ಲಡ್ಕ ಪೇಟೆಯನ್ನು ಎಲ್ಲ ರೀತಿಯಿಂದಲೂ ಹಿಂಡಿ ಹಿಪ್ಪೆ ಮಾಡಲಾಗಿತ್ತು. ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳು ಎಂಬ ಸ್ಥಿತಿ ಇತ್ತು. ಹೆದ್ದಾರಿ ತುಂಬಾ ಕೆಸರು ತುಂಬಿ ನಡೆದಾಡುವುದು ಕಷ್ಟವಾಗಿರುವ ಜತೆಗೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಾಗುವುದು ತೀರಾ ತ್ರಾಸದಾಯಕವಾಗಿತ್ತು. ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.

    Continue Reading

    BANTWAL

    ಮಂಗಳೂರು: ಯುವತಿ ವಿಚಾರದಲ್ಲಿ ಯುವಕನಿಗೆ ಥಳಿತ; ಆರೋಪಿಗಳು ಅರೆಸ್ಟ್

    Published

    on

    ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಮಹಮ್ಮದ್ ಮುಸ್ತಾಫ(21) ಎಂಬಾತನನ್ನು ಕಂಬಕ್ಕೆ ಕಟ್ಟಿ ಹಾಕಿದ ಥಳಿಸಿದ ಆರು ಮಂದಿ ಆರೋಪಿಗಳನ್ನು ಬಂಟ್ವಾಳ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಹಲ್ಲೆ ಮಾಡಿ, ಕೊಲೆ ಬೆದರಿಕೆಯೊಡ್ಡಿದ ಆರೋಪಿಗಳಾದ ಕಂಚಿನಡ್ಕದ ನಿವಾಸಿಗಳಾಗಿರುವ ಮಹಮ್ಮದ್‌ ಸಪ್ವಾನ್( 25), ಮಹಮ್ಮದ್‌ ರಿಜ್ವಾನ್‌ (25), ಇರ್ಪಾನ್‍(27), ಅನೀಸ್‍ ಅಹಮ್ಮದ್‍ (19), ನಾಸೀರ್‍ (27), ಇಬ್ರಾಹಿಂ, ಶಾಕೀರ್‍ (18)ನನ್ನು ಬಂಧಿಸಲಾಗಿದೆ.

    ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನವೆಂಬರ್ 7ರಂದು ರಾತ್ರಿ 10 ಗಂಟೆ ಸುಮಾರಿಗೆ ಕಂಚಿನಡ್ಕ ಪದವು ನಿವಾಸಿಯಾಗಿರುವ ಯುವತಿಯೊಬ್ಬಳು ಮಹಮ್ಮದ್ ಮುಸ್ತಾಫಾನನ್ನು ಮನೆಗೆ ಬರಲು ಹೇಳಿದ್ದು, ಆಕೆ ಸೂಚನೆಯಂತೆ ಮಹಮ್ಮದ್ ಮುಸ್ತಾಫಾ ಅಲ್ಲಿಗೆ ಹೋಗಿದ್ದ. ಈ ವೇಳೆ ಅಲ್ಲಿದ್ದ ಆರೋಪಿಗಳು ಮಹಮ್ಮದ್‍ ಮುಸ್ತಾಫ್‍ ನ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಂಪು ಸೇರಿಕೊಂಡು ಆತನನ್ನು ಹಿಡಿದು ರಕ್ತ ಒಸರುವಂತೆ ಥಳಿಸಿದ್ದಲ್ಲದೇ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.

     

    ಇದನ್ನೂ ಓದಿ : ಬಂಟ್ವಾಳ : ಮನೆಗೆ ಬಂದಿದ್ದ ಪ್ರಿಯಕರನ್ನು ಅ*ರೆಬೆತ್ತಲು ಮಾಡಿ ಹ*ಲ್ಲೆ

     

    ಮಹಮ್ಮದ್‍ ಮುಸ್ತಾಫ್‍ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಬಳಿಕ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಪೊಲೀಸರು ವಿಚಾರಣೆ ಮಾಡಲು ತೆರಳಿದಾದ ಮಹಮ್ಮದ್‍ ಮುಸ್ತಾಫ್‍ ಆರೋಪಿಗಳು ತನ್ನನ್ನು ಕೊಲೆ ನಡೆಸುವ ಉದ್ದೇಶದಿಂದ ಗುಂಪು ಸೇರಿ ಕಂಬಕ್ಕೆ ಕಟ್ಟಿ ಹಾಕಿ ಕೊಲೆಯತ್ನ ನಡೆಸಿದ್ದಾನೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ.

    Continue Reading

    BANTWAL

    ಬಂಟ್ವಾಳ: ವಿಷಪದಾರ್ಥ ಸೇವಿಸಿ ಯುವಕ ಆತ್ಮಹ*ತ್ಯೆ

    Published

    on

    ಬಂಟ್ವಾಳ: ವಿಷಪದಾರ್ಥ ಸೇವಿಸಿ ಯುವಕನೋರ್ವ ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಕಡೇಶಿವಾಲಯದಲ್ಲಿ ನಡೆದಿದೆ.

    ಬಂಟ್ವಾಳ ತಾಲೂಕಿನ ಕಡೇಶಿವಾಲಯದ ಕಂಡಿಗ ನಿವಾಸಿ ಗಣೇಶ್(25) ಆತ್ಮಹ*ತ್ಯೆ ಮಾಡಿಕೊಂಡ ಯುವಕ. ಗಣೇಶ್ ಅವರು ಸೋಮವಾರ ಮನೆಯಲ್ಲಿಯೇ ಸಂಜೆ ಹುಲ್ಲಿಗೆ ಬಿಡುವ ವಿಷವನ್ನು ಸೇವಿಸಿದ್ದರು.

    ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    LATEST NEWS

    Trending