Connect with us

DAKSHINA KANNADA

ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ-ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ 2020 ಪ್ರದಾನ

Published

on

ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ-ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ 2020 ಪ್ರದಾನ..!

ಪತ್ರಿಕಾವೃತ್ತಿ ಸಮಾಜೋನ್ನತಿಯ ಸಂಜೀವಿನಿ : ಸಂಸದ ಗೋಪಾಲ ಶೆಟ್ಟಿ

ಮುಂಬಯಿ : ಪತ್ರಿಕಾವೃತ್ತಿ ಸಮಾಜದ ಸಮಸ್ಯೆ ಸವಾಲುಗಳ ಪರಿಹಾರಕ್ಕೆ ಸಂಜೀವಿನಿ ಆಗಿದೆ. ಆದ್ದರಿಂದ ಜರ್ನಲಿಸಂ ಎಂಬುದು ಸಮಾಜಕ್ಕೆ ಅತ್ಯಗತ್ಯ ಜೀವಸೆಲೆ ಎಂಬುದನ್ನು ಸರ್ವರೂ ಮನಗಂಡು ಪತ್ರಕರ್ತರ ಭಾವನೆಗಳಿಗೆ ಸ್ಪಂದಿಸುವ ಅಗತ್ಯವಿದೆ.

ಸಮಾಜವನ್ನು ಹತೋಟಿಯಲ್ಲಿಡುವ ಶಕ್ತಿ ಪತ್ರಿಕೋದ್ಯಕ್ಕಿದ್ದು, ಇಂತಹ ಬೆಳವಣಿಗೆಗಳ ಸವಾಲುಗಳಿಗೆ ಗುಣಮಟ್ಟದ ಜರ್ನಲಿಸಂನಿಂದ ಮಾತ್ರ ಪರಿಹಾರ ಸಾಧ್ಯ. ಆದ್ದರಿಂದ ನಿಷ್ಠಾವಂತ ಪತ್ರಕರ್ತರ ವೃತ್ತಿನಿಷ್ಠೆಯನ್ನು ತಿದ್ದುವ ಕಾಯಕಕ್ಕೆ ಹೋಗದೆ ಪತ್ರಕರ್ತರನ್ನು  ಪ್ರೋತ್ಸಾಹಿಸುವ ಪ್ರಯತ್ನ ಮಾಡಬೇಕು ಎಂದು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ತಿಳಿಸಿದರು.

ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿನ ಎಂವಿಎಂ ಶ್ರೀಮತಿ ಶಾಲಿನಿ ಜಿ.ಶಂಕರ್ ಸಭಾಗೃಹದಲ್ಲಿ  ಭಾನುವಾರ ಆಯೋಜಿಸಿದ್ದ ಪೂರ್ವಾಹ್ನ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಪ್ರದಾನಿಸಿದ ಸಂಘದ ದ್ವಿತೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಯಾಗಿದ್ದು ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನಿಸಿ ಗೋಪಾಲ ಶೆಟ್ಟಿ ಮಾತನಾಡಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೆ.ಎಲ್ ಬಂಗೇರ ಅತಿಥಿü ಅಭ್ಯಾಗತರಾಗಿದ್ದು, ಸಂಘದ ಸಲಹಾ ಸಮಿತಿ ಸದಸ್ಯೆಯೂ, ಪ್ರಶಸ್ತಿ ಆಯ್ಕೆ ಸಮಿತಿ ಕಾರ್ಯಧ್ಯಕ್ಷೆ ಡಾ| ಸುನೀತಾ ಎಂ.ಶೆಟ್ಟಿ ಉಪಸ್ಥಿತರಿದ್ದು ಪತ್ರಕರ್ತರ ಸಂಘ ಕೊಡಮಾಡುವ ಕೆ.ಟಿ ಸುಪುತ್ರ ವಿಕಾಸ್ ವೇಣುಗೋಪಾಲ್ (ಸ್ವರ್ಗೀಯ ತುಳಸೀ ವೇಣುಗೋಪಾಲ್) ಕುಟುಂಬದ ಪ್ರಧಾನ ಪ್ರಾಯೋಜಕತ್ವದ, ತಲಾ ರೂಪಾಯಿ 25,000/- ನಗದು, ಪುರಸ್ಕಾರ ಫಲಕ ಮತ್ತು ಪ್ರಶಸ್ತಿಪತ್ರ ಹೊಂದಿರುವ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2020 ಪ್ರಶಸ್ತಿಯನ್ನು ಬೃಹನ್ಮುಂಬಯಿಯಲ್ಲಿನ ಹಿರಿಯ ಕನ್ನಡ ಪತ್ರಕರ್ತ, ಮೊಗವೀರ ಮಾಸಿಕದ ಮಾಜಿ ಸಂಪಾದಕ ಜಿ.ಕೆ ರಮೇಶ್ ಅವರಿಗೆ ಪ್ರದಾನಿಸಿ ಶಾಲು ಹೊದೆಸಿ ಫಲಪುಷ್ಪವನ್ನಿತ್ತು ಗೌರವಿಸಿ ಗೋಪಾಲ ಶೆಟ್ಟಿ ಅಭಿನಂದಿಸಿದರು.

ಊರಪರಊರ ತಮ್ಮತನವನ್ನು ಜೀವಂತವಾಗಿಸುವ ಮೂಲಕ ಎಲ್ಲಾ ಸಮಾಜಗಳನ್ನು ಒಗ್ಗೂಡಿಸುವಲ್ಲಿ ಮುಂಬಯಿ ಕನ್ನಡಿಗ ಪತ್ರಕರ್ತರ ಸೇವೆ ಮಹತ್ತರವಾದದು. ಕನ್ನಡಿಗರು ಊರುಬಿಟ್ಟು ಮುಂಬಯಿ ಸೇರಿದರೂ ಮರ್ಯದಾಸ್ಥಾನ ಅಲಂಕರಿಸಿ ಮೆರೆದವರು. ಇಲ್ಲಿನ ಜತೆಯ ಪ್ರೀತಿವಿಶ್ವಾಸಕ್ಕೆ ಪಾತ್ರರಾದವರು. ಕಾರಣ ನಮ್ಮ ಸಾಧನೆ, ವಸ್ತುನಿಷ್ಠ ಸೇವೆಗಳೇ ನಮ್ಮ ಮಾನದಂಡವಾಗಿದೆ. ಸದ್ಯದ ವ್ಯವಹಾರಿಕ ಪತ್ರಿಕೋದ್ಯಮದ ಮಧ್ಯೆಯೂ ನಿಷ್ಠಾವಂತಿಕೆಯ ಪತ್ರಿಕಾವೃತ್ತಿ ಮೈಗೂಡಿಸಿರುವ ಮುಂಬಯಿ ಕನ್ನಡಿಗ ಪತ್ರಕರ್ತರ ಸೇವೆ ಅನುಪಮವಾದದು. ಆದ್ದರಿಂದಲೇ ಕರುನಾಡ ಜನತೆ ಮರಾಠಿಭೂಮಿಯಲ್ಲಿ ಆತ್ಮೀಯ ಬಂಧುಗಳಾಗಿಯೇ ಸ್ಥಾನಮಾನ ಪಡೆದಿರುವರು ಎಂಬುವುದನ್ನೂ ಗೋಪಾಲ್ ಶೆಟ್ಟಿ ತಿಳಿಸಿದರು.

ಕೆ.ಎಲ್ ಬಂಗೇರ ಮಾತನಾಡಿ ಸುಮಾರು ಒಂದುವರೆ ಶತಮಾನದ ಹಿಂದೆ ಉದರ ಪೆÇೀಷಣೆಗೆ ಕನ್ನಡಿಗರು ಮರಾಠಿ ಮಣ್ಣಿನ ಮುಂಬಯಿ ಸೇರಿದರೂ ದೂರದೃಷ್ಠಿತ್ವವನ್ನು ಹೊಂದಿ ಸಾಧಕರೆಣಿಸಿದ್ದಾರೆ. ಇದೆಲ್ಲಾ ನಮ್ಮ ಕಠಿಣಶ್ರಮ, ನ್ಯಾಯಪರತೆ, ಪರಾಕ್ರಮ, ಸಮರ್ಪಣಾಭಾವ, ಸಮಗ್ರತೆಯ ಫಲಿತಾಂಶವಾಗಿದೆ. ಆ ಪೈಕಿ ಕನ್ನಡ ಪತ್ರಿಕೋದ್ಯಮದ ಸಾಧನೆಯೂ ಒಂದಾಗಿದೆ. ಸಮಾಜ ನಿರ್ಮಾಣದಲ್ಲಿ ಮಹಾರಾಷ್ಟ್ರದಲ್ಲಿ ಕನ್ನಡಿಗ ಪತ್ರಿಕಾರಂಗದ ಸಾಧನೆ ಹೊರತಾಗಿಲ್ಲ. ವರದಿಗಾರಿಕೆಯು ಒಂದು ಎದೆಗಾರಿಕೆಯ ವೃತ್ತಿಯಾಗಿದ್ದು ಎಲ್ಲರೂ ಪತ್ರಕರ್ತರಾಗಲು ಸಾಧ್ಯವಿಲ್ಲ. ಇದನ್ನೇ ಕನ್ನಡಿಗ ಪತ್ರಕರ್ತರು ಸಿದ್ಧಿಸಿ ಅದನ್ನು ಓರ್ವ ಶ್ರೇಷ್ಠಪತ್ರಕರ್ತನ ಹೆಸರ ಪ್ರಶಸ್ತಿಯೊಂದಿಗೆ ಭಾವೀ ಜನಾಂಗದ ಜರ್ನಲಿಸ್ಟ್‍ಗಳಿಗೆ ಮಾದರಿ ಆಗಿದ್ದಾರೆ ಎಂದರು.

ಸುನೀತಾ ಶೆಟ್ಟಿ ಪುರಸ್ಕಾರದ ಬಗ್ಗೆ ಮಾತನಾಡಿ ಅವಿಷ್ಕಾರ ಕಾಣದ ಅಂದಿನ ದಿನಗಳಲ್ಲಿ ಹೊರನಾಡಿನಲ್ಲಿದ್ದು ಒಳನಾಡಿನ ಓದುಗರಿಗೆ, ಪತ್ರಿಕೋದ್ಯಮಕ್ಕೆ ತನ್ನ ವಸ್ತುನಿಷ್ಠತಾ ವರದಿಗಾರಿಕೆಯಿಂದ ಸುದ್ದಿ ಮುಟ್ಟಿಸಿದ ಕೆಟಿ ವೇಣುಗೋಪಾಲ್ ಸಮರಣೀಯರಾದರೂ ಅವರ ನೆನಹು ಪ್ರಶಸ್ತಿ ಮುಖೇನ ಅಮರವಾಗಿಸುವುದು ಅಭಿಮಾನದ ಸಾಧನೆ. ಕನ್ನಡಿಗರ ಪತ್ರಕರ್ತರ ಈ ಯೋಜನೆ ಪ್ರಶಂಸನೀಯ. ಪತ್ರಕರ್ತರು ಮತ್ತು ಪತ್ರಿಕೋದ್ಯಮಕ್ಕೆ ಇಂತಹ ಸಾಧನೆ ಒಳ್ಳೆಯ ಯೋಗಾಯೋಗ. ಮುಂಬಯಿ ಅಂದರೆ ಕನ್ನಡಿಗರಿಗೆ ಅಖಂಡವಾದದು. ಇಲ್ಲಿ ಬಿಕ್ಕಟ್ಟುಕ್ಕಿಂತ ಒಗ್ಗಟ್ಟು ರೂಢಿಸಿಕೊಂಡ ಕನ್ನಡಿಗರು ಸಾಮರಸ್ಯತ್ವಕ್ಕೆ ಸಾಕ್ಷಿಯಾಗಿದ್ದಾರೆ. ಕನ್ನಡಿಗರ ಮುಂಬಯಿ ಇತಿಹಾಸಕ್ಕೆ ಈ ಪ್ರಶಸ್ತಿ ಮುಕುಟದÀ ವಜ್ರದಂತಿದೆ ಎಂದರು.

ಪತ್ರಿಕೋದ್ಯಮಕ್ಕೆ ವಿಶ್ವಾಂತ್ರಿಯನ್ನಿತ್ತು ನಿವೃತ್ತಿ ಜೀವನದಲ್ಲಿದ್ದ ನನ್ನನ್ನು ಈ ಪುರಸ್ಕಾರ ಮತ್ತೆ ಎಚ್ಚರಿಸಿದೆ. ಇದು ಜೀವಮಾನವಿಡೀ ನೆನಪಿಸಿಡುವ ಗೌರವ ನನ್ನದಾಗಿದೆ. ಓರ್ವ ನಿಷ್ಪಕ್ಷಪಾತ ಸೇವೆಯ ಪತ್ರಕರ್ತನನ್ನು ಜನ ಸದಾ ಜೀವಂತವಾಗಿಸಿಡುವರು ಅನ್ನುವುದಕ್ಕೆ ಈ ಪ್ರಶಸ್ತಿ ಸಾಕ್ಷಿಯಾಗಿದೆ. ವೃತ್ತಿನಿಷ್ಠೆಗೆ ಈ ಪ್ರಶಸಿ ಪ್ರತಿಷ್ಠೆಯನ್ನು ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ. ನನ್ನನ್ನು ನನ್ನ ಪರಮಾಪ್ತ ಪತ್ರಕರ್ತಮಿತ್ರ ಕೆಟಿವಿ ಸ್ಮರಣೆಯಲ್ಲಿ ಗುರುತಿಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಗೆ ವಂದಿಸುವೆ ಎಂದು ಪ್ರಶಸ್ತಿಗೆ ಉತ್ತರಿಸಿ ಜಿ.ಕೆ ರಮೇಶ್ ಎಂದರು.

ಪೆನ್ಶನ್‍ಕ್ಕಿಂತ ಟೆನ್ಶನ್‍ನಿಂದಲೇ ಬಾಳಬೇಕಾದ ಅನಿರ್ವಯತೆ ಪತ್ರಕರ್ತರಿಗೆ ಒದಗಿದ್ದು ದುರದೃಷ್ಟಕರ. ಸಮಾಜದ ಉನ್ನತಿಕರಣಕ್ಕೆ ಹುಟ್ಟು ಪಡೆದ ಪತ್ರಿಕೊದ್ಯಮದ ಸದ್ಯದÀ ನಡೆ ನೋಡಿದರೆ ಸಮಾಜದ ಸ್ವಾಸ್ಥ ್ಯ ಹಾಳುಗೆಡುವಲ್ಲಿ ತೊಡಗಿಸಿ ಕೊಳ್ಳುತ್ತಿದೆ ಎನ್ನುವ ಭಯ ಮೂಡುತ್ತಿದೆ. ಪತ್ರಿಕಾರಂಗ ಶಕ್ತಿಯುತವಾಗಿ ಸದೃಢವಾಗಿ ಉಳಿಯ ಬೇಕಾದರೆ ಮಾಧ್ಯಮಗಳು ಜನರ ವಿಶ್ವಾಸಕ್ಕೆ ದ್ರೋಹ ಬಗ್ಗೆಯದಂತೆ ನಡೆದು ಕೊಳ್ಳುವ ಅಗತ್ಯವಿದೆ. ಇದೇ ಪ್ರತಿಯೊಬ್ಬ ಪತ್ರಕರ್ತನ ಕರ್ತವ್ಯವಾಗಬೇಕು ಎಂದು ಅಧ್ಯಕ್ಷೀಯ ಭಾಷಣದಲ್ಲಿ ರೋನ್ಸ್ ಬಂಟ್ವಾಳ್ ತಿಳಿಸಿದರು.

ಪತ್ರಕರ್ತರ ಸಂಘದ ಹಿತೈಷಿಗಳಾಗಿದ್ದು ಇತ್ತೀಚೆಗೆ ಸ್ವರ್ಗೀಯರಾದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ದಿ| ಜಯ ಸಿ.ಸುವರ್ಣ, ಸಂಘದ ಪೆÇೀಷಕ ಸದಸ್ಯ ದಿ| ಎಂ.ಬಿ ಕುಕ್ಯಾನ್, ಸಂಘದ ಮಾಜಿ ಜೊತೆ ಕೋಶಾಧಿಕಾರಿ ದಿ| ಸುರೇಶ್ ಆಚಾರ್ಯ, ನಾಡಿನ ಹಿರಿಯ ಪತ್ರಕರ್ತ ದಿ| ಬನ್ನಂಜೆ ಗೋವಿಂದಾಚಾರ್ಯ ಮತ್ತು ಅಗಲಿದ ಎಲ್ಲಾ ಪತ್ರಕರ್ತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಉಪಸ್ಥಿತ ಗಣ್ಯರಾದ ಮೋಗವೀರ ಮಂಡಳಿಯ ಟ್ರಸ್ಟಿಗಳಾದ ಹರೀಶ್ ಪುತ್ರನ್, ಲಕ್ಷ ್ಮಣ್ ಶ್ರೀಯಾನ್, ದೇವರಾಜ್ ಬಂಗೇರ, ಮೋಗವೀರ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್, ಪ್ರೀತಿ ಹರೀಶ್ ಶ್ರೀಯಾನ್, ಮೋಹನ್ ಮಾರ್ನಾಡ್, ನ್ಯಾ| ಆರ್.ಜಿ ಶೆಟ್ಟಿ, ವಸಂತ್ ಕೆ.ಸುವರ್ಣ, ಜಿ.ಟಿ ಆಚಾರ್ಯ, ಸುಧಾಕರ್ ಕರ್ಕೇರ, ನವೀನ್ ಕೆ.ಇನ್ನ, ಎಸ್.ಕೆ ಸುಂದರ್, ಡಾ| ಭರತ್‍ಕುಮಾರ್ ಪೆÇಲಿಪು, ಓಂದಾಸ್ ಕಣ್ಣಂಗಾರ್, ಪತ್ರಕರ್ತರ ಸಂಘದ ಸಲಹಾ ಸದಸ್ಯರಾದ ಸುರೇಂದ್ರ ಎ.ಪೂಜಾರಿ, ಸುಧಾಕರ್ ಉಚ್ಚಿಲ್, ವಿಶೇಷ ಆಮಂತ್ರಿತ ಸದಸ್ಯರುಗಳಾದ ನ್ಯಾ| ವಸಂತ ಕಲಕೋಟಿ, ಗೋಪಾಲ್ ತ್ರಾಸಿ, ಸವಿತಾ ಎಸ್.ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಜಯಂತ್ ಕೆ.ಸುವರ್ಣ ಮತ್ತಿತರರಿಗೆ ಸ್ಮರಣಿಕೆ, ಪುಷ್ಫಗಳನ್ನಿತ್ತು ಗೌರವಿಸಲಾಯಿತು.

ಪತ್ರಕರ್ತರ ಸಂಘದ ಗೌ| ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ ಸ್ವಾಗತಿಸಿದರು. ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ಅತಿಥಿಗಳನ್ನು ಪರಿಚಯಿಸಿದರು. ವಿಶೇಷ ಆಮಂತ್ರಿತ ಸದಸ್ಯ ಸಾ.ದಯಾ ಪುರಸ್ಕೃತರನ್ನು ಪರಿಚಯಿಸಿದರು. ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ ಪುರಸ್ಕೃತರಿಗೆ ಅಭಿನಂದನಾ ನುಡಿಗಳನ್ನಾಡಿದರು. ಅನಿತಾ ಪಿ.ಪೂಜಾರಿ ತಾಕೋಡೆ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ ವಂದಿಸಿದರು. ಜಿ.ಕೆ ರಮೇಶ್ ಬಂಧುಮಿತ್ರರು ಉಪಸ್ಥಿತರಿದ್ದು ಅಭಿನಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನ ಗೊಂಡಿತು.

Click to comment

Leave a Reply

Your email address will not be published. Required fields are marked *

BANTWAL

ಅನಾರೋಗ್ಯದ ನಡುವೆಯೂ ಮತ ಚಲಾಯಿಸಿ ಕೊ*ನೆಯುಸಿರೆಳೆದ ನಿವೃತ್ತ ಯೋಧ

Published

on

ಬಂಟ್ವಾಳ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮಾಜಿ ಸೈನಿಕರೊಬ್ಬರು ಮತದಾನ ಪೂರೈಸಿ ಮರಳಿ ಅಸ್ಪತ್ರೆಗೆ ದಾಖಲಾಗಿದ್ದು, ಈಗ ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿದ್ದಾರೆ.

ಬಂಟ್ವಾಳ ವಗ್ಗ ನಿವಾಸಿ, ನಿವೃತ್ತ ಯೋಧ ಮಾಧವ ಪ್ರಭು (83) ಅನಾರೋಗ್ಯದ ನಡುವೆಯೂ ಪವಿತ್ರ ಮತದಾನ ಕರ್ತವ್ಯ ಪೂರೈಸಿದವರು.

ಮಾಧವ ಪ್ರಭುಗಳು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 85 ವರ್ಷ ಮತ್ತು ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮಾಧವ ಪ್ರಭುಗಳು ವೈದ್ಯರ ಅನುಮತಿ ಪಡೆದು ನೇರವಾಗಿ ಮನೆಗೆ ತೆರಳಿ ಅಲ್ಪಿ ಏ.15 ರಂದು ಮತದಾನ ಕರ್ತವ್ಯ ಪೂರೈಸಿ ಆಸ್ಪತ್ರೆಗೆ ಮರಳಿದ್ದರು. ಮಾಧವ ಪ್ರಭುಗಳು ಆಸ್ಪತ್ರೆಯಲ್ಲಿ ಬುಧವಾರ ಮೃ*ತಪಟ್ಟಿದ್ದಾರೆ.

ಸೈನ್ಯಕ್ಕೆ ಸೇರುವ ಮೊದಲು ಮಲೇರಿಯಾ ನಿರ್ಮೂಲನಾ ವಿಭಾಗದ ಇನ್‌ಸ್ಪೆಕ್ಟರ್ ಆಗಿದ್ದರು. ಸೈನ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ಇವರು ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದರು. ಮೃ*ತರು ಪತ್ನಿ ಹಾಗೂ ಇಬ್ಬರು ಪುತ್ರಿ ಮತ್ತು ಪುತ್ರರನ್ನು ಅ*ಗಲಿದ್ದಾರೆ.

Continue Reading

DAKSHINA KANNADA

ಕೇರಳದ ಹಕ್ಕಿ ಜ್ವರ…ದಕ್ಷಿಣ ಕನ್ನಡದ ಗಡಿಯಲ್ಲಿ ಕಟ್ಟೆಚ್ಚರ..!

Published

on

ಮಂಗಳೂರು: ಕೇರಳದ ಅಲಪ್ಪುಳ ಜಿಲ್ಲೆಯ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಕೇರಳದ ಗಡಿ ಭಾಗಗಳಲ್ಲಿ ವಿಸೇಷ ನಿಗಾ ವಹಿಸಲಾಗಿದೆ.

ಇಂದಿನಿಂದ ತಲಪಾಡಿ, ಜಾಲ್ಸೂರು ಮತ್ತು ಸಾರಡ್ಕದಲ್ಲಿ ವಿಶೇಷ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು. ಈ ಚೆಕ್ ಪೋಸ್ಟ್‌ಗಳಲ್ಲಿ ಕೋಳಿ ಉತ್ಪನ್ನಗಳನ್ನು ಕೇರಳಕ್ಕೆ ತಲುಪಿಸಿದ ನಂತರ ದಕ್ಷಿಣ ಕನ್ನಡಕ್ಕೆ ಹಿಂದಿರುಗುವ ವಾಹನಗಳನ್ನು ಸ್ಯಾನಿಟೈಸ್ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಮಂಗಳೂರಿನಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಆ ಜಿಲ್ಲೆಯಲ್ಲಿ ಇದು ಎರಡನೇ ಪ್ರಕರಣವಾಗಿದೆ. ಇದುವರೆಗೆ ದಕ್ಷಿಣ ಕನ್ನಡದಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ನಾವು ಜಾಗರೂಕರಾಗಿರುತ್ತೇವೆ ಮತ್ತು ಮೂರು ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸುತ್ತೇವೆ ಎಂದು ಕರ್ನಾಟಕ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ ಇದು ಕೋವಿಡ್‌ಗಿಂತ ಭೀಕರ ಸೋಂಕು…ಜಗತ್ತಿಗೆ ಹರಡುವ ಆತಂಕದಲ್ಲಿ ತಜ್ಞರು..!

ಏನಿದು ಹಕ್ಕಿ ಜ್ವರ?

ಹೆಚ್​​5ಎನ್​​1 ವೈರಸ್​​ನಿಂದ ಹರಡುವ ಸೋಂಕನ್ನು ಹಕ್ಕಿ ಜ್ವರ ಎಂದು ಕರೆಯಲಾಗುತ್ತದೆ. ಈ ವೈರಸ್ ಹೆಚ್ಚಿನ ಮರಣ ಪ್ರಮಾಣದೊಂದಿಗೆ ತೀವ್ರವಾದ ಜ್ವರವನ್ನು ಉಂಟುಮಾಡಬಲ್ಲದ್ದಾಗಿದೆ. ಆದರೆ, ಮನುಷ್ಯರಲ್ಲಿ ಈ ರೋಗದ ಹರಡುವಿಕೆ ಬಹಳ ಅಪರೂಪ. ಇಲ್ಲಿಯವರೆಗೆ, ಈ ವೈರಸ್ ಮಾನವರಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಹರಡಿದ ಬಗ್ಗೆ ವರದಿಯಾಗಿಲ್ಲ. ಆದರೂ ಈ ಬಗ್ಗೆ ನಿರ್ಲಕ್ಷ್ಯ ತೋರುವಂತಿಲ್ಲ.

ಹಕ್ಕಿ ಜ್ವರ ವಿಶಿಷ್ಟವಾಗಿ ವಲಸೆ ಹಕ್ಕಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಪ್ರಸ್ತುತ ಬೇಸಿಗೆಯಲ್ಲಿ ಹಕ್ಕಿಗಳ ವಲಸೆ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ವೈರಸ್ ಸೋಂಕಿತ ಕೋಳಿಗಳಿಂದ ಇತರ ಪಕ್ಷಿಗಳಿಗೆ ಮತ್ತು ಮನುಷ್ಯರಿಗೆ, ವಿಶೇಷವಾಗಿ ಕೋಳಿ ಸಾಕಣೆ ಕೇಂದ್ರಗಳು ಮತ್ತು ಮಾಂಸ ಸಂಸ್ಕರಣಾ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಹರಡಬಹುದು. ಆದಾಗ್ಯೂ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

ಮತದಾರರ ಚೀಟಿಯಲ್ಲಿ ಕ್ಯೂಆರ್‌ ಕೋಡ್! ಮಂಗಳೂರು ದಕ್ಷಿಣ ಉತ್ತರದಲ್ಲಿ ಅನುಷ್ಠಾನ

Published

on

ಮಂಗಳೂರು: ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣ ಆಯೋಗ ಕೊನೇ ಹಂತದ ಕಸರತ್ತು ಮುಂದುವರಿಸಿದೆ. ನಗರದ ಜನತೆಗೆ ಮತಗಟ್ಟೆಗಳ ಮಾಹಿತಿ ನೀಡಲು ಚುನಾವಣೆ ಸ್ಲಿಪ್‌ಗಳಲ್ಲಿ ಕ್ಯೂಆರ್ ಓಡ್ ನೀಡಲಾಗಿದ್ದು, ಆ ಮೂಲಕ ಮತದಾನ ಕೇಂದ್ರದ ಮಾಹಿತಿ ನೀಡಲು ಮುಂದಾಗಿದೆ.

ಕರ್ನಾಟಕದಲ್ಲಿ ಇದು ಮೊದಲ ಪ್ರಯೋಗವಾಗಿದ್ದು, ದ.ಕ. ಜಿಲ್ಲೆಯ ನಗರಕ್ಕೆ ಹೊಂದಿಕೊಂಡಿರುವ ಎರಡು ಕ್ಷೇತ್ರಗಳಲ್ಲಿ ಮಾತ್ರ ಜಾರಿಗೊಳಿಸಲಾಗಿದೆ. ಇದರಂತೆ ಮಂಗಳೂರು ದಕ್ಷಿಣ ಹಾಗೂ ಉತ್ತರ ಕ್ಷೇತ್ರದಲ್ಲಿ ಸ್ಲಿಪ್ ಮೂಲಕ ಮತದಾರರಿಗೆ ಮತಗಟ್ಟೆಯ ವಿವರ ಒದಗಿಸಲಾಗುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆಯಾಗುವ ನಿರೀಕ್ಷೆ ಹೊಂದಲಾಗಿದೆ.

ಮತದಾರರ ಸ್ಲಿಪ್‌ನಲ್ಲಿ ಮತಗಟ್ಟೆಯ ವಿವರ ನಗರದಲ್ಲಿನ ಅನೇಕರಿಗೆ ಮತಗಟ್ಟೆಯ ಬಗ್ಗೆ ಮಾಹಿತಿ ಇರುವುದಿಲ್ಲ. ಮತದಾನಕ್ಕಾಗಿ ಮತಗಟ್ಟೆಗಳನ್ನು ಅರಸಿಕೊಂಡು ಹೋಗಬೇಕಾಗುತ್ತದೆ. ಇದನ್ನು ನೀಗಿಸಲು ಕ್ಯೂಆರ್ ಕೋಡ್ ನೀಡಲಾಗಿದ್ದು, ಸ್ಕ್ಯಾನ್ ಮಾಡಿದ ವೇಳೆ ಮಯಗಟ್ಟೆಯ ಲೊಕೇಷನ್ ಪಡೆಯಬಹುದು. ಈ ಮೂಲಕ ಮತಗಟ್ಟೆ ಹುಡುಕಿ ತೆರಳುವುದನ್ನು ತಪ್ಪಿಸಲು ಸಾಧ್ಯವಾಗಲಿದೆ.

Continue Reading

LATEST NEWS

Trending