ವಿಶಿಷ್ಠ ಸಯಾಮಿ ಬೆಕ್ಕಿನ ಮರಿಗಳನ್ನು ಬೇರ್ಪಡಿಸಿದ ಪಶುವೈದ್ಯ..!
Special Siamese cats Detached veterinarian
ಮಂಗಳೂರು: ಕಲ್ಲಡ್ಕ ಸಮೀಪದ ನಿವಾಸಿಯೋರ್ವರು ಸಾಕಿದ ಪರ್ಷಿಯನ್ ತಳಿಯ ಬೆಕ್ಕೊಂದು 5 ಮರಿಗಳಿಗೆ ಜನ್ಮ ನೀಡಿದೆ. ಅದರಲ್ಲಿ 4 ಬೆಕ್ಕಿನ ಮರಿಗಳು ವಿಶಿಷ್ಟ ಸಯಾಮಿ ಅವಳಿಗಳಾಗಿ ಜನಿಸಿವೆ.
ಬೆಕ್ಕು ಪ್ರೇಮಿಯಾಗಿರುವ ಅವರು ಸಯಾಮಿ ಅವಳಿಗಳನ್ನು ಬೇರ್ಪಡಿಸುವ ಸಲುವಾಗಿ ತಾಲೂಕಿನ ಕೆಲವೊಂದು ಪಶು ಚಿಕಿತ್ಸಾಲಯಗಳಿಗೆ ಭೇಟಿ ನೀಡಿದರೂ ಯಾವ ವೈದ್ಯಾಧಿಕಾರಿಗಳು ಸಯಾಮಿ ಅವಳಿ ಬೆಕ್ಕಿನ ಮರಿಗಳನ್ನು ಅದು ಬದುಕಿ ಉಳಿಯಲ್ಲ ಎಂಬ ಕಾರಣ ನೀಡಿ ಬೇರ್ಪಡಿಸಲು ನಿರಾಕರಿಸಿದ್ದಾರೆ.
ಮಂಗಳೂರು ತಾಲೂಕಿಗೆ ಒಳಪಟ್ಟ ಅಡ್ಯಾರು ಪಶು ಚಿಕಿತ್ಸಾಲಯದ ಹಿರಿಯ ಪಶುವೈದ್ಯ ಪರೀಕ್ಷಕರಾದ ಪ್ರಮೋದ್ ಇದನ್ನು ಸವಾಲಾಗಿ ಸ್ವೀಕರಿಸಿ, ಶಸ್ತ್ರಚಿಕಿತ್ಸೆ ಮೂಲಕ ಸಯಾಮಿ ಅವಳಿ ಬೆಕ್ಕಿನ ಮರಿಗಳನ್ನು ಯಶಸ್ವಿಯಾಗಿ ಬೇರ್ಪಡಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಅದನ್ನು ಬೆಕ್ಕಿನ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.