Connect with us

    ಕೊರೊನಾ ಮಾರಿ ಅಟ್ಟಲು 500 ವರ್ಷಗಳ ಹಿಂದಿನ ಗೆಜ್ಜೆಗಿರಿ ನಾಟಿವೈದ್ಯೆಗೆ ಶತೌಷಧಿಗಳ ಕಲಶಾಭಿಷೇಕ.!!

    Published

    on

    ಕೊರೊನಾ ವೈರಸ್ ತಡೆಗಟ್ಟಲು ಮಾತೆ ದೇಯಿ ಬೈದೆತಿಗೆ ಶತೌಷಧಿಗಳ ಕಲಶಾಭಿಷೇಕ ನಡೆಸಿ ವಿಶೇಷ ಪ್ರಾರ್ಥನೆ

    ಪುತ್ತೂರು: ಎಲ್ಲೆಡೆ ಒಬ್ಬರಿಂದೊಬ್ಬರ ಜೀವ ಹಿಂಡುತ್ತಿರುವ ಮಹಾಮಾರಿ ಕೊರೊನಾ ಹರಡುವಿಕೆಯಿಂದಾಗಿ ಇಡೀ ವಿಶ್ವವೇ ಥರಥರ ನಡುಗುತ್ತಿದೆ.

    ಈ ಮಾರಿ ವೈರಸ್ ಈಗಾಗಲೇ ಭಾರತಕ್ಕೂ ವಕ್ಕರಿಸಿದ್ದು, ಈ ರೋಗ ಎಲ್ಲೆಡೆ ಹರಡದಂತೆ ತಡೆಗಟ್ಟಲು ಸರ್ಕಾರ ತಮ್ಮ ಕೈಲಾದ ಕೆಲಸ ಮಾಡುತ್ತಲೇ ಇದೆ.

    ಈ ಮಹಾಮಾರಿ ವೈರಸ್ ಗೆ ಇಲ್ಲಿಯವರೆಗೆ ಲಸಿಕೆ ಎಲ್ಲಿಯೂ, ಯಾರೂ ಕಂಡುಹಿಡಿದಿಲ್ಲ. ಆದ್ರೂ ರೋಗಕ್ಕೆ ಚಿಕಿತ್ಸೆ ನೀಡಲು ವೈದ್ಯರ ಅವಶ್ಯಕತೆಯಂತೂ ಇದ್ದೇ ಇದೆ.

    ಇದೀಗ ನಾಟಿ ಮದ್ದಿನ ಮೂಲಕ ಸಾವಿರಾರು ಜನರ ರೋಗಗಳನ್ನು ವಾಸಿಗೊಳಿಸಿದ ನಾಟಿ ವೈದ್ಯೆಯೊಬ್ಬರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶತೌಷಧಿಗಳ ಕಲಶಾಭಿಷೇಕ ಮಾಡಿದ ಅಪರೂಪದ ಘಟನೆ ನಡೆದಿದೆ.

    ತನ್ನ ಜೀವಿತಾವಧಿಯಲ್ಲಿ ಸಾವಿರಾರು ಜನರ ರೋಗ ರುಜಿನಗಳನ್ನ ತನ್ನ ಔಷಧಿಗಳ ಮೂಲಕ ಗುಣಮುಖಗೊಳಿಸಿದ ಈ ವೈದ್ಯೆಗೆ ಅಭಿಷೇಕ ನೆರವೇರಿಸುವ ಮೂಲಕ ಕೊರೊನಾ ಎಂಬ ಮಾರಿಯ ನಾಶಕ್ಕೆ ಹರಕೆ ಹೊರಲಾಗಿದೆ.

    ಹೌದು ಈ ನಾಟಿ ವೈದ್ಯೆ ಬೇರಾರು ಅಲ್ಲ ಸಾಕ್ಷಾತ್ ದೇವಿ, ಗೆಜ್ಜೆಗಿರಿಯ ಮಹಾಮಾತೆ ದೇಯಿ ಬೈದೆತಿ.

     

    ಸರಿಸುಮಾರು ಐನೂರು ವರ್ಷಗಳ ಹಿಂದೆ ತುಳುನಾಡಿನಲ್ಲಿ ನಾಟಿ ವೈದ್ಯ ಪರಂಪರೆಯಲ್ಲಿ ಜನಮಾನಸದಲ್ಲಿ ಹೆಸರು ಗಳಿಸಿದ್ದ ನಾಟಿ ವೈದ್ಯೆ ದೇಯಿ ಬೈದಿತಿಯಾಗಿದ್ದರು.

    ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ತಾಯಿಯಾಗಿರುವ ಈಕೆ ತನ್ನ ಅಪೂರ್ವ ನಾಟಿ ವೈದ್ಯೆ ವೃತ್ತಿಯ ಮೂಲಕ ಆ ಕಾಲದಲ್ಲಿ ಖ್ಯಾತಿವೆತ್ತವಳಾಗಿದ್ದರು.

    ಸಾವಿರಾರು ಜನರ ರೋಗ-ರುಜಿನಗಳನ್ನಲ್ಲದೆ, ಊರಿನ ರಾಜನ ರೋಗವನ್ನೂ ದೂರಮಾಡಿದ ಈಕೆಯನ್ನು ತುಳುನಾಡಿನ ಜನ ದೈವದ ರೂಪದಲ್ಲಿ ಇಂದು ಆರಾಧಿಸುತ್ತಿದ್ದಾರೆ.

    ದೇಶವನ್ನು ಕಾಡುತ್ತಿರುವ ಕೊರೊನಾ ಮಾರಿಯನ್ನು ದೂರ ಮಾಡುವ ಶಕ್ತಿ ಈ ದೇಯಿ ಬೈದೆದಿಗಿದೆ ಎನ್ನುವ ಅಪಾರ ನಂಬಿಕೆಯಿಂದಾಗಿ,

    ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಗೆಜ್ಜೆಗಿರಿಯಲ್ಲಿರುವ ಈಕೆಯ ಮೂರ್ತಿಗೆ ನೂರು ಔಷಧೀಯ ಗಿಡಮೂಲಿಕೆಗಳನ್ನು ಸಂಗ್ರಹಿಸಿ ತಯಾರಿಸಲಾದ ದ್ರವ್ಯಗಳ ವಿಶೇಷ ಕಲಶಾಭಿಷೇಕ ಮಾಡಲಾಯಿತು.

    ಸಾಂಪ್ರಾದಾಯಿಕ ನಾಟಿ ವೈದ್ಯ ಪರಂಪರೆಗೆ ತನ್ನದೇ ಆದ ಮಹತ್ವವಿದ್ದು, ಪ್ರಸ್ತುತ ಸನ್ನಿವೇಶದಲ್ಲೂ ಇದು ಅತ್ಯಂತ ಪ್ರಭಾವಶಾಲಿ ಚಿಕಿತ್ಸೆಯಾಗಿಯೂ ಪ್ರಸಿದ್ಧಿಯಲ್ಲಿದೆ.

    ಇದೇ ಕಾರಣಕ್ಕಾಗಿಯೇ ಈ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಗಿಡ ಮೂಲಿಕೆಗಳನ್ನೇ ಇಲ್ಲಿ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿದೆ.

    ನಾಟಿ ಔಷಧಿಯಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿರುವಂತಹ ಅಮೃತಬಳ್ಳಿಯನ್ನು ಇಲ್ಲಿ ಪ್ರಸಾದದ ರೂಪದಲ್ಲಿ ನೀಡುವ ಮೂಲಕ ಎಲ್ಲಾ ಭಕ್ತರ ಆರೋಗ್ಯವನ್ನು ಇಲ್ಲಿನ ದೈವಗಳು ಕಾಪಾಡುತ್ತದೆ ಎನ್ನುವ ಅಪಾರ ನಂಬಿಕೆಯೂ ಇಲ್ಲಿದೆ.

    ಕೊರೊನಾ ರೋಗ ದೇಶದಲ್ಲೂ ಇದೀಗ ಹರಡುತ್ತಿರುವುದು ಎಲ್ಲರ ಆತಂಕಕ್ಕೂ ಕಾರಣವಾಗಿದೆ.

    ಈ ನಿಟ್ಟಿನಲ್ಲಿ ಸರಕಾರಗಳು ತಮ್ಮದೇ ಆದ ನೆಲೆಗಟ್ಟಿನಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

    ಆದರೆ ಸಂಪ್ರದಾಯವಾದಿಗಳಲ್ಲಿ ದೈವಗಳಲ್ಲಿ ಈ ಮಾರಿಯನ್ನು ತಡೆಗಟ್ಟುವ ಶಕ್ತಿಯಿದೆ ಎನ್ನುವ ಅಚಲ ನಂಬಿಕೆಯೂ ಅಡಗಿದೆ.

    ಇದೇ ಕಾರಣಕ್ಕಾಗಿ ಕೊರೊನಾ ವಕ್ಕರಿಸಿದ ಸಂಕಷ್ಟದ ಈ ಸಮಯದಲ್ಲಿ ಕರಾವಳಿಯಾದ್ಯಂತ ದೈವ-ದೇವರುಗಳಿಗೆ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತಿದೆ.

    ಇದೇ ರೀತಿ ಗೆಜ್ಜೆಗಿರಿ ನಂದನಬಿತ್ತಿಲ್ ಕ್ಷೇತ್ರದಲ್ಲೂ ದೇಯಿ ಬೈದೆತಿ ಕ್ಷೇತ್ರದಲ್ಲಿ ವಿಶೇಷ ಹೋಮ-ಹವನಗಳನ್ನೂ ನಡೆಸಲಾಯಿತು.

    ಬಳಿಕ ಕ್ಷೇತ್ರಕ್ಕೆ ಬಂದ ಎಲ್ಲಾ ಭಕ್ತಾಧಿಗಳಿಗೂ ದೈವದ ಮೂರ್ತಿಗೆ ಕಲಶಾಭಿಷೇಕ ಮಾಡಿದ ಔಷಧೀಯ ಗುಣಗಳ ದ್ರವ್ಯವನ್ನು ಸಿಂಪಡಿಸಲಾಯಿತು.

    ಸ್ವರಕ್ಷಣೆಯ ಜೊತೆ-ಜೊತೆಗೆ ದೈವ-ದೇವರುಗಳ ಅಭಯವೂ ಇದ್ದಲ್ಲಿ ಕೊರೊನಾದಂತಹ ಮಹಾಮಾರಿ ರೋಗ ಹುಲುಮಾನವರನ್ನು ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ನಂಬಿಕೆ ಸಂಪ್ರದಾಯವಾದಿಗಳದ್ದಾಗಿದೆ.

    ಹಾಗಾಗಿ ವಿಜ್ಞಾನದ ಜೊತೆಗೆ ದೈವಿಕ ಶಕ್ತಿಗೂ ಭಾರತದಲ್ಲಿ ಹೆಚ್ಚಿನ ಮಹತ್ವವೂವಿದೆ.

     

    Click to comment

    Leave a Reply

    Your email address will not be published. Required fields are marked *

    LATEST NEWS

    ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್‌ ವಿರುದ್ಧ ಗುಡುಗಿದ ಹರೀಶ್ ಪೂಂಜಾ

    Published

    on

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಬೆಳ್ತಂಗಡಿ ಶಾಸಕರ ವಿರುದ್ಧ ನೀಡಿದ ಹೇಳಿಕೆ ಈಗ ಅಸೋಸಿಯೇಷನ್‌ಗೆ ತಿರುಗುಬಾಣವಾಗಿದೆ. ಜಿಲ್ಲೆಯ ಕಬಡ್ಡಿ ಅಸೋಸಿಯೇಷನ್ ಬಗ್ಗೆ ಮಾತನಾಡುವ ಶಾಸಕ ಹರೀಶ್ ಪೂಂಜಾ ಅವರ ವಿರುದ್ದ ಪತ್ರಿಕಾಗೋಷ್ಠಿ ನಡೆಸಿದ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಹಲವು ಆರೋಪದ ಜೊತೆ ಸವಾಲು ಕೂಡಾ ಎಸೆದಿದ್ದರು. ಇದೀಗ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿಕೆಗೆ ಶಾಸಕ ಹರೀಶ್ ಪೂಂಜಾ ತಿರುಗೇಟು ನೀಡಿದ್ದಾರೆ.

    ಕಬಡ್ಡಿ ಅಸೋಸಿಯೇಷನ್‌ನಲ್ಲಿ ನಡೆದ ಅವ್ಯವಹಾರ ಹಾಗೂ ಕಬಡ್ಡಿ ಆಟಗಾರರಿಗೆ ಆಗುತ್ತಿದ್ದ ಅನ್ಯಾಯಗಳನ್ನು ದಾಖಲೆ ಸಮೇತ ಮಾದ್ಯಮದ ಮುಂದೆ ಇಟ್ಟಿದ್ದಾರೆ. ಖಾಸಗಿ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಹರೀಶ್ ಪೂಂಜಾ ತಾನು ರಾಜ್ಯದ ಕಬಡ್ಡಿ ಆಟಗಾರರ ಹಿತಕ್ಕಾಗಿ ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದೆ ಎಂದು ಹೇಳಿದ್ದಾರೆ. 2012 ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಜಿಲ್ಲೆಯ ಆಟಗಾರರಿಗೆ ಏನು ಮಾಡಿದ್ದಾರೆ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

    2009 ರಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಕೇಶ್ ಮಲ್ಲಿ ಸಂಸ್ಥೆಯ ಸಧಸ್ಯತ್ವವನ್ನು 2012 ರಲ್ಲಿ ಪಡೆದುಕೊಂಡು ಅಧ್ಯಕ್ಷರಾಗಿದ್ದಾರೆ. ಅದಾದ ಬಳಿಕ ನಿರಂತರ 2024 ರ ತನಕವೂ ಅಧಿಕಾರದಲ್ಲಿದ್ದು, ಎಷ್ಟು ಆಟಗಾರರನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಿದ್ದಾರೆ ಎಂಬ ಲೆಕ್ಕ ನೀಡಲಿ ಎಂದು ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲದೆ ದ.ಕ. ಜಿಲ್ಲಾ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್‌ನಲ್ಲಿ ನಡೆದ ಅವ್ಯವಹಾರಗಳನ್ನು ದಾಖಲೆ ಸಮೇತ ವಿವರಿಸಿದ್ದಾರೆ.

    ಅವ್ಯವಹಾರದ ಕುರಿತಾದ ದೂರಿನ ಮೇಲೆ ತನಿಕೆ ನಡೆಸಿದ ತನಿಖಾಧಿಕಾರಿಗಳು ಅಸೋಸಿಯೇಷನ್‌ಗೆ ಆಡಳಿತ ಅಧಿಕಾರಿ ನೇಮಕ ಮಾಡಲು ಶಿಫಾರಸು ಮಾಡಿದ್ದು, ಚುನಾವಣೆ ನಡೆಸದೆ ಅಧ್ಯಕ್ಷರು ಉಪಾಧ್ಯಕ್ಷರ ಆಯ್ಕೆ, ಚುನಅವಣೆ ಗೆಲ್ಲಲು ಅನರ್ಹ ಸದಸ್ಯರ ನೊಂದಣಿ, ಸದಸ್ಯ ಹಣವನ್ನು ಖಾತೆಗೆ ಹಾಕದೆ ವಂಚನೆ, ನಕಲಿ ದಾಖಲೆಯ ಸೃಷ್ಟಿ , ನಕಲಿ ಸಹಿ ಬಳಕೆ ಆರೋಪ ಹೀಗೆ ಹಲವಾರು ಲೋಪಗಳನ್ನು ತನಿಕಾ ಅಧಿಕಾರಿ ಗುರುತಿಸಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್‌ ಗೆ ಸರ್ಕಾರ ತಕ್ಷಣ ಆಡಳಿತ ಅಧಿಕಾರಿಯನ್ನು ನೇಮಕ ಮಾಡಬೇಕು ಮತ್ತು ಜಿಲ್ಲೆಯ ಕಬಡ್ಡಿ ಆಟಗಾರರ ಹಿತ ಕಾಪಾಡಬೇಕು ಎಂದು ಶಾಸಕ ಹರೀಶ್ ಪೂಂಜಾ ಸಹಕಾರಿ ಸಚಿವರಿಗೆ ಒತ್ತಾಯಿಸಿದ್ದಾರೆ.

    Continue Reading

    LATEST NEWS

    ನಿನ್ನೆ ಚಪ್ಪಲಿ ಧರಿಸಲ್ಲ ಎಂಬ ಶಪಥ… ಇಂದು ಅಂಗಿ ಬಿಚ್ಚಿ, ಚಾಟಿಯಿಂದ ಬಾರಿಸಿಕೊಂಡ ಅಣ್ಣಾಮಲೈ

    Published

    on

    ಮಂಗಳೂರು/ಚೆನ್ನೈ :  ನಿನ್ನೆಯಷ್ಟೇ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಡಿಎಂಕೆ(ದ್ರಾವಿಡ ಮುನ್ನೇತ್ರ ಕಳಗಂ)ಅಧಿಕಾರದಿಂದ ಇಳಿಯುವವರೆಗೆ ಪಾದರಕ್ಷೆ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಇದೀಗ ಮತ್ತೊಂದು ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ. ಈ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಡಿಎಂಕೆ ಸರ್ಕಾರ  ವಿಫಲವಾಗಿದೆ ಎಂದು ಆರೋಪಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಪ್ರತಿಭಟನೆ ನಡೆಸುತ್ತಿದ್ದಾರೆ. ತಮಗೆ ತಾವೇ ಹಲವಾರು ಬಾರಿ ಚಾಟಿಯೇಟು ಕೊಟ್ಟುಕೊಂಡಿದ್ದಾರೆ. ಡಿಎಂಕೆ ಸರ್ಕಾರ ಮತ್ತು ಪೊಲೀಸರು ಸಂ*ತ್ರಸ್ತೆಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಆಕೆಯ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಅಣ್ಣಾಮಲೈ ಆರೋಪಿದ್ದಾರೆ. ಇದು ಆಡಳಿತ ಅಸಮರ್ಥನೆಯನ್ನು ಪ್ರತಿಬಿಂಬಿಸುವ ನಾಚಿಕೇಡಿನ ಕೃ*ತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ಪಾದರಕ್ಷೆ ಧರಿಸುವುದನ್ನು ತ್ಯಜಿಸುವುದಾಗಿ ಘೋಷಿಸಿದ್ದ ಬಿಜೆಪಿ ನಾಯಕ ಕೆ ಅಣ್ಣಾಮಲೈ, ವಿಶ್ವವಿದ್ಯಾನಿಲಯದಲ್ಲಿ ಸಿಸಿಟಿವಿ ಕಣ್ಗಾವಲು ಕೊರತೆಯನ್ನು ಟೀಕಿಸಿದ್ದ ಅವರು, ಮಹಿಳೆಯರ ಸುರಕ್ಷತೆಗಾಗಿ ಮೀಸಲಾಗಿರುವ ನಿರ್ಭಯಾ ನಿಧಿಯನ್ನು ರಾಜ್ಯವು ಬಳಸುವುದನ್ನು ಖಂಡಿಸಿದ್ದರು.  ಈ ಪ್ರಕರಣದ ಎಫ್‌ಐಆರ್‌ನಲ್ಲಿ ಸಂತ್ರ*ಸ್ತೆಯ ಗುರುತನ್ನು ಬಹಿರಂಗಪಡಿಸಲಾಗಿದೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಮತ್ತು ಡಿಎಂಕೆ ಸರ್ಕಾರವು ಇದಕ್ಕೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದರು. ಇದೇ ವೇಳೆ ರಾಜ್ಯ ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಕಾನೂನು ಸಚಿವ ಎಸ್ ರಘುಪತಿ ಅವರನ್ನು ತರಾಟೆಗೆ ತೆಗೆದುಕೊಂಡರು.

    ಇದನ್ನೂ ಓದಿ : ‘ಮುದ್ದುಲಕ್ಷ್ಮಿ‌’ ನಟ ಚರಿತ್ ಮೇಲೆ ಲೈಂ*ಗಿಕ ದೌ*ರ್ಜನ್ಯ ಆ*ರೋಪ

    15 ಲೈಂ*ಗಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಇಷ್ಟು ದಿನ ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟಿದ್ದಕ್ಕೆ ಇಂದು ಅಮಾಯಕ ವಿದ್ಯಾರ್ಥಿನಿ ಮೇಲೆ ಈ ಕ್ರೌ*ರ್ಯ ನಡೆದಿದ್ದು, ಇದಕ್ಕೆ ಡಿಎಂಕೆ ಸರಕಾರವೇ ಸಂಪೂರ್ಣ ಹೊಣೆ. ಇದನ್ನು ತಮಿಳುನಾಡಿನ ಜನರು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು? ಆಡಳಿತ ಪಕ್ಷದವರಾಗಿದ್ದರೆ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂಬ ಕಾನೂನು ತಮಿಳುನಾಡಿನಲ್ಲಿ ಇದೆಯೇ? ಎಂದು ಅಣ್ಣಾಮಲೈ ಕಿಡಿಕಾರಿದ್ದಾರೆ.

    Continue Reading

    DAKSHINA KANNADA

    ‘ಕುಸಲ್ದ ಅರಸೆ’ ನವೀನ್ ಡಿ. ಪಡೀಲ್‌ಗೆ ‘ವಿಶ್ವಪ್ರಭಾ ಪುರಸ್ಕಾರ – 2025’

    Published

    on

    ಉಡುಪಿ: ತುಳು ರಂಗಭೂಮಿ ಮತ್ತು ಚಲನಚಿತ್ರ ನಟ ನವೀನ್‌ ಡಿ ಪಡೀಲ್‌ ಅವರು ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಕೊಡಲಾಗುವ ‘ವಿಶ್ವಪ್ರಭಾ ಪುರಸ್ಕಾರ-2025’ ಕ್ಕೆ ಆಯ್ಕೆಯಾಗಿದ್ದಾರೆ.

    11 ನವೆಂಬರ್ 1969 ನವೀನ್ ಡಿ ಪಡೀಲ್ ಒಬ್ಬ ಭಾರತೀಯ ರಂಗಭೂಮಿ ಮತ್ತು ಚಲನಚಿತ್ರ ನಟರಾಗಿ ಗುರುತಿಸಿಕೊಂಡಿದ್ದಾರೆ. ತುಳು ಭಾಷೆಯಲ್ಲಿ ಸಾವಿರಕ್ಕೂ ಹೆಚ್ಚು ನಾಟಕಗಳನ್ನು ಪ್ರದರ್ಶಿಸಿದ್ದಾರೆ . “ಮಾಸ್ಟರ್ ಆಫ್ ಕಾಮಿಡಿ ಅಂಡ್ ಟ್ರಾಜಿಡಿ” ಆಗಿ ನಟನೆಯ ಮೂಲಕ ತುಳು ರಂಗಭೂಮಿಯ ವಲಯಗಳಲ್ಲಿ ವ್ಯಾಪಕವಾಗಿ ಹೆಸರುವಾಸಿಯಾಗಿರುವ ವಿನ್ ಡಿ. ಪಡೀಲ್ ಅನ್ನು “ಕುಸಲ್ದ ಅರಸೆ” ಎಂದು ಕರೆಯಲಾಗುತ್ತದೆ.

    ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇದರ ವತಿಯಿಂದ ಪ್ರಭಾವತಿ ಹಾಗೂ ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಿತ ವಿಶ್ವಪ್ರಭಾ ಪುರಸ್ಕಾರ-2025 ಅನ್ನು ತುಳು ಹಾಗೂ ಕನ್ನಡ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದ ನವೀನ್ ಡಿ. ಪಡೀಲ್ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ವಿಶ್ವಪ್ರಭಾ ಪುರಸ್ಕಾರ ಸಮಿತಿ ಸಂಚಾಲಕ ಮರವಂತೆ ನಾಗರಾಜ ಹೆಬ್ಬಾರ್ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸ್ಥಾಪಕ ವಿಶ್ವನಾಥ ಶೆಣೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ಪುರಸ್ಕಾರವು 1ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ಫಲಕ ಒಳಗೊಂಡಿರುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಸಂಧ್ಯಾ ಶೆಣೈ, ವಿಶ್ವೇಶ್ವರ ಅಡಿಗ, ರವಿರಾಜ್ ಎಸ್.ಪಿ ಉಪಸ್ಥಿತರಿದ್ದರು.

    Continue Reading

    LATEST NEWS

    Trending