ಕೃಷ್ಣ ನಗರಿ ಉಡುಪಿಯಲ್ಲಿ ಶ್ರೀಕೃಷ್ಣ ನಿಗೆ ಪಟ್ಟಾಭಿರಾಮ ಅಲಂಕಾರದೊಂದಿಗೆ ವಿಶೇಷ ಪೂಜೆ..!
ಉಡುಪಿ: ಅತ್ತ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದಲ್ಲಿ ಭವ್ಯ ರಾಮಮಂದಿರದ ಭೂಮಿ ಪೂಜೆ ನಡೆಯುತ್ತಿರುವಾಗ ಇತ್ತ ಕೃಷ್ಣ ನಗರಿ ಉಡುಪಿಯಲ್ಲಿ ಶ್ರೀಕೃಷ್ಣ ನಿಗೆ ಪಟ್ಟಾಭಿರಾಮ ಅಲಂಕಾರದೊಂದಿಗೆ ವಿಶೇಷ ಪೂಜೆ ಸಲ್ಲಿಕೆಯಾಯಿತು.
ಕಾಣಿಯೂರು ವಿದ್ಯಾವಲ್ಲಭ ತೀರ್ಥರಿಂದ ಶ್ರೀ ಕೃಷ್ಣನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಬಿಲ್ಲು ಹಿಡಿದು ಸಿಂಹಾಸನದಲ್ಲಿ ಕುಳಿತ ರಾಮನ ಅಲಂಕಾರ ಮಾಡಿದ ಕಾಣಿಯೂರು ಶ್ರೀಗಳು ರಾಮನ ಪಕ್ಕದಲ್ಲಿ ಹನುಮ, ಲಕ್ಷ್ಮಣ, ಸೀತೆ ಮೂರ್ತಿ ಇಟ್ಟು ಶೃಂಗರಿಸಲಾಗಿತ್ತು.
ಪರ್ಯಾಯ ಅದಮಾರು ಶ್ರೀಗಳು ವಿಶೇಷ ಪೂಜೆ ನೆರವೇರಿಸಿಕೊಟ್ಟರು.