Connect with us

    bangalore

    ಮಧ್ಯರಾತ್ರಿವರೆಗೆ ಸುವರ್ಣಸೌಧದಲ್ಲಿ ಕಲಾಪ ನಡೆಸಿದ ಸ್ಪೀಕರ್ ಯು.ಟಿ ಖಾದರ್ !

    Published

    on

    ಮಂಗಳೂರು/ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವನ್ನು ಸ್ಪೀಕರ್ ಯು.ಟಿ ಖಾದರ್ ಅವರು ತಡರಾತ್ರಿವರೆಗೂ ನಡೆಸಿದ್ದಾರೆ. ಮಧ್ಯರಾತ್ರಿ 1 ಗಂಟೆಗೆ ಕಲಾಪ ಮುಂದೂಡಿದ ಸ್ಪೀಕರ್ ಕಲಾಪಕ್ಕೆ ಸಹಕರಿಸಿದ್ದಕ್ಕೆ ಧನ್ಯವಾದ ಹೇಳಿದರು.

    ಈ ವೇಳೆ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಸ್ಪೀಕರ್ ಗೆ ಗುಡ್ ಮಾರ್ನಿಂಗ್ ಹೇಳಿದರು. ತುಳು ಭಾಷೆಯನ್ನು 2ನೇ ಅಧಿಕೃತ ಭಾಷೆ ಮಾಡುವ ವಿಚಾರ ಸದನದ ಗಮನಕ್ಕೆ ತಂದರು. ಇದರ ಬಗ್ಗೆ ಚರ್ಚೆಗೆ ಕರಾವಳಿ ಶಾಸಕರು ಸಿಎಂ ಭೇಟಿ ಮಾಡಿ ಚರ್ಚಿಸೋಣ ಅಂತ ಸ್ಫೀಕರ್ ಹೇಳಿದರು. ಆಗ ಎದ್ದು ನಿಂತ ಕೃಷ್ಣ ಬೈರೇಗೌಡ ಈ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.

    ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬಿಮ್ಸ್ ಕರ್ಮಕಾಂಡದ ಬಗ್ಗೆ ಗಮನ ಸೆಳೆದರು. ಬಿಮ್ಸ್ ನಿರ್ದೇಶಕರನ್ನು ಸಸ್ಪೆಂಡ್ ಮಾಡಿ ಎಂದು ಹೇಳಿದ್ದಾರೆ. ಇನ್ನು ಕಾಂಗ್ರೇಸ್ ಸದಸ್ಯ ಯಶವಂತರಾಯಗೌಡ ಪಾಟೀಲ್ ವಿಜಯಪುರದಲ್ಲಿ ತೊಗರಿ ಬೆಳೆಗಾರರ ಸಂಕಷ್ಟಗಳನ್ನು ಬಿಚ್ಚಿಟ್ಟರು. ಸರ್ಕಾರ ರೈತರ ಸಹಾಯಕ್ಕೆ ಬರಬೇಕು ಎಂದು ಮನವಿ ಮಾಡಿದರು. ಇದು ಸಿಎಂ ಸಿದ್ದರಾಮಯ್ಯರವರ ಗಮನಕ್ಕೆ ಬಂದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಉತ್ತರ ಕೊಟ್ಟರು.

    ಇದನ್ನೂ ಓದಿ: ಸಿಗದ ಸಚಿವ ಸ್ಥಾನ ಏಕನಾಥ್ ಶಿಂಧೆ ಬಣದ ಮೊದಲ ವಿಕೆಟ್ ಪತನ !

    ಇನ್ನು ಗುರುಮಿಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ತಮ್ಮ ಗೋಳು ತೋಡಿಕೊಂಡರು. ಮಧ್ಯಾಹ್ನ 2.30ರಿಂದ ಕೂತಿದ್ದೇವೆ, 14.30 ಗಂಟೆ ಸದನ ನಡೆದಿದೆ. ಊಟ ಮಾಡಲು ಕೂಡ ಬಿಟ್ಟಿಲ್ಲ ಎಂದರು. ಈ ಮಾತಿಗೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ ಖಾದರ್ ಊಟ ಹೆಚ್ಚಾಗಿ ಜೀವ ಕಳೆದುಕೊಂಡಿದ್ದಾರೆ. ಆದರೆ ಊಟ ಕಡಿಮೆಯಾಗಿ ಯಾರೂ ಸತ್ತಿಲ್ಲ. ಒಂದು ಹೊತ್ತು ಊಟ ಬಿಟ್ರೆ ಏನೂ ಆಗಲ್ಲ ಎಂದು ಹೇಳಿದರು.

    ಹೆಚ್ಚು ಸಮಯವಾಗಿದೆ ಬೇಗ ನಮಗೂ ಮಾತನಾಡಲು ಅವಕಾಶ ಕೊಡಿ ಎಂದು ಕೆಲ ಶಾಶಕರು ಕೇಳಿದರು. ಇದಕ್ಕೆ ಉತ್ತರಿಸಿದ ಸ್ಪೀಕರ್ ಯುಟಿ ಖಾದರ್, ವಿಶ್ವಕಪ್ ಕ್ರಿಕೆಟ್ ಎಂದರೆ ನಿದ್ದೆ ಬಿಟ್ಟು ರಾತ್ರಿಯೆಲ್ಲಾ ಎದ್ದು ನೋಡುತ್ತಿರಲ್ವಾ?, ಅದೇ ರೀತಿ ಸದನಕ್ಕೂ ಸಹಕಾರ ಕೊಡಿ ಎಂದು ಹೇಳಿದರು. ದೇವದುರ್ಗ ಶಾಸಕಿ ಕರೆಮ್ಮ ನಾಯ್ಕ್, ಸಚಿವರ ಉತ್ತರಕ್ಕಾಗಿ ಕಾಯುತ್ತಿದ್ದರು.

    ಆಗ ಮಾತನಾಡುತ್ತಿದ್ದ ಇಂಡಿ ಶಾಸಕ ಯಶವಂತರಾಯಗೌಡ ಅವರು, ಶಾಸಕಿ ಕೆರಮ್ಮ ನಾಯ್ಕ್ ಅವರು ಜಾಸ್ತಿ ಸಮಯದಿಂದ ಕಾಯುತ್ತಿದ್ದಾರೆ. ಅವರಿಗೆ ಉತ್ತರ ಕೊಟ್ಟು ಕಳುಹಿಸಿ ಎಂದು ಮನವಿ ಮಾಡಿದರು. ಇನ್ನು ಬೆಳಗ್ಗೆ 10 ಗಂಟೆಗೆ ಕಲಾಪ ಮುಂದೂಡಿದಾಗ ಸದನದಲ್ಲಿ ಸ್ಪೀಕರ್ ಹಾಗೂ ಡೆಪ್ಯುಟಿ ಸ್ಪೀಕರ್ ಸೇರಿ ಕೆಲ ಶಾಸಕರು, ಸಚಿವರು ಹಾಜರಿದ್ದರು.

    bangalore

    ಕ್ರಿಸ್ಮಸ್ ಸ್ಪೆಷಲ್ ಆಫರ್; ಮಂಗಳೂರು – ಬೆಂಗಳೂರು ವಿಶೇಷ ರೈಲು ಸಂಚಾರ

    Published

    on

    ಮಂಗಳೂರು : ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬೆಂಗಳುರು – ಮಂಗಳೂರು ನಡುವೆ ಡಿಸೆಂಬರ್ 23 ಹಾಗೂ 27 ರಂದು ವಿಶೇಷ ರೈಲು ಸಂಚರಿಸಲಿದೆ.  ಮತ್ತೆ ಪುನಃ ಅದೇ ರೈಲು (06506) ಡಿಸೆಂಬರ್ 24 ಮತ್ತು 28 ರಂದು ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಮಧ್ಯಾಹ್ನ 1:00 ಗಂಟೆಗೆ ಹೊರಟು, ಅದೇ ದಿನ ರಾತ್ರಿ 10.30 ಕ್ಕೆ ಯಶವಂತಪುರ ತಲುಪಲಿದೆ.

    ಕೆಲಸದ ನಿಮಿತ್ತ ಮಂಗಳೂರಿನ ಹಲವು ಜನ ಬೆಂಗಳೂರಿನಲ್ಲಿ ವಾಸವಿದ್ದಾರೆ. ಇದೀಗ ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿದ್ದು, ಊರಿಗೆ ಮರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಅವರಿಗೆಲ್ಲಾ ಅನುಕೂಲವಾಗಲೆಂದು ಈ ವಿಶೇಷ ರೈಲು ಸಂಚಾರವನ್ನು ಅಳವಡಿಸಿದ್ದು, ಹಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇದರ ಫಲಾನುಭವಿಗಳಾಗಲಿದ್ದಾರೆ.

    ಈ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಪ್ರಯಾಣಿಕರು ಅಧಿಕೃತ (www.enquiry.indianrail.gov.in) ವೆಬ್​​ಸೈಟ್​ಗೆ ಭೇಟಿ ನೀಡಿ. NTES ಅಪ್ಲಿಕೇಶನ್​​ ಬಿಳಸಿ ಅಥವಾ 139 ನಂಬರಗೆ ಡಯಲ್ ಮಾಡುವ ಮೂಲಕ ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ/ನಿರ್ಗಮನ ಸಮಯ ಮತ್ತು ಇತರ ಮಾಹಿತಿಯನ್ನು ವಡೆದುಕೊಳ್ಳಬಹುದು.

    Continue Reading

    bangalore

    ಫಾರ್ಮ್ ಹೌಸ್ ನಲ್ಲಿ ದರ್ಶನ್ ರಿಲ್ಯಾಕ್ಸ್; ಬೆನ್ನು ನೋವು ಮಾಯಾ !

    Published

    on

    ಮಂಗಳೂರು/ಮೈಸೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪ ಹೊತ್ತಿದ್ದ ದರ್ಶನ್ ಸೇರಿ ಕೆಲವರು ಜೈಲಿನಿಂದ ರಿಲೀಸ್ ಆಗಿದ್ದಾರೆ. 7 ಮಂದಿ ಆರೋಪಿಗಳಿಗೆ ಸೆರೆವಾಸದಿಂದ ಮುಕ್ತಿ ಸಿಕ್ಕಿದೆ. ಇದರ ಮಧ್ಯೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ದಾಸ ಮೈಸೂರಿನಲ್ಲಿ ರಿಲ್ಯಾಕ್ಸ್ ಮೋಡ್‌ಗೆ ಜಾರಿದ್ದಾರೆ.

    ದರ್ಶನ್ ಗೆ ರೆಗ್ಯುಲರ್ ಬೇಲ್ ಸಿಕ್ಕಿದ್ದರೂ ಕೂಡ ಮೈಸೂರಿಗೆ ಹೋಗಲು ಅವಕಾಶ ಇರಲಿಲ್ಲ. ಇದರಿಂದ ದರ್ಶನ್ ಗೆ ಮೈಸೂರಿನ ಫಾರ್ಮ್ ಹೌಸ್ ಕಡೆ ಹೋಗಲು ತುಡಿತ ಹೆಚ್ಚಾಗಿತ್ತು. ಇದೇ ನಿಟ್ಟಿನಲ್ಲಿ ಸೆಷನ್ಸ್ ಕೋರ್ಟ್ ಗೆ ದಾಸ ಅರ್ಜಿ ಸಲ್ಲಿಸಿದರು. ಕೋರ್ಟ್ ಕೂಡ ದರ್ಶನ್ ಗೆ ಅನುಮತಿ ನೀಡಿತ್ತು. ಡಿಸೆಂಬರ್ 20ರಿಂದ ಜನವರಿ 05ರವರೆಗೆ 2ವಾರ ಪಮಿರ್ಷನ್ ಕೊಟ್ಟಿದೆ.

    ಇದನ್ನೂ ಓದಿ: ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಬಂಧನಕ್ಕೆ ಅರೆಸ್ಟ್ ವಾರೆಂಟ್ ಜಾರಿ !

    ಫಾರ್ಮ್ ಹೌಸ್ ನಲ್ಲಿ ದಾಸನ ಬೆನ್ನು ನೋವು ಮಾಯಾ !
    ದರ್ಶನ್ ಗೆ ಕೋರ್ಟ್ ಅನುಮತಿ ಕೊಟ್ಟ ಬೆನ್ನಲ್ಲೇ ನಿನ್ನೆ ಬೆಳಗ್ಗೆ ದರ್ಶನ್ ಮೈಸೂರಿಗೆ ಪ್ರಯಣಿಸಿದ್ದಾರೆ. ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರುವ ವಿನೀಶ್ ಕ್ಯಾಟವೇರಿ ಫಾರ್ಮ್ ಹೌಸ್​ನಲ್ಲಿ ರೆಸ್ಟ್‌ ಮಾಡುತ್ತಿದ್ದಾರೆ. ಫಾರ್ಮ್ ಹೌಸ್​ನಲ್ಲಿ ಪ್ರಾಣಿಗಳ ಜೊತೆ ಕಾಲಕಳೆಯುತ್ತ ದರ್ಶನ್ ಓಡಾಡುತ್ತಿದ್ದಾರೆ. ತೋಟದ ಕೆಲಸ ಮಾಡಿಸುತ್ತ ಬೆನ್ನುನೋವನ್ನೇ ಮರೆತಂತೆ ಕಾಣಿಸಿಕೊಂಡಿದ್ದಾರೆ.

    ಇಷ್ಟುದಿನ ಜೈಲಿನಲ್ಲಿ ಬಂಧಿಯಾಗಿದ್ದ ದರ್ಶನ್ ಈಗ ರಿಲ್ಯಾಕ್ಸ್ ಆಗಿದ್ದಾರೆ. ಆದರೆ ದಾಸನಿಗೆ ಮತ್ತೆ ಶಾಕ್ ಕೊಡಲು ಪೊಲೀಸ್ ಇಲಾಖೆ ಪ್ರಕರಣವನ್ನು ಸುಪ್ರೀಂಕೋರ್ಟ್ ಗೆ ಕೊಂಡೊಯ್ಯಲು ಸಜ್ಜಾಗಿದೆ.

     

    Continue Reading

    bangalore

    ವಿರಾಟ್ ಕೊಹ್ಲಿಗೆ ಶಾಕ್ ಕೊಟ್ಟ ಬಿಬಿಎಂಪಿ; ನೋಟಿಸ್ ನೀಡಿದ ಅಧಿಕಾರಿಗಳು !

    Published

    on

    ಮಂಗಳೂರು/ಬೆಂಗಳೂರು: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್, ಆರ್ ಸಿಬಿ ತಂಡದ ಆಟಗಾರ ವಿರಾಟ್ ಕೊಹ್ಲಿಗೆ ಬಿಬಿಎಂಪಿ ಶಾಕ್ ಕೊಟ್ಟಿದೆ.

    ಚಿನ್ನಸ್ವಾಮಿ ಸ್ಟೇಡಿಯಂ ಮುಂಭಾಗದಲ್ಲಿರುವ ಸ್ಟಾರ್‌ ಕ್ರಿಕೆಟರ್ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಒನ್ 8 ಕಮ್ಯೂನ್ ಬಾರ್ (One8 Commune) & ರೆಸ್ಟೋರೆಂಟ್‌ಗೆ ಬಿಬಿಎಂಪಿ ಬಿಸಿ ಮುಟ್ಟಿಸಿದೆ.

    ಅಗ್ನಿ ಶಾಮಕ ದಳದಿಂದ ನಕ್ಷೆ, ಪ್ರಮಾಣ ಪತ್ರ ಎನ್‌ಒಸಿ ಪರವಾನಿಗೆ ಪಡೆಯದೇ ಕಾನೂನು ಉಲ್ಲಂಘನೆ ಮಾಡಿದ್ದಕ್ಕೆ ನೋಟಿಸ್ ನೀಡಿದೆ. ಸಾಮಾಜಿಕ ಕಾರ್ಯಕರ್ತ ಹೆಚ್‌.ಎಂ ವೆಂಕಟೇಶ್ ಅನ್ನೋರು ಈ ಬಗ್ಗೆ ಬಿಬಿಎಂಪಿಗೆ ದೂರು ಕೊಟ್ಟಿದ್ದರು. ಇದನ್ನು ಆಧರಿಸಿ ಶಾಂತಿನಗರದ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

    ಇದನ್ನೂ ಓದಿ: ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಬಂಧನಕ್ಕೆ ಅರೆಸ್ಟ್ ವಾರೆಂಟ್ ಜಾರಿ !

    ಈಗಾಗಲೇ ಒಂದು ಬಾರಿ ನೋಟಿಸ್ ನೀಡಿದ್ರೂ ಕೊಹ್ಲಿ ಮಾಲೀಕತ್ವದ ಬಾರ್ ಆಂಡ್ ರೆಸ್ಟೋರೆಂಟ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಮತ್ತೆ ನೋಟಿಸ್ ಜಾರಿ ಮಾಡಿ, ಲಿಖಿತ ರೂಪದ ವಿವರಣೆ ಕೇಳಿದೆ. ಉತ್ತರ ನೀಡದೇ ಇದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.

    Continue Reading

    LATEST NEWS

    Trending