NATIONAL
ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿರ : ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ..
Published
4 years agoon
By
Adminಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿರ : ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ..
ಬೆಂಗಳೂರು : ಕೋವಿಡ್ 19 ಸೋಂಕಿನಿಂದ ಚೆನೈ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಪಂಚಭಾಷಾ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯಕೀಯ ಮಂಡಳಿ ಹೇಳಿದೆ.
ಕೊರೋನಾ ಸೋಂಕಿನ ಕಾರಣ ಆಗಸ್ಟ್ 5 ರಂದು ಎಸ್‌ಪಿಬಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ದಿನದಿಂದ ದಿನಕ್ಕೆ ಅವರ ಆರೋಗ್ಯ ಹದೆಗೆಟ್ಟಿದ್ದರಿಂದ ಆಗಸ್ಟ್ 13 ರ ಬಳಿಕ ಐಸಿಯುನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ವೆಂಟಿಲೇಟರ್ ಅಳವಡಿಸಿ ನುರಿತ ತಜ್ಞರ ತಂಡ ಚಿಕಿತ್ಸೆ ನಡೆಯುತ್ತಿದೆ.ಕೊರೋನಾ ಸೋಂಕಿಗೆ ತುತ್ತಾಗಿ ಕಳೆದ ಎರಡು ವಾರಗಳಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಪಂಚಭಾಷಾ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಎಂಜಿಎಂ ಆಸ್ಪತ್ರೆ ಎಸ್‌ಪಿಬಿ ಅವರ ಹೆಲ್ತ್ ಬುಲೆಟಿನ್ ಅನ್ನು ಬಿಡುಗಡೆ ಮಾಡಿದೆ.
ಎಸ್‌ಪಿಬಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಎಕ್ಮೋ ಮಷಿನ್, ವೆಂಟಿಲೇಟರ್ನಲ್ಲೇ ಇದ್ದಾರೆ, ಜೊತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ವೈದ್ಯರಿಂದ ಚಿಕಿತ್ಸೆ ಮುಂದುವರೆದಿದೆ ಎಂದು ಹೆಲ್ತ್ ಬುಲೆಟಿನ್‌ನಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.
ಕೊರೋನಾ ವೈರಸ್ ಕಾರಣ ಆಗಸ್ಟ್ 5 ರಂದು ಎಸ್‌ಪಿಬಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ದಿನದಿಂದ ದಿನಕ್ಕೆ ಅವರ ಆರೋಗ್ಯ ಹದೆಗೆಟ್ಟಿದ್ದರಿಂದ ಆಗಸ್ಟ್ 13 ರ ಬಳಿಕ ಐಸಿಯುನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ವೆಂಟಿಲೇಟರ್ ಅಳವಡಿಸಿ ನುರಿತ ತಜ್ಞರ ತಂಡದಿಂದ ಚಿಕಿತ್ಸೆ ನಡೆಯುತ್ತಿದೆ.
LATEST NEWS
ಮನಮೋಹನ್ ಸಿಂಗ್ ಸ್ಮಾರಕ ಜಟಾಪಟಿ; ಕಾಂಗ್ರೇಸ್ ವಿರುದ್ದ ಪ್ರಣಬ್ ಮುಖರ್ಜಿ ಪುತ್ರಿ ವಾಗ್ದಾಳಿ
Published
1 hour agoon
28/12/2024By
NEWS DESK3ಮಂಗಳೂರು/ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದ್ದು, ಇದರ ನಡುವೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪ್ರತ್ಯೇಕ ಸ್ಮಾರಕ ಕೋರಿ ಪ್ರಧಾನಿ ಮೋದಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ ಬಗ್ಗೆ, ಪ್ರಣಬ್ ಮುಖರ್ಜಿಯವರ ಪುತ್ರಿ ವಾಗ್ದಾಳಿ ನಡೆಸಿದ್ದಾರೆ.
‘ನನ್ನ ತಂದೆ (ಪ್ರಣಬ್ ಮುಖರ್ಜಿ) ನಿಧನರಾದಾಗ ಕಾಂಗ್ರೆಸ್ ಪಕ್ಷವು ಕಾರ್ಯಾಕಾರಿ ಸಮಿತಿ ಹಾಗೂ ಸಂತಾಪ ಸೂಚಕ ಸಭೆಯನ್ನು ಕರೆಯಲಿಲ್ಲ. ಈ ಬಗ್ಗೆ ಕೇಳಿದಾಗ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು, ರಾಷ್ಟ್ರಪತಿಯಾಗಿದ್ದವರಿಗೆ ನಾವು ಸಭೆ ನಡೆಸುವುದಿಲ್ಲ ಎಂದು ಹೇಳಿದ್ದರು. ನನ್ನ ತಂದೆಯವರು ಕಾಂಗ್ರೆಸ್ ನಲ್ಲಿದ್ದಾಗ ಕೆ.ಆರ್. ನಾರಾಯಣ್ ಅವರು ನಿಧನರಾಗಿದ್ದರು. ಸಂತಾಪ ಸಭೆಯನ್ನು ಖುದ್ದು ನನ್ನ ತಂದೆಯವರೇ ಆಯೋಜನೆ ಮಾಡಿದ್ದರು. ಈ ಎಲ್ಲಾ ಅಂಶಗಳನ್ನು ತಂದೆಯವರು ಬರೆದ ಡೈರಿಗಳಿಂದ ತಿಳಿದುಕೊಂಡಿದ್ದೇನೆ’ ಎಂದು ಶರ್ಮಿಷ್ಠಾ ಮುಖರ್ಜಿ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮಾಜಿ ಪ್ರಧಾನಿಗೆ ಪಾಕ್‌ನಲ್ಲಿ ಕಂಬನಿ..! ಶಾಲೆಗೆ ಮನಮೋಹನ್ ಸಿಂಗ್ ಹೆಸರು..!
ಸಿಂಗ್ ಅವರ ಅಂತಿಮ ಸಂಸ್ಕಾರವನ್ನು ನವದೆಹಲಿಯ ನಿಗಮಬೋಧ್ ಘಾಟ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಗೃಹ ಸಚಿವಾಲಯ ಶುಕ್ರವಾರ ತಿಳಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸ್ಮಾರಕ ನಿರ್ಮಿಸುವ ಜಾಗದಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕು ಎಂದು ಪ್ರಧಾನಿ ಮೋದಿಗೆ ಪತ್ರದ ಮೂಲಕ ತಿಳಿಸಿದ್ದರು.
‘ಸ್ಮಾರಕ ನಿರ್ಮಿಸುವ ಜಾಗದಲ್ಲಿಯೇ ಅಂತ್ಯಕ್ರಿಯೆ ನಡೆಸದೇ ದೇಶದ ಮೊದಲ ಸಿಖ್ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗುತ್ತಿದೆ’ ಎಂದು ಕಾಂಗ್ರೆಸ್ ಆರೋಪಿಸಿತ್ತು.
LATEST NEWS
ಕಿಸಾನ್ ಸಮ್ಮಾನ್ ನಿಧಿಯ 19ನೇ ಕಂತು ಸಿಗುವುದಿಲ್ಲ..! ನಿಮ್ಮ ಹೆಸರಿದೆಯಾ ನೋಡಿ..!
Published
3 hours agoon
28/12/2024By
NEWS DESK4ಮಂಗಳೂರು : ರೈತರಿಗೆ ಆರ್ಥಿಕ ಪ್ರಯೋಜನ ನೀಡಲು ಕೇಂದ್ರ ಸರ್ಕಾರ 2019 ರಲ್ಲಿ ಕಿಸಾನ್ ಸಮ್ಮಾನ್ ನಿಧಿ ಆರಂಭಿಸಿ ರೈತರ ಖಾತೆಗೆ ಹಣ ಜಮೆ ಮಾಡುತ್ತಿದೆ. ವಾರ್ಷಿಕವಾಗಿ 6 ಸಾವಿರ ನೀಡುವ ಈ ಯೋಜನೆಯಲ್ಲಿ ತಲಾ 2 ಸಾವಿರದಂತೆ ಮೂರು ಕಂತುಗಳಲ್ಲಿ ಈ ಹಣ ರೈತರ ಖಾತೆಗೆ ಬೀಳುತ್ತಿದೆ. ಆದ್ರೆ, ಈ ಯೋಜನೆಯ ಫಲಾನುಭವಿಗಳ ಲಿಸ್ಟ್‌ನಲ್ಲಿ ಇರುವ ಕೆಲವರು 19 ಕಂತಿನ ಹಣ ಪಾವತಿಯ ವೇಳೆ ಲಿಸ್ಟ್‌ನಿಂದ ಹೊರಬೀಳಲಿದ್ದಾರೆ. ಇದರಿಂದ ಅನೇಕ ರೈತರು ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನದಿಂದ ವಂಚಿತರಾಗಲಿದ್ದಾರೆ.
2019 ರಲ್ಲಿ ಆರಂಭವಾಗಿರುವ ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ಸಣ್ಣ ಪ್ರಮಾಣದ ಆರ್ಥಿಕ ಸಹಕಾರ ನೀಡುತ್ತಿದೆ. ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೆ ಜಮೆ ಆಗುತ್ತಿದ್ದು, ಇದರಿಂದ ಬಡ ರೈತರಿಗೆ ಸಾಕಷ್ಟು ಅನುಕೂಲ ಆಗಿದೆ. 2019 ರಿಂದ ಇಲ್ಲಿವರೆಗೆ 18 ಕಂತುಗಳಲ್ಲಿ ರೈತರು ತಮ್ಮ ಪಾಲಿನ ಹಣವನ್ನು ಪಡೆದುಕೊಂಡಿದ್ದಾರೆ. ಆದ್ರೆ 19 ನೇ ಕಂತಿನ ಹಣ ಎಲ್ಲಾ ರೈತರಿಗೆ ಸಿಗುವುದು ಅನುಮಾನವಾಗಿದೆ.
ಇದನ್ನೂ ಓದಿ : ಶಿವಣ್ಣ ಆಸ್ಪತ್ರೆಯಲ್ಲಿರುವಾಗಲೇ ಬಂತು ನೋವಿನ ಸುದ್ದಿ; ಗೀತಕ್ಕಾ ಭಾವನಾತ್ಮಕ ಪತ್ರ !
ಯಾಕಂದ್ರೆ ಅನೇಕ ರೈತರು ತಮ್ಮ e-KYC ಪೂರ್ಣಗೊಳಿಸಿಲ್ಲ ಹಾಗೂ ತಮ್ಮ ಜಮೀನು ಪರಿಶೀಲನೆಯ ವರದಿ ಕೂಡ ಸಲ್ಲಿಸಿಲ್ಲ. ಇದರಿಂದಾಗಿ ಫಲಾನುಭವಿಗಳ ಪಟ್ಟಿಯಿಂದ ರೈತರ ಹೆಸರನ್ನು ತೆಗೆದು ಹಾಕಲು ಸರ್ಕಾರ ಮುಂದಾಗಿದೆ. ಇಂತಹ ರೈತರನ್ನು ಅನರ್ಹರು ಎಂದು ಪರಿಗಣಿಸಿ ಅವರಿಗೆ ನೀಡಲಾಗುವ ಕಿಸಾನ್ ಸಮ್ಮಾನ್ ನಿಧಿಯನ್ನು ತಡೆ ಹಿಡಿಯಲಾಗುತ್ತದೆ. ಈ ಪಟ್ಟಿಯಲ್ಲಿ ನೀವು ಇದ್ದೀರಾ ಎಂದು ಪರಿಶೀಲಿಸಿಕೊಂಡು ತಕ್ಷಣ e-KYC ಹಾಗೂ ಜಮೀನು ಪರಿಶೀಲನೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ.
LATEST NEWS
ಪಂಚಭೂತಗಳಲ್ಲಿ ಲೀನರಾದ ಮನಮೋಹನ…ಧೀಮಂತ ನಾಯಕನಿಗೆ ಅಂತಿಮ ನಮನ
Published
4 hours agoon
28/12/2024By
NEWS DESK4ಮಂಗಳೂರು/ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂ*ತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ(ಡಿ.28) ನೆರವೇರಿತು.
ಮೂರನೇ ಮೋತಿಲಾಲ್ ನಗರದಲ್ಲಿರುವ ಮನಮೋಹನ್ ಸಿಂಗ್ ಅವರ ನಿವಾಸದಿಂದ ಪಾರ್ಥೀವ ಶರೀರವನ್ನು ದೆಹಲಿಯ ಎಐಸಿಸಿ ಪ್ರಧಾನ ಕಚೇರಿಗೆ ತರಲಾಯಿತು. ಅಲ್ಲಿ ಕಾಂಗ್ರೆಸ್ ಮುಖಂಡರು ಅಂತಿಮ ದರ್ಶನ ಪಡೆದ ಬಳಿಕ ಮೆರವಣಿಗೆ ಮೂಲಕ ನಿಗಮಬೋಧ್ ಘಾಟ್‌ಗೆ ಕೊಂಡೊಯ್ಯಲಾಯಿತು.
ಸಿಖ್ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದ್ದು, ಶ್ಲೋಕ ಪಠಣದ ಬಳಿಕ ಚಿತೆಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸ್ಪೀಕರ್ ಓಂ ಬಿರ್ಲಾ, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂದಿ, ಸೋನಿಯಾ ಗಾಂಧಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಭೂತಾನ್ ದೊರೆ ಜಿಗ್ಮ್ ಖೇಸರ್ ಹಾಗೂ ಅವರ ಪತ್ನಿ ರಾಣಿ ಜೆಟ್ಸುನ್ ಪೆಮಾ ವಾಂಗ್‌ಚುಕ್ ಕೂಡ ಭಾಗಿಯಾಗಿ, ಅಂತಿಮ ನಮನ ಸಲ್ಲಿಸಿದರು.
LATEST NEWS
ಮಾಜಿ ಪ್ರಧಾನಿಗೆ ಪಾಕ್‌ನಲ್ಲಿ ಕಂಬನಿ..! ಶಾಲೆಗೆ ಮನಮೋಹನ್ ಸಿಂಗ್ ಹೆಸರು..!
ಮುಂಬೈ ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಸಾವು !
ಪಂಚಭೂತಗಳಲ್ಲಿ ಲೀನರಾದ ಮನಮೋಹನ…ಧೀಮಂತ ನಾಯಕನಿಗೆ ಅಂತಿಮ ನಮನ
ಬಿಗ್ ಬಾಸ್ ಸೀಸನ್ 12ಕ್ಕೆ ಸಾರಥಿ ಇವರೇ ?
ರಸ್ತೆ ಮಧ್ಯೆ ಹೊ*ತ್ತಿ ಉ*ರಿದ ಎರಡು ಲಾರಿಗಳು
ಉಡುಪಿ : ಹೊಸ ವರ್ಷ ಮತ್ತು ವರ್ಷಾಂತ್ಯದ ರಜೆಗಳ ಹಿನ್ನಲೆ ಮಾರ್ಗ ಮಾರ್ಪಾಡು
Trending
- DAKSHINA KANNADA24 hours ago
ದಿ।ಮನಮೋಹನ್ ಸಿಂಗ್ ಸಹಿ ಇರುವ ರೂ 1ರ ನೋಟು ರೂ.100 ಕ್ಕೆ ಮಾರಾಟ…!
- FILM4 days ago
ಆ ಒಂದು ದೃಶ್ಯದಿಂದ ಪುಷ್ಪ 2 ಚಿತ್ರಕ್ಕೆ ಮತ್ತೆ ಸಂಕಷ್ಟ!
- FILM3 days ago
ಶಿವರಾಜ್ಕುಮಾರ್ಗೆ ಕ್ಯಾನ್ಸರ್ ತಗುಲಿದ್ದು ದೇಹದ ಈ ಭಾಗಕ್ಕೆ
- bangalore4 days ago
ಡಿಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಚಿನ್ನ ಖರೀದಿಸಿ ವಂಚನೆ; ನಟ ಧಮೇಂದ್ರ ವಿರುದ್ದ ಎಫ್ ಐ ಆರ್ ದಾಖಲು !