ದಕ್ಷಿಣ ಭಾರತದ ಪ್ರಖ್ಯಾತ ಫ್ಯಾಮಿಲಿ ಫ್ಯಾಶನ್ ಸ್ಟೋರ್ ‘ಜಯಲಕ್ಷ್ಮೀ’ ಇದೀಗ ಮಂಗಳೂರಿನಲ್ಲಿ..!
Published
5 years agoon
By
Adminದಕ್ಷಿಣ ಭಾರತದ ಪ್ರಖ್ಯಾತ ಫ್ಯಾಮಿಲಿ ಫ್ಯಾಶನ್ ಸ್ಟೋರ್ ‘ಜಯಲಕ್ಷ್ಮೀ’ ಇದೀಗ ಮಂಗಳೂರಿನಲ್ಲಿ..!
ಮಂಗಳೂರು : ಕೇರಳದಾದ್ಯಂತ ಮನೆ ಮಾತಾಗಿರುವ ದಕ್ಷಿಣ ಭಾರತದ ಪ್ರಖ್ಯಾತ ಫ್ಯಾಮಿಲಿ ಫ್ಯಾಶನ್ ಸ್ಟೋರ್ ‘ಜಯಲಕ್ಷ್ಮೀ’ ತನ್ನ ಮೆಗಾ ಶೋರೂಂ ನ್ನು ಕರಾವಳಿ ನಗರಿ ಮಂಗಳೂರಿನಲ್ಲಿ ಶುಭಾರಂಭಗೊಳಿಸಲಿದೆ.
ನಗರದ ಬಿಜೈನಲ್ಲಿ ಮಾರ್ಚ್ 12ರಂದು ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುಜೀತ್ ಕಾಮತ್ ಹೇಳಿದ್ದಾರೆ.
ಈ ಬಗ್ಗೆ ಮಂಗಳೂರು ನಗರದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಪ್ರೀಮಿಯಂ ಉಡುಪುಗಳು ಮತ್ತು ನವವಧುವಿನ ಉಡುಗೆ ತೊಡುಗೆಗಳ ಸಂಗ್ರಹಗಳ ಮಳಿಗೆ ಜಯಲಕ್ಷ್ಮೀ ತನ್ನ 5ನೇ ಶೋ ರೂಂ ಕರಾವಳಿಯ ಸುಂದರ ನಗರವಾದ ಮಂಗಳೂರಿನ ಹೃದಯಭಾಗವಾದ ಬಿಜೈನಲ್ಲಿ ಪ್ರಾರಂಭಿಸುತ್ತಿದೆ.
ಒಟ್ಟು 1 ಲಕ್ಷ ಚದರ ಅಡಿ ವಿಸ್ತೀರ್ಣದ ಶೋ ರೂಂ ಇದಾಗಿದ್ದು, ಫ್ಯಾಶನ್ ಪ್ರೀಯ ಕರಾವಳಿಯ ಜನತೆಗೆ ಸೇವೆ ನೀಡಲು ಸಿದ್ದವಾಗಿದೆ. ಕರ್ನಾಟಕದಲ್ಲೆ ಅತಿದೊಡ್ಡ ವಸ್ತ್ರಮಳಿಗೆ ಇದಾಗಿದ್ದು 4 ಮಹಡಿಗಳ ಬೃಹತ್ ಶಾಪಿಂಗ್ ಮಾಲ್‌ನಲ್ಲಿ ಅತ್ಯುತ್ತಮವಾದ ಅಧುನಿಕ ಹಾಗೂ ಪಾರಂಪರಿಕ ಉಡುಪುಗಳ ವರ ಮತ್ತು ವಧುವಿನ ಉಡುಗೆಗಳ ಬೃಹತ್ ಸಂಗ್ರಹವಿದೆ.
ವಧುವಿನ ಸೀರೆಗಳು, ಡಿಸೈನರ್ ವೇರ್, ಪುಟ್ಟ ಮಕ್ಕಳಿಂದ ವಯೋವೃದ್ದರವರೆಗೆ ಎಲ್ಲಾ ವಯೋಮಾನದ ಉಡುಗೆ ತೊಡುಗೆಗಳು ಜಯಲಕ್ಷ್ಮೀ ಫ್ಯಾಶನ್‌ನಲ್ಲಿ ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು.
ಚೆರ್ ಮ್ಯಾನ್ ನಾರಾಯಣ ಕಾಮತ್, ಸಂಸ್ಥೆಯ ಜಂಟಿ ಆಡಳಿತ ನಿರ್ದೇಶಕರಾದ ಗೋವಿಂದ್ ಕಾಮತ್ , ರಾಜೇಂದ್ರ ಉಳ್ಳಾಲ್. ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ವಿಡಿಯೋಗಾಗಿ..
https://www.youtube.com/watch?v=TA8cKspdXiY
You may like
LATEST NEWS
ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಸಹೋದರ ‘ಚೈತನ್ಯ’ ವಿಧಿವಶ.!
Published
5 minutes agoon
09/01/2025By
NEWS DESK2ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ದಿವಂಗತ ಅಪರ್ಣಾ ಸಹೋದರ ಚೈತನ್ಯ ಇಂದು ನಿಧನರಾಗಿದ್ದಾರೆ ಎಂದು ಅಪರ್ಣಾ ಪತಿ ನಾಗರಾಜ್ ರಾಮಸ್ವಾಮಿ ವಸ್ತಾರೆ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಅಪರ್ಣೆಯ ಅಣ್ಣ ಚೈತನ್ಯ ನಿನ್ನೆ ನಡುರಾತ್ರಿಯಲ್ಲಿ ಈ ಇಹತೊರೆದು ಸರಿದಿದ್ದಾರೆ. ತೀವ್ರತಮ ವಿಷಾದ. ಕೆಲವು ಹೂವುಗಳು ಅರಳದೆ ಮೊಗ್ಗಾಗಿಯೇ ಉದುರಿಹೋಗುತ್ತವೆ. ಇನ್ನು ಕೆಲವು ಅರಳಿ ಹಣ್ಣಾಗದೆ ಕಮರುತ್ತವೆ. ಇನ್ನೂ ಕೆಲವನ್ನು ಒತ್ತಾಯದಿಂದ ಕೊಯ್ದು ಕತ್ತರಿಸಲಾಗುತ್ತದೆ. ಯಾರು ಯಾವುದೆಂದು ನಾನು ಈವರೆಗೂ ಅರಿತಿಲ್ಲ. ಅರಿಯುವ ಜಿಜ್ಞಾಸೆಯೂ ಈ ಹೊತ್ತಿನದಲ್ಲ. ದಿನದಿಂದ ದಿನಕ್ಕೂ ನಾನು ಹೆಚ್ಚು ಹೆಚ್ಚು ಒಬ್ಬನಾಗುತ್ತಿರುವುದು ಯಾವೊತ್ತಿನ ಸತ್ಯ. ಬಹುಶಃ ಎಲ್ಲರದೂನು ಎಂದು ಹೇಳಿದ್ದಾರೆ.
LATEST NEWS
ತಿರುಪತಿ ದುರಂ*ತಕ್ಕೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸಂ*ತಾಪ
Published
16 minutes agoon
09/01/2025By
NEWS DESK4ಮಂಗಳೂರು/ನವದೆಹಲಿ : ತಿರುಪತಿಯಲ್ಲಿ ದುರಂ*ತವೊಂದು ಸಂಭವಿಸಿದೆ. ವೈಕುಂಠದ್ವಾರ ಸರ್ವದರ್ಶನದ ಟಿಕೆಟ್ ವಿತರಣಾ ಕೇಂದ್ರಗಳಲ್ಲಿ ಉಂಟಾದ ನೂಕುನುಗ್ಗಲಿನಿಂದಾಗಿ 7 ಮಂದಿ ಪ್ರಾ*ಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂ*ತಾಪ ಸೂಚಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಆಂಧ್ರಪ್ರದೇಶದ ತಿರುಪತಿಯಲ್ಲಿ ಸಂಭವಿಸಿದ ಕಾ*ಲ್ತುಳಿತ ಘಟನೆಯಿಂದ ನೋ*ವಾಗಿದೆ. ಘಟನೆಯಲ್ಲಿ ಗಾ*ಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಆಂಧ್ರ ಪ್ರದೇಶ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಸಂತಾಪ :
ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ದು*ರ್ಘಟನೆಯಲ್ಲಿ ಮೃ*ತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ದೇವರು ಕುಟುಂಬಸ್ಥರಿಗೆ ತಮ್ಮ ಆಪ್ತರನ್ನು ಕಳೆದುಕೊಂಡ ದು:ಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.
ಗುರುವಾರ(ಜ.9) ಬೆಳಗ್ಗೆ 5 ಗಂಟೆಯಿಂದ ಶ್ರೀನಿವಾಸಂ, ಸತ್ಯನಾರಾಯಣಪುರಂ ಮತ್ತು ಬೈರಾಗಿಪಟ್ಟೆಡ ಸೇರಿದಂತೆ 9 ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 94 ಕೌಂಟರ್‌ಗಳ ಮೂಲಕ ವೈಕುಂಠ ದ್ವಾರ ದರ್ಶನ ಟಿಕೆಟ್ ನೀಡಲು ಟಿಟಿಡಿ ನಿರ್ಧರಿಸಿತ್ತು. ಆದರೆ, ಟೋಕನ್‌ಗಳಿಗಾಗಿ ಬುಧವಾರ ಸಂಜೆಯೇ ಭಾರಿ ಜನರು ಜಮಾಯಿಸಿದ್ದರು.
ಇದನ್ನೂ ಓದಿ : ಸೈಬರ್ ವಂಚನೆಯ ನಷ್ಟಕ್ಕೆ ಬ್ಯಾಂಕುಗಳೇ ಹೊಣೆ ಎಂದ ಸುಪ್ರೀಂ ಕೋರ್ಟ್
ಈ ನಡುವೆ ಟಿಕೆಟ್ ಕೌಂಟರ್ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡ ಕಾರಣ ಅವರನ್ನು ಹೊರಕ್ಕೆ ಕರೆದೊಯ್ಯಲು ಗೇಟ್ ತೆರೆದಾಗ ಹೊರಗಿದ್ದವರೆಲ್ಲರೂ ಗುಂಪು ಗುಂಪಾಗಿಒಳನುಗ್ಗುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಕೆಲವರು ಕೆಳಗೆ ಬಿದ್ದಿದ್ದು ಕಾಲ್ತುಳಿತದಿಂದ ಅಸ್ವಸ್ಥಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಅವರಲ್ಲಿ 7 ಭಕ್ತರು ಸಾವನ್ನಪ್ಪಿದ್ದು, ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ.
LATEST NEWS
ಕೆಲಸದ ಒತ್ತಡಕ್ಕೆ ಬೇಸತ್ತು ಬಿಲ್ ಕಲೆಕ್ಟರ್ ಆತ್ಮಹತ್ಯೆ
Published
31 minutes agoon
09/01/2025By
NEWS DESK2ವಿಜಯನಗರ: ಕೆಲಸದ ಒತ್ತಡದಿಂದ ಬೇಸತ್ತ ನಗರ ಸಭೆಯ ಬಿಲ್ ಕಲೆಕ್ಟರ್ ಒಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಮೃತರನ್ನು ಮಂಜುನಾಥ್ ಎಂದು ತಿಳಿದುಬಂದಿದೆ. ಮಂಜುನಾಥ್ ಅವರು ಹೊಸ ವರ್ಷದ ಆರಂಭದ ದಿನವೇ ತಮಗೆ ಕೆಲಸದ ಒತ್ತಡದ ಇದೆ ಎಂದು ಹೇಳಿ ಪ್ಲಂಬಿಂಗ್‌ಗೆ ಬಳಸುವ ಗಮ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಮಾರ್ಜ್ ಆದ ಬಳಿಕ ಅವರು ಇಂದು ಮತ್ತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೂ ಮೊದಲು ಆತ್ಮಹತ್ಯೆಗೆ ಯತ್ನಿಸಿದ್ದ ಮಂಜುನಾಥ್ ಮೊಬೈಲ್ ನಲ್ಲಿ ಡೆತ್ ನೋಟ್ ಕುರಿತು ಉಲ್ಲೇಖಿಸಿದ್ದರು.
“ನನ್ನ ಸಾವಿಗೆ ನಗರಸಭೆಯ ಆಯುಕ್ತ ಚಂದ್ರಪ್ಪ ಮತ್ತು ಕಂದಾಯ ಅಧಿಕಾರಿ ನಾಗರಾಜ್ ಕಾರಣ. ಕೆಲಸದಿಂದ ಬೇರೆಡೆ ನಿಯೋಜಿಸಲು ಒಂದು ತಿಂಗಳಿಂದ ಹೇಳುತ್ತಿದ್ದರೂ ತೆಗೆಯುತ್ತಿಲ್ಲ. ರಾತ್ರಿ ನಿದ್ದೆ ಬರುತ್ತಿಲ್ಲ, ಅಧಿಕ ಒತ್ತಡ ಇರುವುದರಿಂದ ನಾನು ಸಾವಿಗೆ ಶರಣಾಗಿದ್ದೀನಿ” ಎಂಬ ಸಂದೇಶವನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಕಳುಹಿಸಿ ಮಂಜುನಾಥ ಬುಧವಾರ ಬೆಳಿಗ್ಗೆ ನಾಪತ್ತೆಯಾಗಿದ್ದರು. ಹಂಪಿ ರಸ್ತೆಯಲ್ಲಿ ಅವರನ್ನು ಪತ್ತೆ ಮಾಡಿ, ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಂಜುನಾಥ್ ಇಂದು ಮತ್ತೆ ಹೊಸಪೇಟೆ ತಾಲೂಕಿನ ಕಡ್ಡಿರಾಂಪುರದಲ್ಲಿ ಖಾಸಗಿ ಹೋಂ ಸ್ಟೇ ನಲ್ಲಿ ಮಂಜುನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೇಲಾಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ. ಘಟನಾ ಸ್ಥಳಕ್ಕೆ ಹಂಪಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
LATEST NEWS
ಸೈಬರ್ ವಂಚನೆಯ ನಷ್ಟಕ್ಕೆ ಬ್ಯಾಂಕುಗಳೇ ಹೊಣೆ ಎಂದ ಸುಪ್ರೀಂ ಕೋರ್ಟ್
ಓಂ ಶಕ್ತಿ ದರ್ಶನ ಪಡೆದು ವಾಪಾಸಾಗುತ್ತಿದ್ದಾಗ ದುರಂ*ತ; ಐವರು ಸಾ*ವು
KSRTC ಗುತ್ತಿಗೆ ಬಸ್ ದರದಲ್ಲೂ ಏರಿಕೆ: ಪ್ರತಿ ಕಿ.ಮೀ.ಗೆ 7 ರೂ. ಹೆಚ್ಚಳ
ಬಂಟ್ವಾಳ: ಇಡಿ ಅಧಿಕಾರಿಗಳ ಸೋಗಿನಲ್ಲಿ ಹಣ ದೋಚಿದ ಮನೆಗೆ ಸ್ಪೀಕರ್ ಯು.ಟಿ. ಖಾದರ್ ಭೇಟಿ
ತಿರುಪತಿ ಕಾಲ್ತುಳಿತದಲ್ಲಿ ಜೀವ ಬಿಟ್ಟ ಕರ್ನಾಟಕದ ಓರ್ವ ಮಹಿಳೆ
ಅಕ್ರಮ ಮರಳುಗಾರಿಕೆ ಅಡ್ಡೆಗೆ ಅಧಿಕಾರಿಗಳ ದಾಳಿ
Trending
- DAKSHINA KANNADA6 days ago
ಜಮೀನು ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್..!
- FILM1 day ago
ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್ಡೇ ಸಂಭ್ರಮ
- FILM3 days ago
ಯಶ್ ಫ್ಯಾನ್ಸ್ಗೆ ಸರ್ಪ್ರೈಸ್- ‘ಟಾಕ್ಸಿಕ್’ ಟೀಮ್ನಿಂದ ಸಿಕ್ತು ಸಿಹಿ ಸುದ್ದಿ
- BIG BOSS5 days ago
2ನೇ ಮದುವೆಗೆ ಸಜ್ಜಾದ ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್; ಹುಡುಗಿ ಯಾರು ಗೊತ್ತಾ..?