ಮಂಗಳೂರು : ಕಾಲೇಜಿನ ಪದವಿ ವಿದ್ಯಾರ್ಥಿನಿಯೊಬ್ಬಳು ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳೂರಿನ ಸೋಮೇಶ್ವರದ ರುದ್ರಬಂಡೆಯ ಸಮುದ್ರದ ಬಳಿ ನಡೆದಿದೆ. ಕೂಡಲೇ ತಡಿಯಲಿದ್ದ ಮೇಲುಗಾರರು ಯುವತಿಯನ್ನು ರಕ್ಷಿಸಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವತಿ ಮಾಡೂರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸಮುದ್ರಕ್ಕೆ ಹಾರಿದ ಯುವತಿಯನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.
ಮಂಗಳೂರಿನ ಕಾಲೇಜು ಒಂದರಲ್ಲಿ ವಿದ್ಯಾರ್ಥಿನಿಯು ಪದವಿ ಓದುತ್ತಿದ್ದಳು ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಸಿಕ್ಕ ರಕ್ಷಣಾ ಸಾಮಗ್ರಿ ಬಳಸಿ ವಿದ್ಯಾರ್ಥಿಯನ್ನು ಇದೀಗ ರಕ್ಷಣೆ ಮಾಡಲಾಗಿದೆ. ಘಟನೆಯ ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿ ಸುರಕ್ಷಿತವಾಗಿದ್ದಾಳೆ ಎಂದು ತಿಳಿದು ಬಂದಿದೆ.
ಮಂಗಳೂರು/ ಬೆಂಗಳೂರು : ಭಾರತ ತಂಡದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಕ್ರಿಕೆಟಿಗ ಯಜುವೇಂದ್ರ ಚಹಾಲ್. ಸದ್ಯ ಐಪಿಎಲ್ ಆಟದ ತಯಾರಿಯಲ್ಲಿದ್ದಾರೆ. ಇದೀಗ ಅವರ ಪತ್ನಿ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಪತಿ ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿದ್ದರೆ, ಇತ್ತ ಪತ್ನಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ.
ಆರ್ ಸಿ ಬಿ ತಂಡದಲ್ಲಿ ಹಲವು ವರ್ಷ ಆಡಿದ್ದ ಸ್ಪಿನ್ನರ್ ಚಹಾಲ್ ಬಳಿಕ ರಾಜಸ್ತಾನ್ ರಾಯಲ್ಸ್ ನಲ್ಲಿ ಆಡುತ್ತಿದ್ದರು. ಈ ಬಾರಿ ಹರಾಜಿನಲ್ಲಿ ಯಾರ ತೆಕ್ಕೆಗೆ ಸೇರಲಿದ್ದಾರೆ ಗೊತ್ತಿಲ್ಲ. ಈ ನಡುವೆ ಅವರ ಪತ್ನಿ ಧನಶ್ರೀ ವರ್ಮಾ ತೆಲುಗು ಸಿನಿಮಾವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಧನಶ್ರೀ ತಮ್ಮ ನೃತ್ಯದ ಮೂಲಕ ಈಗಾಗಲೇ ಗಮನ ಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಅವರು, ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ನೃತ್ಯದ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ, ರಿಯಾಲಿಟಿ ಶೋಗಳಲ್ಲೂ ಅವರು ಭಾಗಿಯಾಗಿದ್ದು, ಇದೀಗ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.
ದಿಲ್ ರಾಜು ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಹರ್ಷಿತ್ ರೆಡ್ಡಿ ಮತ್ತು ಹನ್ಸಿತಾ ರೆಡ್ಡಿ ನಿರ್ಮಿಸುತ್ತಿರುವ ಚಿತ್ರದಲ್ಲಿ ಧನಶ್ರೀ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ನಾಯಕಿ ಮಿಂಚುತ್ತಿರೋದು ಖ್ಯಾತ ಡ್ಯಾನ್ಸ್ ಮಾಸ್ಟರ್ ಯಶ್. ಸೀತಾ ಕಪೂರ್ ಹಾಗೂ ಧನಶ್ರೀ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನೃತ್ಯದ ಕುರಿತಾದ ಈ ಚಿತ್ರದ ಹೆಸರು ಆಕಾಶಂ ದಾಟಿ ವಸ್ತಾವಾ. ಶಶಿಕುಮಾರ್ ಮುತ್ತುಲೂರಿ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಕೆಲವು ದೃಶ್ಯಗಳು ಮುಂಬೈನಲ್ಲಿ ಚಿತ್ರೀಕರಿಸಲಾಗಿದ್ದು, ಉಳಿದ ಭಾಗದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯಲಿದೆ. ಒಟ್ಟಾರೆ, ತಮ್ಮ ನೆಚ್ಚಿನ ಕ್ರಿಕೆಟಿಗನ ಪತ್ನಿ ಸಿನಿರಂಗಕ್ಕೆ ಎಂಟ್ರಿಕೊಡುತ್ತಿರೋದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರೋದು ಸುಳ್ಳಲ್ಲ.
ದಿನದಿಂದ ದಿನಕ್ಕೆ ಬಿಗ್‌ಬಾಸ್ ಕನ್ನಡ 11ರ ಆಟದ ಕುತೂಹಲ ಹೆಚ್ಚುತ್ತಿದೆ. ಇದರ ಜೊತೆಗೆ ಮನೆಯಲ್ಲಿ ಜಗಳ, ಕುತಂತ್ರ, ವಾಗ್ವಾದ, ತಂತ್ರಗಾರಿಕೆ ಇದ್ದೇ ಇದೆ. ಈ ವಾರದ ಟಾಸ್ಕ್ ಮುಗಿದಿದ್ದು, ಮಂಜು ಮನೆಯ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಮೋಕ್ಷಿತಾ ಅವರು ಉತ್ತಮ ಮತ್ತು ರಜತ್ ಕಳಪೆಯಾಗಿದ್ದಾರೆ. ಇದೀಗ ಬಿಗ್‌ಬಾಸ್ ನಲ್ಲಿ ಇರುವ ಸ್ಪರ್ಧಿಗಳ ವಯಸ್ಸೆಷ್ಟು ಎಂಬುದನ್ನು ನೋಡೋಣ.
ಆಂಧ್ರಪ್ರದೇಶ: ಚಲಿಸುತ್ತಿರುವ ಆರ್‌ಟಿಸಿ ಬಸ್‌ನಲ್ಲಿ ಅಪರಿಚಿತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡು ಆತಂಕ ಮೂಡಿಸಿದ್ದಾನೆ. ಆಂಧ್ರಪ್ರದೇಶದ ಶ್ರೀಕಾಳಹಸ್ತಿಯಲ್ಲಿ ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಎರ್ಪೇಡು ಮಂಡಲದ ಅಂಜಿಮೇಡು ಬಳಿ ಯುವಕ ಬೆಳಿಗ್ಗೆ 5:30 ಕ್ಕೆ ಬಸ್ ಹತ್ತಿದ್ದಾನೆ. ಬೆಳಗಿನ ಬಸ್ ಆಗಿರುವುದರಿಂದ ಹೆಚ್ಚಿನ ಪ್ರಯಾಣಿಕರು ಇರಲಿಲ್ಲ. ಕೇವಲ ನಾಲ್ವರು ಪ್ರಯಾಣಿಕರಿದ್ದರು. ಆ ವೇಳೆ ಹಾಸಿಗೆಯಂತಹ ಹಗ್ಗದಿಂದ ಬಸ್‌ನ ಮೇಲ್ಬಾಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕ ನೇತಾಡುತ್ತಿರುವುದನ್ನು ಕಂಡು ಸಹ ಪ್ರಯಾಣಿಕರು ಕೂಡಲೇ ಕಂಡಕ್ಟರ್‌ಗೆ ಹೇಳಿದ್ದಾರೆ.
ಚಾಲಕ ಬಸ್ ನಿಲ್ಲಿಸಿ ರೇಣಿಗುಂಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.