Sunday, November 27, 2022

ಕೆಲವರು ಸಲ್ವಾರ್ ಕಮೀಜ್ ಬೇಕಂತಾರೆ ಮತ್ತೆ ಕೆಲವರು ಧೋತಿ ಇಷ್ಟ ಅಂತಾರೆ : ಹಿಜಾಬ್ ವಿಚಾರಣೆ ವೇಳೆ ಜಾಡಿಸಿದ ಸುಪ್ರೀಂ ಕೋರ್ಟ್..!

ಕೆಲವರು ಸಲ್ವಾರ್ ಕಮೀಜ್ ಬೇಕಂತಾರೆ ಮತ್ತೆ ಕೆಲವರು ಧೋತಿ ಇಷ್ಟ ಅಂತಾರೆ : ಹಿಜಾಬ್ ವಿಚಾರಣೆ ವೇಳೆ ಜಾಡಿಸಿದ ಸುಪ್ರೀಂ ಕೋರ್ಟ್..!

ನವದೆಹಲಿ: ಹಿಜಾಬ್​ ವಿವಾದ ಕುರಿತು ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಮುಂದುವರೆದಿದ್ದು ಕೆಲ ಹೊತ್ತು ಕಾವೇರಿದ ವಾಕ್ಸಮರಕ್ಕೂ ಕಾರಣವಾಗಿದೆ.

ಶಾಲಾ ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್​ ಧರಿಸಲು ನಿಷೇಧಿಸಿದ ಕುರಿತು ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಎರಡನೇ ದಿನದ ವಿಚಾರಣೆ ನಡೆಸುತ್ತಿದೆ.

ಹಿಜಾಬ್​ ಬಟ್ಟೆ ಧರಿಸುವುದು ಹಕ್ಕು ಎಂದು ಅರ್ಜಿದಾರರ ಪರ ವಕೀಲ ದೇವದತ್​ ಕಾಮತ್​ ಹೇಳಿದರೆ, ಬಟ್ಟೆ ಧರಿಸದೇ ಇರುವುದೂ ಕೂಡ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಪೀಠ ಹೇಳಿತು.

ಫಿರ್ಯಾದುದಾರರ ಪರವಾಗಿ ವಾದ ಮಂಡಿಸುತ್ತಿರುವ ದೇವದತ್​ ಕಾಮತ್​ ಒಂದು ಹಂತದಲ್ಲಿ ಹಿಜಾಬ್​ ಧರಿಸುವುದು ಮಹಿಳೆಯರ ಹಕ್ಕಾಗಿದೆ ಎಂದರು.

ಈ ವೇಳೆ ನ್ಯಾ.ಹೇಮಂತ್​ ಗುಪ್ತಾ ಅವರು ಬಟ್ಟೆ ಧರಿಸುವುದು ಹಕ್ಕಾದರೆ, ಧರಿಸದೇ ಇರುವುದು ಹಕ್ಕಿನಡಿಯೇ ಬರುತ್ತದೆ ಎಂದರು. ಈ ವೇಳೆ ಕಾಮತ್​ ಶಾಲೆಯಲ್ಲಿ ಯಾರೂ ಕೂಡ ಬಟ್ಟೆ ಕಳಚಲ್ಲ ಎಂದರು.

ಬಟ್ಟೆ ಹಕ್ಕಿನ ವ್ಯಾಪ್ತಿಯಲ್ಲಿ ವಾದ ಮಂಡಿಸಿದರೆ, ತಾರ್ಕಿಕ ಅಂತ್ಯ ಕಾಣದು ಎಂದು ಪೀಠ ಇದೇ ವೇಳೆ ಹೇಳಿತು.

ಮುಂದುವರಿದು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್​(ಶಿರಸ್ತ್ರಾಣ)ಗಾಗಿ ಒತ್ತಾಯಿಸುತ್ತಿದ್ದಾರೆ. ಉಳಿದ ಎಲ್ಲ ಸಮುದಾಯದ ವಿದ್ಯಾರ್ಥಿಗಳು ಅವರ ಬಟ್ಟೆಯ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ. ಶಾಲೆಯ ಸಮವಸ್ತ್ರವನ್ನು ಅವರು ಪಾಲಿಸುತ್ತಿದ್ದಾರಲ್ಲವೇ ಎಂದು ಪೀಠ ಪ್ರಶ್ನಿಸಿತು.

ಶಾಲೆಗೆ ಬರುವ ಅನೇಕ ವಿದ್ಯಾರ್ಥಿಗಳು ಧಾರ್ಮಿಕ ಸಂಕೇತವಾದ ರುದ್ರಾಕ್ಷಿ, ಶಿಲುಬೆಯನ್ನು ಧರಿಸಿರುತ್ತಾರೆ ಎಂದು ವಕೀಲ ಕಾಮತ್ ಹೇಳಿದಾಗ, “ಅದು ಬಟ್ಟೆಯ ಒಳಗಿರುತ್ತದೆ.

ರುದ್ರಾಕ್ಷಿ, ಶಿಲುಬೆಯನ್ನು ಯಾರೂ ಕೂಡ ಅಂಗಿಯ ಮೇಲೆ ಹಾಕಿಕೊಂಡು ಪ್ರದರ್ಶಿಸುವುದಿಲ್ಲವಲ್ಲ ಎಂದು ನ್ಯಾಯಾಧೀಶರು ಹೇಳಿದರು.

ವಾದ- ಪ್ರತಿವಾದ ಮಂಡನೆ ಬಳಿಕ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಇಂದು ಗುರುವಾರ 11.30 ಕ್ಕೆ ವಿಚಾರಣೆ ಆರಂಭಿಸಿ ಅರ್ಜಿ ವಿಚಾರಣೆ ಅಂತ್ಯಗೊಳಿಸಲು ಕೋರ್ಟ್​ ನಿರ್ಧರಿಸಿದೆ.

LEAVE A REPLY

Please enter your comment!
Please enter your name here

Hot Topics

ವಿಶ್ವದಲ್ಲೇ ಬೃಹತ್ ಗಾತ್ರದ ಮೂತ್ರಕೋಶದ ಕಲ್ಲು ಹೊರತೆಗೆದ ಮಣಿಪಾಲ ವೈದ್ಯರು..!

ಉಡುಪಿ: ವ್ಯಕ್ತಿಯೋರ್ವರ 11.5 x 7.5 ಸೆಂಮೀ ಅಳತೆಯ 672 ಗ್ರಾಂ ತೂಕದ ಮೂತ್ರಕೋಶದ ಕಲ್ಲನ್ನು ಮಣಿಪಾಲದ ಕಸ್ತೂರಿ ಬಾ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ನಡೆಸಿ ಹೊರೆ ತೆಗೆದಿರುವ ಘಟನೆ ನಡೆದಿದೆ. ಇದು ವಿಶ್ವದಲ್ಲಿ ಇಲ್ಲಿಯವರೆಗೆ...

ಮಂಗಳೂರಿನಲ್ಲಿ ಹಣದ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ-ಖ್ಯಾತ ವೈದ್ಯೆ ಸಹಿತ ಮೂವರ ವಿರುದ್ಧ ಸಂತ್ರಸ್ತ ಯುವತಿಯಿಂದಲೇ ದೂರು ದಾಖಲು

ಮಂಗಳೂರು: ಮುಸ್ಲಿಂ ಯುವಕನೊಬ್ಬ ಮತಾಂತರಗೊಳಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿಯೋರ್ವಳು ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.ಆಕೆ ನೀಡಿರುವ ದೂರಿನಲ್ಲಿ 'ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಗ ಬಿಕರ್ನಕಟ್ಟೆಯ ಕೈಕಂಬದಲ್ಲಿರುವ ಖಲೀಲ್‌ನ...

ಬಾಂಬ್ ಸ್ಫೋಟ ಆರೋಪಿ ಶಾರೀಕ್‌ಗೆ ಆಸ್ಪತ್ರೆಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್‌-ಸ್ಪೋಟದ ಬೆನ್ನಲ್ಲೇ ಟ್ವೀಟ್‌ ಮಾಡಿದ ಝಾಕೀರ್‌…

ಮಂಗಳೂರು: ಮಂಗಳೂರಿನಲ್ಲಿ ರಿಕ್ಷಾದಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಇದೀಗ ಶಾರೀಕ್‌ ಜೀವಕ್ಕೂ ಆಪತ್ತು ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಬಳಿ ಪೊಲೀಸರು ಬಿಗು...