ನಾಗಾಂವ್: ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿರುವ ಆರೋಪಿಗಳ ಮನೆಗಳನ್ನು ನಾಗಾಂವ್ ಜಿಲ್ಲಾಡಳಿತದ ಅಧಿಕಾರಿಗಳು ಜೆಸಿಬಿ ಮೂಲಕ ಮನೆ ನೆಲಸಮಗೊಳಿಸಿದ್ದಾರೆ.
ಸಲೋನಬೋರಿ ಗ್ರಾಮದ ಸುಮಾರು 40 ಜನರ ಗುಂಪೊಂದು ಸ್ಥಳೀಯ ನಿವಾಸಿಯೊಬ್ಬರ ಕಸ್ಟಡಿ ಸಾವಿನ ಪ್ರಕರಣದ ನಂತರ ಶನಿವಾರ ಮಧ್ಯಾಹ್ನ ಧಿಂಗ್ ಪ್ರದೇಶದ ಬಟದ್ರಾವ ಪೊಲೀಸ್ ಠಾಣೆಯ ಒಂದು ಭಾಗಕ್ಕೆ ಬೆಂಕಿ ಹಚ್ಚಿತ್ತು. ನಾಗಾಂವ್ ಜಿಲ್ಲಾಡಳಿತ ಶನಿವಾರ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿದ್ದು,
ಪೊಲೀಸರು ಬಟದ್ರಾವ ಠಾಣೆಯ ಪ್ರಭಾರಿ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ಠಾಣೆಯಿಂದ 6 ಕಿಮೀ ದೂರದಲ್ಲಿರುವ ಗ್ರಾಮಕ್ಕೆ ಬುಲ್ಡೋಜರ್ ಬಂದಿದ್ದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಭಾಗಿಯಾಗಿದ್ದವರ ಮನೆಗಳನ್ನು ಧ್ವಂಸಗೊಳಿಸಿದ್ದಾರೆ.