Wednesday, May 18, 2022

ಬಿಜೆಪಿ ರಾಜ್ಯಾಧ್ಯಕ್ಷರ ರಾಜೀನಾಮೆ ಕೇಳಲು ನೀವು ಕೊಟ್ಟ ಭಿಕ್ಷೆ ಅಲ್ಲ: ಜಿಲ್ಲಾಧ್ಯಕ್ಷರ ಖಡಕ್‌ ಉತ್ತರ

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ರಾಜೀನಾಮೆ ಕೇಳಿದರೆ ಅದು ನೀವು ಕೊಟ್ಟಿರುವ ಭಿಕ್ಷೆ ಅಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಬರೆದ ಮಾತ್ರಕ್ಕೆ ಸಂಘಟನೆ ಒಡೆಯುವುದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ ಗರಂ ಆಗಿದ್ದಾರೆ.


ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಲದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಸೋಷಿಯಲ್‌ ಮೀಡಿಯಾದಲ್ಲಿ ದುರ್ಬಲ ರಾಜಾಧ್ಯಕ್ಷ ಎಂದು ಹೇಳಿಕೆ ಕೊಟ್ಟ ಕೂಡಲೇ ಅವರು ದುರ್ಬಲವಾಗುವುದಿಲ್ಲ.

ರಾಜಾಧ್ಯಕ್ಷ ಹುದ್ದೆ ಸಂಘಟನೆ ಅವರಿಗೆ ಕೊಟ್ಟಿರುವ ಜವಾಬ್ದಾರಿ. ಇದೆಲ್ಲ ಯಾರು ಪೇಮೆಂಟ್‌ ಕೊಡುತ್ತಾರೆ ಅವರಿಗೆ ಬರೆಯುವ ಸಂಸ್ಥೆಗಳು.

ನೈಜ ಕಾರ್ಯಕರ್ತರು ಇದನ್ನು ಮಾಡಿಲ್ಲ ಎಂದರು.
ಕೆಲವರು ಸಂಘಟನೆಯಲ್ಲಿ ಪದವಿ ಅಥವ ಹುದ್ದೆ ಕೇಳಿ ಬರುತ್ತಾರೆ ಸಿಗದಿದ್ದಾಗ ಈ ರೀತಿ ಬರೆಯುತ್ತಾರೆ ಎಂದು ವಾಗ್ದಾಳಿ ನಡೆಸಿದ ಅವರು ಕೆಲವರು ಸೋಷಿಯಲ್‌ ಮೀಡಿಯಾದ ಮೂಲಕ ಎಂಪಿ, ಎಂಎಲ್‌ ಎ ಆಗಬಹುದು ಎಂದು ತಿಳಿದುಕೊಂಡಿದ್ದಾರೆ.

ಇದು ಮೂರ್ಖತನದ ಪರಮಾವಧಿ. ನಮ್ಮ ಸಂಸದರಿಂದ ಸಹಾಯ ಪಡೆದವರೇ ಸಂಸದರ ವಿರುದ್ಧ ಬರೆದಿದ್ದಾರೆ ಎಂದರು.
ರಾಜ್ಯಾಧ್ಯಕ್ಷರ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸಹ ಶಹಬ್ಬಾಸ್‌ ಗಿರಿ ವ್ಯಕ್ತಪಡಿಸಿದ್ದಾರೆ. ಅವರು ಚುನಾವಣೆ ಎದುರಿಸಿ ಪಕ್ಷವನ್ನು ಗೆಲ್ಲಿಸಿ ಬಲಪಡಿಸಿದ್ದಾರೆ.

ಇದರ ಹಿಂದೆ ಅತೃಪ್ತ ಆತ್ಮ ಹಾಗೂ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಬಿಜೆಪಿ ಹಾಗೂ ಸಂಘಟನೆ ನಡುವೆ ಬಿರುಕು ಮೂಡಿಸಿ ಬಿಜೆಪಿಯ ಭದ್ರಕೋಟೆ ದ.ಕ ಜಿಲ್ಲೆಯನ್ನು ಒಡೆಯಬೇಕು ಎನ್ನುವ ಹುನ್ನಾರ ನಡೆಯುತ್ತಿದೆ.

ಸೋಷಿಯಲ್‌ ಮೀಡಿಯಾ ಮೂಲಕ ಹಿಂದೂ ಸಂಘಟನೆ ಕಟ್ಟಲು ಸಾಧ್ಯವಿಲ್ಲ. ಜೊತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದ ಮಾತ್ರಕ್ಕೆ ಸಂಘಟನೆ ಒಡೆಯುವುದಿಲ್ಲ ಎಂದರು.


ರಾಜ್ಯಾಧ್ಯಕ್ಷ ಮೂಲತಃ ಹಿಂದೂ ಸಂಘಟನೆಯಿಂದ ಬಂದವರು, ಈಗ ತೆಗಳಿದವರು ಯಾಕೆ ಈ ಹಿಂದೆ ಹೊಗಳಿದರು ಎಂದು ಪ್ರಶ್ನಿಸಿದ ಅವರು ಇವತ್ತು ರಾಜಕಾರಣದ ವ್ಯವಸ್ಥೆಯಲ್ಲಿ ಹಲವರು ರಾಜಕೀಯ ಪಕ್ಷಗಳಿಗೆ ಸಲಹೆಗಾರರಾಗಿದ್ದಾರೆ ಇಂದು ಬಿಜೆಪಿಗೆ, ನಾಳೆ ಕಾಂಗ್ರೆಸ್‌ಗೆ ನಾಡಿದ್ದು ಮತ್ತೊಂದು ಪಕ್ಷಕ್ಕೆ ಸಲಹೆಗಾರರಾಗ್ತಾರೆ. ಚುನಾವಣಾ ಸಮಯದಲ್ಲಿ ಕೆಲವು ಸಂಸ್ಥೆಗಳಿದ್ದವು, ಅವರು ಯಾರು ಪೇಮೆಂಟ್‌ ಕೊಡುತ್ತಾರೆ ಅವರಿಗೆ ಬರೆಯುತ್ತಾರೆ ಅಂತವರೇ ಬರೆದಿದ್ದಾರೆ ಎಂದ ಅವರು ನೈಜ ಕಾರ್ಯಕರ್ತರು ಈ ರೀತಿ ಬರೆಯುವುದಿಲ್ಲ ಎಂದರು.

ಈ ವೇಳೆ ಕಸ್ತೂರಿ ಪಂಜ, ರಾಧಾಕೃಷ್ಣ, ಸುಧೀರ್‌ ಕುಮಾರ್‌, ರವಿಶಂಕರ್‌ ಮಿಜಾರು, ಸುಧೀರ್‌ ಕುಮಾರ್‌ ಶೆಟ್ಟಿ ಇದ್ದರು.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳದಲ್ಲಿ ಬೈಕ್ ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ

ಬಂಟ್ವಾಳ: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸ್ ಠಾಣೆಯ ‌ಇನ್ಸ್‌ಪೆಕ್ಟರ್ ವಿವೇಕಾನಂದ ಅವರ ನೇತೃತ್ವದ ತಂಡ ಬಂಧಿಸಿದೆ.ಅಕ್ಬರ್, ಸಿದ್ದೀಕ್, ಸಮೀರ್ ಬಂಧಿತ ಆರೋಪಿಗಳು. ಇತ್ತೀಚೆಗೆ ಬಂಟ್ವಾಳ ನಗರ...

ರಾಜ್ಯ ಸರ್ಕಾರ ನಮ್ಮ ಅಧಿಕಾರ ಕಸಿದುಕೊಂಡಿದೆ: ಹೈಕೋರ್ಟ್‌ ಮುಂದೆ ಚುನಾವಣಾ ಆಯೋಗ ಅಳಲು

ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ಸಾಧ್ಯವಾಗದ ರೀತಿಯಲ್ಲಿ ರಾಜ್ಯ ಸರ್ಕಾರ ನಮ್ಮ ಅಧಿಕಾರ ಕಸಿದುಕೊಂಡಿದೆ ಎಂದು ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‌ ಮುಂದೆ ತನ್ನ ಅಸಹಾಯಕತೆ...

ಛೀ ಅಸಹ್ಯ: ಮಂಗಳೂರಿನಲ್ಲಿ ಗುದನಾಳದಲ್ಲಿಟ್ಟು ಸಾಗಿಸುತ್ತಿದ್ದ ಚಿನ್ನ ವಶಕ್ಕೆ

ಮಂಗಳೂರು: ಬೈಂದೂರಿನ ಪ್ರಯಾಣಿಕನೋರ್ವ ಬಹರೈನ್‌ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.ಪ್ರಯಾಣಿಕನೋರ್ವ 736 ಗ್ರಾಂ ಚಿನ್ನವನ್ನು ಗುದನಾಳದಲ್ಲಿಟ್ಟು ಸಾಗಿಸುತ್ತಿದ್ದ ವೇಳೆ ಅಧಿಕಾರಿಗಳು ಪತ್ತೆ...