ಮಂಗಳೂರು : ಅಲ್ಪಸಂಖ್ಯಾತರ ಭವನಕ್ಕೆ ಕಲ್ಲು ತೂರಾಟದ ಘಟನೆ ಮಾಸುವ ಮುನ್ನವೇ ಮಂಗಳೂರಿನಲ್ಲಿ ಪಂಪ್‌ವೆಲ್ ಮಸೀದಿಗೆ ದುಷ್ಕರ್ಮಿಗಳು ಸೋಡಾ ಬಾಟಲ್ ಎಸೆದಿರುವ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ.
ಇಂದು ಬೆಳಿಗ್ಗೆ ನಗರದ ಪಂಪ್‌ವೆಲ್‌ನಲ್ಲಿರುವ ಮಸ್ಜಿದುತ್ತಖ್ವಾ ಮಸೀದಿ ಮೇಲೆ ಬಾಟಲ್ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಸೀದಿಯ ಕಾವಲುಗಾರನ ಕಣ್ಣ ತಪ್ಪಿಸಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಉಪ ವಿಭಾಗ ಎಸಿಪಿ ಕೋದಂಡರಾಮ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರು : ಚಂದನವನದಲ್ಲಿ ಸಿನಿಮಾ ನಿರ್ಮಾಣ ಮಾಡಿ ಗೆದ್ದಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಕೋಸ್ಟಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರ ಗೋಲ್ಡನ್ ಮೂವೀಸ್ ಸಂಸ್ಥೆ ತುಳು ಸಿನೆಮಾ ಇಂಡಸ್ಟ್ರಿಗೆ ಕಾಲಿಟ್ಟಿದೆ. ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಈ ಪ್ರೊಡಕ್ಷನ್‌ನ ಮೊದಲ ತುಳು ಸಿನಿಮಾ ಪ್ರೊಡಕ್ಷನ್ ನಂ 1ಗೆ ಮುಹೂರ್ತ ನೆರವೇರಿಸಲಾಗಿದೆ.
ಉದ್ಯಮಿ ಎಂ ಆರ್ ಜಿ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅವರು ಮೊದಲ ಕ್ಲ್ಯಾಪ್ ಮಾಡಿದ್ದು, ಕುದ್ರೋಳಿ ಕ್ಷೇತ್ರದ ನವ ನಿರ್ಮಾಣದ ರೂವಾರಿ ಜನಾರ್ದನ ಪೂಜಾರಿ ಅವರ ಆಶೀರ್ವಾದೊಂದಿಗೆ ನಟ ಗಣೇಶ್ ಕ್ಯಾಮೆರಾ ರೋಲ್ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ್ ಕಾಮತ್, ರಾಜೇಶ್ ನಾಯಕ್, ಉದ್ಯಮಿ ರೋಹನ್ ಮೊಂತೆರೋ, ಲೀಲಾಕ್ಷ ಕರ್ಕೇರ , ತುಳು ಸಿನೆಮಾದ ಕಲಾವಿದರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಶುಭ ಹಾರೈಸಿದ್ದಾರೆ.
ಗಣೇಶ್ ಹೇಳಿದ್ದೇನು?
ಈ ಬಗ್ಗೆ ಮಾಹಿತಿ ನೀಡಿದ ನಟ ಗಣೇಶ್ , ನಾಲ್ಕು ವರ್ಷದ ಹಿಂದೆ ಮಂಗಳೂರಿಗೆ ಬಂದಾಗ ತುಳು ಸಿನೆಮಾ ಮಾಡಬೇಕು ಅಂತ ಯೋಚನೆ ಬಂದಿತ್ತು. ಉತ್ತಮ ಕಥೆಗಾಗಿ ಕಾಯುತ್ತಿದ್ದು, ಈಗ ಅಂತಹ ಒಂದು ಉತ್ತಮ ಕಥೆ ಸಿಕ್ಕಿದೆ. ಹೀಗಾಗಿ ಶಿಲ್ಪಾ ಈ ಸಿನೆಮಾ ಮಾಡಲು ಮುಂದಾಗಿದ್ದಾಳೆ. ನನ್ನ ನಂಟು ತುಳುನಾಡಿನ ಜೊತೆ ಜಾಸ್ತಿ ಇದ್ದ ಕಾರಣ ಅವಕಾಶ ಸಿಕ್ಕರೆ ಈ ಸಿನೆಮಾದಲ್ಲಿ ಹಾಡಿನ ಸೀನ್‌ನಲ್ಲಾದ್ರೂ ಕಾಣಸಿಕೊಳ್ಳುವುದಾಗಿ ಹೇಳಿದ್ದಾರೆ.
ಪ್ರೊಡಕ್ಷನ್ ನಂಬರ್ 1 ಸಿನಿಮಾ ತುಳುನಾಡಿನ ಸೊಗಡಿನೊಂದಿಗೆ ಸುಂದರ ಸಾಂಸಾರಿಕ ಕಥೆಯನ್ನು ಹೊಂದಿರುವ ಸಿನೆಮಾವಾಗಿದ್ದು, ನಾಯಕ ನಟನಾಗಿ ನಿತ್ಯ ಪ್ರಕಾಶ್ ಬಂಟ್ವಾಳ ಅವರು ಮೊದಲ ಬಾರಿಗೆ ಸಿನೆಮಾಗೆ ಎಂಟ್ರಿ ಕೊಟ್ಟಿದ್ದು, ಅಮೃತಾ ನಾಯಕ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಮಂಗಳೂರು/ಪ್ರಯಾಗ್‌ರಾಜ್ : ಈಗಾಗಲೇ ಮಹಾ ಕುಂಭಮೇಳ 2025 ಪ್ರಾರಂಭವಾಗಿದೆ. ಮಹಾ ಕುಂಭಮೇಳದ ಮೊದಲ ದಿನ, ಪುಷ್ಯ ಪೂರ್ಣಿಮೆಯಂದು ಸಾಧ್ವಿಯೊಬ್ಬರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿವೆ. ವೈರಲ್ ಆಗಿರುವ ಈ ಫೋಟೋಗಳನ್ನು ಮಹಾ ಕುಂಭಮೇಳದ ‘ಅತ್ಯಂತ ಸುಂದರ ಸಾಧ್ವಿ’ ಎಂಬುವುದಾಗಿ ವರ್ಣಿಸಲಾಗುತ್ತಿದೆ. ಹಾಗಾದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಸುಂದರಿ ‘ಸಾಧ್ವಿ’ ಯಾರು ? ಅವಳ ಹಿನ್ನಲೆ ಏನು ? ಎಂದು ತಿಳಿಯೋಣ.
ಹರ್ಷ ರಿಚಾರಿಯಾ ಎಂಬ ಅತ್ಯಂತ ಸುಂದರ ಸಾಧ್ವಿಯಾಗಿ 2025 ರ ಮಹಾ ಕುಂಭಮೇಳದ ಸಂದರ್ಭ ಪ್ರಯಾಗರಾಜ್ ತಲುಪಿದ್ದಾರೆ. ಇವರು ಮೂಲತಃ ಭೋಪಾಲ್ ನಿವಾಸಿಯಾಗಿದ್ದು, ಪ್ರಸ್ತುತ ಉತ್ತರಾಖಂಡದಲ್ಲಿ ವಾಸಿಸುತ್ತಿದ್ದಾರೆ. ಹರ್ಷ ರಿಚಾರಿಯಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ಇವರು 21 ಜನವರಿ 2019 ರಂದು ಟ್ರಾವೆಲರ್ ಹರ್ಷ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು.
ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದಗಿರಿ ಜಿ ಮಹಾರಾಜ್ ಅವರ ಶಿಷ್ಯೆ ಹರ್ಷ ರಿಚಾರಿಯಾ ಎಂದು ಹೇಳಲಾಗುತ್ತಿದೆ. ಹರ್ಷ ಕೇವಲ 2 ವರ್ಷಗಳ ಹಿಂದೆ ಸಾಧ್ವಿಯಾಗಿದ್ದಾರೆ. ಹರ್ಷ ರಿಚಾರಿಯಾ ಕೂಡ ಸಾಮಾಜಿಕ ಮಾಧ್ಯಮ ಪ್ರಭಾವಿಯಾಗಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆ ಆಂಕರ್ ಹರ್ಷ ರಿಚಾರಿಯಾ ಎಂಬ ಹೆಸರಿನಲ್ಲಿದೆ. ಸಾಧ್ವಿ ಆಗುವ ಮೊದಲು, ಹರ್ಷ ಮಾಡೆಲ್ ಮತ್ತು ಸೆಲೆಬ್ರಿಟಿ ಆಂಕರ್ ಆಗಿದ್ದರು. ಹರ್ಷ ಆಂಕರ್-ಮಾಡೆಲ್ ಆಗಿರುವುದರ ಜೊತೆಗೆ, ಮೇಕಪ್ ಕಲಾವಿದೆ ಮತ್ತು ಯೋಗ ಬೋಧಕಿಯೂ ಆಗಿದ್ದರು. ಹರ್ಷ ರಿಚಾರಿಯಾ ಸಾಧ್ವಿಯಾಗಲು ಕಾರಣವೇನು ಎಂದು ಕೇಳಿದಾಗ ” ಮನಸ್ಸಿಗೆ ಶಾಂತಿ ಬೇಕು ಹಾಗಾಗಿ ಈ ನಿರ್ಧಾರ ಕೈಗೊಂಡಿರುವೆ” ಎಂದು ಹೇಳಿದ್ದಾರೆ. ಸನ್ಯಾಸತ್ವ ಸ್ವೀಕರಿಸುವ ವೇಳೆ ಅವರಿಗೆ 30 ವರ್ಷ ವಯಸ್ಸು. “ತಾನು ಉತ್ತರಾಖಂಡದಿಂದ ಬಂದಿದ್ದೇನೆ. ಆಚಾರ್ಯ ಮಹಾಮಂಡಲೇಶ್ವರ ಜಿ ಅವರ ಶಿಷ್ಯೆ” ಎಂದು ಮಹಾಕುಂಭ ಮೇಳದಲ್ಲಿ ಹೇಳಿಕೊಂಡಿದ್ದಾರೆ.
ಮಂಗಳೂರು/ಬೆಂಗಳೂರು : ‘ಕನ್ನಡ ಬಿಗ್ ಬಾಸ್ ಸೀಸನ್ 11’ ಇದೀಗ ಫಿನಾಲೆ ಹಂತಕ್ಕೆ ತಲುಪುತ್ತಿದ್ದು, ಎಲಿಮಿನೇಷನ್ ನಿಂದ ಪಾರಗಲು ಸ್ಪರ್ಧಿಗಳು ಕಷ್ಟಪಟ್ಟು ಟಾಸ್ಕ್ ಗಳನ್ನು ಆಡುತ್ತಿದ್ದಾರೆ. ಆದರೆ, ಎಲಿಮಿನೇಷನ್ ನಿಂದ ಸೇಫ್ ಆಗಿದ್ದ ಧನರಾಜ್ ಅವರು ಟಾಸ್ಕ್ ನ ಮೋಸದಿಂದ ಗೆದ್ದ ಆರೋಪ ಇದೆ.
ಕನ್ನಡದ ಬಿಗ್ ಬಾಸ್ ಶುರುವಾಗಿ ಇಂದಿಗೆ 109 ದಿನಗಳು ಆಗಿವೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಆದ್ರೆ, ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲೇ ಮೋಸದಾಟ ಆಡಿದ್ದಾರೆ.
ಸದ್ಯ, ಬಿಗ್ ಬಾಸ್ ಮನೆಯಲ್ಲಿ 8 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ತ್ರಿವಿಕ್ರಮ್, ಮೋಕ್ಷಿತಾ, ಭವ್ಯಾ ಗೌಡ, ಮಂಜು, ಗೌತಮಿ, ರಜತ್, ಹನುಮಂತ ಹಾಗೂ ಧನರಾಜ್ ಇದ್ದಾರೆ. ಆದರೆ ಈ ವಾರ ಬಿಗ್ ಬಾಸ್ ಮನೆಯಲ್ಲಿ ಯಾರೂ ಊಹಿಸಲಾರದ ಟ್ವಿಸ್ಟ್ ವೊಂದು ಎದುರಾಗಿದೆ.
ಈ ವಾರದ ನಾಮಿನೇಷನ್‌ನಿಂದ ಪಾರಾಗಲು ಬಿಗ್ ಬಾಸ್ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಿದ್ದರು. ಬಿಗ್ ಬಾಸ್ ಕೊಟ್ಟ ಟಾಸ್ಕ್‌ನಲ್ಲಿ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಪಾರಾಗಲಿದ್ದಾರೆ ಎಂದು ಘೋಷಿಸಿದ್ದರು.
ಹೀಗಾಗಿ ಬಿಗ್ ಬಾಸ್ ಕೊಡುವ ಟಾಸ್ಕ್‌ಗಳನ್ನು ಸ್ಪರ್ಧಿಗಳು ಕಷ್ಟಪಟ್ಟು ಆಡುತ್ತಿದ್ದರು. ಇದರಲ್ಲಿ ಅಚ್ಚರಿ ಎಂಬಂತೆ ವಾರದ ಕೊನೆಯ ಟಾಸ್ಕ್ ನಲ್ಲಿ ಧನರಾಜ್ ಆಚಾರ್ಯ ಗೆದ್ದುಕೊಂಡು ಈ ವಾರದ ಮಿಡ್ ವೀಕ್ ನಾಮಿನೇಷನ್ ನಿಂದ ಸೇಫ್ ಆಗಿದ್ದರು.
ನಿನ್ನೆ (ಜ.15) ನಡೆದ ಎಪಿಸೋಡ್ ನಲ್ಲಿ ಯಾವುದೇ ಮಿಡ್ ವೀಕ್ ಎಲಿಮಿನೇಷನ್ ನಡೆಸಿರಲಿಲ್ಲ ಇದಕ್ಕೆ ಕಾರಣ ಆಗಿದ್ದು ಧನರಾಜ್ ಮೋಸದಾಟ ಎಂದು ಬಿಗ್ ಬಾಸ್ ಹೇಳಿದ್ದಾರೆ.
ಈ ಬಗ್ಗೆ ಖುದ್ದು ಬಿಗ್‌ಬಾಸ್ ಮನೆಯವರ ಮುಂದೆ ಅಸಲಿ ಸತ್ಯವನ್ನು ವಿಡಿಯೋ ಮೂಲಕ ಬಿಚಿಟ್ಟಿದ್ದಾರೆ. ಬಿಗ್‌ಬಾಸ್ ಕೊಟ್ಟ ಕೊನೆಯ ಟಾಸ್ಕ್‌ನಲ್ಲಿ ಕನ್ನಡಿಯನ್ನು ನೋಡಿ ಫಜಲ್ ಗೇಮ್ ಆಡಿದ್ದು ಬೆಳಕಿಗೆ ಬಂದಿದೆ. ಬಿಗ್‌ಬಾಸ್ ಮಾತನ್ನು ಕೇಳಿಸಿಕೊಂಡ ಧನರಾಜ್ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಜೊತೆಗೆ ಬಿಗ್‌ಬಾಸ್ ನನ್ನಿಂದ ಅಷ್ಟು ದೊಡ್ಡ ತಪ್ಪಾಗಿದೆ ಅಂತ ಗೊತ್ತಾಗಲಿಲ್ಲ. ಆ ಗೆಲುವು ನನ್ನದಲ್ಲ ಅಂತ ಅನಿಸುತ್ತಿದೆ. ನನ್ನನ್ನೂ ನಾಮಿನೇಟ್ ಮಾಡಿಕೊಂಡೆ ಪ್ರಕ್ರಿಯೆ ಶುರು ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ಧನರಾಜ್ ಅವರಿಗೆ ಎಲಿಮಿನೇಷನ್ ಶಿಕ್ಷೆ ಸಿಕ್ಕಿತೇ ಎನ್ನುವ ಪ್ರಶ್ನೆ ಉಂಟಾಗಿದೆ.