Thursday, October 21, 2021

ಉಡುಪಿ: ಹಾವು ಕಡಿದು ಸಾವು

ಉಡುಪಿ: ತೆನೆ ಹಬ್ಬಕ್ಕಾಗಿ ಗದ್ದೆಗೆ ತೆನೆ ತರಲು ಹೋಗಿದ್ದ ವ್ಯಕ್ತಿಗೆ ವಿಷ ಜಂತು ಕಡಿದು ಸಾವನ್ನಪ್ಪಿದ ಘಟನೆ ಉಡುಪಿಯ ಎರ್ಮಾಳು ನಟ್ಟಿ ಮನೆ ಎಂಬಲ್ಲಿ ಘಟಿಸಿದೆ.


ಎರ್ಮಾಳು ಮಲ್ಲಕ್ಕ ನಟ್ಟಿ ಮನೆ ನಿವಾಸಿ 44 ವರ್ಷದ ಚಂದ್ರಶೇಖರ ಪೂಜಾರಿ ಮೃತಪಟ್ಟ ದುರ್ದೈವಿ.
ತೆನೆ ಹಬ್ಬಕ್ಕೆ ತಮ್ಮದೇ ಕೃಷಿ ಗದ್ದೆಗೆ ತೆನೆ ತರಲು ಹೋದಾಗ ಏನೋ ಕಾಲಿಗೆ ಕಡಿದ ಅನುಭವವಾಗಿದ್ದು, ಮನೆಗೆ ಬಂದ ಅವರು ಪತ್ನಿ ಉಷಾ ಅವರಲ್ಲಿ ಈ ಬಗ್ಗೆ ತಿಳಿಸಿದ್ದಾರೆ.

ನಿನ್ನೆ ಮುಂಜಾನೆ ತೆನೆ ಹಬ್ಬದ ಬಹುತೇಕ ಕೆಲಸವನ್ನು ಮುಗಿಸಿದ ಚಂದ್ರಶೇಖರರಿಗೆ ಇದ್ದಕ್ಕಿದಂತೆ ಉಸಿರು ಕಟ್ಟಿದಂತ್ತಾಗಿದ್ದು, ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಮೃತ ಪಟ್ಟಿದ್ದಾರೆ.

ಮೃತರು ಎಲೆಕ್ಟ್ರಿಕ್ ವೃತ್ತಿ ನಡೆಸುತ್ತಿದ್ದು, ಇವರ ದುಡಿಮೆಯಿಂದಲೇ ಕುಟುಂಬದ ಜೀವನ ರಥ ಸಾಗುತ್ತಿತ್ತು. ಇದೀಗ ಮನೆ ಯಜಮಾನನ ಅಪಮೃತ್ಯುವಿನಿಂದಾಗಿ ಕುಟುಂಬ ಬಡವಾಗಿದೆ. ಪತ್ನಿ ಉಷಾ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...