Connect with us

DAKSHINA KANNADA

ಮಂಗಳೂರು ಸ್ಮಾರ್ಟ್‌ ಸಿಟಿಗೆ ಸ್ಮಾರ್ಟ್ ಸ್ಕೂಲ್..!

Published

on

ಮಂಗಳೂರು : ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಮಾರ್ಟ್ ಸ್ಕೂಲ್ ಆಗಿ ನವೀಕರಣಗೊಳಿಸಿದ ನಗರದ ಹೈೂಗೆ ಬಜಾರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪ್ರೌಢ ಶಾಲೆಯನ್ನು ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಸರಕಾರಿ ಶಾಲೆಗಳ ನವೀಕರಣದಿಂದ ಸಾಕಷ್ಟು ಬಡ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ಅನುಕೂಲ ಮಾಡಿಸಿದಂತಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಿಂದ ಸ್ಮಾರ್ಟ್ ಸ್ಕೂಲ್ ಎಂಬ ಪರಿಕಲ್ಪನೆಯೊಂದಿಗೆ 1.10 ಕೋಟಿ ವೆಚ್ಚದಲ್ಲಿ ಶಾಲೆಯನ್ನು ನವೀಕರಿಸಲಾಗಿದೆ ಎಂದು ಹೇಳಿದರು.

ಸರಕಾರಿ ಶಾಲೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಖಾಸಗಿ ಶಾಲೆಗಳಂತೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪುಗೊಂಡಿದೆ. ಶಾಲೆಯಲ್ಲಿ ಆನ್ಲೈನ್ ತರಗತಿಗಳಿಗಾಗಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಇಂಟರ್ ನೆಟ್ ವ್ಯವಸ್ಥೆ, ಶೌಚಾಲಯಗಳ ಆಧುನೀಕರಣ,ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಕ್ರೀಡಾಂಗಣ, ನೆಲಹಾಸು, ಕಾರ್ಯಕ್ರಮಗಲವಿಗಾಗಿ ವೇದಿಕೆ ನಿರ್ಮಾಣ ಸೇರಿದಂತೆ ಶಾಲೆಯ ಆವರಣದಲ್ಲಿ ಹುಲ್ಲು ಹಾಸು, ಹೂವಿನ ಗಿಡಗಳನ್ನು ನೆಡಲಾಗಿದೆ ಎಂದು ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಸ್ಮಾರ್ಟ್ ಸ್ಕೂಲ್ ಪರಿಕಲ್ಪನೆಯಿಂದ ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಹೆಚ್ಚಿನ ಸಹಾಯವಾಗಲಿದೆ. ಸರಕಾರಿ‌ ಶಾಲೆಗಳನ್ನು ಉನ್ನತೀಕರಿಸುವುದರಿಂದ ವಿಧ್ಯಾರ್ಥಿಗಳ ದೈನಂದಿನ ಚಟುವಟಿಕೆಗಳಿಗೆ ಅನುಕೂಲ‌ ಮಾಡಿಸಿದಂತಾಗಿದೆ ಎಂದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್ ಸುಮಂಗಲ ರಾವ್, ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಪಾಲಿಕೆ ಮುಖ್ಯ ಸಚೇತಕರಾದ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಂದೀಪ್ ಗರೋಡಿ, ಲೋಕೇಶ್ ಬೊಳ್ಳಾಜೆ, ಲೀಲಾವತಿ ಪ್ರಕಾಶ್, ಶೋಭಾ ರಾಜೇಶ್, ಪಾಲಿಕೆ ಸದಸ್ಯರು, ಬಿಜೆಪಿ ಮುಖಂಡರು, ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

DAKSHINA KANNADA

ಮತದಾನದ ವೇಳೆ ಮತಗಟ್ಟೆಗೆ ಮೊಬೈಲ್ ಕೊಂಡುಯ್ಯುತ್ತೀರಾ? ಹಾಗಿದ್ರೆ ಇದನ್ನು ಗಮನಿಸಿ

Published

on

ಮಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆ ಕರ್ನಾಟಕದ 14 ಕ್ಷೇತ್ರಗಳಲ್ಲಿ ಎ.26ರಂದು ಮತದಾನ ನಡೆಯಲಿದೆ. ಈ ಬಾರಿ ಚುನಾವಣೆಯ ಸಂದರ್ಭ ಮೊಬೈಲ್ ಫೋನ್‌ಗಳನ್ನು ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗುವ ಮೊದಲು ಯೋಚಿಸಿ. ಏಕೆಂದರೆ, ಬೂತ್‌ಗಳ ಆವರಣದಲ್ಲಿ ಅವುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಬೂತ್‌ಗಳಿಗೆ ಹೋಗುವ ಜನರನ್ನು ಕೂಲಂಕುಷವಾಗಿ ತಪಾಸಣೆ ಮಾಡಲಾಗುವುದು. ಮತದಾರರು ಮತ ಚಲಾಯಿಸಲು ಹೋಗುವ ಮೊದಲು ಫೋನ್‌ಗಳನ್ನು ಇಡಲು ವಿಶೇಷ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

mobile not allowed

ಈ ಹಿಂದೆ ಮತಗಟ್ಟೆಗೆ ಮೊಬೈಲ್ ಕೊಂಡೊಯ್ದು ಫೊಟೊ ಹಾಗೂ ವೀಡಿಯೋಗಳನ್ನು ಮಾಡಿದ್ದ ಘಟನೆ ನಡೆದಿತ್ತು. ಹಾಗಾಗಿ ಈ ಬಾರಿ ಮೊಬೈಲ್ ಫೋನ್ ಗಳನ್ನು ಮತಗಟ್ಟೆಯ ಒಳಗಡೆ ಪ್ರವೇಶಿಸುವ ಮೊದಲು ಪ್ರಿಸೈಡಿಂಗ್ ಆಫೀಸರ್ ಬಳಿ ಟ್ರೇಯಲ್ಲಿ ಇಡುವ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಆ ಟ್ರೇಯನ್ನು ಪೊಲೀಸರು ಅಥವಾ ಚುನಾವಣಾ ಅಧಿಕಾರಿಗಳು ಕಾವಲು ಕಾಯುತ್ತಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮುಂದೆ ಓದಿ..; ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ

ಮತದಾನ ಮಾಡುವಾಗ ಫೋನ್‌ಗಳನ್ನು ಟ್ರೇನಲ್ಲಿ ಇಡಲು ಸೂಚಿಸಬೇಕೇ ಅಥವಾ ಅವುಗಳನ್ನು ಸೈಲೆಂಟ್ ಮೋಡ್‌ನಲ್ಲಿ ಇಡುವಂತೆ ಹೇಳಬೇಕೇ ಎಂಬ ನಿರ್ಧಾರ ಕೈಗೊಳ್ಳುವುದನ್ನು ಪ್ರಿಸೈಡಿಂಗ್ ಆಫೀಸರ್ ವಿವೇಚನೆಗೆ ಬಿಡಲಾಗಿದೆ. ಕೆಲವು ಸಂದರ್ಭಗಳಲ್ಲಿ, ಮತಗಟ್ಟೆಯೊಳಗೆ ಫೋನ್‌ಗಳನ್ನು ಅನುಮತಿಸದಿರಲು ಚುನಾವಣಾಧಿಕಾರಿಗಳು ನಿರ್ಧರಿಸಿದ್ದಾರೆ. ಇದು ಕೆಲವೇ ಸೆಕೆಂಡುಗಳ ವಿಷಯವಷ್ಟೆ. ಮತದಾನದ ಸಮಯದಲ್ಲಿ ಗೋಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮತದಾರರು ಮತದಾನ ಮಾಡುವಾಗ ಅವುಗಳನ್ನು ಬಳಸಬಾರದು ಎಂದು ಮಾತ್ರ ನಾವು ಹೇಳುತ್ತಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ. ಸಿಇಒ, ಜಿಲ್ಲಾಧಿಕಾರಿಗಳು ಮತ್ತು ಇತರ ಚುನಾವಣಾಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ವಿಷಯ ಚರ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Continue Reading

BELTHANGADY

ಸಾಕುನಾಯಿಯನ್ನು ಹೊತ್ತೊಯ್ದ ಚಿರತೆ..!! ಭಯ ಭೀತರಾದ ಜನತೆ

Published

on

ಬೆಳ್ತಂಗಡಿ: ಇತ್ತೀಚೆಗೆ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರೋದು ಕಾಮನ್‌ ಆಗಿ ಬಿಟ್ಟಿದೆ. ಹೆಚ್ಚಾಗಿ ಕಾಡಾನೆಗಳು ಊರಿಗೆ ಬಂದು ಕೃಷಿಗಳನ್ನು ನಾಶ ಮಾಡ್ತಾಇತ್ತು. ಆದರೆ ಈಗೀಗ ಹುಲಿ ಚಿರತೆಗಳು ಕೂಡ ನಾಡಿನತ್ತ ಮುಖ ಮಾಡ್ತಾ ಇದೆ.

chitha

ಮುಂದೆ ಓದಿ..; ಕಾಗೆ ನಿಜಕ್ಕೂ ನಮ್ಮ ಪಿತೃನಾ..?

ಬೆಳ್ತಂಗಡಿಯ ವೇಣೂರು ಪಚ್ಚೇರಿ ಪರಿಸರದಲ್ಲಿ ಚಿರತೆಯೊಂದು ರಾತ್ರಿ ಹೊತ್ತು ಓಡಾಡುವುದು ಕಂಡು ಬಂದಿದೆ. ಈ ಘಟನೆಯಿಂದ ಊರಿನ ಜನ ಭಯಭೀತರಾಗಿದ್ದಾರೆ. ಹಚ್ಚೇರಿ ಗೋಳಿದಡ್ಕ ನಿವಾಸಿ ಕೃಷ್ಣಾನಂದ ಭಟ್ ಅವರ ಸಾಕುನಾಯಿಯನ್ನು ಚಿರತೆ ಕಚ್ಚಿ ಕೊಂಡೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃಷ್ಣಾನಂದ ಅವರು ಚಿರತೆಯಿಂದ ರಕ್ಷಣೆ ಕೋರಿ ವೇಣೂರು ಅರಣ್ಯ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Continue Reading

BANTWAL

ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ

Published

on

ದ.ಕ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನ ಹಾಗೂ ಚುನಾವಣಾ ಮತ ಎಣಿಕಾ ಕಾರ್ಯ ನಡೆಯಲಿರುವ ಹಿನ್ನೆಲೆ ದ.ಕ ಕ್ಷೇತ್ರ ಸೇರಿದಂತೆ 14 ಕ್ಷೇತ್ರಗಳಲ್ಲಿ ಎ.24ರ ಸಂಜೆ 6 ಗಂಟೆಯಿಂದ ಮದ್ಯ ನಿಷೇಧ ಮಾಡಲಾಗಿದೆ.

drinks ban for 3 days

ಮುಂದೆ ಓದಿ..; ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ

ಏ. 24ರ ಸಂಜೆ 6ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ, ಪರವಾನಗಿ ಪಡೆಯದ ಆವರಣಗಳಲ್ಲಿ ಮದ್ಯ ಶೇಖರಣೆಯನ್ನು ನಿಷೇಧ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144ರ ಅನ್ವಯ ಏಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂಧಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸಲಾಗಿದೆ. ಅದೇ ರೀತಿ ಏ. 24ರ ಸಂಜೆ 6 ರಿಂದ‌ ಮತದಾನ ಕೊನೆಗೊಳ್ಳುವ ಏ.26ರ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನಿಡಿದ್ದಾರೆ.

Continue Reading

LATEST NEWS

Trending