ಸ್ಮಾರ್ಟ್ಸಿಟಿ – ಕುಡ್ಸೆಂಪ್ಕಾಮಗಾರಿಗಳಪ್ರಗತಿಪರಿಶೀಲನಾಸಭೆ ನಡೆಸಿದ ಶಾಸಕಕಾಮತ್…
ಮಂಗಳೂರು: ಸ್ಮಾರ್ಟ್ ಸಿಟಿ – ಕುಡ್ಸೆಂಪ್ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯು, ಶಾಸಕ ವೇದವ್ಯಾಸ್ ಕಾಮತ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಇಂದು (ಜೂನ್ 17) ನಡೆಯಿತು.
ಕುಡಿಯುವ ನೀರು ಸರಬರಾಜು ಹಾಗೂ ಯುಜಿಡಿ ಕಾಮಗಾರಿಗಳ ಕುರಿತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವ ದೂರುಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ,
ಸಂಬಂಧಪಟ್ಟ ಅಧಿಕಾರಿಗಳೊಂದಿ ಸಭೆ ನಡೆಸಲಾಗಿದ್ದು ಸಮಸ್ಯೆ ಬಗೆಹರಿಸಲು ಶಾಸಕ ವೇದವ್ಯಾಸ್ ಕಾಮತ್ ಅವರು ಸೂಚನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಕಾಮತ್, ಈಗಾಗಲೇ ಸ್ಮಾರ್ಟ್ ಸಿಟಿ ಹಾಗೂ ಕುಡ್ಸೆಂಪ್ ಯೋಜನೆಗಳ ಅನೇಕ ಕಾಮಗಾರಿಗಳು ಪ್ರಗತಿ ಹಂತದಲ್ಲಿದೆ.
ಈಗ ಪ್ರಗತಿ ಹಂತದಲ್ಲಿರುವ ಪ್ರತಿಯೊಂದು ಕಾಮಗಾರಿಗಳೂ ಕೂಡ ಯಾವ ಹಂತದಲ್ಲಿದೆ.
ಹಾಗೂ ಕಾಮಗಾರಿಯ ವಿವರ ಸಂಗ್ರಹಿಸಲು ಮನಪಾ ಸದಸ್ಯರ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು,
ಸ್ಮಾರ್ಟ್ ಸಿಟಿ ಹಾಗೂ ಕುಡ್ಸೆಂಪ್ ಅಧಿಕಾರಿಗಳನ್ನೊಳಗೊಂಡ ತಾಂತ್ರಿಕ ತಂಡ ರಚಿಸಿ ಈಗ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳ ವಿವರ ಪಡೆಯಲು ನಿರ್ಧರಿಸಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಈ ತಾಂತ್ರಿಕ ತಂಡ ಮಂಗಳೂರು ನಗರದಲ್ಲಿ ನಗರ ಪಾಲಿಕೆ, ಕುಡ್ಸೆಂಪ್ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ ಪೂರ್ಣಗೊಂಡಿರುವ ಅಥವಾ ಪ್ರಗತಿ ಹಂತದಲ್ಲಿರುವ ಎಲ್ಲಾ ಕಾಮಗಾರಿಗಳ ಪ್ರತ್ಯೇಕವಾಗಿ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಲಿದೆ.
ಕಾಮಗಾರಿಯಲ್ಲಿ ದೋಷಗಳು ಕಂಡು ಬಂದರೆ ಅದನ್ನು ಸರಿಪಡಿಸಲು ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎನ್ನುವುದನ್ನು ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದರು.
ಇನ್ನು ನಗರದಲ್ಲಿ ಪ್ರತೀ ಮನೆಗೂ ದಿನದ 24 ಗಂಟೆ ಕುಡಿಯುವ ನೀರು ಒದಗಿಸುವ ಅಮೃತ್ ಯೋಜನೆ ಕಾಮಗಾರಿಯ ಕುರಿತು ಮಾಹಿತಿ ಪಡೆಯಲಾಗಿದೆ.
ನಗರದಲ್ಲಿ ನೀರು ಸರಬರಾಜಿಗೆ ಗುರುತಿಸಿರುವ 48 ಝೋನ್ ಗಳ ಪೈಕಿ 18 ಝೋನ್ ಗಳಲ್ಲಿ ಸರ್ವೇ ಕಾರ್ಯ ಪೂರ್ಣಗೊಂಡಿದೆ.
ಇನ್ನುಳಿದ ಝೋನ್ ಗಳ ಸರ್ವೆ ಕಾರ್ಯಗಳು ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.
ಕುಡಿಯುವ ನೀರಿನ ಪೈಪ್ ಲೈನ್ ಗಳ ಪುನರ್ ಪರಿಶೀಲನೆ, ಪಂಪಿಂಗ್ ವ್ಯವಸ್ಥೆಗಳ ಪರಿಶೀಲನೆ ನಡೆಸಿ ಸಂಪೂರ್ಣ ವರದಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಸ್ಮಾರ್ಟ್ ಸಿಟಿ ಅಧಿಕಾರಿ ಮೊಹಮ್ಮದ್ ನಜೀರ್, ಕುಡ್ಸೆಂಪ್ ಪ್ರಾಜೆಕ್ಟ್ ಡೈರೆಕ್ಟರ್ ಮಂಜುನಾಥ್,
ಪಾಲಿಕೆ ಸ್ಥಾಯಿ ಸಮಿತಿ ಅದ್ಯಕ್ಷ ಪ್ರೇಮಾನಂದ ಶೆಟ್ಟಿ, ಎಸ್.ಇ.ಝೆಡ್ ಅಧಿಕಾರಿಗಳು, ಪಾಲಿಕೆ ಸದಸ್ಯರು, ಸಾರ್ವಜನಿಕ ಹಿತ ರಕ್ಷಣಾ ಸಮಿತಿಯ ಹನುಮಂತ ಕಾಮತ್,
ಧರ್ಮರಾಜ್, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಮನಪಾ ಅಧಿಕಾರಿಗಳು, ಕುಡ್ಸೆಂಪ್ ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಗಳೂರು/ಚಂಡೀಗಢ : ಭೀ*ಕರ ರಸ್ತೆ ಅಪಘಾತದಲ್ಲಿ ಡಬಲ್ ಒಲಿಂಪಿಕ್ ಪದಕ ವಿಜೇತೆ ಶೂಟರ್ ಮನು ಭಾಕರ್ ಅವರ ಸಂಬಂಧಿಗಳಿಬ್ಬರು ಕೊ*ನೆಯುಸಿರೆಳೆದಿದ್ದಾರೆ.
ಈ ಘಟನೆ ಹರ್ಯಾಣದ ಮಹೇಂದ್ರಗಢ ಬೈಪಾಸ್ ರಸ್ತೆಯಲ್ಲಿ ಭಾನುವಾರ (ಜ.19ರಂದು) ನಡೆದಿರುವ ಬಗ್ಗೆ ವರದಿಯಾಗಿದೆ. ಮನುಭಾಕರ್ ಅವರ ಚಿಕ್ಕಪ್ಪ ಹಾಗೂ ಅಜ್ಜಿ ಭೀ*ಕರ ರಸ್ತೆ ಅಪ*ಘಾತದಲ್ಲಿ ಮೃ*ತಪಟ್ಟಿದ್ದಾರೆ.
ಚಿಕ್ಕಪ್ಪ ಯುದ್ಧವೀರ್ ಸಿಂಗ್ ಮತ್ತು ಅಜ್ಜಿ ಸಾವಿತ್ರಿ ದೇವಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರಾಂಗ್ ಸೈಡ್‌ನಿಂದ ವೇಗವಾಗಿ ಬಂದ ಕಾರು ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಮನು ಭಾಕರ್ ಅವರ ಚಿಕ್ಕಪ್ಪ, ಅಜ್ಜಿ ಸ್ಥಳದಲ್ಲೇ ಪ್ರಾ*ಣ ಚೆಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಅಪಘಾತದ ತೀವ್ರತೆಗೆ ಇಬ್ಬರು ನೆಲಕ್ಕೆ ಎಸೆಯಲ್ಪಟ್ಟಿದ್ದು, ಕಾರು ಚಾಲಕ ಸ್ಥಳದಿಂದ ಪರಾರಿ ಆಗಿದ್ದಾನೆ ಎಂದು ವರದಿ ತಿಳಿಸಿದೆ.
ಚಾಲಕನಾಗಿ ಕೆಲಸ ಮಾಡುತ್ತಿದ್ದ ಯುದ್ದ್‌ವೀರ್ ಅವರು ಕೆಲಸಕ್ಕೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅವರ ತಾಯಿ ಸಾವಿತ್ರಿ ದೇವಿ ಲೋಹರು ಚೌಕ್‌ನಲ್ಲಿರುವ ತನ್ನ ಕಿರಿಯ ಮಗನನ್ನು ಭೇಟಿ ಮಾಡಲು ಅವರೊಂದಿಗೆ ಬಂದಿದ್ದರು. ಇಬ್ಬರೂ ಕಲ್ಯಾಣ ಮಾಡ್ ಪ್ರದೇಶವನ್ನು ತಲುಪುತ್ತಿದ್ದಂತೆ ರಸ್ತೆಯ ಇನ್ನೊಂದು ಬದಿಯಿಂದ ವೇಗವಾಗಿ ಬಂದ ಕಾರು ಅವರ ಸ್ಕೂಟರ್‌ಗೆ ಢಿ*ಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಢಿಕ್ಕಿಯ ರಭಸಕ್ಕೆ ಕಾರು ಕೂಡ ರಸ್ತೆಯಲ್ಲೇ ಪಲ್ಟಿ ಹೊಡೆದಿದೆ. ಸದ್ಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.
ಮನು ಭಾಕರ್ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದರು. ಒಂದೇ ಆವೃತ್ತಿಯ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದಿದ್ದರು. ಇತ್ತೀಚೆಗಷ್ಟೇ ಮನು ಭಾಕರ್ ರಾಷ್ಟ್ರಪತಿ ಅವರಿಂದ ‘ಖೇಲ್ ರತ್ನ’ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ಸಾವಿರಾರು ನೀರಿಕ್ಷೆಗಳೊಂದಿಗೆ ಜನರು ದಾಂಪತ್ಯ ಜೀವನಕ್ಕೆ ಕಾಲಿಡುವುದು ಸಾಮಾನ್ಯ. ಆದರೆ ನಿರೀಕ್ಷೆಗಳೆಲ್ಲವೂ ಯಾವಾಗಲೂ ನನಸಾಗುವುದಿಲ್ಲ, ಹೂವಿನ ಜೊತೆಗೆ ಮುಳ್ಳು ಇರುವಂತೆಯೇ ಸುಖದ ಜೊತೆ ಕಷ್ಟವೂ ಇರುತ್ತದೆ. ಅವೆಲ್ಲವನ್ನು ಸರಿದೂಗಿಸಿಕೊಂಡು ಹೋದರಷ್ಟೇ ಜೀವನ ಸುಖಕರವಾಗಿರುತ್ತದೆ. ಹಾಗಂತ ಎಲ್ಲವನ್ನು ಸಹಿಸಿಕೊಂಡು ಹೋಗಲೇಬೇಕೆಂದೆನಿಲ್ಲ, ಆದರೆ ಕೆಲವು ತಾಳ್ಮೆಯಿಂದ ತೆಗೆದುಕೊಂಡ ನಿರ್ಧಾರಗಳು ನಮ್ಮ ಬದುಕನ್ನು ಹಸನಾಗಿಸಬಹುದು. ಹೀಗಿರುವಾಗ ನೂರೆಂಟು ಕನಸುಗಳನ್ನು ಹೊತ್ತು ಹೊಸದಾಗಿ ಮದುವೆಯಾದವರಿಗೆ, ಮದುವೆಯಾಗುತ್ತಿರುವವರಿಗೆ, ಮದುವೆಯಾಗಲು ತುದಿಗಾಲಲ್ಲಿ ನಿಂತಿರುವವರಿಗೆ ಕೆಲ ಕಿವಿಮಾತುಗಳು ಇಲ್ಲಿವೆ.
ಸೌಂದರ್ಯ ಹಾಗೂ ಬ್ಯಾಂಕ್ ಬ್ಯಾಲೆನ್ಸ್‌ಗಿಂತಲೂ ಹೆಚ್ಚಾಗಿ ಸಂಗಾತಿಯ ಗುಣನಡವಳಿಕೆಗಳು ಸುಮಧುರ ದಾಂಪತ್ಯಕ್ಕೆ ಬಹಳ ಮುಖ್ಯವಾಗಿರುತ್ತದೆ. ಚೆಂದ, ಬ್ಯಾಂಕ್ ಬ್ಯಾಲೆನ್ಸ್ ಎಲ್ಲವೂ ಇದ್ದು, ಅವರು ನಮ್ಮಲ್ಲಿ ಗೌರವಯುತವಾಗಿ ನಡೆಸಿಕೊಳ್ಳುವುದಿಲ್ಲವೆಂದರೆ ಎಲ್ಲವೂ ನಿಷ್ಪ್ರಯೋಜಕ.ಸರಿ ತಪ್ಪುಗಳ ಪ್ರಶ್ನೆಗಳಿಗಿಂತ ಹೊಂದಾಣಿಕೆ ಬಹಳ ಮುಖ್ಯವಾಗುತ್ತದೆ. ಯಾರು ತಪ್ಪು ಯಾರು ಸರಿ ಎಂದು ಹೋರಾಟ ಮಾಡುವವರಿಗಿಂತ ಚೆನ್ನಾಗಿ ಜೀವನ ಮಾಡುತ್ತಿರುವುದು ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ.ರೋಮ್ಯಾನ್ಸ್ ದಾಂಪತ್ಯದ ಭಾಗವಷ್ಟೇ ಅದೇ ಎಲ್ಲವೂ ಅಲ್ಲ, ಕೆಲವೊಂದು ರಹಸ್ಯಗಳಾಗಿದ್ದರೆಯೇ ಚಂದ. ಭಾರತದಲ್ಲಿ ಮದುವೆ ಕೇವಲ ಇಬ್ಬರು ಗಂಡು ಹೆಣ್ಣಿಗೆ ಸಂಬಂಧಿಸಿದ್ದಲ್ಲ, ಇದು ಸಂಪೂರ್ಣವಾಗಿ ಕುಟುಂಬ, ಉದ್ಯೋಗ ಜೀವನ, ಬದುಕಿನ ವಾಸ್ತವತೆ, ಸಾಮಾಜಿಕ ಸಾಂಸ್ಕೃತಿಕ ನಂಬಿಕೆಗೆ ಸಂಬಂಧಿಸಿದ ವಿಚಾರವಾಗಿದೆ.
ಮದುವೆಯಾದ ತಕ್ಷಣ ಅದೇಕೆ ಇದೇಕೆ ಅಂತ ಪ್ರಶ್ನಿಸುತ್ತಾ ಮನೆಯವರನ್ನೆಲ್ಲಾ ಎದುರು ಹಾಕಿಕೊಳ್ಳಬಾರದು. ಯಶಸ್ವಿ ಮದುವೆಗೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಫಾರ್ಮುಲಾಗಳಿಲ್ಲ. ಪ್ರತಿಯೊಂದು ಜೋಡಿಯೂ ವಿಭಿನ್ನ, ಈ ಆತ್ಮ ಸಮ್ಮಿಲನಕ್ಕೆ ಏನು ಕಾರಣವಿರಬಹುದು ಎಂಬುದನ್ನು ಕೇವಲ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಬಹಳ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಚಾರ ಎಂದರೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತೋರಿಸುವಂತೆಯೇ ಮದುವೆ ಜೀವನ ಇರುವುದಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಸುಂದರ ಫೋಟೊಗಳನ್ನು ಹಾಕಿಕೊಂಡು ಎಂಜಾಯ್ ಮಾಡುತ್ತಿರುವ ಜೋಡಿಯ ಜೀವನದ ಜೊತೆ ನಮ್ಮನ್ನು ಹೊಂದಾಣಿಕೆ ಮಾಡಿಕೊಳ್ಳಬಾರದು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಶೋಕಿ ಮಾಡುವವರು ವಾಸ್ತವದಲ್ಲಿ ಇತರರಿಗಿಂತ ಬಹಳ ಕೆಟ್ಟದಾಗಿ ಹೊಡೆದಾಡಿಕೊಂಡಿರುತ್ತಾರೆ. ಜೊತೆಯಾಗಿ ಸಾಗಲು ಕಷ್ಟಪಡುತ್ತಿರುತ್ತಾರೆ. ಕಿತ್ತಾಟವನ್ನು ಯಾವ ದಂಪತಿಯೂ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಿಲ್ಲ. ಸುಖಿ ದಾಂಪತ್ಯ ಜೀವನಕ್ಕಾಗಿ ಈ ವಿಚಾರಗಳು ಸಣ್ಣ ವಿಚಾರಗಳನ್ನು ನೆನಪಿಟ್ಟು ಬಾಳುವುದು ಉತ್ತಮ.
ಮಂಗಳೂರು/ಮೈದುಗುರಿ (ನೈಜೀರಿಯಾ) : ಉತ್ತರ ನೈಜೀರಿಯಾದಲ್ಲಿ ಶನಿವಾರ ಪೆಟ್ರೋಲ್ ಟ್ಯಾಂಕರ್ ಸ್ಪೋ*ಟಗೊಂಡ ಪರಿಣಾಮ ಕನಿಷ್ಠ 70 ಜನ ಮೃ*ತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ದೇಶದ ರಾಷ್ಟ್ರೀಯ ತುರ್ತು ಏಜೆನ್ಸಿ ತಿಳಿಸಿದೆ.
ವರದಿಗಳ ಪ್ರಕಾರ, ಘಟನೆಯಲ್ಲಿ 70ಕ್ಕೂ ಹೆಚ್ಚು ಮಂದಿ ಸಾ*ವಿಗೀಡಾಗಿದ್ದು, 56 ಜನ ಗಾಯಗೊಂಡಿದ್ದಾರೆ. 15ಕ್ಕೂ ಹೆಚ್ಚು ಅಂಗಡಿಗಳು ನಾಶವಾಗಿವೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.