ಮಂಗಳೂರು: ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧ ಗೊಳಿಸುವಿಕೆಯ (Pಒಒಇ) ಯೋಜನೆಯಡಿ ಇದೇ ಜೂನ್ 15ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಹತೆಗಳಿವು:
18 ವರ್ಷ ಮೇಲ್ಪಟ್ಟಿರುವ ಸದಸ್ಯರು ಆಹಾರೋತ್ಪನ್ನಗಳನ್ನು ತಯಾರಿಸುತ್ತಿರಬೇಕು, ಇತರೆ ಇಲಾಖೆಯ ಯೋಜನೆಯಲ್ಲಿ ಬ್ಯಾಂಕ್ ಸಾಲ ಪಡೆದಿದ್ದರೂ ಸಹ ಈ ಯೋಜನೆಯಲ್ಲಿ ಅನುದಾನ ಪಡೆಯಲು ಅರ್ಹರು, ಕಿರು ಆಹಾರ ಉತ್ಪನ್ನ ತಯಾರಿಸುವ ಸಂಜೀವಿನಿ ಸ್ವಸಹಾಯ, ಶ್ರೀ ಶಕ್ತಿ ಸಂಘದ ಎಲ್ಲಾ ಮಹಿಳಾ ಸದಸ್ಯರು ಅನುದಾನ ಪಡೆಯಬಹುದಾಗಿದೆ.
ಉತ್ಪನ್ನಗಳ ವಿವರ:
ಸ್ನಾಕ್ಸ್- ಆಲೂಗಡ್ಡೆ ಚಿಪ್ಸ್, ಬನಾನ ಚಿಪ್ಸ್, ಕಡಲೆ ಹಿಟ್ಟು ಮತ್ತು ಅದರಿಂದ ಉತ್ತಮವಾದ ಪದಾರ್ಥ, ಚಕ್ಕುಲಿ, ಗಾರಿಗೆ, ರೋಟಿ, ಜೋಳದ ಹಿಟ್ಟು ಮತ್ತು ಜೋಳದ ರೋಟಿ, ಸಜ್ಜೆ ರೋಟಿ, ಅಕ್ಕಿ, ಉದ್ದು, ಮೈದಾ ಸೇರಿದಂತೆ ಎಲ್ಲಾ ರೀತಿಯ ಹಪ್ಪಳ, ಮೈದಾ ಹಿಟ್ಟಿನ ಪದಾರ್ಥ, ಶಂಕರ ಪಾಳಿ, ಶಾವಿಗೆ, ನೂಡಲ್ಸ್ ಸಾಬುದಾನ ಪದಾರ್ಥ, ಚಟ್ನಿ ಪುಡಿ-ಶೇಂಗಾಪುಡಿ,
ಕರಿ ಎಳ್ಳು ಪುಡಿ, ಖಾರದ ಪುಡಿ, ಅರಸಿನ ಪುಡಿ, ಮಸಾಲಾ ಕಾರದ ಪುಡಿ, ಉಪ್ಪಿನ ಕಾಯಿ, ಮಾವಿನ ಉಪ್ಪಿನ ಕಾಯಿ, ನಿಂಬು ಉಪ್ಪಿನ ಕಾಯಿ, ಹುಣಸೆ ಹಣ್ಣು, ಜೇನು ತುಪ್ಪ, ಬೆಲ್ಲ, ಶೇಂಗ ಹೋಳಿಗೆ, ಎಳ್ಳು ಹೋಳಿಗೆ, ಶೇಂಗಾ ಉಂಡಿ, ಶೇಂಗಾ ಚಿಕ್ಕಿ.
ಹಾಲು ಉತ್ಪನ್ನಗಳು: ಪನ್ನೀರ್ – ಹಾಲಿನ ಸಿಹಿ ತಿನಿಸು, ಐಸ್ ಕ್ರೀಮ್, ತುಪ್ಪ, ಬೇಕರಿ ತಿನಿಸು- ಬ್ರೆಡ್, ಕೇಕ್, ಕುಕ್ಕೀಸ್, ಬಿಸ್ಕಟ್ ಅನ್ನು ತಯಾರಿಸಬಹುದಾಗಿದೆ.
2022-23ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಂತೆ ಜಿಲ್ಲೆಗೆ ಸಂಜೀವಿನಿ ಕೆಎಸ್ಆರ್ಎಲ್ಪಿಎಸ್ ಸಂಸ್ಥೆಯಡಿ 2788 ಗುರಿಗಳನ್ನು ನಿಗದಿ ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾ ಪಂಚಾಯತ್ನಲ್ಲಿರುವ ಸಂಜೀವಿನಿ ಕೆಎಸ್ಆರ್ಎಲ್ಪಿಎಸ್ ಸಂಸ್ಥೆಯ ಕಚೇರಿ ಹಾಗೂ ಗ್ರಾಮ ಪಂಚಾಯತ್ ಒಕ್ಕೂಟವನ್ನು ಸಂಪರ್ಕಿಸುವಂತೆ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.