Connect with us

LATEST NEWS

ಮಗು ಹಠ ಮಾಡದೇ ಚೆನ್ನಾಗಿ ನಿದ್ದೆ ಮಾಡಬೇಕಾ? ಹಾಗಾದ್ರೆ ಈ ಸಲಹೆ ಪಾಲಿಸಿ

Published

on

ನಿದ್ರೆ ಎನ್ನುವುದು ಪ್ರತಿಯೊಬ್ಬರ ಆರೋಗ್ಯದ ಗುಟ್ಟು. ನಿದ್ರೆಯು ಸರಿಯಾಗಿದ್ದರೆ ಆಗ ಆರೋಗ್ಯವು ಉತ್ತಮವಾಗಿರುವುದು. ಆದರೆ ಕೆಲವೊಮ್ಮೆ ಮಕ್ಕಳಲ್ಲಿ ನಿದ್ರಾಹೀನತೆಯು ಸಮಸ್ಯೆಯು ಬರುವುದು. ಇದರಿಂದ ಕಿರಿಕಿರಿ, ಅಳುವುದು, ಹಠ ಮಾಡುವುದು ಇತ್ಯಾದಿ ಸಾಮಾನ್ಯ. ಇದನ್ನು ದೂರ ಮಾಡಬೇಕಾದರೆ ಶಿಶುಗಳಿಗೆ ಕಾಲಿಗೆ ಸಾಕ್ಸ್ ಹಾಕಿ ಮಲಗಿಸಿದರೆ ಒಳ್ಳೆಯ ನಿದ್ರೆ ಬರುವುದು ಎಂದು ಹೇಳಲಾಗುತ್ತದೆ. ಅದಕ್ಕೆ ಕಾರಣಗಳನ್ನು ಕೂಡ ತಿಳಿಯಿರಿ.

ಸಾಕ್ಸ್ ಹಾಕಿದರೆ ಬೇಗ ನಿದ್ರೆ ಬರುವುದು

ಮಗುವಿನ ಕಾಲಿಗೆ ಸಾಕ್ಸ್ ಹಾಕಿದರೆ, ಆಗ ಕಾಲುಗಳು ಬಿಸಿಯಾಗುವುದು ಹಾಗೂ ಬೇಗನೆ ನಿದ್ರೆ ಬರುವುದು. ಹಿತಕರ ವಾತಾವರಣ ನಿರ್ಮಾಣ ಮಾಡಿದರೆ ಆಗ ಇದರಿಂದ ಚೆನ್ನಾಗಿ ನಿದ್ರೆ ಬರುವುದು. ರಾತ್ರಿ ಮಲಗುವ ಸಂದರ್ಭದಲ್ಲಿ ಮಗುವಿನ ಕಾಲುಗಳಿಗೆ ಸಾಕ್ಸ್ ಹಾಕಿ.

ಇದರಿಂದ ಮಗುವಿಗೆ ನಿದ್ರೆ ಬರಲು ನೆರವಾಗುವುದು ಹಾಗೂ ಆರಾಮ ಸಿಗುವುದು. ಇಷ್ಟು ಮಾತ್ರವಲ್ಲದೆ ಸಾಕ್ಸ್ ಹಾಕಿದರೆ ಆಗ ಮಗುವಿಗೆ ಸುರಕ್ಷತೆಯ ಭಾವನೆಯು ಬರುವುದು. ಮಲಗುವ ವೇಳೆ ಮಗುವಿನ ಕಾಲು ಹಾಗೂ ಕೈಗಳು ಶೀತವಾಗುವುದು. ಇದಕ್ಕಾಗಿ ಈ ಭಾಗವನ್ನು ಸರಿಯಾಗಿ ಮುಚ್ಚಿಡಬೇಕು ಹಾಗೂ ದೇಹದ ತಾಪಮಾನ ಕಾಪಾಡಬೇಕು.

ದೇಹದ ತಾಪಮಾನ ಕಾಪಾಡುವುದು

ತಾಪಮಾನ ನಿಯಂತ್ರಣದಲ್ಲಿ ಇರುವುದು ನಿದ್ರೆಗೆ ಅತೀ ಅಗತ್ಯ. ಮಗುವಿನ ಚರ್ಮದ ತಾಪಮಾನವನ್ನು ಬಿಸಿ ಮಾಡುವುದರಿಂದ ರಕ್ತನಾಳಗಳು ಹಿಗ್ಗುವಿಕೆಯಿಂದಾಗಿ ತಾಪಮಾನವು ಹೆಚ್ಚಾಗುವುದು. ನಿದ್ರೆಗೆ ದೇಹದ ತಾಪಮಾನವು ಸಮತೋಲನದಲ್ಲಿ ಇರುವುದು ಅಗತ್ಯ. ಹೀಗಾಗಿ ಕಾಲು ಮತ್ತು ಕೈಗಳಿಗೆ ಸಾಕ್ಸ್ ಹಾಕಿದರೆ ಆಗ ಇದರಿಂದ ಒಳ್ಳೆಯ ನಿದ್ರೆ ಬರಲು ತುಂಬಾ ಸಹಕಾರಿ ಆಗುತ್ತದೆ.

ರಕ್ತ ಸಂಚಾರ ಹೆಚ್ಚಾಗುವುದು

ಸಾಕ್ಸ್ ಹಾಕಿದರೆ ಮಗುವಿನ ಪಾದದಲ್ಲಿ ರಕ್ತ ಸಂಚಾರವು ಉತ್ತಮವಾಗು ವುದು. ಕಾಲು, ಕೈ ಮತ್ತು ಕಿವಿಗಳ ಉಷ್ಣತೆಯು ತುಂಬಾ ವೇಗವಾಗಿ ಕಳೆದುಕೊಳ್ಳುವುದು. ಹೀಗಾಗಿ ಈ ಭಾಗದಲ್ಲಿ ರಕ್ತ ಸಂಚಾರವು ಉತ್ತಮವಾದರೆ ಆಗ ಮಗುವಿನ ದೇಹದ ತಾಪಮಾನವು ಕಡಿಮೆ ಆಗುವುದು.

DAKSHINA KANNADA

ಮಂಗಳೂರು-ಸಿಂಗಾಪುರ ನೇರ ವಿಮಾನ ಯಾನ; ಬಹುಕಾಲದ ಬೇಡಿಕೆ ಈಡೇರಿಕೆ

Published

on

ಮಂಗಳೂರು : ಹೊಸ ವರ್ಷದ ಕೊಡುಗೆ ಎಂಬಂತೆ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಯಾನ 2025ರ ಜನವರಿ 21 ರಿಂದ ಶುರುವಾಗಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಕಂಪೆನಿ ಈ ವಿಮಾನ ಹಾರಾಟ ಆರಂಭಿಸಲು ಮುಂದೆ ಬಂದಿದೆ. ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಈ ವಿಮಾನ ಹಾರಾಟ ಸೇವೆ ಇರುತ್ತದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಐಎಕ್ಸ್ 862 ವಿಮಾನ 5.55 ಕ್ಕೆ ಹೊರಟು 13.25 ಕ್ಕೆ ಸಿಂಗಾಪುರ ತಲಪುತ್ತದೆ. ಮರು ಪ್ರಯಾಣದಲ್ಲಿ ಐಎಕ್ಸ್ 861 ವಿಮಾನ ಸಿಂಗಾಪುರದಿಂದ 14.25 ಕ್ಕೆ ಹೊರಟು 16.55 ಕ್ಕೆ ಮಂಗಳೂರು ತಲಪುವುದು.

2025ರ ಜ.21ರಿಂದ ಸಿಂಗಾಪುರಕ್ಕೆ ವಿಮಾನ :

ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಈ ವಿಮಾನ ಹಾರಾಟ ಸೇವೆ ಇರುತ್ತದೆ. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು 2024 ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಮಂಗಳೂರು ಮತ್ತು ಸಿಂಗಾಪುರ ನೇರ ವಿಮಾನ ಸಂಪರ್ಕ ಸೌಲಭ್ಯಕ್ಕಾಗಿ ಮನವಿ ಸಲ್ಲಿಸಿದ್ದರು. ಫೆ.1 ರಿಂದ ದಿಲ್ಲಿಗೆ ದಿನನಿತ್ಯ ವಿಮಾನ ಸೌಲಭ್ಯಏರ್ ಇಂಡಿಯಾ ಎಕ್ಸ್‌ಪ್ರೆಸ್ ಫೆಬ್ರವರಿ 1, 2025 ರಿಂದ ಮಂಗಳೂರು ಮತ್ತು ರಾಜಧಾನಿ ದಿಲ್ಲಿ ನಡುವೆ ದೈನಂದಿನ ತಡೆರಹಿತ ವಿಮಾನ ಹಾರಾಟ ಸೌಲಭ್ಯವನ್ನು ಆರಂಭಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

Continue Reading

Ancient Mangaluru

ಪುತ್ತೂರಿನ ಬೈಪಾಸ್ ತೆಂಕಿಲ ವಿವೇಕಾನಂದ ಶಾಲೆಯ ಬಳಿ ಭೀಕರ ಅಪ*ಘಾತ !

Published

on

ಪುತ್ತೂರು: ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ಪುತ್ತೂರಿನ ಬೈಪಾಸ್ ತೆಂಕಿಲ ವಿವೇಕಾನಂದ ಶಾಲೆಯ ಬಳಿ ನಡೆದಿದೆ.

 

ಕಾರಿನಲ್ಲಿದ್ದವರಿಗೆ ಗಂ*ಭೀರ ಸ್ವರೂಪದ ಗಾಯಗಳಾಗಿದ್ದು, ಗಾಯಗೊಂಡವರನ್ನು ಸ್ಥಳೀಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಎಸ್ಎಂ ಕೃಷ್ಣಗೆ ‘ಕರ್ನಾಟಕ ರತ್ನ’ ನೀಡುವಂತೆ ಮನವಿ ಮಾಡಿದ ವಿಪಕ್ಷ ನಾಯಕ

ಕಾರಿನಲ್ಲಿದ್ದವರು ಉಡುಪಿ ಮೂಲದವರೆಂದು ಮಾಹಿತಿ ತಿಳಿದು ಬಂದಿದೆ. ಕಾರಿನಲ್ಲಿ ಕೆಲ ಪೂಜಾ ಸಾಮಾಗ್ರಿಗಳು ಸೇರಿದಂತೆ ಕುಂಕುಮ ಪ್ರಸಾದಗಳು ಕಂಡುಬಂದಿದೆ.

Continue Reading

DAKSHINA KANNADA

ಉತ್ತಮ ಜನಸ್ಪಂದನೆಯೊಂದಿಗೆ ಮಂಗಳೂರು-ಕಾರ್ಕಳ KSRTC ಸಂಚಾರ ಆರಂಭ

Published

on

ಮಂಗಳೂರು: ಮಂಗಳೂರು ಕಾರ್ಕಳ ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಬಸ್ ಪ್ರಾಯೋಗಿಕ ಸಂಚಾರ ಗುರುವಾರ(ಡಿ.12) ದಿಂದ ಆರಂಭವಾಗಿದೆ.

ಬೆಳಗ್ಗೆ 6-45 ಕ್ಕೆ ಮೊದಲ ಬಸ್ ಹೊರಟಿದ್ದು, ಎರಡನೇ ಬಸ್ 7-15ಕ್ಕೆ ಮಂಗಳೂರಿನಿಂದ ಹೊರಟಿದೆ. ಇದೇ ವೇಳೆ ಕಾರ್ಕಳದಿಂದಲೂ ಎರಡು ಬಸ್ ಮಂಗಳೂರಿಗೆ ಪ್ರಯಾಣ ಆರಂಭಿಸಿದೆ.

 

ಕೆ.ಎಸ್‌.ಆರ್‌.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌, ‘ಮಂಗಳೂರು-ಕಾರ್ಕಳ ಮಧ್ಯೆ 8 ಟ್ರಿಪ್‌ಗಳ ಬೇಡಿಕೆಯಲ್ಲಿ ಕೇವಲ 3 ಟ್ರಿಪ್‌ಗೆ ಅವಕಾಶ ನೀಡಿದೆ. ಕೇಂದ್ರ ಸರಕಾರದ ಏರಿಯಾ ಸ್ಕೀಂ ನಿಯಮ ಪ್ರಕಾರ ಹಾಗೂ ಚಾಪ್ಟರ್‌ -5ರಂತೆ ಹೊಸ ರೂಟ್‌ಗೆ ಪರವಾನಿಗೆ ನೀಡಲು ಸಾರಿಗೆ ಪ್ರಾಧಿಕಾರಕ್ಕೆ ಅಧಿಕಾರ ಇದೆ’ ಎಂದು ವಾದ ಮಂಡಿಸಿದರು. ‘ಮುಂದಿನ ದಿನಗಳಲ್ಲಿ ಅಗತ್ಯ ಇರುವ ಇತರ ಪ್ರದೇಶಗಳಲ್ಲಿ ಸರಕಾರಿ ಬಸ್‌ ಸಂಚಾರ ಆರಂಭಿಸಲು ಸರಕಾರ ವನ್ನು ಕೇಳಿಕೊಂಡಿದ್ದೇವೆ’ ಎಂದು ಸದಸ್ಯ ಐವನ್‌ ಡಿ’ ಸೋಜಾ ತಿಳಿಸಿದರು.

ಇದನ್ನೂ ಓದಿ : ಮಂಗಳೂರು-ಕಾರ್ಕಳ ಕೆ.ಎಸ್‌.ಆರ್‌.ಟಿ.ಸಿ ಪ್ರಾಯೋಗಿಕ ಸಂಚಾರಕ್ಕೆ ನಾಳೆ ಚಾಲನೆ !!

 

ಬಿಜೈ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ನಂತೂರು, ಗುರುಪುರ, ಕೈಕಂಬ, ಮೂಡುಬಿದಿರೆ ಮೂಲಕ ಕಾರ್ಕಳಕ್ಕೆ ಬಸ್ ಸಂಚರಿಸಲಿದೆ. ಈ ಬಸ್ ಗಳಿಗೆ ನಾಲ್ಕು ತಿಂಗಳ ತಾತ್ಕಾಲಿಕ‌ ಪರವಾನಗಿ‌ ಲಭಿಸಿದ್ದು, ಮೊದಲ ದಿನವೇ ಬಸ್ ಗಳಿಗೆ ಉತ್ತಮ ಜನ‌ಸ್ಪಂದನೆ ಲಭಿಸಿದೆ.

Continue Reading

LATEST NEWS

Trending

Exit mobile version